'ಸೋನು ಮನಸ್ಸು ನಿಶ್ಕಲ್ಮಶ, ಆಕೆಗೆ ರಾಕೇಶ್ ತರ ಲೈಫ್ ಪಾರ್ಟ್ನರ್ ಸಿಗ್ಬೇಕು'
ಕನ್ನಡ ಬಿಗ್ ಬಾಸ್ ಓಟಿಟಿಯಲ್ಲಿ ಒಬ್ಬೊಬ್ಬ ಸ್ಫರ್ಧಿಗಳು ಒಂದೊಂದು ರೀತಿಯಾಗಿದ್ದರು. ಅದರಲ್ಲೂ ಜಯಶ್ರೀ ಎಲ್ಲರಿಗಿಂತೂ ಭಿನ್ನವಾಗಿದ್ದರು. ಬ್ಯುಸಿನೆಸ್ ಫೀಲ್ಡ್‌ನಿಂದ ಬಂದಿದ್ದ ಜಯಶ್ರೀ, ಉತ್ತಮ ಆಟವಾಡಿ ಫೈನಲಿಸ್ಟ್ ಆಗಿ ಹೊರಹೊಮ್ಮಿದರು. ಮೊದಮೊದಲು ಬಿಗ್ ಬಾಸ್ ಮನೆಯಲ್ಲಿ ಏಕಾಂಗಿಯಾಗಿರುತ್ತಿದ್ದ ಜಯಶ್ರೀ ಕೊನೆಯಲ್ಲಿ ಎಲ್ಲರ ಜೊತೆ ಉತ್ತಮ ಬಾಂಧವ್ಯ ಬೆಳಸಿಕೊಂಡರು. ಅದರಲ್ಲೂ ಮುಖ್ಯವಾಗಿ ಸೋನು ಶ್ರೀನಿವಾಸ್ ಗೌಡ ಹಾಗೂ ಆರ್ಯವರ್ಧನ್ ಗುರೂಜಿ ಆಕೆಗೆ ಒಳ್ಳೆಯ ಸ್ನೇಹಿತರಾಗಿದ್ದರು. ಇವರಿಬ್ಬರ ಬಗ್ಗೆ ಜಯಶ್ರೀ ಫಿಲ್ಮಿಬೀಟ್ ಕನ್ನಡದ ಜೊತೆ ಮನಬಿಚ್ಚಿ ಮಾತನಾಡಿದ್ದಾರೆ.
ಸೋನು ಶ್ರೀನಿವಾಸ್ ಗೌಡ ನಿಶ್ಕಲ್ಮಶ ಹೃದಯದ ಹುಡುಗಿ. ಆಕೆಯ ಮನಸ್ಸಿನಲ್ಲಿ ಒಂದಿಷ್ಟು ಕಲ್ಮಶ ಇಲ್ಲ. ಹೊರಗಿನವರು ಆಕೆ ಒಂದು ವಿಡಿಯೋ ನೋಡಿ ಜಡ್ಜ್ ಮಾಡಬಹುದು. ಆದರೆ ಆದರೆ ನಾವೆಲ್ಲ ಆಕೆಯ ಜೊತೆಗೆ 42 ದಿನ ಜೊತೆಗಿದ್ದೆವು. ಅವಳಲ್ಲಿ ಏನಾದರೂ ನೆಗೆಟಿವ್ ವಿಚಾರ ಇದೆ ಎಂದರೆ ಆಕೆಗೆ ಪ್ರಭುದ್ಧತೆ ಇಲ್ಲ. ಅಂದ್ರೆ ಅವಳಿಗೆ ತಾನು ಏನು ಮಾತನಾಡುತ್ತೇನೆ ಎನ್ನುವುದರ ಬಗ್ಗೆ ಅರಿವಿರಲ್ಲ. ಒಂದೊಂದು ಸಾರಿ ಮರ್ಯಾದೆ ಇಲ್ಲದೆ ಪದಗಳನ್ನು ಬಳಸುತ್ತಾಳೆ. ಸ್ವಲ್ಪ ಲೋಕಲ್ ಆಗಿ ಮಾತನಾಡುತ್ತಾಳೆ ಇದರಿಂದ ಅವಳು ನೆಗೆಟಿವ್ ಆಗಿ ಕಾಣ್ತಾಳೆ. ಒಬ್ಬ ವ್ಯಕ್ತಿಯಾಗಿ ಅವಳು ತುಂಬಾ ಒಳ್ಳೆ ಹುಡುಗಿ. ಅವಳಿಗೆ ರಾಕೇಶ್ ತರ ತಿದ್ದುವಂತಹ ಲೈಫ್ ಪಾರ್ಟ್ನರ್ ಸಿಕ್ಕಿದ್ರೆ. ಅವಳು ಇನ್ನೂ ಒಳ್ಳೆ ಹುಡುಗಿ ಆಗ್ತಾಳೆ ಎಂದರು.
