For Quick Alerts
  ALLOW NOTIFICATIONS  
  For Daily Alerts

  ತಿಂಗಳಿಗೆ 3 ಲಕ್ಷಕ್ಕೂ ಹೆಚ್ಚು ಸಂಪಾದನೆ: ಸೋನು ಆದಾಯದ ಮೂಲವೇನು..?

  |

  ಟಿಕ್‌ ಟಾಕ್ ಸ್ಟಾರ್‌ ಆಗಿದ್ದ ಸೋನು ಶ್ರೀನಿವಾಸ್‌ ಗೌಡ ಇತ್ತೀಚಿಗೆ ಇನ್ಸ್ಟಾಗ್ರಾಮ್ ರೀಲ್ಸ್ ಮೂಲಕವೂ ಜನಪ್ರಿಯರಾಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದ್ದ ಸೋನು ಅವರನ್ನು ಈ ಬಾರಿಯ ಕನ್ನಡ ಬಿಗ್‌ ಬಾಸ್‌ ಓಟಿಟಿಯ ಸ್ಫರ್ಧಿಯಾಗಿ ಆಯ್ಕೆ ಮಾಡಲಾಗಿತ್ತು. ಬಿಗ್‌ ಬಾಸ್‌ ಮನೆಯಲ್ಲಿ ಉತ್ತಮವಾಗಿ ಆಡಿದ್ದ ಸೋನು ಫೈನಲಿಸ್ಟ್‌ ಕೂಡ ಆಗಿದ್ದರು. ಬಿಗ್‌ ಬಾಸ್‌ ಮನೆಯಿಂದ ಹೊರಬಂದ ಬಳಿಕ ಫಿಲ್ಮಿಬೀಟ್ ಕನ್ನಡದ ಜೊತೆ ಮಾತನಾಡಿದ ಸೋನು ತಮ್ಮ ಕುಟುಂಬದ ಬಗ್ಗೆ ಹಾಗೂ ತಮ್ಮ ಆದಾಯ ಮೂಲಕದ ಬಗ್ಗೆ ಮಾತನಾಡಿದ್ದಾರೆ.

  ನನ್ನ ಜೊತೆ ಆತ್ಮೀಯರಾಗಿದ್ದ ಸ್ನೇಹಿತರಿಗೆ ನನ್ನ ಬಗ್ಗೆ ಗೊತ್ತಿತ್ತು. ಮೊದಲೆಲ್ಲ ಈ ಟ್ರೋಲ್‌ ಅವರಿಗೆ ನನ್ನ ಬ್ಯಾಗ್ರೌಂಡ್‌ ಬಗ್ಗೆ ಗೊತ್ತಾದರೆ ಸೈಲೆಂಟ್‌ ಆಗುತ್ತಾರೆ ಅನ್ಸುತ್ತೆ ಅಂತಾ ಫ್ರೆಂಡ್ಸ್‌ ಜೊತೆ ಹೇಳಿಕೊಳ್ಳುತ್ತಿದೆ. ಸೋಶಿಯಲ್‌ ಮೀಡಿಯಾದಲ್ಲಿ ಹೆಚ್ಚು ಟ್ರೋಲ್‌ ಆಗುತ್ತಿದ್ದಾಗ, ಟ್ರೋಲ್‌ ಅವರಿಗೆ ನನ್ನ ಬ್ಯಾಗ್ರೌಂಡ್‌ ಬಗ್ಗೆ ಹೇಳೋಣ ಅಂತಾ ಕೂಡ ಎಂದುಕೊಂಡಿದ್ದೆ. ಆಗ ನನ್ನ ಅಮ್ಮನ ಅಣ್ಣಂದಿರು ದಯವಿಟ್ಟು ನಮ್ಮ ಹೆಸರು ಮಾತ್ರ ತೆಗೆದುಕೊಳ್ಳಬೇಡ ಅಂದಿದ್ದರು. ಹೀಗಾಗಿ ನಾನು ಬದುಕಿದ್ರೆ, ಹೆಸರು ಮಾಡಿದ್ರೆ ಒಂಟಿಯಾಗಿ ಮಾಡಬೇಕು. ನನಗೆ ಯಾರ ಸಪೋರ್ಟ್, ಯಾವ ಬ್ಯಾಗ್ರೌಂಡ್ ಕೂಡ ಬೇಡ ಅಂತಾ ಅಂದೇ ನಿರ್ಧಾರಕ್ಕೆ ಬಂದೆ. ನಾನು ಇರುವ ಮನೆಯನ್ನು ಎಲ್ಲರಿಗೂ ಬಾಡಿಗೆ ಮನೆ ಅಂತಾನೆ ಹೇಳಿದ್ದೀನಿ, ನನ್ನ ಆತ್ಮೀಯರಿಗೆ ಅಷ್ಟೇ ನಾನು ಸ್ವಂತ ಮನೆಯಲ್ಲಿರುವ ವಿಚಾರ ಗೊತ್ತು. ಗೊತ್ತಿಲ್ಲದೆ ಇರುವವರಿಗೆ ನಾನು ಯಾವತ್ತೂ ನಮ್ಮ ಹತ್ತಿರ ಅಷ್ಟು ಆಸ್ತಿ, ಅಂತಸ್ತಿದೆ ಅಂತಾ ಯಾವತ್ತೂ ಹೇಳಿಕೊಂಡಿಲ್ಲ ಎಂದು ಸೋನು ಶ್ರೀನಿವಾಸ್‌ ಗೌಡ ಹೇಳಿದ್ದಾರೆ.

