ಇಂದಿನಿಂದ ಆರಂಭವಾಗಲಿರುವ ಬಿಗ್ ಬಾಸ್‌ಗೆ ಮೋಹನ್ ಲಾಲ್ ಪಡೆದ ಸಂಭಾವನೆ ಎಷ್ಟು ?
''ಬಿಗ್ ಬಾಸ್'' ಕೇವಲ ಸ್ಫರ್ಧಿಗಳಿಗೆ ಮಾತ್ರವಲ್ಲ ಕಾರ್ಯಕ್ರಮವನ್ನು ನಡೆಸಿಕೊಡುವ ಸ್ಟಾರ್ ನಿರೂಪಕರಿಗೆ ಕೂಡ ಚಿನ್ನದ ಮೊಟ್ಟೆ ಇಡುವ ಕೋಳಿ. ಬೇರೆ ಬೇರೆ ಭಾಷೆಗಳಲ್ಲಿ ಈ ಕಾರ್ಯಕ್ರಮದ ನಿರೂಪಣೆ ಮಾಡುವ ಸೂಪರ್ ಸ್ಟಾರ್‌ಗಳು ಕೋಟ್ಯಂತರ ರೂಪಾಯಿಯ ''ಸಂಭಾವನೆ''ಯನ್ನು ಪಡೆಯುತ್ತಾರೆ. ಈ ''ಸಂಭಾವನೆ''ಯ ಕಾರಣದಿಂದನೇ ಹಲವರು ಎಷ್ಟೇ ಕಷ್ಟ ಆದರೂ ಕೂಡ ತಮ್ಮ ''ಸಂಬಂಧ''ವನ್ನು ವರ್ಷಾನುವರ್ಷಗಳಿಂದ ಮುಂದುವರೆಸಿಕೊಂಡು ಕೂಡ ಬಂದಿದ್ದಾರೆ.
19ರ ಹರೆಯಕ್ಕೆ ಕಾಲಿಡುತ್ತಿರುವ ''ಹಿಂದಿ''ಯ ''ಬಿಗ್ ಬಾಸ್''ನ ಸಲ್ಮಾನ್ ಖಾನ್ ಕಳೆದ ಹದಿನಾಲ್ಕು ವರ್ಷಗಳಿಂದ ನೋಡಿಕೊಂಡು ಬಂದಿದ್ದಾರೆ. ಇನ್ನು ಸುದೀಪ್ ''ಕನ್ನಡ''ದಲ್ಲಿ ಹನ್ನೊಂದು ವರ್ಷಗಳಿಂದ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದಾರೆ. ಕಳೆದ ಆರು ವರ್ಷಗಳಿಂದ ನಾಗಾರ್ಜುನ ಮತ್ತು ಮೋಹನ್ ಲಾಲ್ ಈ ಕೆಲಸವನ್ನು ಅವರ ಭಾಷೆಯಲ್ಲಿ ಮಾಡಿಕೊಂಡು ಬಂದಿದ್ದಾರೆ.

ಹೀಗೆ ತಮ್ಮ ಉಪಸ್ಥಿತಿಯಿಂದ ತಮ್ಮ ಭಾಷೆಯಲ್ಲಿ ಪ್ರೇಕ್ಷಕರನ್ನು ಆಯಸ್ಕಾಂತದಂತೆ ಕಿರುತೆರೆಯತ್ತ ಸೆಳೆಯುವ ಇವರೆಲ್ಲರಿಗೆ ಬಿಗ್ ಬಾಸ್ ಲಕ್ಷದಲ್ಲಿ ಅಲ್ಲ ಬದಲಿಗೆ ಕೋಟಿಗಳ ಲೆಕ್ಕದಲ್ಲಿ ಹಣವನ್ನು ನೀಡುತ್ತೆ. ಇದಕ್ಕೆ ಪೂರಕವಾಗಿ ಸಲ್ಮಾನ್ ಖಾನ್ ಈ ಬಾರಿಯ ಬಿಗ್ ಬಾಸ್‌ಗೆ ₹120 ರಿಂದ ₹150 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ''ದಿ ಇಂಡಿಯನ್ ಎಕ್ಸ್‌ಪ್ರೆಸ್'' ವರದಿಯನ್ನು ಮಾಡಿದೆ.
ಸಲ್ಮಾನ್ ಖಾನ್ ಅವರ ಈ ಸಂಭಾವನೆಯ ವಿಚಾರಕ್ಕೆ ಅನೇಕರು ಬೆಚ್ಚಿ ಬಿದ್ದಿದ್ದು ಇದೀಗ ಮೋಹನ್ ಲಾಲ್ ಗೆ ನೀಡಲಾದ ಸಂಭಾವನೆಯ ಕುರಿತು ಚರ್ಚೆಯಾಗುತ್ತಿದೆ. ಹೌದು, ಮಲಯಾಳಂನಲ್ಲಿ ''ಬಿಗ್ ಬಾಸ್'' ಕಾರ್ಯಕ್ರಮಕ್ಕೆ ಇಂದು [ ಆಗಸ್ಟ್ 3] ಅದ್ಧೂರಿ ಚಾಲನೆ ಸಿಗಲಿದೆ. ಸಂಜೆ 7 ರಿಂದ ಕಾರ್ಯಕ್ರಮ ಏಷ್ಯಾನೆಟ್ ಮತ್ತು ಜೀಯೋ ಹಾಟ್ ಸ್ಟಾರ್‌ನಲ್ಲಿ ಪ್ರಸಾರವಾಗಲಿದೆ. ಈ ಬಾರಿ ಬಿಗ್ ಬಾಸ್ ಮನೆಯನ್ನು ಪ್ರವೇಶ ಮಾಡುವ ಅದೃಷ್ಟವಂತರು ಯಾರು ಎನ್ನುವ ಪ್ರಶ್ನೆಗೆ ಕೂಡ ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ.

