ಬಿಗ್ ಬಾಸ್ ಶೋನಿಂದ ತಲೆದಿಂಬು ಹೊತ್ತೊಯ್ದವರು
ಅನುಶ್ರೀ ಸಹ ಅಷ್ಟೇ ವಿನಾಯಕ ಜೋಷಿ ಹಾಗೂ 'ಗಂಡ ಹೆಂಡತಿ' ಖ್ಯಾತಿಯ ಸಂಜನಾ ಅವರಂತೆ ಅಭಿನಯಿಸಿ ತೋರಿಸಿದರು. ಅರುಣ್ ಅವರಿಗೆ ಬಿಗ್ ಬಾಸ್ ಈ ಬಾರಿಯೂ ಒಂದು ಸಣ್ಣ ಉಡುಗೊರೆ ನೀಡಿದರು. ಅದೇನೆಂದರೆ ಅವರ ಮದುವೆ ವಾರ್ಷಿಕೋತ್ಸವದ ಕೇಕ್.
ಮನೆಯ ಒಬ್ಬ ಸದಸ್ಯನಿಗೆ ಫೋನ್ ಮಾಡುವ ಅವಕಾಶವನ್ನು ಕಲ್ಪಿಸಿದರು. ಈ ಅವಕಾಶವೂ ಅರುಣ್ ಅವರಿಗೆ ಸಿಕ್ಕಿತು. ಆದರೆ ಅವರು ತಮ್ಮ ಪತ್ನಿಯ ನಂಬರನ್ನೇ ಮರೆತಿದ್ದರು. ಬಳಿಕ ಜ್ಞಾಪಿಸಿಕೊಂಡು ಕರೆ ಮಾಡಿದರು ಬಿಡಿ. "ಅಮ್ಮೂ ಐ ಲವ್ ಯೂ ಚಿನ್ನು...ನಾನು ಡಲ್ ಆಗಿಲ್ಲ ಸಖತ್ ಆಗಿದ್ದೀನಿ" ಎಂದು ತಮ್ಮ ಪತ್ನಿಗೆ ಹೇಳಿ ಮುಗಿಸುವಷ್ಟರಲ್ಲಿ ಒಂದು ನಿಮಿಷದ ಕಾಲಾವಧಿ ಮುಗಿದಿತ್ತು.

ಕೇಕ್ ಸವಿಯುತ್ತಾ ಅರುಣ್ ವಿವಾಹ ವಾರ್ಷಿಕೋತ್ಸವದಲ್ಲಿ ಒಂದು ಹಾಡೂ ಹಾಡಿದರು. ಅದೇನೆಂದರೆ... "ಬಡವನಾದರೆ ಏನು ಪ್ರಿಯೆ ಕೈ ತುತ್ತು ತಿನಿಸುವೆ...ಎದೆಯ ತುಂಬ ಒತ್ತಿಕೊಂಡು ಮುತ್ತಿನ ಮಳೆಯ ಸುರಿಯುವೆ...ನನ್ನ ಎದೆಯ ರಾಜ್ಯದಲ್ಲೇ ನೀನು ರಾಣಿ ಆಗುವೆ...ಎಂದು ತಮ್ಮ ಮೀರಾ ಅವರಿಗಾಗಿ ಈ ಹಾಡನ್ನು ಹಾಡಿದರು.
ಮನೆಯಿಂದ ಹೊರ ಹೋಗಬೇಕಾದರೆ ಪ್ರೀತಿಯ ನೆನಪಿಗಾಗಿ ರಿಷಿಕಾ ಸಿಂಗ್ ಒಂದು ತಲೆದಿಂಬು ಹಾಗೂ ಕಾಫಿ ಕಪ್ ತೆಗೆದುಕೊಂಡು ಹೋದರು. ಅನುಶ್ರೀ ಅವರು ತಲೆದಿಂಬಿನ ಮೇಲೆ ಎಲ್ಲರ ಹಸ್ತಾಕ್ಷರ ಬರೆಸಿಕೊಂಡರು. ಬಳಿಕ ಇಬ್ಬರೂ ಬಿಗ್ ಬಾಸ್ ಮುಖ್ಯದ್ವಾರದ ಮೂಲಕ ನಿರ್ಗಮಿಸಿದರು.
ರಿಷಿಕಾ ಹಾಗೂ ಅನುಶ್ರೀ ಇಬ್ಬರಿಗೂ ಅರುಣ್ ಸಾಗರ್ ಒಂದು ಮಾತನ್ನೂ ಹೇಳಿದರು. ರಿಷಿಕಾ ನೀನು ಋಷಿಯಾಗು ಎಂದರು. ಅನುಶ್ರೀ ಕುರಿತು ನಗು ಮಗು ಎಂದು ಹೇಳಿದರು. ಇಬ್ಬರನ್ನೂ ಎಲ್ಲರೂ ಪ್ರೀತಿಯಿಂದ ಬೀಳ್ಕೊಟ್ಟು ಮನೆ ಸೇರಿದರು. ಇಲ್ಲಿ ಸಿಗುವ ಐವತ್ತು ಲಕ್ಷ ಖರ್ಚಾಗುತ್ತದೆ. ಆದರೆ ನಮ್ಮೆಲ್ಲರ ನಡುವಿನ ಪ್ರೀತಿ ಸ್ನೇಹ ಮಾತ್ರ ಶಾಶ್ವತ ಎಂಬ ಮಾತನ್ನೂ ಅರುಣ್ ಸಾಗರ್ ಹೇಳಿದ್ದು ವಿಶೇಷವಾಗಿತ್ತು.


Click it and Unblock the Notifications