  'ಸೋನು ಮನಸ್ಸು ನಿಶ್ಕಲ್ಮಶ, ಆಕೆಗೆ ರಾಕೇಶ್ ತರ ಲೈಫ್ ಪಾರ್ಟ್ನರ್ ಸಿಗ್ಬೇಕು''ಸೋನು ಮನಸ್ಸು ನಿಶ್ಕಲ್ಮಶ, ಆಕೆಗೆ ರಾಕೇಶ್ ತರ ಲೈಫ್ ಪಾರ್ಟ್ನರ್ ಸಿಗ್ಬೇಕು'

  ಬೆನ್ನಿಗೆ ಚೂರಿ ಹಾಕುವವರೇ ಜಾಸ್ತಿ. ಹೀಗಾಗಿ ಹೇಳಿ ಏನು ಉಪಯೋಗ ಇಲ್ಲ. ನನ್ನ ತರ ನೇರವಾಗಿ ಮಾತಾಡೋರು ಇರಲ್ಲ. ನಾನು ಮೂಲತಃ ಹಳ್ಳಿ ಹುಡುಗಿನೇ, ಮಂಡ್ಯ ಹುಡುಗಿನೇ, ಆದರೆ ರಾಯಲ್‌ ಆಗಿ ಬೆಳೆದೆ. ಕನಕಪುರದ ಸಿಟಿಯಲ್ಲೇ ಬೆಳೆದೆ. ಬೆಂಗಳೂರಲ್ಲೂ ಫ್ಯಾಮಿಲಿ ಜೊತೆ ಇದ್ದೇನೆ. ಹಳ್ಳಿ ಹುಡುಗಿ ಅಂತಾ ಹೇಳಿಕೊಳ್ಳಲು ನನಗೆ ನಾಚಿಕೆ ಇಲ್ಲ. ಮಂಡ್ಯ ಹುಡುಗಿ ಅಂದ್ರೆ, ಅದೊಂತರಾ ಹೆಮ್ಮೆ ಎಂದು ತಮ್ಮ ಫ್ಯಾಮಿಲಿ ಬ್ಯಾಂಗ್ರೌಂಡ್‌ ಬಗ್ಗೆ ಹೇಳಿದ್ದಾರೆ.

  ಇನ್ನು ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದ್ದ ಶಿಲ್ಪಾ ಗೌಡ ಹಾಗೂ ಸೋನು ಗೌಡ ಜಡೆ ಜಗಳದ ವಿಚಾರವಾಡಿ ಮಾತನಾಡಿದ ಸೋನು, ಮೂರನೇ ವ್ಯಕ್ತಿಯಿಂದ ನಮ್ಮಿಬ್ಬರ ಮಧ್ಯೆ ಗಲಾಟೆ ನಡೆಯಿತು. ಅದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಯ್ತು. ಆ ಬಳಿಕ ಇಬ್ಬರು ಕೂತು ಮಾತನಾಡಿ ಸರಿಪರಿಸಿಕೊಂಡೆವು, ಈಗ ಮೊದಲಿನಂತೆ ಇದ್ದೇವೆ ಎಂದು ಹೇಳಿದ್ದಾರೆ.

  ತಮ್ಮ ಓದು ಹಾಗೂ ಆದಾಯದ ಬಗ್ಗೆ ಮಾತನಾಡಿದ ಸೋನು, ನನ್ನ ಡಿಪ್ಲೋಮಾ ಕಂಪ್ಲೀಟ್ ಆಗಿದೆ ಮುಂದೆ ಇಂಜಿನಿಯರಿಂಗ್ ಸೇರಬೇಕು. ಮನೆಯಲ್ಲಿ ಓದು.. ಓದು ಅಂತಿದ್ದಾರೆ. ನಮ್ಮ ಫ್ಯಾಮಿಲಿಯಲ್ಲಿ ಎಲ್ಲರೂ ಸಾಫ್ಟ್‌ವೇರ್ ಇಂಜಿನಿಯರ್ಸ್ ಹೀಗಾಗಿ ನನಗೂ ಓದು, ಇಂಜಿನಿಯರಿಂಗ್ ಮುಗಿಸು ಅಂತಿದ್ದಾರೆ. ನನಗೆ ಓದೋಕೆ ಇಷ್ಟಾನೇ ಇಲ್ಲ. ಆ್ಯಕ್ಟಿಂಗ್‌ ನನಗೆ ತುಂಬಾ ಇಷ್ಟ. ಹೀಗಾಗಿ ಇದರಲ್ಲೇ ಇದ್ದೀನಿ. ತಿಂಗಳಿಗೆ 3 ಲಕ್ಷಕ್ಕೂ ಹೆಚ್ಚು ದುಡಿಯುತ್ತಿದ್ದೇನೆ. ಸೋಶಿಯಲ್ ಮೀಡಿಯಾದಲ್ಲಿ ಕೆಲಸ ಮಾಡುತ್ತಿದ್ದೇನೆ. ಕೆಲವೊಂದು ಆ್ಯಪ್‌ಗಳ ಜೊತೆ ಟೈಯಪ್‌ ಆಗಿದ್ದೀನಿ. ಬ್ರಾಂಡ್‌ ಪ್ರಮೋಟರ್‌ ನಾನು. ಆ್ಯಕ್ಟಿಂಗ್‌ ಕೂಡ ಮಾಡುತ್ತೇನೆ. ಧರ್ಮ ಕೀರ್ತಿ ರಾಜ್‌ ಅವರ ಜೊತೆ ಸಿನಿಮಾ ಕೂಡ ಮಾಡಿದ್ದೇನೆ, ಚಿತ್ರ ಇನ್ನೂ ತೆರೆ ಕಾಣಬೇಕು ಎಂದರು.

  English summary
  Bigg Boss Ott Contestant Sonu Srinivas Gowda opens up about her monthly income with filmibeat Kannada

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X