'ಬಿಗ್ ಬಾಸ್' ಮನೆಗೆ ಬಂದ 19 ಜನ ಯಾರು ? ಇವರ ಹಿನ್ನೆಲೆ ಏನು ?

ಪ್ರತಿ ವರ್ಷ ಬಿಗ್‌ಬಾಸ್ ಕಾರ್ಯಕ್ರಮದಲ್ಲಿ ಚಿತ್ರ ವಿಚಿತ್ರ ಆಸಾಮಿಗಳು ಇದ್ದೇ ಇರುತ್ತಾರೆ. ಇರದಿದ್ದರೆ ಈ ಶೋ ಅಪೂರ್ಣವೆನಿಸುತ್ತದೆ. ಕಾರ್ಯಕ್ರಮದ ಆಯೋಜಕರಿಗೆ.. ವಾಹಿನಿಯವರಿಗೆ.. ಕೂಡ ಈ ವಿಚಾರ ಚೆನ್ನಾಗೇ ಗೊತ್ತು. ಹೀಗಾಗಿಯೇ ಎಲ್ಲರನ್ನೂ ಇರಿಟೇಟ್ ಮಾಡುವ, ನರಿ ಬುದ್ಧಿ ಪ್ರದರ್ಶಿಸುವ, ಡ್ರಾಮಾ ಮಾಡುವ ವ್ಯಕ್ತಿತ್ವಗಳನ್ನೇ ಹುಡುಕಾಡಿ ಮನೆಯಲ್ಲಿ ಸೇರಿಸಲು ಕಸರತ್ತು ಮಾಡುತ್ತಾರೆ. ಇನ್ನು ಬಣ್ಣದ ಸೆಳೆತಕ್ಕೆ ಸಿಲುಕಿದವರಲ್ಲಿಯೇ ಹಲವಾರು ಜನ ಬಿಗ್ ಬಾಸ್‌ನಲ್ಲಿ ಭಾಗವಹಿಸಬೇಕೆಂದು ಕನಸು ಕಾಣುತ್ತಾರೆ.

ಆದರೆ .. ಈ ಸುವರ್ಣ ಅವಕಾಶ ಎಲ್ಲರಿಗೆ ಸಿಗುವುದಿಲ್ಲ. ಯಾಕೆಂದರೆ ಬಿಗ್ ಬಾಸ್‌ನ ನಿಯಮಾವಳಿಯೇ ಹಾಗೇ ಇದೆ. ಮಾನದಂಡಕ್ಕೆ ಕೇವಲ ಹೆಸರು ಮಾತ್ರ ಮುಖ್ಯವಲ್ಲ ಬದಲಿಗೆ ಆ ಹೆಸರಿಗೊಂದು ಸಮ್ಮೋಹಕವಾದ ಶಕ್ತಿ ಇರಬೇಕು.. ಆ ಹೆಸರು ಕೇಳಿದರೆ ಸಾಕು ಜನಸಾಮಾನ್ಯರು.. ಕಾರ್ಯಕ್ರಮ ನೋಡಲು ಬಂದು ಕೂರಬೇಕು.

Bigg Boss Malayalam 7 Meet the Diverse Cast of Contestants on Mohanlal s Reality Show

ಸದ್ಯ ಈ ಎಲ್ಲಾ ಲೆಕ್ಕಾಚಾರಗಳನ್ನು ಹಾಕಿ ಮಲಯಾಳಂನ ಬಿಗ್ ಬಾಸ್ ಮನೆಗೆ 19ಜನರನ್ನು ಆಯ್ಕೆ ಮಾಡಿ ಕಳುಹಿಸಲಾಗಿದೆ. ಆ 19 ಜನರು ಯಾರು.. ? ಅವರ ಹಿನ್ನೆಲೆ ಏನು ? ಎನ್ನುವುದರ ವಿವರ ಇಲ್ಲಿದೆ.

