ಬಿಗ್ ಬಾಸ್‌ನಿಂದ ಮೊದಲ ಸ್ಫರ್ಧಿ ಔಟ್..! ಯಾರು ಗೊತ್ತಾ?

ಪ್ರತಿ ವರ್ಷದ ದ್ವೀತಿಯಾರ್ಧದಲ್ಲಿ ಭಾರತವನ್ನು ''ಬಿಗ್ ಬಾಸ್'' ಆವರಿಸಿಕೊಳ್ಳುತ್ತೆ. ಜೂನ್ ನಂತರ ಯಾವ ಭಾಷೆಯಲ್ಲಿ ನೋಡಿದರು ಕೂಡ ''ಬಿಗ್ ಬಾಸ್'' ಕುರಿತು ಚರ್ಚೆ ಶುರುವಾಗುತ್ತೆ. ಈ ವರ್ಷ ಕೂಡ ಇದರಿಂದ ಹೊರತಾಗಿಲ್ಲ. ಈಗಾಗಲೇ ಎಲ್ಲೆಡೆ ''ಬಿಗ್ ಬಾಸ್'' ಜ್ವರ ಹರಡುತ್ತಿದೆ. ಹಿಂದಿಯಲ್ಲಿ ಈ ಆಗಸ್ಟ್ 24ರಿಂದ ''ಬಿಗ್ ಬಾಸ್'' ಕಾರ್ಯಕ್ರಮ ಶುರುವಾಗಲಿದ್ದು, ತಯಾರಿಗಳು ಭರ್ಜರಿಯಾಗಿಯೇ ನಡೆಯುತ್ತಿವೆ.

ಇನ್ನು ಮಲಯಾಳಂನಲ್ಲಿ ಈಗಾಗಲೇ ''ಬಿಗ್ ಬಾಸ್'' ಆರಂಭವಾಗಿದ್ದು ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಮನೆಗೆ ಹೋದ 20 ಸ್ಫರ್ಧಿಗಳಲ್ಲಿ ಒಬ್ಬ ಸ್ಫರ್ಧಿಯನ್ನು ಮನೆಯಾಚೆ ಕೂಡ ಕಳುಹಿಸಲಾಗಿದೆ.

Bigg Boss Malayalam 7 Munshi Ranjeet Is The First Contestant Eliminated

ಹೌದು, ಎಂದಿನಂತೆ ಈ ಬಾರಿ ಕೂಡ ''ಬಿಗ್ ಬಾಸ್‌'' ಮನೆಗೆ ಮನರಂಜನೆಯ ಕ್ಷೇತ್ರದಲ್ಲಿದ್ದವರನ್ನೇ ಕಳುಹಿಸಲಾಗಿತ್ತು. ಇಷ್ಟೇ ಅಲ್ಲದೇ ಜನಸಾಮಾನ್ಯರನ್ನು ಕೂಡ ಆಯ್ಕೆ ಮಾಡಲಾಗಿತ್ತು.

ಇನ್ನು ''ಬಿಗ್ ಬಾಸ್'' ಅಂದರೆನೇ ರಂಪ-ರಾಮಾಯಣ. ಮನೆಯಲ್ಲಿ ಉಳಿಯಬೇಕು ಅಂದರೆ ಜಗಳ ಮಾಡಬೇಕು. ಕಿತ್ತಾಡಬೇಕು. ಹೀಗಾಗಿಯೇ ಮನೆಯೊಳಗೆ ಹೋದ ಎಲ್ಲರೂ ಮೊದಲ ದಿನದಿಂದಲೇ ಕಾಲು ಕೆರೆದು ಜಗಳಕ್ಕೆ ನಿಲ್ಲಲು ಶುರು ಮಾಡಿದರು. ಹಗಲು ಹೊತ್ತಿನಲ್ಲಿ ನಿದ್ದೆ ಮಾಡುವದರಿಂದ ಹಿಡಿದು ಬೇರೆಯವರ ಮೇಕಪ್ ಕಿಟ್‌ನಲ್ಲಿ ಇಣುಕಿ ನೋಡಿದರು. ''ಬಿಗ್ ಬಾಸ್‌'' ನಿಯಮಗಳನ್ನು ಕೂಡ ಗಾಳಿಗೆ ತೂರಿದರು.

ಮಾಡೆಲ್ ಆಗಿ ನಾಯಕಿಯಾಗಿ ಮತ್ತು ಉದ್ಯಮಿಯಾಗಿ ಕೂಡ ಗುರುತಿಸಿಕೊಂಡಿರುವ ಗಿಜೆಲೆ ಥಕ್ರಲ್ ಅವರ ಬಟ್ಟೆಯ ಬಗ್ಗೆ ಶಾನವಾಸ್ ಮಾತನಾಡಿದರು. ಮಲಯಾಳಂನ ಖ್ಯಾತ ಹಾಸ್ಯ ನಟ ದಿವಂಗತ ಕೊಲ್ಲಂ ಸುಧಿ ಅವರ ಪತ್ನಿ ರೇಣು ಸುಧಿ ಅವರನ್ನು ''ಸರಿಗಮಪ''.. ''ಸ್ಟಾರ್ ಸಿಂಗರ್''.. ಅಂತಹ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡ ಗಾಯಕ ಅಕ್ಬರ್ "ಸೆಪ್ಟಿಕ್ ಟ್ಯಾಂಕ್" ಎಂದು ಕರೆದರು.