ಇದರ ನಡುವೆ ಮೋಹನ್ ಲಾಲ್ ಈ ಬಾರಿಯ ಬಿಗ್ ಬಾಸ್‌ಗೆ ಒಂದಲ್ಲ.. ಎರಡಲ್ಲ.. ₹24 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ''ಟೈಮ್ಸ್ ಆಫ್ ಇಂಡಿಯಾ'' ವರದಿಯನ್ನು ಮಾಡಿದೆ. ''ಟೈಮ್ಸ್ ಆಫ್ ಇಂಡಿಯಾ'' ವರದಿಯ ಪ್ರಕಾರ ಮೊದಲ ಸೀಸನ್‌ಗೆ ಮೋಹನ್ ಲಾಲ್ ಅವರಿಗೆ ₹12 ಕೋಟಿ ಸಂಭಾವನೆ ನೀಡಲಾಗಿತ್ತು. ಆ ನಂತರ ಮೋಹನ್ ಲಾಲ್ ತಮ್ಮ ಸಂಭಾವನೆಯನ್ನು ₹18 ಕೋಟಿಗೆ ಏರಿಸಿದ್ದರು.
ಕಳೆದ ಕೆಲ ವರ್ಷಗಳಿಂದ ₹18 ಕೋಟಿಯನ್ನೇ ಪಡೆಯುತ್ತಿದ್ದ ಮೋಹನ್ ಲಾಲ್ ಈ ವರ್ಷ ತಮ್ಮ ಸಂಭಾವನೆಯನ್ನು ಮತ್ತೆ ಹೆಚ್ಚಿಸಿದ್ದಾರೆ. ಮೂರು ತಿಂಗಳ ಕಾರ್ಯಕ್ರಮಕ್ಕೆ ₹24 ಕೋಟಿಯನ್ನು ಪಡೆದಿದ್ದಾರೆ.
ಇನ್ನುಳಿದಂತೆ ಇನ್ನೇನು ಕೆಲವೇ ಗಂಟೆಗಳಲ್ಲಿ ಶುರುವಾಗಲಿರುವ ಕಾರ್ಯಕ್ರಮದಲ್ಲಿ ಈ ಬಾರಿ ಮುನ್ಶಿ ರಂಜಿತ್, ಗಾಯತ್ರಿ ದೇವಿ { ಕಿಂಗಿನಿ } ಬೋಬನ್ ಅಲುಮ್ಮೂಡನ್, ರೇಖಾ ರತೀಶ್, ರೇಜನೀಶ್ ವಿಆರ್, ಶಾನವಾಸ್ ಶಾನು, ಸುಜಯ ಪಾರ್ವತಿ, ಬಿನ್ನಿ ಸೆಬಾಸ್ಟಿಯನ್, ವಿನ್ಸಿ ಅಲೋಶಿಯಸ್ , ಆದಿತ್ಯನ್ ಜಯನ್, ಕಿಲಿ ಪಾಲ್, ರೇಣು ಸುಧಿ, ಮೈತ್ರೇಯನ್, ಅವಂತಿಕಾ ಮೋಹನ್, ಅನುಮೋಲ್ ಅನುಕುಟ್ಟಿ, ಸೀಮಾ ಜಿ. ನಾಯರ್, ಬೀನಾ ಆಂಟನಿ, ಮಸ್ತಾನಿ, ಅಪ್ಪಾನಿ ಶರತ್, ಜಾಸಿ ಆಶಿ, ಭಾಗವಹಿಸಲಿದ್ದಾರೆ ಎನ್ನುವ ಸುದ್ದಿ ಸದ್ಯ ಕೇಳಿ ಬರುತ್ತಿದೆ. ಇವರಲ್ಲಿ ಯಾರೆಲ್ಲಾ ಭಾಗವಹಿಸುತ್ತಾರೆ ಎನ್ನುವುದಕ್ಕೆ ಸ್ಪಷ್ಟವಾದ ಉತ್ತರ ಇನ್ನು ಕೆಲವೇ ಹೊತ್ತಿನಲ್ಲಿ ಸಿಗಲಿದೆ.


Click it and Unblock the Notifications











