ನಿಮ್ಮೆಲ್ಲರ ಕೋಪಕ್ಕೆ ನನ್ನ ಮಗ ಬಲಿಯಾದ,ನನ್ನ ಮಗನಿಗೆ ಕಾಯಿಲೆ ಬರಲು ನೀವೇ ಕಾರಣ- ಕಣ್ಣೀರಾದ ಬಿಗ್‌ ಬಾಸ್‌ ಸ್ಪರ್ಧಿ..!

ಅಶ್ವಿನಿ ದೇವತೆಗಳು ಸದಾ ಎಲ್ಲ ಕಡೆಯು ನೆಲೆಸಿ ಜನರಾಡುವ ಒಳ್ಳೆಯ, ಕೆಟ್ಟ ಮಾತುಗಳಿಗೆಲ್ಲಾ ಅಸ್ತು ಎನ್ನುತ್ತಾರೆಂದು ನಂಬಲಾಗಿದೆ. ಹಾಗಾಗಿ ಮನುಷ್ಯ ತನ್ನ ಜೀವನದುದ್ದಕ್ಕೂ ಒಳ್ಳೆಯ ಮಾತುಗಳನ್ನಾಡುತ್ತಾ ಆರೋಗ್ಯಕರವಾಗಿ ಬದುಕಬೇಕೆನ್ನುತ್ತಾರೆ.

ಆದರೆ ಕೆಲವರು ಕೆಡುಕುಂಟು ಮಾಡುವ ಮಾತುಗಳನ್ನಾಡುತ್ತಾರೆ. ಅಪಶಕುನದಂತಹ ಮಾತುಗಳನ್ನು ಆಡಬಾರದು, ಸುಳ್ಳನ್ನು ಹೇಳಬಾರದು, ಇನ್ನೊಬ್ಬರ ಮನಸ್ಸಿಗೆ ನೋವಾಗುವಂತೆ ಮಾತನಾಡಬಾರದೆನ್ನುವುದನ್ನು ಮರೆತು ಕೆಟ್ಟ ಪದಗಳನ್ನು ಬಳಸುತ್ತಾರೆ.ಶಾಪ ಹಾಕುತ್ತಾರೆ. ಆಗ ಅಶ್ವಿನಿ ದೇವತೆಗಳು ಅಸ್ತು ಎಂದರೆ ಬೇರೆಯವರ ಬದುಕು ಅಕ್ಷರಶಃ ನರಕಯಾತನೆ. ನನ್ನ ಬದುಕಿನಲ್ಲಿ ಕೂಡ ಸದ್ಯ ಇದೇ ರೀತಿ ಆಗಿದೆ ಎಂದು ಬಿಗ್ ಬಾಸ್ ಸ್ಫರ್ಧಿಯೊಬ್ಬರು ತಮ್ಮ‌ಮನದ ನೋವು ಹಂಚಿಕೊಂಡಿದ್ದಾರೆ. ಕಣ್ಣೀರು ಹಾಕಿದ್ದಾರೆ.

bigg-boss-ott-3-s-armaan-malik-s-son-has-rickets-wife-kritika-blames-it-on-a-curse

ಹೌದು, ಅಸಲಿಗೆ ತಮ್ಮ ಸಾಂಸಾರಿಕ ಬದುಕಿನ ಕಾರಣಕ್ಕೆ ಸದಾ ಸುದ್ದಿಯಾಗುವವರು ಅರ್ಮಾನ್ ಮಲ್ಲಿಕ್. 2011ರಲ್ಲಿ ಖಾಸಗಿ ಬ್ಯಾಂಕ್‌ ವೊಂದರಲ್ಲಿ ಕ್ಯಾಷಿಯರ್‌ ಆಗಿ ಕೆಲಸ ಮಾಡುತ್ತಲೇ ಅದೇ ಬ್ಯಾಂಕ್‌ ನಲ್ಲಿ ಕೆಲಸ ಮಾಡುತ್ತಿದ್ದ ಪಾಯಲ್‌ ಅವರನ್ನು ಮದ್ವೆಯಾದ ಅರ್ಮಾನ್, ಆ ನಂತರ ತಮ್ಮ ಹೆಂಡ್ತಿ ಪಾಯಲ್ ಅವರ ಸ್ನೇಹಿತೆ ಕೃತಿಕಾ ಅವರನ್ನೂ ಪ್ರೀತಿಸಿದರು. ಮೊದಲ ಪತ್ನಿ ಪಾಯಲ್ ಅವರನ್ನು ಒಪ್ಪಿಸಿ ಅವರ ಸಮ್ಮುಖದಲ್ಲಿಯೇ ಕೃತಿಕಾ ಜೊತೆ ಮದುವೆಯೂ ಆದರು.

