BBK 10: ನಿಮಗೆ ಆ ಮಾತು ಓಕೆನಾ ಅಂತ ನಮ್ರತಾ ಕೇಳುತ್ತಿದ್ದಂತೆ ವಾದ-ಪ್ರತಿವಾದಕ್ಕಿಳಿದ ಸಿರಿ ಮತ್ತು ನೀತೂ

By ಎಸ್ ಸುಮಂತ್

ಇವತ್ತು ಸೂಪರ್ ಸಂಡೇ ವಿತ್ ಸುದೀಪ ಪಂಚಾಯತಿಯಲ್ಲಿ ಎಲಿಮಿನೇಷನ್ ರೌಂಡ್ ಇರುತ್ತಾ ಇತ್ತು. ಎಲ್ಲರ ಊಹೆಯಂತೆ ಭಾಗ್ಯಶ್ರೀ ಮನೆಯಿಂದ ಹೊರಗೆ ಬರುತ್ತಾರೆ ಎಂದೇ ಅಂದಾಜಿಸಲಾಗಿತ್ತು. ಅದರಂತೆನಾಮಿನೇಷನ್ ಆದವರನ್ನು ಸೇವ್ ಮಾಡುವ ಕಾರ್ಯವೂ ಪ್ರತಿವಾರದಂತೆ ನಡೆದಿತ್ತು. ಅದರ ಜೊತೆಗೆ ಈ ವಾರ ಮನೆಯಿಂದ ಹೊರಗೆ ಹೋಗುವುದು ಭಾಗ್ಯಶ್ರೀ ಎಂದು ಕಿಚ್ಚ ಸುದೀಪ್ ಘೋಷಣೆಯನ್ನು ಮಾಡಿ ಆಗಿತ್ತು.

ಒಂದು ಕಡೆ ಬೇಸರ.. ಮತ್ತೊಂದು ಕಡೆ ಬ್ಯಾಡ್ ಲಕ್ ಎಂದುಕೊಂಡಿದ್ದ ಭಾಗ್ಯಶ್ರೀ ಸೀದಾ ಮನೆಯಿಂದ ಹೊರಗೆ ಬರುವುದಕ್ಕೆ ಸಜ್ಜಾಗಿದ್ದರು. ಆದರೆ ಬಿಗ್ ಬಾಸ್ ಬಾಗಿಲು ತೆಗೆಯದೆ, ಭಾಗ್ಯಶ್ರೀಯನ್ನು ಉಳಿಸಿದರು. ಇದಕ್ಕೂ ಮುನ್ನ ಬಿಗ್ ಬಾಸ್ ಮನೆಯಲ್ಲಿ ಬೋರ್ಡ್ ಗಳ ಬದಲಾವಣೆಯಾಗಿತ್ತು.

bbk-10-super-sunday-kichcha-sudeep

ಹಳೇ ಬೋರ್ಡ್ ಹಾಕಿಕೊಳ್ಳಲು ಕಿಚ್ಚನ ಸೂಚನೆ

ಗಾದೆ ಮಾತುಗಳ ಮೂಲಕ ಕಳೆದ ಬಾರಿ ಮನೆಯಲ್ಲಿ ಯಾರು, ಹೇಗೆ ಎಂಬುದನ್ನು ವ್ಯಕ್ತಪಡಿಸಿದ್ದರು. ಈ ವಾರವೂ ಗಾದೆ ಮಾತುಗಳ ಆಟ ಮುಂದುವರೆದಿದೆ. ಕಿಚ್ಚ ಸುದೀಪ್ ಕಳೆದ ಬಾರಿ ಹಾಕಿದ್ದಂತ ಗಾದೆ ಮಾತುಗಳ ಬೋರ್ಡ್ ಅನ್ನು ಸ್ಟೋರ್ ರೂಮಿನಿಂದ ತರುವುದಕ್ಕೆ ಹೇಳಿದ್ದಾರೆ. ಕಳೆದ ಬಾರಿ ಯಾರಿಗೆ ಯಾವ ಗಾದೆ ಸಿಕ್ಕಿತ್ತೋ, ಅದೇ ಬೋರ್ಡ್ ಹಾಕಿಕೊಳ್ಳಲು ಹೇಳಿದ್ದಾರೆ.