ಇನ್ನು ಬಿಗ್ ಬಾಸ್ ಮನೆಯಲ್ಲಿ ಜಯಶ್ರೀ ಅವರ ಮೆಚ್ಚಿನ ಸ್ಫರ್ಧಿ ಆರ್ಯವರ್ಧನ್ ಗುರೂಜಿ ಅವರ ಬಗ್ಗೆ ಸಹ ಮಾತನಾಡಿದ್ದಾರೆ. ಗುರೂಜಿಯಲ್ಲಿ ಒಂದು ಗುಣ ಇದೆ. ಹೊರಗಡೆ ಅವರು ಎಷ್ಟು ದೊಡ್ಡ ವ್ಯಕ್ತಿ ಎನ್ನುವುದು ಎಲ್ಲರಿಗೂ ಗೊತ್ತು. ಬೇರೆವರಿಗೆಲ್ಲ ಹೋಲಿಕೆ ಮಾಡಿದ್ರೆ ಗುರೂಜಿ ಜೀವನದಲ್ಲಿ ಎತ್ತರದ ಸ್ಥಾನದಲ್ಲಿದ್ದಾರೆ. ಅವರ ಬಗ್ಗೆ ಟ್ರೋಲ್ ಅದೆಲ್ಲಾ ನನಗೆ ಬೇಕಾಗಿಲ್ಲ. ಅವರ ಜೀವನದಲ್ಲಿ ಅವರು ಸಾಧಿಸಿದ್ದಾರೆ. ಅವರು ಜೀವನಾನ ಅವರು ಕಟ್ಟಿಕೊಂಡಿದ್ದಾರೆ. ಮಾನಸಿಕವಾಗಿ, ದೈಹಿಕವಾಗಿ, ಆರ್ಥಿಕವಾಗಿ ಎಲ್ಲದರಲ್ಲೂ ಅವರು ಉತ್ತಮವಾಗಿದ್ದಾರೆ. ಈ ರೀತಿ ಇದ್ದರೂ ಸಹ ಅವರಿಗೆ ಒಂದು ಚೂರು ಅಹಂ ಎನ್ನುವುದಿಲ್ಲ ಎಂದಿದ್ದಾರೆ.

ಗುರೂಜಿ ಮನೆಯಲ್ಲಿ ಸೋನು ಹೋಗಿ ಬೈದ್ರು ಬೈಸ್ಕೋತ್ತಾರೆ, ನಾನು ಹೋಗಿ ಬೈದ್ರೂ ಬೈಸ್ಕೋತ್ತಾರೆ ಯಾರೇ ಹೋಗಿ ಬೈದ್ರು ಬೈಸ್ಕೊತ್ತಾರೆ. ತಿರುಗಿಸಿ ಯಾರಿಗೂ ಬೈಯಲ್ಲ. ಅದರಿಂದ ಅವರ ಮೇಲೆ ಅನುಕಂಪ. ನನಗೆ ಅವರ ಜೊತೆ ಉತ್ತಮ ಸ್ನೇಹ ಬೆಳೆದಿತ್ತು. ನನಗೆ ನಾನು ಇಷ್ಟ ಪಡುವವರಿಗೆ ಯಾರೇ ಬೈದರೂ ಕೋಪ ಬರುತ್ತದೆ. ಗುರೂಜಿಗೆ ಸೋಮಣ್ಣ ಒಂದು ಪದ ಬಳಸುತ್ತಾರೆ. ಅದು ನನಗೆ ತುಂಬಾ ಬೇಜರಾಯ್ತು. ಸೋಮಣ್ಣ ಅವರ ಮೇಲೆ ನಮಗೆ ಅತಿ ಗೌರವ ಇದೆ. ಗುರೂಜಿ ಅವರಿಗೆ ಯಾರೇ ಏನಂದ್ರೂ ನನಗೆ ಬೇಜರಾಗುತ್ತದೆ. ಯಾಕಂದ್ರೆ ಅವರಂದ್ರೆ ನನಗಿಷ್ಟ ಎಂದಿದ್ದಾರೆ ಜಯಶ್ರೀ.
ಗುರೂಜಿ ಅವರಲ್ಲಿ ಒಂದು ಮುಗ್ಧತೆ ಇದೆ. ಎಲ್ಲರ ಮುಂದೆ ತಲೆ ಬಾಗುವ ಗುಣ ಇದೆ ಅವರಿಗೆ. ಯಾರೇನೇ ಅಂದ್ರೂ ನಾನು ತಲೆ ಕೆಡಿಸಿಕೊಳ್ಳಲ್ಲ ಎನ್ನುವ ತ್ಯಾಗ ಗುಣವಿದೆ ಅವರಿಗೆ. ಅದನ್ನು ಎಲ್ಲರೂ ದುರುಪಯೋಗ ಮಾಡಿಕೊಳ್ಳುತ್ತಿದ್ದರು. ಅವರಲ್ಲೂ ಒಂದು ಬಲಿಷ್ಠ ವ್ಯಕ್ತಿತ್ವ ಇದೆ. ಯಾರೇ ಎಷ್ಟೇ ಹೇಳಿದರೂ ಅವರು ಆ ಗುಣವನ್ನು ತೋರಿಸಿಕೊಂಡಿಲ್ಲ. ಗ್ರಾಂಡ್ ಫಿನಾಲೆ ಮುಗಿಸಿ ವಾಪಸ್ ಬರುವಾಗ ಹೇಳಿದ್ದೆ ಅವರಿಗೆ ಬಿಗ್ ಬಾಸ್ ಸೀಜನ್ 9ರಲ್ಲಿ ನಿಮ್ಮ ನಿಜ ವ್ಯಕ್ತಿತ್ವ ತೋರಿಸಿ ಯಾರಾದರೂ ಏನಾದರೂ ಅಂದ್ರೆ ತಿರುಗಿ ಮಾತಾಡಿ. ಹೊರಗಡೆ ನಿಮ್ಮ ಅಂತಾ ಸಲಹೆ ಕೊಟ್ಟು ಬಂದಿದ್ದೀನಿ ಎಂದು ಗುರೂಜಿ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ.


Click it and Unblock the Notifications