ಗಿಜೆಲೆ ಥಕ್ರಾಲ್

ಮಾಡೆಲ್ ಆಗಿ ನಾಯಕಿಯಾಗಿ ಮತ್ತು ಉದ್ಯಮಿಯಾಗಿ ಕೂಡ ಗುರುತಿಸಿಕೊಂಡಿರುವ ಗಿಜೆಲ್ ಥಕ್ರಾಲ್ ಅವರು ಈ ಬಾರಿ ಮಲಯಾಳಂನ ಬಿಗ್ ಬಾಸ್ ಮನೆಗೆ ಹೋಗಿದ್ದಾರೆ. ವಿಶೇಷ ಅಂದರೆ ಬಿಗ್ ಬಾಸ್ ಗಿಜೆಲೆ ಪಾಲಿಗೆ ಹೊಸದಲ್ಲ. ಯಾಕೆಂದರೆ.. ಸಲ್ಮಾನ್ ಖಾನ್ ಸಾರಥ್ಯದಲ್ಲಿ ಮೂಡಿ ಬರುವ ಬಿಗ್ ಬಾಸ್‌ನಲ್ಲಿ ಈ ಹಿಂದೆ ಗಿಜೆಲೆ ಭಾಗವಹಿಸಿದ್ದರು. ಬಿಗ್ ಬಾಸ್‌ ಸೀಸನ್‌9ರ ಸ್ಫರ್ಧಿಯಾಗಿದ್ದರು.

ಶೈತ್ಯ ಸಂತೋಷ್

''ಅಮ್ಮಾಯುಮ್ ಮಕಲುಮ್'' ಎಂಬ ಜನಪ್ರಿಯ ಮಲಯಾಳಂ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದ ಶೈತ್ಯ ಸಂತೋಷ್ ಅವರನ್ನು ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಕಳುಹಿಸಲಾಗಿದೆ. ವೃತ್ತಿಯಲ್ಲಿ ವಕೀಲೆಯಾಗಿರುವ ಶೈತ್ಯ ಸಾಮಾಜಿಕ ಜಾಲತಾಣದಲ್ಲಿ ಕಟೆಂಟ್ ಕ್ರಿಯೇಟರ್ ಕೂಡ ಹೌದು.

ಅನೀಶ್ ಟಿಎ

ಇನ್ನು ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಜನಸಾಮಾನ್ಯರಿಗೆ ಅವಕಾಶವನ್ನು ನೀಡುವುದಾಗಿ ಭರವಸೆಯನ್ನು ನೀಡಲಾಗಿತ್ತು. ಅದ್ರಂತೆ ಬರಹಗಾರ ಮತ್ತು ವ್ಲಾಗರ್ ಆದ ಅನೀಶ್ ಟಿಎ ಅವರನ್ನು ಈ ಬಾರಿ ಆಯ್ಕೆ ಮಾಡಲಾಗಿದೆ. ಇವರು ''ಎನ್‌ ನೇರಂ ತುಳಂಜು'' ಎಂಬ ಪುಸ್ತಕದ ಲೇಖಕರು ಕೂಡ ಹೌದು.

ಕಲಾಭವನ್ ಸರಿಗ

ಮಿಮಿಕ್ರಿ ಮಾಡುವ ಮೂಲಕವೇ ಕೇರಳಿಗರ ಹೃದಯವನ್ನು ಗೆದ್ದ, ಹಾಸ್ಯ ಪಾತ್ರಗಳಿಂದ ಗಮನವನ್ನು ಕೂಡ ಸೆಳೆದ ಕಲಾಭವನ್ ಸರಿಗ ಕೂಡ ಈ ಬಾರಿ ಬಿಗ್ ಬಾಸ್‌ನಲ್ಲಿ ಭಾಗವಹಿಸಿದ್ದಾರೆ.

ರೇಣು ಸುಧಿ

ಮಲಯಾಳಂನ ಖ್ಯಾತ ಹಾಸ್ಯ ನಟ ದಿವಂಗತ ಕೊಲ್ಲಂ ಸುಧಿ ಅವರ ಪತ್ನಿ ರೇಣು ಸುಧಿ ಈ ಬಾರಿಯ ಮತ್ತೊಬ್ಬ ಬಿಗ್ ಬಾಸ್ ಸ್ಫರ್ಧಿ. ಕೆಲ ದಿನಗಳ ಹಿಂದೆಯಷ್ಟೇ ಇವರ ಹೊಸ ಫೋಟೋಶೂಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಹಲವರ ಹುಬ್ಬೇರಿಸಿತ್ತು.

