For Quick Alerts
  ALLOW NOTIFICATIONS  
  For Daily Alerts

  ಲಾಕ್ ಡೌನ್ ನಿಯಮ ಉಲ್ಲಂಘನೆ: ಮಲಯಾಳಂ 'ಬಿಗ್ ಬಾಸ್' ಸೆಟ್ ಸೀಲ್

  |

  ಕೊರೊನಾ ನಡುವೆಯೂ ಮಲಯಾಳಂ ಬಿಗ್ ಬಾಸ್ ಸೀಸನ್ 3 ಪ್ರಸಾರವಾಗುತ್ತಿತ್ತು. ಕರ್ನಾಟಕದಲ್ಲಿ ಕೊರೊನಾ ಲಾಕ್ ಡೌನ್ ನಿಂದ ಕನ್ನಡ ಬಿಗ್ ಬಾಸ್ ಅರ್ಧಕ್ಕೆ ಮೊಟಕುಗೊಳಿಸಲಾಗಿದೆ. ಇದೀಗ ಮಲಯಾಳಂ ಬಿಗ್ ಬಿಗ್ ಬಾಸ್ ಮೇಲು ಕೊರೊನಾ ಕರಿನೆರಳು ಬಿದ್ದಿದ್ದು, ಲಾಕ್ ಡೌನ್ ನಿಯಮ ಉಲ್ಲಂಘಿಸಿ ಚಿತ್ರೀಕರಣ ಮಾಡುತ್ತಿದ್ದ ಸೆಟ್ ಅನ್ನು ಸೀಲ್ ಮಾಡಲಾಗಿದೆ.

  ಮಲಯಾಳಂ Bigg boss ಕದ್ದು ಚಿತ್ರೀಕರಣ ನಡೆಸಲಾಗುತ್ತಿತ್ತು | Filmibeat Kannada

  ಮಲಯಾಳಂ ಬಿಗ್‌ಬಾಸ್ ಶೋನ ತಾಂತ್ರಿಕ ವರ್ಗದಲ್ಲಿ ಕೆಲಸ ಮಾಡುತ್ತಿದ್ದ 6 ಮಂದಿಗೆ ಕೊರೊನಾ ಪಾಸಿಟಿವ್ ಆದರೂ ಬಿಗ್ ಬಾಸ್ ಮುಂದುವರೆಸಲಾಗಿತ್ತು. ಮಲಯಾಳಂ ಬಿಗ್ ಬಾಸ್ ಚೆನ್ನೈನ ಇವಿಪಿ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿತ್ತು. ತಮಿಳುನಾಡು ಸರ್ಕಾರ ಸಿನಿಮಾ ಮತ್ತು ಧಾರಾವಾಹಿ ಚಿತ್ರೀಕರಣವನ್ನು ನಿಷೇಧ ಮಾಡಿದೆ.

  ಸಂಕಷ್ಟದಲ್ಲಿ ಮಲಯಾಳಂ ಬಿಗ್‌ಬಾಸ್‌: ಆರು ಮಂದಿಗೆ ಕೊರೊನಾ ಪಾಸಿಟಿವ್ಸಂಕಷ್ಟದಲ್ಲಿ ಮಲಯಾಳಂ ಬಿಗ್‌ಬಾಸ್‌: ಆರು ಮಂದಿಗೆ ಕೊರೊನಾ ಪಾಸಿಟಿವ್

  ನಿಷೇಧದ ನಡುವೆಯೂ ಬಿಗ್ ಬಾಸ್ ಚಿತ್ರೀಕರಣ ನಡೆಯುತ್ತಿದ್ದ ಕಾರಣ ಆರೋಗ್ಯ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳು ಅಲ್ಲಿನ ಸಿಬ್ಬಂದಿ ಸೇರಿದಂತೆ ಎಲ್ಲರನ್ನು ಖಾಲಿ ಮಾಡಿಸಿ ಸೆಟ್ ಅನ್ನು ಸೀಲ್ ಮಾಡಲಾಗಿದೆ ಎಂದು ದಿ ಹಿಂದು ಪತ್ರಿಕೆ ವರದಿ ಮಾಡಿದೆ. ಸ್ಪರ್ಧಿಗಳನ್ನು ಹೋಟೆಲ್‌ಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಲಾಗುತ್ತಿದೆ.

  ಅಧಿಕಾರಿಗಳು ಹೇಳಿದ ಪ್ರಕಾರ, 'ಶೂಟಿಂಗ್‌ಗೆ ನಿಷೇಧ ಹೇರಿದ ನಡುವೆಯೂ ಚಿತ್ರೀಕರಣ ನಡೆಯುತ್ತಿತ್ತು. ಅದ್ದರಿಂದ ನಾವು ಅವರನ್ನು ಖಾಲಿ ಮಾಡಿಸಿ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಸೀಲ್ ಮಾಡಿದ್ದೇವೆ' ಎಂದು ಹೇಳಿದ್ದಾರೆ.

  ಮಲಯಾಳಂ ಬಿಗ್ ಬಾಸ್ ಪ್ರಾರಂಭವಾದಾಗ ಯಾವುದೇ ನಿರ್ಬಂಧ ಇರಲಿಲ್ಲ. ಚೆನ್ನೈನ ಇವಿಪಿ ಫಿಲ್ಮ್ ಸಿಟಿಯಲ್ಲಿ ವಿಶೇಷ ಸೆಟ್ ನೊಂದಿಗೆ ಪ್ರಾರಂಭವಾಗಿತ್ತು. ಖ್ಯಾತ ನಟ ಮೋಹನ್ ಲಾಲ್ ನಡೆಸಿಕೊಡುತ್ತಿದ್ದ ಬಿಗ್ ಬಾಸ್ ಈ ಬಾರಿ 14 ಸ್ಪರ್ಧಿಗಳೊಂದಿಗೆ ಆರಂಭವಾಗಿತ್ತು. 95 ದಿನಗಳು ಬಿಗ್ ಬಾಸ್ ಶೋ ಮುಂದುವರೆದಿತ್ತು. ಆದರೀಗ ರದ್ದು ಮಾಡಲಾಗಿದೆ.

  English summary
  Bigg Boss Malayalam 3: Mohanlal hosted bigg Boss set sealed for violating ban.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X