ಬಿಗ್‌ಬಾಸ್ ಮನೆಗೆ ಸಲಿಂಗಿ ಜೋಡಿ ಎಂಟ್ರಿ, ಇವರ ಲವ್ ಸ್ಟೋರಿಯೇ ರೋಚಕ
ಭಾರತದಲ್ಲಿ ಈಗೀಗ ಸಲಿಂಗ ಪ್ರೇಮ.. ಸಲಿಂಗ ವಿವಾಹಗಳು ಹೆಚ್ಚಾಗುತ್ತಿವೆ. ಗಂಡಿನ ಜೊತೆ ಗಂಡಿನ.. ಹೆಣ್ಣಿನ ಜೊತೆ ಹೆಣ್ಣಿನ ಮದುವೆಗಳು ನಡೆಯುತ್ತಿವೆ. ಸಲಿಂಗ ಸಂಬಂಧ .. ಸಲಿಂಗ ವಿವಾಹ.. ಎಂಬುದು ಭಾರತೀಯತೆ ಅಲ್ಲ.. ಭಾರತದ ಸಂಸ್ಕ್ರತಿಯೂ ಅಲ್ಲ.. ನೈಸರ್ಗಿಕವೂ ಅಲ್ಲ ಬದಲಿಗೆ ಪಾಶ್ಚಾತ್ಯ ದೇಶಗಳಿಂದ ಬಂದ ಸಂಸ್ಕ್ರತಿ ಎಂದು ಅನೇಕರು ವಾದ ಮಾಡಿದರೂ.. ಭಾರತೀಯ ಸಂಸ್ಕ್ರತಿ ಅಲ್ಲದಿರುವುದರಿಂದ..
ಸಲಿಂಗ ವಿವಾಹಕ್ಕೆ ಕಾನೂನಿನಲ್ಲಿ ಮಾನ್ಯತೆ ನೀಡಬಾರದೆಂದು ಹಿಂದೆ ಕೇಂದ್ರ ಸರ್ಕಾರ ಪ್ರತಿಪಾದಿಸಿದರು ಕೂಡ ಸಲಿಂಗಕಾಮವು ಅಪರಾಧ ಅಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅದಕ್ಕೆ ಅವಕಾಶವಿದೆಯೇ ಹೊರತು, ಎಲ್ಲಾ ರೀತಿಯ ಸಂಬಂಧಗಳಿಗೆ ಕಾನೂನಿನ ಮಾನ್ಯತೆ ನೀಡಲೇಬೇಕು ಎಂದೇನಿಲ್ಲ ಎಂದು ಕೂಡ ಹೇಳಿದೆ.

ಇನ್ನು ಇಲ್ಲಿಯವರೆಗೆ ಭಾರತದಲ್ಲಿ ಅನೇಕ ಸಲಿಂಗ ವಿವಾಹಗಳು ನಡೆದಿವೆ. ಹೀಗೆ ವಿವಾಹವಾದ ಆದಿಲಾ ನಸ್ರೀನ್ ಮತ್ತು ಫಾತಿಮಾ ನೂರಾ ಸದ್ಯ ಬಿಗ್ ಬಾಸ್ ಮನೆಯನ್ನು ಪ್ರವೇಶ ಮಾಡಿದ್ದಾರೆ. ಹೌದು, ಪ್ರತಿ ವರ್ಷದಂತೆ ಈ ವರ್ಷ ಕೂಡ ಬಿಗ್ ಬಾಸ್ ಕಾರ್ಯಕ್ರಮ ಶುರುವಾಗಿದೆ. ಬೇರೆ ಎಲ್ಲಾ ಭಾಷೆಗಳಿಗಿಂತ ಮಲಯಾಳಂನಲ್ಲಿ ಈ ಬಾರಿ ಬಿಗ್ ಬಾಸ್ ಶುರುವಾಗಿದ್ದು ಕಳೆದ ವಾರವಷ್ಟೇ 19 ಸ್ಫರ್ಧಿಗಳು ಗೃಹ ಪ್ರವೇಶವನ್ನು ಮಾಡಿದ್ದಾರೆ. ಹೀಗೆ ಮನೆಯನ್ನು ಪ್ರವೇಶಿಸಿದ ಈ 19 ಜನರಲ್ಲಿ ಸಲಿಂಗ ವಿವಾಹವಾದ ಆದಿಲಾ ಮತ್ತು ಫಾತಿಮಾ ಕೂಡ ಇದ್ದು ಸದ್ಯ ಇವರ ಲವ್ ಸ್ಟೋರಿ ಮತ್ತೊಮ್ಮೆ ಅಖಂಡ ಭಾರತದೆಲ್ಲೆಡೆ ಚರ್ಚೆಯಲ್ಲಿದೆ.