bigg-boss-malayalam-7-meet-the-diverse-cast-of-contestants-on-mohanlals-reality-show

ಅಭಿಶ್ರೀ

ಮಲಯಾಳಂ ಕಿರುತೆರೆ ಪ್ರೇಕ್ಷಕರಿಗೆ ಚಿರಪರಿಚಿತವಾದ ಅಭಿಶ್ರೀ ಕೂಡ ಈ ಬಾರಿ ಬಿಗ್ ಬಾಸ್ ಮನೆಯನ್ನು ಪ್ರವೇಶಿಸಿದ್ದಾರೆ. ''ಮಿಝಿರಾಂಡಿಲುಮ್'' ಮತ್ತು ''ಕಾಥೋಡು ಕಾಥೋರಂ'' ನಂತಹ ಜನಪ್ರಿಯ ಧಾರಾವಾಹಿಗಳಲ್ಲಿ ತಮ್ಮ ಅಭಿನಯದಿಂದ ಗಮನ ಸೆಳೆದ ಅಭಿಶ್ರೀ ಬಿಗ್ ಬಾಸ್‌ ಮನೆಯಲ್ಲಿ ಎಷ್ಟರ ಮಟ್ಟಿಗೆ ಗಮನ ಸೆಳೆಯುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಅಕ್ಬರ್ ಖಾನ್

ಸರಿಗಮಪ.. ಸ್ಟಾರ್ ಸಿಂಗರ್.. ಅಂತಹ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡು ತಮ್ಮ ಚಿನ್ನದ ಕಂಠದಿಂದ ಕೇರಳ ಜನರ ಹೃದಯ ಗೆದ್ದ ಅಕ್ಬರ್ ಖಾನ್ ಅವರನ್ನು ಕೂಡ ಬಿಗ್ ಬಾಸ್ ಮನೆಗೆ ಈ ಬಾರಿ ಕಳುಹಿಸಲಾಗಿದೆ.

ಮುನ್ಷಿ ರಂಜಿತ್ ಮತ್ತು ಆರ್ಯನ್ ಕಥುರಿಯಾ

ಮುನ್ಷಿ ಧಾರಾವಾಹಿಯಿಂದ ಜನಜನಿತವಾದ ಮುನ್ಷಿ ರಂಜಿತ್ ಕೂಡ ಬಿಗ್ ಬಾಸ್ ಮನೆಯನ್ನು ಪ್ರವೇಶಿಸಿದ್ದಾರೆ. ಇವರ ಜೊತೆ ಮಾಡೆಲ್ ಆಗಿ ಆಕ್ಟರ್ ಆಗಿ ಮತ್ತು ಕ್ರಿಕೆಟ್ ಪ್ಲೇಯರ್ ಆಗಿ ಕೂಡ ಗುರುತಿಸಿಕೊಂಡಿರುವ ಆರ್ಯನ್ ಕಥುರಿಯಾ ಅವರನ್ನು ಕೂಡ ಮನೆಯೊಳಗೆ ಕಳುಹಿಸಲಾಗಿದೆ.


ಒನಲ್ ಸಾಬು ಮತ್ತು ಬಿನ್ನಿ ಸೆಬಾಸ್ಟಿಯನ್

ವೃತ್ತಿಯಲ್ಲಿ ವಕೀಲರಾಗಿರುವ, ಎಫ್ ಸಿ ಬಾಯ್ ಹೆಸರಿನಲ್ಲಿ ಫುಡ್ ವ್ಲಾಗ್‌ಗಳನ್ನು ಮಾಡುವ ಒನಲ್ ಸಾಬು ಮತ್ತು ರೇಡಿಯೋ ಜಾಕಿಯಾಗಿ ಹೆಸರು ಮಾಡಿರುವ ಆರ್‌ಜೆ ಬಿನ್ಸಿ ಕೂಡ ಈ ಬಾರಿ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ. ಇನ್ನು ವೃತ್ತಿಯಲ್ಲಿ ವೈದ್ಯೆಯಾಗಿರುವ ಗೀತಾ ಗೋವಿಂದಂ ಚಿತ್ರದ ಪಾತ್ರಕ್ಕೆ ಹೆಸರುವಾಸಿಯಾದ ಬಿನ್ನಿ ಸೆಬಾಸ್ಟಿಯನ್ ಅವರಿಗೆ ಕೂಡ ಈ ಬಾರಿ ಬಿಗ್ ಬಾಸ್ ಟಿಕೆಟ್ ಸಿಕ್ಕಿದೆ.

