ಬಿಗ್ ಬಾಸ್ ಸ್ಫರ್ಧಿಗಳ ಪ್ರೀತಿಗೆ ಧರ್ಮದ ಬೇಲಿ ಅಡ್ಡಿ ? ಬಾಯ್‌ಫ್ರೆಂಡ್ ಮರೆತು ಉದ್ಯಮಿ ಜೊತೆ ಎಂಗೇಜ್ ಆದ ನಟಿ

ಪ್ರೀತಿ ಹೃದಯದ ಭಾಷೆ ಎನ್ನುವುದು ಲೋಕಾರೂಢಿ. ಆದರೆ ಕಾಲ ಕಳೆದಂತೆ ಪ್ರೀತಿ ಹುಟ್ಟುವ ಹೃದಯವೂ ಕೂಡ ವ್ಯಾವಹಾರಿಕವಾಗಿದೆ. ಇನ್ನು ಕೆಲವೊಮ್ಮೆ ಹೃದಯದಲ್ಲಿ ಅರಳಿದ ಪ್ರೀತಿಗೆ ಜಾತಿ-ಧರ್ಮ- ಅಂತಸ್ತು-ಮನೆತನ- ಸಂಪ್ರದಾಯ-ಗೌರವ ಇತ್ಯಾದಿ ಮನುಷ್ಯ ನಿರ್ಮಿತ ಗೋಡೆಗಳು ಅಡ್ಡಿಯಾಗುತ್ತಾವೆ. ಆಗ ಕೆಲವರ ಪ್ರೀತಿಯಲ್ಲಿ ಬಿರುಕು ಮೂಡಲು ಶುರುವಾಗುತ್ತೆ. ತ್ಯಾಗದ ಬದಲು ಅಹಂಕಾರ ಹೆಚ್ಚಾಗುತ್ತೆ. ನಿಸ್ವಾರ್ಥ ಪ್ರೀತಿ ಕಣ್ಮರೆಯಾಗುತ್ತೆ.

ನೋಡ.. ನೋಡುತ್ತಾ.. ಹೆಮ್ಮರವಾಗಿ ಬೆಳೆದು ನಿಂತ ಪ್ರೀತಿ ಈ ಬಿರುಗಾಳಿಗೆ ಬಿದ್ದು ಹೋಗುತ್ತೆ. ಈಜಾಜ್ ಖಾನ್ ಮತ್ತು ಪವಿತ್ರಾ ಪುನಿಯಾ ವಿಚಾರದಲ್ಲಿ ಸದ್ಯ ಇದೇ ಆಗಿದೆ.

Bigg Boss Pavitra Punia Moves On Engaged to US Entrepreneur Months After Breakup with Eijaz Khan

ಹೌದು.. ಈಜಾಜ್ ಖಾನ್ ಮತ್ತು ಪವಿತ್ರಾ ಪುನಿಯಾ.. ಹಿಂದಿ ಕಿರುತೆರೆಯ ಎರಡು ನಕ್ಷತ್ರಗಳು. ಬೇರೆ ಬೇರೆ ದಾರಿಯಲ್ಲಿ ನಡೆಯುತ್ತಾ ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ಈ ಇಬ್ಬರು ''ಬಿಗ್ ಬಾಸ್‌ ಸೀಸನ್‌ 14''ರಲ್ಲಿ ಮುಖಾಮುಖಿಯಾಗಿದ್ದರು. ಆರಂಭದ ದಿನಗಳಲ್ಲಿ ''ಬಿಗ್ ಬಾಸ್‌''ನಲ್ಲಿ ದಿನ ನಿತ್ಯ ಜಗಳವೂ ಆಡಿದರು. ಆದರೆ ಆ ನಂತರ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು.

ಹೀಗೆ ಪ್ರೀತಿಯ ಬಲೆಯಲ್ಲಿ ಸಿಲುಕಿದ ಇಬ್ಬರು ಒಂದಲ್ಲ, ಎರಡಲ್ಲ.. ನಾಲ್ಕು ವರ್ಷ ಜೊತೆಯಲ್ಲಿದ್ದರು. ಓಡಾಡಿದರು. ಎಲ್ಲರೆದುರು ತಮ್ಮ ಪ್ರೀತಿಯನ್ನು ಕೂಡ ಒಪ್ಪಿಕೊಂಡರು. ಇನ್ನೇನು ಇಬ್ಬರು ಮದುವೆಯಾಗುತ್ತಾರೆ ಎಂದೇ ಎಲ್ಲ ಅಂದುಕೊಂಡಿದ್ದರು. ಆದರೆ ಅಷ್ಟರಲ್ಲಿ ಇವರ ಸಂಬಂಧ ಮುರಿದು ಬಿತ್ತು.

ಈಜಾಜ್ ಖಾನ್ ಮತ್ತು ಪವಿತ್ರ ಪುನಿಯಾ ದೂರವಾದ ನಂತರ, ಹಲವರು.. ಇವರ ಪ್ರೀತಿಗೆ ಧರ್ಮ ಅಡ್ಡಿಯಾಯ್ತು ಎಂದು ಮಾತನಾಡಿದರು. ಈ ಮಾತುಗಳನ್ನು ಈಜಾಜ್ ಖಾನ್ ಆಗಲಿ ಪವಿತ್ರಾ ಪುನಿಯಾ ಆಗಲಿ ಒಪ್ಪಿಕೊಂಡಿಲ್ಲವಾದರೂ ಪವಿತ್ರಾ ಮಾತನಾಡಿದ್ದ ಮಾತುಗಳು ಪರೋಕ್ಷವಾಗಿ ಈ ಮಾತುಗಳನ್ನು ಪುಷ್ಠಿಕರಿಸುವಂತೆ ಇದ್ದವು.