ಇನ್ನು ಶುರುವಾದ ಒಂದು ವಾರದಲ್ಲಿಯೇ ಗುಂಪುಗಾರಿಕೆ ಕೂಡ ಶುರುವಾಯ್ತು. ಅಕ್ಬರ್ ಮತ್ತು ಅಪ್ಬಾನಿ ಸ್ನೇಹ ಚಿಗುರೊಡೆಯಿತು. ಕಣ್ಣೀರು ಹಾಕುವುದು.. ಸಿಂಪತಿ ಕಾರ್ಡ್‌ ಪ್ಲೇ ಮಾಡುವುದು ಎಲ್ಲ ತರಹದ ವಿದ್ಯಮಾನಗಳಿಗೆ ಮೊದಲ ವಾರದಲ್ಲಿಯೇ ಮಲಯಾಳಂನ ''ಬಿಗ್‌ ಬಾಸ್‌'' ಮನೆ ಸಾಕ್ಷಿ ಆಯಿತು.

Bigg Boss Malayalam 7 Munshi Ranjeet Is The First Contestant Eliminated

ಆದರೂ ಕೂಡ ನಿಯಮದಂತೆ ''ಎಲಿಮಿನೇಷನ್‌'' ಮಾಡಲೇಬೇಕು. ಮನೆಯಿಂದ ಹೊರ ದಬ್ಬಲೇಬೇಕು. ಹೀಗಾಗಿಯೇ 8 ಜನ ಅಂದರೆ ಅನುಮೋಲ್.. ಶೈತ್ಯ ಸಂತೋಷ್.. ಗಿಜೆಲೆ ಥಕ್ರಾಲ್.. ಆರ್ಯನ್ ಕಥುರಿಯಾ.. ರೇಣು ಸುಧಿ.. ಮುನ್ಶಿ ರಂಜೀತ್.. ಸಾರಿಕಾ.. ಮತ್ತು ನೆವಿನ್ ಅವರನ್ನು ''ಡೇಂಜರ್ ಝೋನ್" ನಲ್ಲಿ ಕರೆತಂದು ನಿಲ್ಲಿಸಲಾಗಿತ್ತು.

ಆ ಪೈಕಿ ಸದ್ಯ ಮೊದಲ ವಾರದಲ್ಲಿಯೇ ಮುನ್ಷಿ ಧಾರಾವಾಹಿಯಿಂದ ಜನಜನಿತವಾದ ''ಮುನ್ಶಿ ರಂಜೀತ್'' ಮನೆಯಿಂದ ಹೊರಗಡೆ ಬಂದಿದ್ದಾರೆ. ಎಂದಿನಂತೆ ವಾರದ ಕಥೆಯನ್ನೆಲ್ಲ ವಿಶ್ಲೇಷಣೆ ಮಾಡಿದ ಮೋಹನ್ ಲಾಲ್ ಕೊನೆಗೆ ''ಮುನ್ಶಿ ರಂಜೀತ್'' ಅವರನ್ನು ಮರಳಿ ಮನೆಗೆ ಕಳುಹಿಸಿದ್ದಾರೆ.

ಸದ್ಯ ಮನೆಯಲ್ಲಿ ಸಲಿಂಗಿ ಜೋಡಿ ಅಧಿಲಾ ಮತ್ತು ನೂರಾ ಜೊತೆ ರೇಣು ಸುಧಿ.. ಅನುಮೋಲ್.. ಶೈತ್ಯ ಸಂತೋಷ್.. ಗಿಜೆಲೆ ಥಕ್ರಾಲ್.. ಆರ್ಯನ್ ಕಥುರಿಯಾ..ಸಾರಿಕಾ.. ನೆವಿನ್..ಕಾಮನ್ ಮ್ಯಾನ್ ಆಗಿ ಮನೆ ಪ್ರವೇಶಿಸಿರುವ ಅನೀಶ್ ಟಿಎ.. ಅಪ್ಪಾನಿ ಶರತ್..ಕಲಾಭವನ್ ಸರಿಗ..ಅಭಿಶ್ರೀ..ಆರ್ಯನ್ ಕಥುರಿಯಾ..ಒನಲ್ ಸಾಬು..ಬಿನ್ನಿ ಸೆಬಾಸ್ಟಿಯನ್..ಆರ್‌ಜೆ ಬಿನ್ಸಿ..ಶಾನವಾಸ್ ಶಾನು..19ರ ಹರೆಯದ ರೀನಾ ಫಾತಿಮಾ..ಅಕ್ಬರ್ ಖಾನ್.. ಇದ್ದಾರೆ.

ಈ ವಾರ ''ಅಮ್ಮಾಯುಮ್ ಮಕಲುಮ್'' ಎಂಬ ಜನಪ್ರಿಯ ಮಲಯಾಳಂ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದ ಶೈತ್ಯ ಸಂತೋಷ್ ಮನೆಯಿಂದ ಹೊರ ಬರುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ. ''ಏಷ್ಯಾನೆಟ್‌'' ಮತ್ತು ''ಜೀಯೋ ಹಾಟ್‌ಸ್ಟಾರ್‌''ನಲ್ಲಿ ಮಲಯಾಳಂನ ಬಿಗ್ ಬಾಸ್ ಸೋಮವಾರದಿಂದ ಶುಕ್ರವಾರ ರಾತ್ರಿ 9-30ಕ್ಕೆ ಮತ್ತು ಶನಿವಾರ ಭಾನುವಾರ ರಾತ್ರಿ 9ಕ್ಕೆ ಪ್ರಸಾರವಾಗುತ್ತಿದೆ.

More from Filmibeat

English summary
The first elimination of Bigg Boss Malayalam Season 7 is here, and it's a big one! See why Munshi Ranjeet's journey on Mohanlal's show came to an end.
Read more about: biggboss bigg boss ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X