ಆದಿಲಾ ಮತ್ತು ಫಾತಿಮಾ ಲವ್ ಸ್ಟೋರಿ
ಕೇರಳ ಮೂಲದ ಆದಿಲಾ ನಸ್ರೀನ್ ಮತ್ತು ಫಾತಿಮಾ ನೂರಾ ಕಾಲೇಜ್ ದಿನಗಳಲ್ಲಿ ಪರಸ್ಪರ ಆಕರ್ಷಿತರಾಗಿದ್ದರು. ಸೌದಿ ಅರೇಬಿಯಾದಲ್ಲಿ ದ್ವೀತಿಯ ಪಿಯುಸಿ ಓದುತ್ತಿದ್ದ ಇಬ್ಬರು ಪರಿಚಯರಾದರು. ಹೀಗೆ ಪರಿಚಯವಾದ ಇಬ್ಬರ ನಡುವೆ ಆ ನಂತರ ಸ್ನೇಹ ಅರಳಿತ್ತು. ಈ ಸ್ನೇಹ ಬಹುಬೇಗ ಪ್ರೇಮದ ಸ್ವರೂಪವನ್ನು ಕೂಡ ಪಡೆಯಿತು.

ಆ ನಂತರ ಭಾರತಕ್ಕೆ ಮರಳಿದ ಇಬ್ಬರು ತಮ್ಮ ಶಿಕ್ಷಣ ಪೂರೈಸಿದರು. ಆದರೆ.. ಇವರಿಬ್ಬರ ಪ್ರೀತಿ ಹೆಚ್ಚು ದಿನ ಗೌಪ್ಯವಾಗಿ ಉಳಿಯಲಿಲ್ಲ. ಕೊರೊನಾದ ದಿನಗಳಲ್ಲಿ ಫಾತಿಮಾ ನೂರಾ ಅವರ ಮನೆಯವರು ಅವರನ್ನು ಸೌದಿಗೆ ಕರೆದೊಯ್ದಾಗ ಈ ಪ್ರೇಮ ಕಥೆ ಹೊರ ಬಂತು. ಅಲ್ಲಿಂದ ಶುರುವಾಗಿದ್ದು ವಿರೋಧ.
ಅಧಿಲಾ ಮತ್ತು ಫಾತಿಮಾ ಸಂಬಂಧವನ್ನು ತೀವೃವಾಗಿ ವಿರೋಧಿಸಿದ ಎರಡು ಕುಟುಂಬದ ಸದಸ್ಯರು ಹಲವು ಬಾರಿ ಇಬ್ಬರನ್ನು ದೂರು ಮಾಡುವ ಪ್ರಯತ್ನ ಮಾಡಿದರು. ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆಯನ್ನು ನೀಡಿದರು. ಮದುವೆ ಮಾಡಲು ಗಂಡನ್ನು ಕೂಡ ಹುಡುಕಿದರು.