bigg-boss-malayalam-7-meet-the-diverse-cast-of-contestants-on-mohanlals-reality-show


ಸಾರಿಕಾ ಮತ್ತು ಅಪ್ಪಾನಿ ಶರತ್

ಹಾಟ್ ಸೀಟ್‌ ಸರಣಿಯಿಂದ ಜನಪ್ರಿಯರಾದ ತಮ್ಮ ನೇರ ದಿಟ್ಟ ಮಾತುಗಳಿಂದ ಕೇರಳದಲ್ಲಿ ಖ್ಯಾತಿಯನ್ನು ಗಳಿಸಿರುವ ಕಟೆಂಟ್ ಕ್ರಿಯೇಟರ್ ಸಾರಿಕಾ ಕೂಡ ಬಿಗ್ ಬಾಸ್ ಸೀಸನ್ 7ರ ಭಾಗವಾಗಿದ್ಧಾರೆ. ''ಅಂಗಮಾಲಿ ಡೈರೀಸ್‌''ನಲ್ಲಿ ಅಪ್ಪಾನಿ ರವಿ ಪಾತ್ರದಿಂದ ಹೆಸರುವಾಸಿಯಾದ ಅಪ್ಪಾನಿ ಶರತ್ ಕೂಡ ಸ್ಫರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿಯ ಪ್ರಬಲ ಸ್ಫರ್ಧಿಗಳಲ್ಲಿ ಇವರು ಮುಂಚೂಣಿಯಲ್ಲಿದ್ದಾರೆ.


ಅಧಿಲಾ ಮತ್ತು ನೂರಾ

ಈ ಬಾರಿ ಮಲಯಾಳಂ ಬಿಗ್ ಬಾಸ್‌ನ ವಿಶೇಷ ಅಂದರೆ ಸಲಿಂಗ ವಿವಾಹವಾದ ಇಬ್ಬರು ಚೆಲುವೆಯರು ಸ್ಫರ್ಧಿಗಳಾಗಿ ಬಂದಿದ್ದಾರೆ. ಸೈಬರ್ ಭದ್ರತಾ ವಿಶ್ಲೇಷಕರಾಗಿ ಕೆಲಸ ಮಾಡುವ LGBTQ+ ಸಮುದಾಯದ ಪರ ಕಾನೂನು ಹೋರಾಟವನ್ನು ಕೂಡ ಮಾಡುವ ಅಧಿಲಾ ಮತ್ತು ನೂರಾ ಮನೆಯಲ್ಲಿ ಯಾವ ರೀತಿಯ ಮ್ಯಾಜಿಕ್ ಮಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಕೇವಲ ಇವರಷ್ಟೇ ಅಲ್ಲ ಇವರ ಜೊತೆ ಶಾನವಾಸ್ ಶಾನು, ನೆವಿನ್ ಕ್ಯಾಪ್ರೆಸಿಯಸ್, ಅನುಮೋಲ್, 19ರ ಹರೆಯದ ರೀನಾ ಫಾತಿಮಾ ಕೂಡ ಈ ಬಾರಿಯ ಬಿಗ್ ಬಾಸ್‌ನಲ್ಲಿ ಭಾಗವಹಿಸಲಿದ್ದಾರೆ. ಇವರಲ್ಲಿ ಯಾರು ಈ ಬಾರಿ ಪ್ರೇಕ್ಷಕರ ಹೃದಯ ಗೆಲ್ತಾರೆ.. ಟ್ರೋಪಿ ಮುಡಿಗೇರಿಸಿಕೊಳ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ

More from Filmibeat

English summary
Ready for a dose of drama? Dive into the full list of contestants for Bigg Boss Malayalam Season 7. Find out who will be competing for the title on Mohanlal's reality show and what makes them a contender
Read more about: biggboss bigg boss ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X