ಬಿಗ್ ಬಾಸ್‌ಗೆ ಭಾರೀ ಟ್ವಿಸ್ಟ್, ಮನೆಯ ದಿಕ್ಕು ಬದಲಿಸಲು ಬಂದರು 5 ಹೊಸ ಸ್ಪರ್ಧಿಗಳು, ಯಾರಿವರು?

ಪ್ರತಿ ವರ್ಷ ಪ್ರೇಕ್ಷಕರನ್ನು ಸೆಳೆಯಲು ''ಬಿಗ್ ಬಾಸ್‌'' ನಲ್ಲಿ ನಾನಾ ಕಸರತ್ತುಗಳಾಗುತ್ತವೆ. ಆ ಪೈಕಿ ಕೆಲ ಒಮ್ಮೆ ಮಾಡಿದ ಪ್ಲ್ಯಾನ್ ವರ್ಕೌಟ್ ಆಗಿ ಪ್ರೇಕ್ಷಕರನ್ನು ಹುಚ್ಚೆಬ್ಬಿಸುತ್ತದೆ. ಇನ್ನು ಕೆಲ ಒಮ್ಮೆ ಪ್ಲ್ಯಾನ್ ತಲೆ ಕೆಳಗಾಗಿ ಟಿಆರ್‌ಪಿ ನೆಲ ಕಚ್ಚುತ್ತೆ. ಆ ಭಾಷೆ .. ಈ ಭಾಷೆ ಅಂತಲ್ಲ. ಎಲ್ಲ ಭಾಷೆಯಲ್ಲಿ ಕೂಡ ಪ್ರತಿ ವರ್ಷ ಈ ಸರ್ಕಸ್ ನಡೆದೇ ನಡೆಯುತ್ತೆ.

ಈ ಬಾರಿಯ ''ಬಿಗ್ ಬಾಸ್'' ಕೂಡ ಇದರಿಂದ ಹೊರತಾಗಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಹಿಂದಿಯಲ್ಲಿ ಈ ಬಾರಿ ಪ್ರೇಕ್ಷಕರನ್ನು ಹಿಡಿದು ಕೂರಿಸಲು ಪ್ರಜಾಪ್ರಭುತ್ವದ ಥೀಮ್‌ನಡಿ ಸ್ಫರ್ಧಿಗಳ ನಡುವೆ ಕಿಡಿಯನ್ನು ಹಚ್ಚುವ ಕೆಲಸವನ್ನು ಮಾಡಲಾಗಿದೆ. ಕಿರುತೆರೆಯ ಪ್ರೇಕ್ಷಕರಿಗಿಂತ ಮೊದಲು ಓಟಿಟಿಯ ವೀಕ್ಷಕರಿಗೆ ''ಬಿಗ್ ಬಾಸ್‌''ನ ಕಣ್ತುಂಬಿಕೊಳ್ಳುವ ಅವಕಾಶವನ್ನು ನೀಡಲಾಗಿದೆ.

Bigg Boss Malayalam 7 Wildcards Meet Jishin Ved Lakshmi and the 3 New Game Changers

ಇನ್ನೂ ಮಲಯಾಳಂನಲ್ಲಿ ಈಗಾಗಲೇ ''ಬಿಗ್ ಬಾಸ್‌'' ಕಾರ್ಯಕ್ರಮ ಶುರುವಾಗಿದ್ದು ಐದನೇ ವಾರಕ್ಕೆ ಕಾಲಿಟ್ಟಿದೆ. ಈ ಐದು ವಾರದಲ್ಲಿ ಮುನ್ಷಿ ರಂಜಿತ್.. ಆರ್‌ಜೆ ಬಿನ್ಸಿ.. ಸಾರಿಕಾ ಕೆಬಿ ಮತ್ತು ಸಾರಿಗಾ ಪಿಜಿ ಹೀಗೆ ನಾಲ್ಕು ಜನರನ್ನು ಮನೆಯಿಂದ ಹೊರಗಡೆ ಕಳುಹಿಸಲಾಗಿದೆ.