ಹೀಗೆ ಇಬ್ಬರು ಹೆಂಡ್ತಿಯರ ಮುದ್ದಿನ ಗಂಡನಾದ ಅರ್ಮಾನ್ ಆ ನಂತರ ತಮ್ಮ ಇಬ್ಬರು ಪತ್ನಿಯರನ್ನು ಕರೆದುಕೊಂಡು ಬಿಗ್ ಬಾಸ್ ಮನೆಗೆ ತೆರಳಿದರು. ಖುಲ್ಲಂ ಖುಲ್ಲಾ ರೊಮ್ಯಾನ್ಸ್ ಮಾಡಿ ಟ್ರೋಲಿಗರಿಗೆ ಆಹಾರವೂ ಆದರು. ಬಿಗ್ ಬಾಸ್ ಮನೆಯಿಂದ ಪಾಯಲ್ ಮೊದಲು ಹೊರ ಬಂದರೆ ಅರ್ಮಾನ್ ಆ ನಂತರ ಬಂದರು. ಕೊನೆವರೆಗೆ ಉಳಿದುಕೊಂಡಿದ್ದು ಕೃತಿಕಾ ಮಾತ್ರ.

ಇಂಥಾ ಕೃತಿಕಾ ಈಗ ಕಣ್ಣೀರು ಹಾಕಿದ್ದಾರೆ. ನನ್ನ ಮಗ ಜೈದ್ ಆರೋಗ್ಯ ಸಮಸ್ಯೆ ಹಾಳಾಗಲು ನೀವೇ ಕಾರಣ ಎಂದು ಬಿಕ್ಕಿದ್ದಾರೆ. ಈ ಕುರಿತು ವಿಡಿಯೋ ಮಾಡಿರುವ ಕೃತಿಕಾ ನೀವು ಮಾಡುವ ನೆಗೆಟಿವ್ ಕಾಮೆಂಟ್ಸ್‌ಗಳಿಂದ ಮತ್ತು ನಿಮ್ಮ ನಿಂದನೆಯಿಂದಲೇ ನನ್ನ ಮಗನ ಆರೋಗ್ಯ ಹಾಳಾಗಿದೆ ಎಂದಿದ್ದಾರೆ. ನನ್ನನ್ನೂ ಬೇಕಿದ್ದರೆ ಟ್ರೋಲ್ ಮಾಡಿ ಆದರೆ ನನ್ನ ಮಗನಿಗೆ ಶಾಪ ಹಾಕಬೇಡಿ ಎಂದು ಕಣ್ಣೀರು ಹಾಕಿದ್ದಾರೆ.

ಇನ್ನು ಅರ್ಮಾನ್ ಮಲ್ಲಿಕ್ ಮೊದಲ ಪತ್ನಿ ಮತ್ತು ಕೃತಿಕಾ ಅವರ ಸವತಿ ಪಾಯಲ್ ಕೂಡ ಈ ಜೈದ್ ಆರೋಗ್ಯಕ್ಕೆ ಪ್ರಾರ್ಥನೆ ಮಾಡಿದ್ದು ಶಾಪಗಳಿಂದ ಕಲ್ಲು ಕೂಡ ಒಡೆಯುತ್ತೆ ಎಂದು ಹೇಳುತ್ತಾರೆ ಎನ್ನುವ ಮಾತು ನೂರಕ್ಕೆ ನೂರು ಸತ್ಯ, ಸಾಧ್ಯವಾದರೆ ನಮ್ಮ ಮಕ್ಕಳನ್ನು ಹರಸಿ ಹಾರೈಸಿ ಆದರೆ ಅವರನ್ನು ನಿಂದಿಸಿಬೇಡಿ ಶಾಪ ಹಾಕಬೇಡಿ ಎಂದು ಹೇಳಿದ್ದಾರೆ. ಅವರೇನು ತಪ್ಪು ಮಾಡಿದ್ದಾರೆ, ನಿಮಗೆ ನಮ್ಮ ಮೇಲೆ ಕೋಪ ಇದ್ದರೆ ನಮ್ಮನ್ನು ಟ್ರೋಲ್ ಮಾಡಿ ನಮ್ಮನ್ನು ನಿಂದಿಸಿ ಎಂದು ಹೇಳಿದ್ದಾರೆ. ಮಕ್ಕಳನ್ನು ಅವರ ಪಾಡಿಗೆ ಇರಲು ಬಿಡಿ ಎಂದು ಮನವಿಯನ್ನು ಮಾಡಿಕೊಂಡಿದ್ದಾರೆ. ಅಂದ್ಹಾಗೇ ವಿಟಾಮಿನ್‌ ಡಿ ಕೊರತೆಯಿಂದ ಕೃತಿಕಾ ಮಗ ಜೈದ್‌ಗೆ ರಿಕೆಟ್ ಕಾಯಿಲೆ ತಗುಲಿದೆ. ಇದರಿಂದ ಮೂಳೆಗಳು ವೀಕ್ ಆಗುತ್ತವೆ, ನಡೆಯುವದರಿಂದ ಹಿಡಿದು ದೈಹಿಕ ಚಟುವಟಿಕೆ ಕೂಡ ಮಾಡಲು ಅಸಾಧ್ಯವಾಗುತ್ತೆ.

More from Filmibeat

Read more about: bigg boss troll filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X