Bigg Boss: ಹೀಗೆ ಬಂದು ಹಾಗೆ ಹೋದ ತಾಯಿ: ಅಮ್ಮ ಬಾರಮ್ಮ ಎಂದು ಕಾರ್ತಿಕ್ ಕಣ್ಣೀರು

By Shruthi Harishgowda

ಬಿಗ್ ಬಾಸ್ ಮನೆಯಲ್ಲಿ ಈಗ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಎಲ್ಲರೂ ನಮ್ಮ ಅಮ್ಮ ಬರಬಹುದು, ನಮ್ಮ ಮನೆಯವರು ಬರಬಹುದು ಎಂದು ಕುತೂಹಲದಿಂದ ಕಾಯುತ್ತಿದ್ದಾರೆ. ಯಾವುದೇ ಟಾಸ್ಕ್ ಇಲ್ಲದೇ ಸ್ಪರ್ಧಿಗಳು ಸುಮ್ಮನಿದ್ದಾರೆ. ಆದರೆ ಮನೆಯವರು ಯಾವಾಗ ಬರುತ್ತಾರೆ ಎಂದು ಕಾಯುವುದೇ ಇಲ್ಲರ ಕೆಲಸವಾಗಿದೆ.

ನಮ್ರತಾ, ತುಕಾಲಿ ಸಂತೋಷ್, ವರ್ತೂರು ಸಂತೋಷ್, ಮೈಕಲ್ ಇವರ ಮನೆಯವರು ಬಂದು ಈಗಾಗಲೇ ಎಲ್ಲರಿಗೂ ಕೂಡ ಶುಭ ಹಾರೈಸಿ ಹೋಗಿದ್ದಾರೆ. ಮೈಕಲ್ ತಾಯಿಯಂತೂ ತಮ್ಮ ಮಗನ ಜೊತೆಗೆ ಸಂಗೀತಾ ಚೆನ್ನಾಗಿ ಇರಬೇಕು ಹಾಗೂ ಮಗ ಕೂಡ ಸಂಗೀತಾ ಜೊತೆಗೆ ಚೆನ್ನಾಗಿ ಇರು ಎಂದು ಹೇಳಿ ಹೋಗಿದ್ದಾರೆ.

Bigg Boss: Karthik breaks down into tears after seeing his mother enter the house

ಈಗ ಕಾರ್ತಿಕ್ ಸರದಿ. ಹೊಸ ಪ್ರೋಮೋದಲ್ಲಿ ಕಾರ್ತಿಕ್ ಅವರ ತಾಯಿ ಬಿಗ್ ಬಾಸ್ ಮನೆಯೊಳಗೆ ಬಂದಿದ್ದಾರೆ. ಮಗನಿಗೆ ಒಂದೇ ಒಂದು ಮುತ್ತನ್ನು ಕೊಟ್ಟು ಚೆನ್ನಾಗಿ ಆಡು ಎಂದಷ್ಟೇ ಹೇಳಿ ಕ್ಷಣಾರ್ಧದಲ್ಲಿ ಮರೆಯಾಗಿದ್ದಾರೆ. ಇದು ಕಾರ್ತಿಕ್‌ಗೆ ಅತೀವ ನೋವು ತಂದಿದೆ. ಏಕೆಂದರೆ ಅಮ್ಮನನ್ನು ಸರಿಯಾಗಿ ಮಾತನಾಡಿಸಲು ಆಗಲಿಲ್ಲ. ಅಮ್ಮನನ್ನ ಮಾತನಾಡಿಸಿ ಒಂದು ಅಪ್ಪುಗೆಯನ್ನು ಕೊಡಲು ಆಗಲಿಲ್ಲ ಎಂದು ಕಣ್ಣೀರನ್ನು ಹಾಕಿದ್ದಾರೆ. ಸಣ್ಣ ಮಕ್ಕಳು ಹಠ ಮಾಡುವಂತೆ ಅಮ್ಮ ಬಾರಮ್ಮ ಎಂದು ಜೋರಾಗಿ ಕೂಗಿಕೊಂಡಿದ್ದಾರೆ.

ಕಾರ್ತಿಕ್ ಬಿಗ್ ಬಾಸ್ ಮನೆಯಲ್ಲಿ ಇರುವ ಸ್ಟ್ರಾಂಗ್ ಕಂಟೆಸ್ಟೆಂಟ್. ಯಾವುದೇ ವಿಚಾರಕ್ಕೂ ಕೂಡ ಕಣ್ಣೀರು ಹಾಕಿದ್ದೆ ಇಲ್ಲ. ಸಂಗೀತಾ ತಮ್ಮ ಟೀಮ್ ಬಿಟ್ಟು ವಿನಯ್ ಟೀಮ್ ಸೇರಿಕೊಂಡಾಗ ಸ್ವಲ್ಪ ಎಮೋಷನಲ್ ಆಗಿ ಅತ್ತಿದ್ದರು. ಅದನ್ನು ಬಿಟ್ಟು ಯಾವತ್ತೂ ಕೂಡ ಕಣ್ಣೀರು ಹಾಕಿದ್ದೆ ಇಲ್ಲ. ಆದರೆ ಈಗ ಅಮ್ಮನಿಗೋಸ್ಕರ ಕಣ್ಣೀರಾಗಿದ್ದಾರೆ. ಬೇರೆ ಸ್ಪರ್ಧಿಗಳ ಮನೆಯವರು ಬರುವಾಗ ಕಾರ್ತಿಕ್ ನನ್ನ ಅಮ್ಮ ಯಾವಾಗ ಬರುತ್ತಾರೋ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದರು. ಬಿಗ್ ಬಾಸ್ ಮನೆಗೆ ಕಾರ್ತಿಕ್ ಅಮ್ಮ ಬಂದರೂ ಕೂಡ ಕಾರ್ತಿಕ್‌ಗೆ ಸರಿಯಾಗಿ ಮಾತನಾಡಲು ಆಗಲಿಲ್ಲ.

Bigg Boss: Karthik breaks down into tears after seeing his mother enter the house

ಹೀಗೆ ಬಂದು ಮರೆಯಾದ ಕಾರ್ತಿಕ್ ತಾಯಿ

ಕಾರ್ತಿಕ್ ಅಡುಗೆ ಮನೆಯಲ್ಲಿ ಕುಳಿತಿದ್ದಾಗ ನನ್ನ ಮುದ್ದು ತಾರೆ ನಗುತಲಿ ಬಾರೆ ಎಂಬ ಹಾಡನ್ನು ಅವರ ಅಮ್ಮ ಆಡಿದ್ದಾರೆ. ಅಮ್ಮನನ್ನು ಗುರುತಿಸಿದ ಕಾರ್ತಿಕ್ ಓಡಿ ಹೋಗಿ ಶಾರ್ಟ್ ಹಾಕಿಕೊಂಡು ಬಂದಿದ್ದಾರೆ. ಇನ್ನು ಅಮ್ಮ ಮನೆ ಒಳಗೆ ಎಂಟ್ರಿ ಆಗುತ್ತಿದ್ದಂತೆ ಬಿಗ್ ಬಾಸ್ ಎಲ್ಲರನ್ನೂ ಕೂಡ ನಿಂತಲ್ಲಿ ನಿಂತುಕೊಳ್ಳಬೇಕು ಎಂದಿದ್ದಾರೆ. ಈ ವೇಳೆ ಕಾರ್ತಿಕ್ ಕೂಡ ನಿಂತುಕೊಂಡಿದ್ದು ಕಣ್ಣೀರು ಹಾಕಿದ್ದಾರೆ. ಮಗನ ಬಳಿ ಬಂದ ಅಮ್ಮ ನೀನು ಅಳಬೇಡ ನನಗೂ ಕೂಡ ಅಳು ತರಿಸಬೇಡ ಎಂದು ಹೇಳಿದ್ದಾರೆ.

ಅಮ್ಮ ಬಾರಮ್ಮ ಎಂದು ಕಣ್ಣೀರು ಹಾಕಿದ ಸ್ಪರ್ಧಿ

ಮಗನನ್ನು ತಬ್ಬಿಕೊಂಡು ಮುತ್ತು ಕೊಟ್ಟಿದ್ದಾರೆ. ಆದರೆ ಕಾರ್ತಿಕ್ ನಿಂತಲ್ಲಿ ನಿಂತು ಕೊಂಡಿದ್ದು ಅಮ್ಮನನ್ನು ಕೂಡ ತಬ್ಬಿಕೊಳ್ಳಲು ಆಗಲಿಲ್ಲ. ನೀನು ನಮ್ಮ ಬಗ್ಗೆ ಯೋಚನೆ ಮಾಡಬೇಡ ಬಿಗ್ ಬಾಸ್ ಮನೆಯಲ್ಲಿ ಚೆನ್ನಾಗಿ ಹಾಡು ಎಂದಷ್ಟೇ ಅವರ ತಾಯಿ ಹೇಳಿದ್ದಾರೆ. ನಂತರ ಮುಖ್ಯದ್ವಾರ ಓಪನ್ ಆಗಿದ್ದು ಅಲ್ಲಿಂದ ನಿರ್ಗಮಿಸಿದ್ದಾರೆ. ಅಷ್ಟು ಬೇಗ ತನ್ನ ತಾಯಿ ಹೊರಗಡೆ ಹೋಗುತ್ತಾರೆ ಎಂದು ಕಾರ್ತಿಕ್ ಊಹೆ ಮಾಡಿರಲಿಲ್ಲ. ಅಮ್ಮನನ್ನು ಕೂಡ ಸರಿಯಾದ ರೀತಿ ಮಾತನಾಡಿಸಲು ಆಗಲಿಲ್ಲ. ತಬ್ಬಿಕೊಳ್ಳಲು ಆಗಲಿಲ್ಲ ತಂಗಿ ಮಗುವಿನ ಬಗ್ಗೆಯೂ ಕೇಳಲು ಆಗಲಿಲ್ಲ ಎಂದು ಭಾವುಕರಾಗಿದ್ದಾರೆ.

ಬಿಗ್ ಬಾಸ್ ಮಾತನಾಡಿಸಲು ಬಿಡಿ ಎಂದ ಸಿರಿ

ಮುಖ್ಯದ್ವಾರದ ಮೂಲಕ ಕಾರ್ತಿಕ್ ಅವರ ಅಮ್ಮ ಹೋಗುವಾಗ ಸಿರಿ ಬಿಗ್ ಬಾಸ್ ಮಾತನಾಡಿಸಲು ಬಿಡಿ ಎಂದು ಕೇಳಿಕೊಂಡಿದ್ದಾರೆ. ಆದರೆ ಬಿಗ್ ಬಾಸ್ ಏನನ್ನು ಸಹ ಹೇಳಿಲ್ಲ. ಕಾರ್ತಿಕ್ ಅವರ ಅಮ್ಮ ಹೊರಗಡೆ ಹೋದಾಗ ಎಲ್ಲರೂ ಕೂಡ ತಮ್ಮ ಕೆಲಸದಲ್ಲಿ ನಿರತರಾಗಿ ಎಂದು ಹೇಳಿದಾಗ ಕಾರ್ತಿಕ್ ಬಿಕ್ಕಿ ಬಿಕ್ಕಿ ಹತ್ತಿದ್ದಾರೆ. ಬಿಗ್ ಬಾಸ್ ನಮ್ಮ ಅಮ್ಮನನ್ನು ಮತ್ತೊಮ್ಮೆ ಕಳುಹಿಸಿ ಎಂದು ಕೇಳಿಕೊಂಡಿದ್ದಾರೆ. ಅಮ್ಮ ಬಾರಮ್ಮ ಎಂದು ಜೋರಾಗಿ ಕೂಗಿದ್ದಾರೆ.

ಅಮ್ಮನನ್ನು ಕಳುಹಿಸಿ ಎಂದು ಕಾರ್ತಿಕ್ ಮನವಿ

ಅಮ್ಮ ಎಂದರೆ ಹಾಗೆ ಅಲ್ವಾ? ಅಮ್ಮನ ಮಾತುಗಳನ್ನು ಕೇಳಲು ಎಲ್ಲರ ಕಿವಿಗಳು ಕೂಡ ಕಾತರದಿಂದ ಕಾಯುತ್ತಾ ಇರುತ್ತದೆ. ಮನೆಯವರನ್ನೆಲ್ಲಾ ಬಿಟ್ಟು ಬಂದಿರುವ ಕಾರ್ತಿಕ್‌ಗೆ ಹೇಗಾಗಿರಬೇಡ ಇದಕ್ಕಾಗಿ ಕಾರ್ತಿಕ್ ಕಣ್ಣೀರಾಗಿದ್ದಾರೆ. ಬಿಗ್ ಬಾಸ್ ಮತ್ತೊಮ್ಮೆ ಕಾರ್ತಿಕ್ ಅವರ ಅಮ್ಮನನ್ನು ಕಳುಹಿಸುತ್ತಾರಾ? ನೋಡಬೇಕಾಗಿದೆ. 24 ಗಂಟೆ ಜಿಯೋ ಸಿನಿಮಾದಲ್ಲಿ ಬಿಗ್‌ಬಾಸ್ ಶೋ ಲೈವ್ ಸ್ಟ್ರೀಮಿಂಗ್ ಆಗುತ್ತಿದೆ.

More from Filmibeat

English summary
Bigg Boss; Here is the details about kartik mother comes to bigboss, kartik crying;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X