ಕಾವು ನೀವು ಧನುಷ್​ 2ನೇ ಹೆಂಡತಿ ಅಂತೆ ಹೌದಾ ? ಬಿಗ್ ಬಾಸ್ ಕಾವ್ಯಾ ನೀಡಿದ ಉತ್ತರವೇನು ?

ಬದಲಾದ ಕಾಲಘಟ್ಟದಲ್ಲಿ ಸಾಮಾಜಿಕ ಜಾಲತಾಣ, ಮನುಷ್ಯನನ್ನ ಹೆಚ್ಚು ನಿಯಂತ್ರಣ ಮಾಡುತ್ತಿದೆ. ಇದು ಎಷ್ಟರಮಟ್ಟಿಗೆ ಮನುಷ್ಯನಿಗೆ ದಾರಿ ತೋರಿಸುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ದಾರಿಯನ್ನೂ ತಪ್ಪಿಸುತ್ತದೆ.ಇಲ್ಲಿ ಒಳ್ಳೇಯವರು ಇದ್ದಾರೆ. ಕೆಟ್ಟವರು ಇದ್ದಾರೆ.

ಇನ್ನು ಈ ವೇದಿಕೆಯ ಮೂಲಕವೇ ಸಿನಿ ತಾರೆಯರು ಹೆಚ್ಚು ಪ್ರಚಲಿತಕ್ಕೆ ಬರುತ್ತಿರುವ ಜೊತೆಗೆ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುವ ಸಾಧನವನ್ನಾಗಿಯೂ ಹೆಚ್ಚು ಬಳಸಿಕೊಳ್ಳುತ್ತಿದ್ದಾರೆ. ಆದರೆ ಇದನ್ನೇ ಅಡ್ವಾಂಟೇಜ್ ಆಗಿ ತೆಗೆದುಕೊಂಡ ಸಾಕಷ್ಟು ಮಂದಿ ಒಂದು ಕಡೆ ಚಿತ್ರರಂಗದಲ್ಲಿನ ಮಹಿಳೆಯರಿಗೆ, ಕೊಡಬಾರದ ಕಾಟ ಕೊಡುತ್ತಾರೆ. ಕೇಳಬಾರದ ಪ್ರಶ್ನೆಗಳನ್ನು ಕೇಳುತ್ತಾರೆ. ಚಾರಿತ್ಯ್ರ ಹರಣ ಕೂಡ ಮಾಡ್ತಾರೆ. ಉದಾಹರಣೆಗೆ ಕಾವ್ಯಾ ಶೈವ ಅವರ ಅನುಭವವನ್ನೇ ತೆಗೆದುಕೊಳ್ಳಿ.

Bigg Boss Kavya Shaiva EXPOSES Toxic Fan Behavior in Shocking Ask Me Anything Session

ಹೌದು, "ಬಿಗ್ ಬಾಸ್" ಮೂಲಕ ಕನ್ನಡಿಗರ ಹೃದಯ ಗೆದ್ದ ಕಾವ್ಯ ಶೈವ ಇತ್ತೀಚೆಗೆ ತಮ್ಮ ಅಭಿಮಾನಿಗಳ ಜೊತೆ ಪ್ರಶ್ನೋತ್ತರ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ನಿಮ್ಮ ಮನದಲ್ಲಿರುವ ಪ್ರಶ್ನೆ ಕೇಳಿದರೆ ಉತ್ತರ ನೀಡುವುದಾಗಿ ಹೇಳಿದ್ದರು.

ಅದ್ರಂತೆ ಹಲವರು ಪ್ರಶ್ನೆಗಳನ್ನು ಕೇಳಿದರು ಕೂಡ. ಒಬ್ಬರು ನಿಮ್ಮ ಮತ್ತು ಗಿಲ್ಲಿಯ ನಡುವಿನ ಸ್ನೇಹ ಮುಂದುವರೆಯುತ್ತಾ ಎನ್ನುವ ಪ್ರಶ್ನೆ ಕೇಳಿದರೆ ಮತ್ತೊಬ್ಬರು ಕಲರ್ಸ್ ಕನ್ನಡ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದ್ದರು. ಇನ್ನೊಬ್ಬರು ಕಾವ್ಯಗೆ ಯೂಟ್ಯೂಬ್ ಚಾನೆಲ್ ಶುರು ಮಾಡುವಂತೆ ಸಲಹೆ ನೀಡಿದ್ದರು, ಮತ್ತೊಬ್ಬರು ಕಾವ್ಯಾ ಸೌಂದರ್ಯ ಹಾಡಿ ಹೊಗಳಿದ್ದರು.

ಆದರೆ ಇದೇ ಸಮಯದಲ್ಲಿ ವಿಕೃತ ಮನಸ್ಸಿನ ಒಬ್ಬ ವ್ಯಕ್ತಿಯೊಬ್ಬ ಕಾವ್ಯ ಶೈವಗೆ ಇಲ್ಲಸಲ್ಲದ ಪ್ರಶ್ನೆ ಕೇಳಿದ್ದಾನೆ. ಬೇಕು ಬೇಕಂತಲೇ ಕೆರಳಿಸಿದ್ದಾನೆ. ಕಾವು, ನೀವು ಧನುಷ್​ ಅವರ 2ನೇ ಹೆಂಡತಿ ಅಂತೆ ಹೌದಾ ಎಂದು ಪ್ರಶ್ನೆ ಮಾಡಿದ್ದಾನೆ.

