4 ಲವ್ ಫೇಲ್ಯೂರ್ ; 39 ವರ್ಷದ ನಟಿಗೆ ಕೊನೆಗೂ ಕೂಡಿ ಬಂತು ಕಂಕಣ ಭಾಗ್ಯ - ಬಿಗ್ ಬಾಸ್ ಚೆಲುವೆಯ ಹೃದಯ ಗೆದ್ದ ಹುಡುಗ ಯಾರು ?

ಪ್ರೀತಿ ಅಂದರೆ ಹಾಗೇ. ಅದಕ್ಕೆ ಕಣ್ಣಿಲ್ಲದಿದ್ದರೂ ಕಣ್ಣಿನ ತುಂಬಾ ಆಸೆ ಹುಟ್ಟಿಸುವ ಸಾಮರ್ಥ್ಯ ಇದೆ. ಪ್ರೀತಿ ಎನ್ನುವುದು ಕೇವಲ ಎರಡು ದೇಹಕ್ಕೆ ಸಂಬಂಧಿಸಿದ್ದಲ್ಲ. ಎರಡು ಮನಸ್ಸುಗಳು ಮುಕ್ತವಾಗಿ ಒಂದನ್ನೊಂದು ಅರಿತುಕೊಳ್ಳುವುದು. ಪ್ರೀತಿಗೆ ಎಲ್ಲರನ್ನು ಎಲ್ಲವನ್ನೂ ಜಯಿಸುವಂತಹ ನಿಗೂಢವಾದ ಶಕ್ತಿ ಇದೆ. ಪ್ರತಿಯೊಂದು ಧರ್ಮದಲ್ಲಿಯೂ ಈ ಪ್ರೀತಿಯ ಪರಿಕಲ್ಪನೆಗೆ ಅಪಾರವಾದ ಆದ್ಯತೆ ಇದೆ.

ಇನ್ನು ನಿಜವಾದ ಪ್ರೀತಿಯ.. ಕೂಡ ತಮ್ಮ ಹೃದಯ ಗೆದ್ದ ವ್ಯಕ್ತಿಯನ್ನು ಅಳೆಯಲಾಗದಷ್ಟು.. ಅಂತ್ಯ ಇಲ್ಲದಷ್ಟು.. ಪ್ರೀತಿಸುವ ಅನೇಕರು ಇದ್ದಾರೆ. ಪ್ರೀತಿಯ ಸುಖದ ಕ್ಷಣಗಳನ್ನು ಗುನುಗುತ್ತಿದ್ದಾರೆ. ಆ ಪೈಕಿ ಹಲವರು ಮದುವೆಯಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಇನ್ನು ಕೆಲವರು ತಮ್ಮ ಪ್ರೀತಿಯ ಮೇಲೆ ಮದುವೆಯ ಅಧಿಕೃತ ಮುದ್ರೆಯನ್ನು ಹಾಕುತ್ತಿದ್ದಾರೆ. ಉದಾಹರಣೆಗೆ ಪವಿತ್ರಾ ಪುನಿಯಾ.

The Face Reveal Meet Jaskomal Singh Pavitra Punia s Fianc Sharing Dreamy Beach Proposal Photos

ಹೌದು, ಪವಿತ್ರಾ ಪುನಿಯಾ.. ಹಿಂದಿ ಕಿರುತೆರೆಯ ಖ್ಯಾತ ಹೆಸರು. ''ಯೇ ಹೈ ಮೊಹಬ್ಬತ್ತೇ''.. ''ನಾಗಿನ್ 3''.. ''ಲವ್ ಯೂ ಜಿಂದಗಿ''.. ''ಡಾಯನ್''.. ''ಇಶ್ಕ್‌ ಕೀ ದಾಸ್ತಾನ್''.. ಧಾರಾವಾಹಿಗಳ ಮೂಲಕ ಜನ ಮನ ಗೆದ್ದ ಪವಿತ್ರಾ ಪುನಿಯಾ ''ಬಿಗ್ ಬಾಸ್‌-14''ರ ಸ್ಫರ್ಧಿ ಕೂಡ ಹೌದು.

ಇಂಥಾ ಪವಿತ್ರಾ ಪುನಿಯಾ 2015ರಲ್ಲಿ ಸುಮಿತ್ ಮಹೇಶ್ವರಿ ಜೊತೆ ಮದುವೆಯಾಗಬೇಕಿತ್ತು. ನಿಶ್ಚಿತಾರ್ಥ ಕೂಡ ನಡೆದಿತ್ತು. ಆದರೆ.. ಆ ನಂತರ ಅದೇನಾಯ್ತು ಗೊತ್ತಿಲ್ಲ. ಈ ಸಂಬಂಧ ಮುರಿದು ಬಿತ್ತು.

ಮದುವೆ ಮುರಿದು ಬಿದ್ದು 5 ವರ್ಷಗಳ ನಂತರ ಅಂದರೆ 2020ರಲ್ಲಿ ಸುಮಿತ್ ಏಕಾಏಕಿ ಪವಿತ್ರಾ ಪುನಿಯಾ ಅವರ ವಿರುದ್ದ ಹಲವು ಆರೋಪಗಳನ್ನು ಮಾಡಿದ್ದರು. ರಹಸ್ಯವಾಗಿ ಮದುವೆಯಾಗಿತ್ತು ಎಂದು ಬಾಂಬ್ ಎಸೆದಿದ್ದರು.