ಸದ್ಯ ಮನೆಯಲ್ಲಿ 16 ಜನ ಉಳಿದುಕೊಂಡಿದ್ದಾರೆ. ಅಧಿಲಾ ನಸ್ರೀನ್.. ಫಾತಿಮಾ ನೂರಾ.. ಗಿಜೆಲೆ ಥಕ್ರಾಲ್.. ಬಿನ್ನಿ ಸೆಬಾಸ್ಟಿಯನ್.. ರೇಣು ಸುಧಿ.. ರೇನಾ ಫಾತಿಮಾ.. ಶಾನವಾಸ್ ಶಾನು.. ಶೈತ್ಯಾ ಸಂತೋಷ್.. ಆರ್ಯನ್ ಕಥುರಿಯಾ.. ಅನುಮೋಲ್.. ಅಕ್ಬರ್ ಖಾನ್.. ಅಪ್ಪಾನಿ ಶರತ್.. ನೆವಿನ್.. ಒನೆಲ್ ಸಾಬು.. ಅಭಿಲಾಷ್.. ಅನೀಶ್ ತರೈಲ್.. ಹೀಗೆ ಉಳಿದುಕೊಂಡ ಈ 16 ಜನರಲ್ಲಿ ತೀವೃ ಸ್ಫರ್ಧೆ ಇದೆ. ಈ 16 ಜನರಲ್ಲಿ ಯಾರು ಗೆಲ್ಲಬಹುದು ಎನ್ನುವ ಕುತೂಹಲ ಕೂಡ ಮನೆ ಮಾಡಿದ್ದು ಈ ವಾರ ಮನೆಯಾಚೆ ಯಾರು ಹೋಗಬಹುದು ಎನ್ನುವ ಪ್ರಶ್ನೆ ಕೂಡ ಕೇರಳಿಗರಲ್ಲಿ ಕಾಡುತ್ತಿದೆ.

ಹೀಗಿರುವಾಗ ಇದೀಗ ಮೋಹನ್ ಲಾಲ್ ಅವರ ''ಬಿಗ್ ಬಾಸ್‌'' ಮನೆಗೆ ಮತ್ತೆ ಐದು ಜನ ಸ್ಫರ್ಧಿಗಳು ಎಂಟ್ರಿ ನೀಡಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಮನೆಯನ್ನು ಪ್ರವೇಶಿಸಿದ್ದಾರೆ. ಈ ಮೂಲಕ ಮನೆಯಲ್ಲಿರುವ ಸದಸ್ಯರ ಸಂಖ್ಯೆ ಈಗ ಮತ್ತೆ 21ಕ್ಕೆ ಏರಿದ್ದು ಈ ವಾರ ''ಬಿಗ್ ಬಾಸ್‌-7''ಗೆ ಟ್ವಿಸ್ಟ್‌ಗಳ ಮೇಲೆ ಟ್ವಿಸ್ಟ್ ನೀಡುವ ನಿರೀಕ್ಷೆ ಇದೆ. ರೋಚಕ ಹಂತವನ್ನು ಈ ಮೂಲಕ ಮಲಯಾಳಂನ ''ಬಿಗ್ ಬಾಸ್‌'' ತಲುಪಿದೆ.

ಬಿಗ್ ಬಾಸ್ ಮನೆಗೆ ಬಂದ 5 ಜನ ಸ್ಫರ್ಧಿಗಳು ಯಾರು ? ಹಿನ್ನೆಲೆ ಏನು ?

1. ಮಸ್ತಾನಿ

ದುಲ್ಕರ್ ಸಲ್ಮಾನ್.. ದಿಲೀಪ್.. ಹೀಗೆ ಮಲಯಾಳಂ ಚಿತ್ರರಂಗದ ಅನೇಕ ದಿಗ್ಗಜರ ಸಂದರ್ಶನಗಳನ್ನು ಮಾಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಅಪಾರವಾದ ಜನಮನ್ನಣೆ ಗಳಿಸಿರುವ ಮಸ್ತಾನಿ ವೈಲ್ಟ್ ಕಾರ್ಡ್ ಮೂಲಕ ಈ ಬಾರಿಯ ''ಬಿಗ್ ಬಾಸ್‌'' ಮನೆಯನ್ನು ಪ್ರವೇಶ ಮಾಡಿದ್ದಾರೆ.

