»   » ಭುವನ್ ಬಳಿಕ ಕೀರ್ತಿ ಜೊತೆ ಕಿರಿಕ್ ಮಾಡಿಕೊಂಡ ಪ್ರಥಮ್!

ಭುವನ್ ಬಳಿಕ ಕೀರ್ತಿ ಜೊತೆ ಕಿರಿಕ್ ಮಾಡಿಕೊಂಡ ಪ್ರಥಮ್!

Posted By:
Subscribe to Filmibeat Kannada

ಬಿಗ್ ಬಾಸ್ ಪ್ರಥಮ್ ಹುಚ್ಚಾಟ್ಟ ನೋಡಿ ಜನಕ್ಕೆ ಸಾಕಾಗಿ ಹೋಗಿದೆ. ಕಳೆದ ಎರಡು ದಿನಗಳಿಂದಂತು ಟಿವಿ ಹಾಕಿದರೆ ಬರಿ ಪ್ರಥಮ್ ಮತ್ತು ಭುವನ್ ಕಾದಾಟದ ಕಥೆಯೇ ಬರುತ್ತಿದೆ. ಆದರೆ ಭುವನ್ ಬಳಿಕ ಪ್ರಥಮ್ ಈಗ ಕೀರ್ತಿ ಜೊತೆ ಕೂಡ ಕಿರಿಕ್ ಮಾಡಿಕೊಂಡಿದ್ದಾರೆ.

ಭುವನ್ ಬೆಂಬಲಕ್ಕೆ ನಿಂತ ಹರ್ಷಿಕಾರಿಂದ ನ್ಯಾಯಕ್ಕಾಗಿ ಹೋರಾಟ

ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಂ' ಕಾರ್ಯಕ್ರಮದ ಅತಿಥಿಗಳಾಗಿ ಬಿಗ್ ಬಾಸ್ ಖ್ಯಾತಿಯ ಪ್ರಥಮ್, ಕಿರಿಕ್ ಕೀರ್ತಿ, ಮತ್ತು ಸಂಜನಾ ಆಗಮಿಸಿದ್ದರು. ಇದೇ ವೇಳೆ ಅಕುಲ್ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಪ್ರಥಮ್ ಮತ್ತು ಕೀರ್ತಿ ನಡುವೆ ಚಿಕ್ಕ ಕಿರಿಕ್ ಆಗಿದೆ.

ಬಿಟ್ಟಿ ಪ್ರಚಾರಕ್ಕಾಗಿ ನಡಿತಾ ಪ್ರಥಮ್-ಭುವನ್ 'ತೊಡೆ ಕಾದಾಟ'?

Bigg Boss Pratham and Kirik Keerthi In 'Super Talk Time'.

ಕಾರ್ಯಕ್ರಮದ ಪ್ರೋಮೋದಲ್ಲಿ ಇಬ್ಬರಿಗು ಕಿರಿಕ್ ಆಗಿರುವ ವಿಷಯ ಬಹಿರಂಗವಾಗಿದೆ. ಆದರೆ ನಿಜವಾಗಿಯೂ ಕಾರ್ಯಕ್ರಮದಲ್ಲಿ ನಡೆದಿದ್ದು ಏನು ಎಂಬುದು ಕಾರ್ಯಕ್ರಮ ಪ್ರಸಾರವಾದ ನಂತರವಷ್ಟೇ ತಿಳಿಯಲಿದೆ. 'ಸೂಪರ್ ಟಾಕ್ ಟೈಂ' ಕಾರ್ಯಕ್ರಮ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರತಿ ಗುರುವಾರ ಮತ್ತು ಶುಕ್ರವಾರ ರಾತ್ರಿ 9 ಗಂಟೆಗೆ ಪ್ರಸಾರ ಆಗಲಿದೆ.

Read more about: pratham, tv, ಪ್ರಥಮ್
English summary
Bigg Boss Pratham and Kirik Keerthi In Colors Super Channel's popular show 'Super talk time'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada