ಫಾರ್ಮ್‌ಹೌಸ್‌ಗೆ ಬಾ, ₹25 ಲಕ್ಷ ಕೊಡ್ತೀವಿ ಅಂದ್ರು ; ಚಿತ್ರರಂಗದ ಕರಾಳ ಸತ್ಯ, ಬಿಗ್ ಬಾಸ್ ಸ್ಪರ್ಧಿ ಭಾವುಕ

ಬಣ್ಣದ ಲೋಕದಲ್ಲಿ ಅಮಾಯಕ ಹೆಣ್ಣು ಮಕ್ಕಳನ್ನು ಕಂಡರೆ ಮುಕ್ಕಿ ತಿನ್ನುವರು ತುಂಬಾ ಜನ ಇದ್ದಾರೆ. ಇಲ್ಲಿ ಬಹುತೇಕರಲ್ಲ ಆದರೆ ಕೆಲವರು ಮುಖವಾಡದ ಬದುಕನ್ನು ಬದುಕುತ್ತಾರೆ. ಕೆಲವರು ಪ್ರಚಾರದ ಹುಚ್ಚಿಗೆ ಬರುತ್ತಾರೆ, ಇನ್ನೂ ಕೆಲವರು ಹೆಣ್ಣಿನ ಚಪಲಕ್ಕಾಗಿ ಸಿನಿಮಾ ನಿರ್ಮಾಣ ಮಾಡಲು ಬರುತ್ತಾರೆ.

ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ, ಹೀಗೆ.. ಆ ಇಂಡಸ್ಟ್ರೀ ಈ ಇಂಡಸ್ಟ್ರೀ ಅಂತ ಅಲ್ಲ. ಎಲ್ಲ ಚಿತ್ರೋದ್ಯಮಗಳಲ್ಲಿ ಬಹುತೇಕ ಈ ಕಥೆ ಒಂದೇ. ಇದಕ್ಕೆ ಕೈಗನ್ನಡಿ ಎಂಬಂತೆ ಹಲವಾರು ಚೆಲುವೆಯರು ಚಿತ್ರರಂಗದಲ್ಲಿ ತಮಗಾದ ಕಹಿ ಅನುಭವ ಹಂಚಿಕೊಂಡಿದ್ದಾರೆ. ಒಟ್ನಲ್ಲಿ ಚಿತ್ರರಂಗದಲ್ಲಿ ಇಂದು ಹೆಸರು ಮಾಡಿರುವವರು.. ಹೆಸರು ಮಾಡಲಾಗದೇ ಮನೆ ಸೇರಿದವರು.. ಕನಸೆಂಬ ಕುದುರೆಯನ್ನೇರಿ ಬಂದವರು.. ಒಂದಿಲ್ಲೊಂದು ದಿನ.. ಒಂದಿಲ್ಲೊಂದು ರೀತಿಯಲ್ಲಿ.. ಈ ಝಗಮಗ ಲೋಕದಲ್ಲಿನ ವಿಕೃತ ಲೋಕವನ್ನು ಕಂಡು ಬೆಚ್ಚಿ ಬಿದ್ದಿಯೇ ಬಿದ್ದಿರುತ್ತಾರೆ. ಉದಾಹರಣೆಗೆ ಸುಪ್ರಜಾ.

Go To The Farmhouse Take 25 Lakhs Bigg Boss Fame Kirrak Seetha s Explosive Casting Couch Disclosure

ಹೌದು, ಸುಪ್ರಜಾ.. ಪಕ್ಕದ ಆಂಧ್ರದ ಚೆಲುವೆ. ಕಿರಾಕ್ ಸೀತಾ ಎಂದೇ ಹೆಸರುವಾಸಿಯಾದವರು ಇವರು. ಚಿತ್ರರಂಗಕ್ಕೆ ಬರುವ ಮುನ್ನ ಯೂಟ್ಯೂಬರ್ ಆಗಿದ್ದ ಸುಪ್ರಜಾ ಬಹುಬೇಗ ಜನಪ್ರಿಯರಾದರು. ಚಿತ್ರರಂಗದವರ ಕಣ್ಣಿಗೆ ಕೂಡ ಬಿದ್ದರು.

ಇಲ್ಲಿಂದ ಇವರ ಬದುಕು ಬದಲಾಯ್ತು. ತೆಲುಗಿನ ಬಿಗ್ ಬಾಸ್ 8 ರಲ್ಲಿ ಭಾಗವಹಿಸುವ ಅವಕಾಶವೂ ಸಿಕ್ಕಿತು. 40 ದಿನಗಳ ಕಾಲ ''ಬಿಗ್ ಬಾಸ್'' ಮನೆಯಲ್ಲಿದ್ದ ಸುಪ್ರಜಾ ಈ ಕಾರ್ಯಕ್ರಮದ ಮೂಲಕ ಪ್ರೇಕ್ಷಕರ ಹೃದಯಕ್ಕೆ ಇನ್ನೂ ಹತ್ತಿರವಾದರು. ಇವರ ಈ ಜನಪ್ರಿಯತೆಯನ್ನು ಬೇಬಿ ಚಿತ್ರ ಇನ್ನೂ ಹೆಚ್ಚಿಸಿತು.