ಸಹಜವಾಗಿ ಈ ಪ್ರಶ್ನೆಯನ್ನು ಓದಿ ಕಾವ್ಯಾ ಶೈವಗೆ ಆಘಾತವಾಗಿದೆ. ಬೇರೆ ಯಾರೇ ಆಗಿದ್ದರೂ ಈ ಅಸಹ್ಯ ಮತ್ತು ಅಸಭ್ಯ ಪ್ರಶ್ನೆಯನ್ನು ಸ್ಕಿಪ್ ಮಾಡುತ್ತಿದ್ದರೇನೋ..? ಆದರೆ ಕಾವ್ಯಾ ಶೈವ ಮಾತ್ರ ಈ ಪ್ರಶ್ನೆಗೆ ಉತ್ತರ ನೀಡಲೇಬೇಕು ಎಂಬ ತೀರ್ಮಾನವನ್ನು ಮಾಡಿ ಖಂಡ ತುಂಡ ಉತ್ತರ ನೀಡಿದ್ದಾರೆ. ಸಾರಿ. ನಿಮ್ಮ ಸಹೋದರಿ ಅವರ ಎರಡನೆಯ ಪತ್ನಿ ಎಂದು ಕೇಳಿದ್ದೇನೆ. ಕೇಳಲು ಎಷ್ಟು ಚೆನ್ನಾಗಿರತ್ತೆ ಅಲ್ವಾ ಎಂದು ಪ್ರಶ್ನಿಸಿದ್ದಾರೆ. ಇಂಥ ಪ್ರಶ್ನೆ ಕೇಳುವುದರಿಂದ ಏನು ಖುಷಿ ಸಿಗುತ್ತದೆ, ಸಾಕು ನಿಲ್ಲಿಸಿ, ನಾವೂ ಮನುಷ್ಯರೇ ಎಂದು ಕೆಂಡ ಕಾರಿದ್ದಾರೆ.

Bigg Boss Kavya Shaiva EXPOSES Toxic Fan Behavior in Shocking Ask Me Anything Session

ಕಾವ್ಯ ನೀಡಿದ ಈ ಖಡಕ್ ಉತ್ತರ ಅವರ ಇನ್‌ಸ್ಟಾಗ್ರಾಮ್ ಸ್ಟೋರಿಯಿಂದ ಮಾಯವಾಗಿದೆ. ಆದರೆ ಅದರ ಸ್ಕ್ರೀನ್ ಶಾಟ್ ಸದ್ಯ ಎಲ್ಲೆಡೆ ವೈರಲ್ ಆಗಿದೆ. ಹಲವರು ಕಾವ್ಯ ಪರ ವಕಾಲತ್ತು ವಹಿಸುತ್ತಿದ್ದಾರೆ. ಅಭಿಮಾನದ ಸೋಗಿನಲ್ಲಿ ಅಸಭ್ಯ ಪ್ರಶ್ನೆ ಕೇಳಿದ ಆ ವ್ಯಕ್ತಿಯ ವಿರುದ್ಧ ಕೆಂಡ ಕಾರುತ್ತಿದ್ದಾರೆ. ಇನ್ನೂ ಕೆಲವರಲ್ಲಿ ಆ ಧನುಷ್ ಯಾರು ಎನ್ನುವ ಪ್ರಶ್ನೆ ಇದೆ.

ಕಾವ್ಯಾ ಶೈವ ಅವರ ಈ ಉತ್ತರ ಎಲ್ಲೆಡೆ ವೈರಲ್ ಆದ ನಂತರ ಹಲವರು ಕಾವ್ಯಾ ಪರ ಬೆಂಬಲ ಸೂಚಿಸಿ,ಅಭಿಮಾನಿಗಳು ಪ್ರೀತಿ ತೋರಿಸುವುದು ಸರಿ, ಆದರೆ ಅದು ವ್ಯಕ್ತಿಯ ಘನತೆಯನ್ನು ಕುಂದಿಸುವಂತಿರಬಾರದು ಎಂಬ ಅಭಿಪ್ರಾಯಗಳು ವ್ಯಕ್ತಪಡಿಸುತ್ತಿದ್ದಾರೆ. ಸರಿಯಾದ ಉತ್ತರವನ್ನು ನೀಡಿದ್ದೀರಾ ಎಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಸ್ಕ್ರೀನ್ ಶಾಟ್‌ನ ಹಂಚಿಕೊಳ್ಳುತ್ತಿದ್ಧಾರೆ.ಇನ್ನೂ ಕೆಲವು ಅಭಿಮಾನಿಗಳು #RespectKavyaShaiva ಎಂಬ ಹ್ಯಾಶ್ ಟ್ಯಾಗ್ ಅಡಿ ಟ್ವಿಟ್ ಕೂಡ ಮಾಡಿ ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಇನ್ನಾದರೂ ಇಂತಹ ಪ್ರಶ್ನೆಗಳಿಗೆ ಕಡಿವಾಣ ಬೀಳುತ್ತಾ ..? ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Kavya Shaiva isn't staying silent. The Bigg Boss actress shuts down invasive marriage rumors and calls out toxic fan behavior in a viral AMA session. Read more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X