2.ಸಾಬುಮೋನ್

ಫುಡ್ ವ್ಲಾಗರ್ ಆಗಿ ಕೇರಳದಲ್ಲಿ ಜನಪ್ರಿಯವಾಗಿರುವ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಸಾಬುಮೋನ್ ಕೂಡ ಐದನೇ ವಾರದಲ್ಲಿ ''ಬಿಗ್ ಬಾಸ್‌'' ಮನೆಗೆ ಬಂದಿದ್ದಾರೆ. ಫಿಟ್ನೆಸ್ ಕಡೆ ಕೂಡ ಅಪಾರವಾದ ಒಲವು ಹೊಂದಿರುವ ಇವರ ನಿಜವಾದ ಹೆಸರು ಆಕಾಶ್ ಸಾಬು.

3.ಪ್ರವೀಣ್ ಪಿ

''ಮಾರ್ಕೆಟಿಂಗ್ ಮಲ್ಲು'' ಎಂಬ ಯೂಟ್ಯೂಬ್ ಮೂಲಕ ಗುರುತಿಸಿಕೊಂಡಿರುವ, ಹಣಕಾಸಿನ ಉಳಿತಾಯ ಮತ್ತು ನಿರ್ವಹಣೆಯ ಕುರಿತು ಮಾಹಿತಿಯನ್ನು ನೀಡುವ ಪ್ರವೀಣ್ ಪಿ ಅವರಿಗೆ ಕೂಡ ಈ ಬಾರಿಯ ''ಬಿಗ್ ಬಾಸ್'' ಟಿಕೆಟ್ ಸಿಕ್ಕಿದೆ.

4.ಜಿಶಿನ್ ಮೋಹನ್

ಮಲಯಾಳಂ ಕಿರುತೆರೆಯ ಚಿರಪರಿಚಿತ ಮುಖಗಳಲ್ಲಿ ಒಂದಾದ ಜಿಶಿನ್ ಮೋಹನ್ ಕೂಡ ''ಬಿಗ್ ಬಾಸ್‌'' ಮನೆಯನ್ನು ಪ್ರವೇಶಿಸಿದ್ದಾರೆ. ''ಸ್ಟಾರ್‌ ಮ್ಯಾಜಿಕ್'' ಎಂಬ ಸೆಲೆಬ್ರಿಟಿ ಶೋ ಮೂಲಕ ಅನೇಕರ ಹೃದಯವನ್ನು ಗೆದ್ದವರು ಇವರು.

5.ವೇದ್ ಲಕ್ಷ್ಮಿ

ವೇದ್ ಲಕ್ಷ್ಮಿ ಅಲಿಯಾಸ್ ಲಕ್ಷ್ಮಿ ಹರಿಕೃಷ್ಣನ್ ಕೂಡ ''ಬಿಗ್ ಬಾಸ್'' ಮನೆಗೆ ಬಂದಿದ್ದಾರೆ. ಆರ್ಕಿಟೆಕ್ಟ್ ಆಗಿ ಕೆಲಸ ಮಾಡುವ ವೇದ್ ಲಕ್ಷ್ಮಿ ಅವರದ್ದು ಮಾರ್ಕೆಟಿಂಗ್‌ನಲ್ಲಿ ಕೂಡ ಎತ್ತಿದ ಕೈ. ಇಷ್ಟೇ ಅಲ್ಲ ವೇದ್ ಲಕ್ಷ್ಮಿ ನಟಿ ಕೂಡ ಹೌದು.

More from Filmibeat

English summary
The game just changed! 5 new wildcard contestants have entered the Bigg Boss Malayalam 7 house. Discover who they are and how their entry will ignite new drama and rivalries.
Read more about: biggboss bigg boss ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X