''ಟೆಲ್ಲಿ ಮಸಾಲಾ''ಗೆ ನೀಡಿದ್ದ ಸಂದರ್ಶನದಲ್ಲಿ ಈಜಾಜ್ ಖಾನ್‌ ಜೊತೆ ತಮ್ಮ ಬ್ರೇಕಪ್ ಕುರಿತು ಮಾತನಾಡಿದ್ದ ಪವಿತ್ರಾ ಪುನಿಯಾ, ಮಹಿಳೆಯರು ಪುರುಷರ ಅಧೀನದಲ್ಲಿರುವುದು, ಅವರ ಎದುರು ದುರ್ಬಲವಾಗಿರುವುದು ಒಳ್ಳೆಯದಲ್ಲ ಎಂದು ಹೇಳಿದ್ದರು. ಒಬ್ಬ ಮಹಿಳೆ ನಿಮ್ಮನ್ನು ಗೌರವದಿಂದ ಕಾಣುತ್ತಿರುವಾಗ, ಎದುರಗಡೆ ಇರುವ ವ್ಯಕ್ತಿ ಕೂಡ ಗೌರವದಿಂದ ಕಾಣಬೇಕು, ಕಾಳಜಿಯಿಂದ ನೋಡಿಕೊಳ್ಳಬೇಕು ಎಂದು ಹೇಳಿದ್ದ ಪವಿತ್ರಾ ಸಂಬಂಧ ಉಳಿಸಿಕೊಳ್ಳುವ ಪ್ರಯತ್ನವನ್ನು ನಾನು ಮಾಡಿದೆ ಆದರೆ ಅದು ಫಲಕಾರಿಯಾಗಲಿಲ್ಲ ಎಂದು ಹೇಳಿದ್ದರು.

Bigg Boss Pavitra Punia Moves On Engaged to US Entrepreneur Months After Breakup with Eijaz Khan

ಇನ್ನೂ ಇದೇ ಸಂದರ್ಭದಲ್ಲಿ ನಾನು ಯಾವುದೇ ಕಾರಣಕ್ಕೂ ಮತಾಂತರವಾಗುವುದಿಲ್ಲ, ಪ್ರೀತಿಗಾಗಿ ನಾನು ನನ್ನ ಧರ್ಮ ಬದಲಿಸುವುದಿಲ್ಲ ಎಂದು ನೇರವಾಗಿ ಹೇಳಿದ್ದೇ ಎಂದು ಹೇಳಿದ್ದ ಪವಿತ್ರಾ ಪುನಿಯಾ ತನ್ನ ಧರ್ಮಕ್ಕೆ ನಿಷ್ಠರಾಗಿ ಇರದ ವ್ಯಕ್ತಿ, ಪ್ರೀತಿಯಲ್ಲಿ ಹೇಗೆ ಪ್ರಾಮಾಣಿಕವಾಗಿ, ನಿಯತ್ತಾಗಿ ಇರಲು ಸಾಧ್ಯ ಎಂದು ಪ್ರಶ್ನೆ ಮಾಡಿದ್ದರು.

ಹೀಗೆ ಈಜಾಜ್ ಖಾನ್ ಅವರಿಂದ ದೂರವಾದ ಪವಿತ್ರಾ ಪುನಿಯಾ ಸದ್ಯ ಉದ್ಯಮಿಯ ಜೊತೆ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಖುಷಿಯನ್ನು ಕೂಡ ಹಂಚಿಕೊಂಡಿದ್ದಾರೆ. ಆದರೆ. ತಮ್ಮ ಕೈ ಹಿಡಿಯುತ್ತಿರುವ ಹುಡುಗನ ಹೆಸರಾಗಲಿ.. ಹುಡುಗನ ಹಿನ್ನೆಲೆಯಾಗಲಿ.. ಪವಿತ್ರಾ ಪುನಿಯಾ ಹೇಳಿಲ್ಲ.

''ಹಿಂದೂಸ್ತಾನ್ ಟೈಮ್ಸ್'' ಜೊತೆ ತಮ್ಮ ಬದುಕಿನ ಹೊಸ ಆರಂಭದ ಕುರಿತು ಮಾತನಾಡಿರುವ ಪವಿತ್ರಾ ಪುನಿಯಾ ನನ್ನ ಭಾವಿ ಪತಿ ಒಬ್ಬ ಉದ್ಯಮಿ, ನಟರಲ್ಲ ಎಂದು ಮಾತ್ರ ಹೇಳಿದ್ದಾರೆ. ಉಳಿದ ವಿಚಾರಗಳನ್ನು ಹಂಚಿಕೊಳ್ಳಳು ನಿರಾಕರಿಸಿರುವ ಪವಿತ್ರಾ ಪುನಿಯಾ ನಾವು ಇಬ್ಬರು ತುಂಬಾ ಸಮಯದಿಂದ ಜೊತೆಯಲ್ಲಿ ಇದ್ದೇವೆ. ಮದುವೆಯಾಗಲು ಇದು ಸರಿಯಾದ ಸಮಯ ಎಂದು ಈಗ ಮದುವೆಯಾಗುವ ತೀರ್ಮಾನಕ್ಕೆ ಬಂದಿದ್ದೇವೆ ಎಂದು ಹೇಳಿದ್ದಾರೆ. ಸದ್ಯ ಪವಿತ್ರಾ ಪುನಿಯಾ ಅವರಿಗೆ ಹಲವರು ಶುಭಾಶಯಗಳನ್ನು ಕೋರುತ್ತಿದ್ಧಾರೆ.

More from Filmibeat

English summary
Pavitra Punia is engaged! Did religious differences end her relationship with Eijaz Khan? Find out the truth and meet the US businessman she is set to marry.
Read more about: biggboss engagement ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X