ತುಕಾಲಿಗೆ ಬೋರ್ಡ್ ಸಂಖ್ಯೆ ಕಡಿಮೆ ಆಗೋದೆ ಇಲ್ಲ

ತುಕಾಲಿ ಸಂತೂ ಅಂದರೆ ಎಲ್ಲದರಲ್ಲೂ ಮುಂದೆ ಇರುತ್ತಾರೆ. ಈಗ ಬೋರ್ಡ್ ವಿಚಾರದಲ್ಲೂ ಅಷ್ಟೇ. ಕೆಲವರಿಗೆ ಕಳೆದ ಬಾರಿ ಬೀಳದ ಬೋರ್ಡ್ ಬಿದ್ದಿದೆ. ಕೆಲವೊಬ್ಬರ ಕೊರಳು ಖಾಲಿ ಆಗಿದೆ. ಆದರೆ ತುಕಾಲಿ ಸಂತೂ ಕೊರಳಲ್ಲಿದ್ದ ಬೋರ್ಡ್ ಖಾಲಿ ಆದರೂ ಮತ್ತೆ ಹೊಸದಾಗಿಯೂ ಅಷ್ಟೇ ಬೋರ್ಡಗ ಬಿದ್ದಿದೆ. 'ಆರು ಕೊಟ್ಟರೆ ಅತ್ತೆ ಕಡೆಗೆ, ಕಾಮಾಲೆ ಕಣ್ಣಿಗೆ ಕಾಣುವುದೆಲ್ಲಾ ಹಳದಿ, ಮೂರು ಬಿಟ್ಟವ ಊರಿಗೆ ದೊಡ್ಡವ' ಎಂಬ ಗಾದೆಗಳು ಸಂತೂ ಪಾಲಾಗಿದೆ.

ಯಾರಿಂದ ಯಾರಿಗೆ ಬೋರ್ಡ್ ಹೋಯ್ತು

ಇನ್ನು ಈ ವಾರ ಬೋರ್ಡ್‌ಗಳ ಬದಲಾವಣೆಯಾಗಿದ್ದು, ಆಟಕ್ಕುಂಟು ಲೆಕ್ಕಕ್ಕಿಲ್ಲ, ಉತ್ತರನ ಪೌರುಷ ಒಲೆ ಮುಂದೆ ಕಾರ್ತಿಕ್‌ಗೆ ಸಿಕ್ಕಿದೆ. ಹಾಗೇ ಕಳ್ಳನಿಗೊಂದು ಪಿಳ್ಳೆ ನೆವ : ನೀತೂಗೆ, ಭೂಮಿಗೆ ಭಾರ ಕೂಳಿಗೆ ದಂಡ, ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ನಮ್ರತಾಗೆ, ಬೊಗಳೋ ನಾಯಿ ಕಚ್ಚಲ್ಲ ಸ್ನೇಹಿತ್‌ಗೆ, ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ ವಿನಯ್‌ಗೆ, ಬೆಳಗಿರೋದೆಲ್ಲ ಹಾಲಲ್ಲ ತನಿಷಾಗೆ, ಬರ್ತಾ ಬರ್ತಾ ರಾಯರ ಕುದುರೆ ಕತ್ತೆ ಆಯ್ತು ರಕ್ಷಕ್‌ಗೆ, ಕುಣಿಯುವುದಕ್ಕೆ‌ ನೆಲ ಡೊಂಕು ಎಂದ ಸಿರಿಗೆ, ಆರಕ್ಕೇರಲ್ಲ ಮೂರಕ್ಕೆ ಇಳಿಯಲ್ಲ ರಕ್ಷಕ್‌ಗೆ, ಅರ್ಧ ಕಲಿತವನ ಅಬ್ಬರ ಜಾಸ್ತಿ ಕಾರ್ತಿಕ್‌ಗೆ ಗಾದೆ ಮಾತುಗಳು ಬದಲಾವಣೆಯಾಗಿದೆ.

ಸಿರಿಗೆ ನಮ್ರತಾ ಪ್ರಶ್ನೆ ಕೇಳಿದ್ದೇ ತಪ್ಪಾಯ್ತಾ..?

ಕಿಚ್ಚನ ಪಂಚಾಯತಿ ಮುಗಿದ‌ ಮೇಲೆ‌ ಸಿರಿ ಬಳಿ ಬಂದ ನಮ್ರತಾ, ನಿಮಗೆ ನೀಡಿದ ಗಾದೆ ಮಾತು ಸರಿ ಅನ್ನಿಸುತ್ತಾ ಎಂದು ಕೇಳಿದ್ದಾರೆ. ಅದೇ ಕ್ಷಣಕ್ಕೆ ಅಲ್ಲಿಗೆ ನೀತೂ ಬಂದಿದ್ದಾರೆ. ಸಿರಿಗೆ ಕುಣಿಯುವುದಕ್ಕೆ ನೆಲ ಡೊಂಕು ಅಂದ್ರು ಎಂಬ ಗಾದೆ ಮಾತನ್ನು ನೀತೂ ಕೊಟ್ಟಿದ್ದು. ನಮ್ರತಾ ಎತ್ತಿದ ವಿಚಾರಕ್ಕೆ ಇಬ್ಬರ ನಡುವೆ ವಾದ ಪ್ರತಿವಾದ ಶುರುವಾಗಿದೆ. ಸಿರಿ ಡೌಟ್ ಕೇಳಿದರೆ ನೀತೂ ವಿವರಣೆ ನೀಡುತ್ತಾ ಇದ್ದರು. ನಿನ್ನೆ ಬಂದ ಗಿಫ್ಟ್‌ಗಳಲ್ಲಿ ನಮ್ರತಾಗೆ ಚಮಚ ಕೊಟ್ಟು "ದಾದಾಗಿರಿ ಮಾಡದೆ ಇದ್ದರು ಪರವಾಗಿಲ್ಲ ಚಮಚಗಿರಿ ಮಾಡಬೇಡಿ" ಎಂದಿದ್ದರು.

More from Filmibeat

English summary
Bigg Boss Kannda season 10 October 29th episode about Namratha, Siri and Neethu
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X