ಆ ನಂತರ ಈಜಾಜ್ ಖಾನ್ ಜೊತೆ ಪವಿತ್ರಾ ಪುನಿಯಾ ಪ್ರೀತಿಯಲ್ಲಿ ಬಿದ್ದರು. ''ಬಿಗ್ ಬಾಸ್‌ ಸೀಸನ್‌ 14'' ಇವರ ಪ್ರೇಮಕ್ಕೆ ಬುನಾದಿ ಹಾಕಿತ್ತು. ಆರಂಭದ ದಿನಗಳಲ್ಲಿ ''ಬಿಗ್ ಬಾಸ್‌''ನಲ್ಲಿ ಇಬ್ಬರು ದಿನ ನಿತ್ಯ ಜಗಳವೂ ಆಡಿದರು. ಆದರೆ ಆ ನಂತರ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು.

The Face Reveal Meet Jaskomal Singh Pavitra Punia s Fianc Sharing Dreamy Beach Proposal Photos

ಹೀಗೆ ಪ್ರೀತಿಯ ಬಲೆಯಲ್ಲಿ ಸಿಲುಕಿದ ಇಬ್ಬರು ಒಂದಲ್ಲ, ಎರಡಲ್ಲ.. ನಾಲ್ಕು ವರ್ಷ ಜೊತೆಯಲ್ಲಿದ್ದರು. ಓಡಾಡಿದರು. ಎಲ್ಲರೆದುರು ತಮ್ಮ ಪ್ರೀತಿಯನ್ನು ಕೂಡ ಒಪ್ಪಿಕೊಂಡರು. ಇನ್ನೇನು ಇಬ್ಬರು ಮದುವೆಯಾಗುತ್ತಾರೆ ಎಂದೇ ಎಲ್ಲ ಅಂದುಕೊಂಡಿದ್ದರು. ಆದರೆ ಅಷ್ಟರಲ್ಲಿ ಇವರ ಸಂಬಂಧ ಮುರಿದು ಬಿತ್ತು.

ಈಜಾಜ್ ಖಾನ್ ಮತ್ತು ಪವಿತ್ರ ಪುನಿಯಾ ದೂರವಾದ ನಂತರ, ಹಲವರು.. ಇವರ ಪ್ರೀತಿಗೆ ಧರ್ಮ ಅಡ್ಡಿಯಾಯ್ತು ಎಂದು ಮಾತನಾಡಿದರು. ಈ ಮಾತುಗಳನ್ನು ಈಜಾಜ್ ಖಾನ್ ಆಗಲಿ ಪವಿತ್ರಾ ಪುನಿಯಾ ಆಗಲಿ ಒಪ್ಪಿಕೊಂಡಿಲ್ಲವಾದರೂ ಪವಿತ್ರಾ ಮಾತನಾಡಿದ್ದ ಮಾತುಗಳು ಪರೋಕ್ಷವಾಗಿ ಈ ಮಾತುಗಳನ್ನು ಪುಷ್ಠಿಕರಿಸುವಂತೆ ಇದ್ದವು.

ಆ ನಂತರ ಪಾರಸ್ ಛಾಬ್ರಾ ಮತ್ತು ಪ್ರತೀಕ್ ಸೆಹಜ್‌ಪಾಲ್ ಅವರ ಜೊತೆ ಕೂಡ ಇವರ ಹೆಸರು ಥಳುಕು ಹಾಕಿಕೊಂಡಿತ್ತು. ಹೀಗೆ ಪ್ರೀತಿಯಲ್ಲಿ ನಾಲ್ಕು ಬಾರಿ ಎದ್ದು ಬಿದ್ದು ನೊಂದು ಬೆಂದು ಹೋದ ಪವಿತ್ರಾ ಪುನಿಯಾ ಕಳೆದ ವರ್ಷ ಅಕ್ಟೋಬರ್ ನಲ್ಲಿ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಮೂಲಕ ತಮ್ಮ ಅಭಿಮಾನಿಗಳನ್ನು ಅಚ್ಚರಿಗೆ ದೂಡಿದ್ದರು.

ತಮ್ಮ ಕೈ ಹಿಡಿಯುತ್ತಿರುವ ಹುಡುಗನ ಹೆಸರಾಗಲಿ.. ಹುಡುಗನ ಹಿನ್ನೆಲೆಯಾಗಲಿ.. ಯಾರಿಗೂ ಹೇಳದೇ ಗೌಪ್ಯೌವಾಗಿ ಇಟ್ಟಿದ್ದ ಪವಿತ್ರಾ ಪುನಿಯಾ ''ಹಿಂದೂಸ್ತಾನ್ ಟೈಮ್ಸ್''ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಬದುಕಿನ ಹೊಸ ಆರಂಭದ ಕುರಿತು ಮಾತನಾಡಿದ್ದರು.ನನ್ನ ಭಾವಿ ಪತಿ ಒಬ್ಬ ಉದ್ಯಮಿ, ನಟರಲ್ಲ ಎಂದು ಮಾತ್ರ ಹೇಳಿದ್ದರು. ಉಳಿದ ವಿಚಾರಗಳನ್ನು ಹಂಚಿಕೊಳ್ಳಳು ನಿರಾಕರಿಸಿದ್ದರು.