ಇಂಥಾ ಕಿರಾಕ್ ಸೀತಾ ಅಲಿಯಾಸ್ ಸುಪ್ರಜಾ ತಮ್ಮ ಕಹಿ ಅನುಭವ ಹಂಚಿಕೊಂಡಿದ್ದಾರೆ. ಅವಕ್ಕಾಶಕ್ಕಾಗಿ ರಾಜಿ ಮಾಡಿಕೊಳ್ಳಲು ಹಣದ ಆಮಿಷವನ್ನು ಕೂಡ ಒಡ್ಡಲಾಗಿತ್ತು ಎಂದಿದ್ದಾರೆ.

ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಸುಪ್ರಜಾ, ಅದೊಂದು ದಿನ ಸಿನಿಮಾ ಅವಕಾಶ ಇದೆ, ಫಾರ್ಮ್‌ಹೌಸ್‌ಗೆ ಬನ್ನಿ ಎಂದು ನನ್ನನ್ನು ಕರೆದರು. ಆ ಸಮಯದಲ್ಲಿ ನಾನು ಫಾರ್ಮ್ ಹೌಸ್‌ಗೆ ಯಾಕೆ ಬರಬೇಕು, ಆಫೀಸ್ ಇದ್ದರೆ ಹೇಳಿ ಬರುತ್ತೇನೆ ಎಂದು ಹೇಳಿದೆ ಎಂದಿದ್ದಾರೆ.

go-to-the-farmhouse-take-25-lakhs-bigg-boss-fame-kirrak-seetha-s-explosive-casting-couch-disclosu

ನನ್ನ ಈ ಮಾತಿಗೆ ನಮ್ಮ ತಂಡದವರೆಲ್ಲರೂ ಇಲ್ಲೇ ಇದ್ದಾರೆ, ನೀವು ಕೂಡ ಇಲ್ಲಿಗೆ ಬನ್ನಿ ಎಂದು ಆ ವ್ಯಕ್ತಿ ಹೇಳಿದ ಎಂದು ಹೇಳಿರುವ ಸುಪ್ರಜಾ, ನನಗ್ಯಾಕೋ ಅಲ್ಲಿ ಹೋಗುವುದು ಬೇಡ ಅನಿಸಿತು, ಹೀಗಾಗಿ ನಾನು ಅಲ್ಲಿಗೆ ಹೋಗಲಿಲ್ಲ ಎಂದಿದ್ದಾರೆ.

ನಾನು ಅಲ್ಲಿ ಹೋಗದಿದ್ದರೂ ಕೂಡ ಆ ವ್ಯಕ್ತಿಯಿಂದ ಫೋನ್ ಬರುತ್ತಲೇ ಇತ್ತು ಎಂದು ಹೇಳಿರುವ ಸುಪ್ರಜಾ, ಅದೊಮ್ಮೆ ನೀವು ಯಾಕೆ ಬರಲಿಲ್ಲ..? ಎಂದು ಕೇಳಿದರು, ನಾನು ಆಗ ಅಲ್ಲೆಲ್ಲಾ ನಾನು ಬರುವುದಿಲ್ಲ ಎಂದು ಹೇಳಿದಾಗ, ಆ ವ್ಯಕ್ತಿ 25 ಲಕ್ಷ ಕೊಡುತ್ತೇವೆ ಬನ್ನಿ ಎಂದು ಹೇಳಿದ ಎಂದಿದ್ದಾರೆ.

ಹೀಗೆ ರಾಜಿಯಾಗಲು ನನಗೆ 25 ಲಕ್ಷದ ಆಮಿಷವೊಡ್ಡಿದ್ದರು ಎಂದು ಹೇಳಿರುವ ಸುಪ್ರಜಾ, ಹಣಕ್ಕಾಗಿ ನಾನು ನನ್ನನ್ನೂ ಮಾರಿಕೊಳ್ಳಲಾರೆ ಎಂದಿದ್ದಾರೆ. ಹಣ ಗಳಿಸಲು ಅದು ಸರಿಯಾದ ಮಾರ್ಗ ಅಲ್ಲ ಅಂದಿದ್ದಾರೆ. ನಾನು ಅವರ ಪ್ರಸ್ತಾವನೆ ತಿರಸ್ಕರಿಸಿದೆ ಎಂದಿದ್ದಾರೆ.

ಮುಂದುವರೆದು ಚಿತ್ರರಂಗಕ್ಕೆ ಹೊಸದಾಗಿ ಬಂದಾಗ ಇಂತಹ ಹಲವು ಕರೆಗಳು ಬರುತ್ತವೆ ಎಂದು ಹೇಳಿರುವ ಸುಪ್ರಜಾ, ಕೆಲವರಲ್ಲಿ ಹುಳುಕು ಇರುವುದಿಲ್ಲ, ನಿಜವಾಗಿಯೂ ಅವಕಾಶ ಇದೆ ಎಂದು ಹೇಳುತ್ತಾರೆ, ಇನ್ನೂ ಕೆಲವರು ತಪ್ಪುದಾರಿಗೆಳೆಯಲು ಪ್ರಯತ್ನ ಮಾಡುತ್ತಾರೆ, ನಮ್ಮ ಜಾಗರೂಕತೆಯಲ್ಲಿ ನಾವು ಇರಬೇಕು ಎಂದು ಹೇಳಿದ್ದಾರೆ. ಸದ್ಯ ಸುಪ್ರಜಾ ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

English summary
"I said NO." Bigg Boss Telugu star Kirrak Seetha exposes a shocking ₹25 Lakh casting couch offer and opens up about her traumatic breakup.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X