ಆದರೆ ಅಧಿಲಾ ಮತ್ತು ಫಾತಿಮಾ ಅವರನ್ನು ದೂರ ಮಾಡಲು ಸಾಧ್ಯವಾಗಲಿಲ್ಲ. ಮನೆಯವರ ವಿರೋಧದ ನಡುವೆ ಕೂಡ ಚೆನ್ನೈನಲ್ಲಿ ಕೆಲಸ ಹುಡುಕುವಲ್ಲಿ ಯಶಸ್ವಿಯಾದ ಇಬ್ಬರು ಮೇ 19-2022ರಲ್ಲಿ ಮನೆಯಿಂದ ಓಡಿ ಹೋದರು. LGBTQIA+ ಸಮುದಾಯದ ಕಲ್ಯಾಣಕ್ಕಾಗಿ ನಡೆಸಲಾಗುತ್ತಿದ್ದ ಕೇಂದ್ರದಲ್ಲಿ ಆಶ್ರಯ ಪಡೆದರು.

ಆ ನಂತರ ಅಧಿಲಾ ಸಂಬಂಧಿಕರು ಇಬ್ಬರನ್ನು ಕೇರಳದ ಮುಪ್ಪತ್ತಡಂಗೆ ಕರೆದೊಯ್ದರು. ಅಲ್ಲಿ ಫಾತಿಮಾ ನೂರಾ ಅವರ ಕುಟುಂಬದವರು ಬಲವಂತವಾಗಿ ಫಾತಿಮಾ ಅವರನ್ನು ಕರೆದೊಯ್ದರು. ಇದರ ನಂತರ, ಆಧಿಲಾ ಕೇರಳ ಹೈಕೋರ್ಟ್‌ನ ಮೊರೆ ಹೋದರು. ಮೇ 30-2002ರಂದು 'ಹೇಬಿಯಸ್ ಕಾರ್ಪಸ್' ಅರ್ಜಿಯನ್ನು ಸಲ್ಲಿಸಿದರು. ಇಚ್ಛೆಗೆ ವಿರುದ್ಧವಾಗಿ ಕುಟುಂಬದವರು ಗೃಹ ಬಂಧನ ಮಾಡಿದ್ದಾರೆ ಎಂದು ಆರೋಪಿಸಿದರು.
ಮೇ 31-2022ರಂದು ವಿಚಾರಣೆ ನಡೆಸಿದ ಹೈಕೋರ್ಟ್ ಇಬ್ಬರೊಂದಿಗೂ ಮಾತು ಕತೆಯನ್ನು ನಡೆಸಿತು. ಆ ನಂತರ ಇಬ್ಬರ ಪರವಾಗಿ ಐತಿಹಾಸಿಕ ತೀರ್ಪನ್ನು ನೀಡಿತು. ಒಟ್ಟಿಗೆ ವಾಸಿಸಲು ಅವಕಾಶವನ್ನು ನೀಡಿತು. ಹೀಗೆ ಜೊತೆಯಾದ ಇಬ್ಬರು ಸದ್ಯ ಒಂದೇ ಕಂಪನಿಯಲ್ಲಿ ಕೆಲಸವನ್ನು ಮಾಡುತ್ತಿದ್ಧಾರೆ. ಪರಸ್ಪರ ಪ್ರೀತಿ ಮತ್ತು ಅನ್ಯೋನ್ಯತೆಯಿಂದ ಬದುಕುತ್ತಿದ್ದಾರೆ.
ಸದ್ಯ ಮಲಯಾಳಂನ ಬಿಗ್ ಬಾಸ್ ಸೀಸನ್ 7ಕ್ಕೆ ಇಬ್ಬರು ಜೊತೆಯಾಗಿಯೇ ಬಂದಿದ್ದಾರೆ. ಮನೆಯಲ್ಲಿರುವಷ್ಟು ದಿನ ಇಬ್ಬರ ಕುರಿತ ಹಲವು ವಿಚಾರಗಳು ಹೊರ ಬರುವ ಸಾಧ್ಯತೆ ಇದ್ದು ಈ ಬಾರಿ ಬಿಗ್ ಬಾಸ್‌ನ ನೆಚ್ಚಿನ ಸ್ಫರ್ಧಿಗಳಲ್ಲಿ ಇವರು ಇಬ್ಬರು ಕೂಡ ಇದ್ದಾರೆ.


Click it and Unblock the Notifications