ಆದರೆ ಈಗ ಬಹುಶಃ ಪವಿತ್ರಾ ಪುನಿಯಾ ಮದುವೆಗೆ ಮುಹೂರ್ತ ಕೂಡಿ ಬಂದಂತೆ ಇದೆ. ಇದಕ್ಕೆ ಪುರಾವೆ ಎನ್ನುವಂತೆ ಪವಿತ್ರಾ ಪುನಿಯಾ ತಮ್ಮ ಮನದರಸನ ಕುರಿತು ಮಾಹಿತಿಯನ್ನು ಹಂಚಿಕೊಳ್ಳಲು ಮುಂದಾದಂತೆ ಇದ್ದು ಸದ್ಯ ಹುಡುಗನ ಹೆಸರು ಬಹಿರಂಗವಾಗಿದೆ. ಅಭಿಮಾನಿಗಳಿಗೆ ಮುಖ ಪರಿಚಯವಾಗಿದೆ. ಇನ್‌ಸ್ಟಾಗ್ರಾಮ್ ಖಾತೆ ಕೂಡ ಪವಿತ್ರಾ ಪುನಿಯಾ ಅವರ ಹಿಂಬಾಲಕರಿಗೆ ಸಿಕ್ಕಿದೆ.

ಪವಿತ್ರಾ ಮದುವೆಯಾಗುತ್ತಿರುವ ಹುಡುಗ ಯಾರು ? ಹಿನ್ನೆಲೆ ಏನು ?

ಪವಿತ್ರಾ ಮದುವೆಯಾಗುತ್ತಿರುವ ಹುಡುಗನ ಹೆಸರು ಜಾಸ್ಕೋಮಲ್ ಸಿಂಗ್. ಪವಿತ್ರಾ ಈ ಹಿಂದೆ ಹೇಳಿದಂತೆ ಜಾಸ್ಕೋಮಲ್ ಮನರಂಜನಾ ಉದ್ಯಮಕ್ಕೆ ಸೇರಿದವರಲ್ಲ. ಪಂಜಾಬ್‌ ಮೂಲಕ ಜಾಸ್ಕೋನಲ್ ಸಿಂಗ್ ಉದ್ಯಮಿಯಾಗಿ ಅಮೆರಿಕಾದಲ್ಲಿ ಹೆಸರು ಮಾಡಿದ್ದಾರೆ. ಅಲ್ಲಿಯೇ ನೆಲೆಯೂರಿದ್ದಾರೆ. ಸಂಗೀತದ ಬಗ್ಗೆ ಅಪಾರ ಒಲವು ಇದೆ. ಇದಕ್ಕೆ ಪುರಾವೆ ಎಂಬಂತೆ ಇವರ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಹಲವು ವಿಡಿಯೋಗಳಿವೆ.

ಇನ್ನು ಪವಿತ್ರಾ ಪೂನಿಯಾಗೆ ಈಗ 39 ವರ್ಷ. ಗೂಗಲ್ ಲೆಕ್ಕಾಚಾರದ ಪ್ರಕಾರ ಪವಿತ್ರಾ ಅವರಿಗಿಂತ ಜಾಸ್ಕೋಮಲ್ ವಯಸ್ಸಿನಲ್ಲಿ ಚಿಕ್ಕವರು. 37-38 ವರ್ಷವರಾಗಿರಬಹುದು ಜಾಸ್ಕೋಮಲ್ ಸಿಂಗ್. ಇನ್ನು ''ಟೈಮ್ಸ್ ಆಫ್ ಇಂಡಿಯಾ'' ವರದಿ ಪ್ರಕಾರ ಪವಿತ್ರಾ ಪುನಿಯಾ ಮತ್ತು ಜಾಸ್ಕೋಮಲ್ ಸಿಂಗ್ ಅವರ ಮದುವೆ ಇದೇ ತಿಂಗಳು ಅದ್ಧೂರಿಯಾಗಿ ನೆರವೇರಲಿದೆ.

ಸದ್ಯ ಪವಿತ್ರಾ ಪುನಿಯಾ ಅವರಿಗೆ ಮಂಡಿಯೂರಿ ಜಾಸ್ಕೋಮಲ್ ಪ್ರಪೋಸ್ ಮಾಡುತ್ತಿರುವ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಹಲವರು ಈ ನವ ಜೋಡಿಗೆ ಶುಭ ಕೋರುತ್ತಿದ್ದಾರೆ.

More from Filmibeat

English summary
Pavitra Punia and Jaskomal Singh go viral! After months of mystery, the couple shares dreamy seaside engagement pictures. Who is the man who won the TV star's heart? See the romantic reveal here.
Read more about: ಟಿವಿ bigg boss love
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X