Saanya Iyer:ಹಾಟ್ ಲುಕ್‌ ಕೊಟ್ಟ ಸಾನ್ಯಾ ಅಯ್ಯರ್; ಇಂಡಿಯನ್ ಸ್ಪೈಡರ್ ವುಮೆನ್ ಎಂದ ಫ್ಯಾನ್ಸ್

By ಪೂರ್ವ

ಸದಾ ಒಂದಲ್ಲ ಒಂದು ಸುದ್ದಿಯಲ್ಲಿ ಸದ್ದು ಮಾಡುತ್ತಿರುವ ನಟಿ ಸಾನ್ಯಾ ಅಯ್ಯರ್. 'ಪುಟ್ಟಗೌರಿ ಮದುವೆ' ಧಾರಾವಾಹಿಯ ಮೂಲಕ ಕಿರುತೆರೆಗೆ ಪ್ರವೇಶ ಮಾಡಿದ ನಟಿಯೀಕೆ. ಈ ಧಾರಾವಾಹಿಯಲ್ಲಿ ಅದ್ಭುತವಾಗಿ ನಟನೆ ಮಾಡಿ ತನ್ನದೇ ಆದ ಛಾಪನ್ನು ಮೂಡಿಸಿದ್ದರು.

ಇದಕ್ಕಿಂತ ಮೊದಲೇ ಬಾಲ ನಟಿಯಾಗಿ ಈಕೆ ನಟನೆಯನ್ನು ಮಾಡುತ್ತಿದ್ದರು. ಹಲವು ಸಿನಿಮಾಗಳಲ್ಲಿ ಬಾಲ ನಟಿಯಾಗಿ ಸಾನಿಯಾ ಅಯ್ಯರ್ ನಟಿಸಿದ್ದಾರೆ. ಇನ್ನು ಇತ್ತೀಚೆಗೆ ತೆರೆಕಂಡ 'ಗೌರಿ' ಸಿನಿಮಾದ ಮೂಲಕ ಬೆಳ್ಳಿತೆರೆಗೆ ನಾಯಕಿಯಾಗಿ ಸಾನ್ಯಾ ಅಯ್ಯರ್ ಕಾಣಿಸಿಕೊಂಡಿದ್ದಾರೆ.

Bigg Boss Putta Gowri Maduve fame actress Saanya Iyer glamorous photo viral

ಇಂದ್ರಜಿತ್ ಲಂಕೇಶ್ ನಿರ್ದೇಶಿಸಿದ 'ಗೌರಿ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಸಖತ್ ಆಗಿ ಎಂಟ್ರಿ ಕೊಟ್ಟಾಗಿದೆ. ಈ ಸಿನಿಮಾದಲ್ಲಿ ಸಮರ್ಜಿತ್‌ಗೆ ನಾಯಕಿಯಾಗಿ ಸಾನ್ಯಾ ಅಯ್ಯರ್ ನಟಿಸಿದ್ದರು. ಸಿನಿಮಾ, ರಿಯಾಲಿಟಿ ಶೋ ಜೊತೆಗೆ ಸಾಮಾಜಿಕ ಜಾಲತಾಣದ ಮೂಲಕ ಸಾನ್ಯಾ ಅಯ್ಯರ್ ಸದಾ ಸದ್ದು ಮಾಡುತ್ತಲೇ ಇರುತ್ತಾರೆ. ಇದೀಗ ಹಾಟ್ ಲುಕ್ ಕೊಡುವ ಮೂಲಕ ಎಲ್ಲರ ಮನಸ್ಸನ್ನೂ ಸಾನ್ಯಾ ಅಯ್ಯರ್ ಗೆದ್ದಿದ್ದಾರೆ.

ಅಕ್ಕ ಸಮ್ಮೇಳನದಲ್ಲಿ ಸಾನ್ಯಾ ಅಯ್ಯರ್?

ಹೌದು, ಸಾನ್ಯಾ ಅಯ್ಯರ್ ತನ್ನ ತಾಯಿಯ ಜೊತೆಗೆ ಯುಎಸ್‌ಎ ನಡೆಯುತ್ತಿರುವ ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಲು ಅಮ್ಮನ ಜೊತೆ ತೆರಳಿದ್ದಾರೆ. ಹಾಗೆಯೇ ತನ್ನ ತಾಯಿಯ ಜೊತೆಗೆ ಅಲ್ಲಿಯ ಬೇರೆ ಬೇರೆ ಸ್ಥಳಗಳಿಗೆ ವಿಸಿಟ್ ನೀಡುವ ಪ್ಲಾನ್ ಕೂಡ ಮಾಡಿಕೊಂಡಿದ್ದಾರೆ. ಇನ್ನು ಸಾನ್ಯಾ ಅಯ್ಯರ್ ವಿದೇಶದಲ್ಲಿಯೇ ಇದೀಗ ಫೋಟೋಶೂಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ . ಈ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ.
ಕಪ್ಪು ಬಣ್ಣದ ಡ್ರೆಸ್‌ನಲ್ಲಿ ಶೈನಿಂಗ್

ಸಾನ್ಯಾ ಅಯ್ಯರ್ ಶೇರ್ ಮಾಡಿರುವ ಫೋಟೋಗಳು ಸಿಕ್ಕಾಪಟ್ಟೆ ಗ್ಲಾಮರಸ್ ಆಗಿವೆ. ಬಾಡಿ ಕಾನ್ ಜಂಪ್ ಸೂಟ್ ಧರಿಸಿ ಫೋಟೋಶೂಟ್ ಮಾಡಿಸಿಕೊಂಡಿದ್ದು, ಅದನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಸಖತ್ ಬೋಲ್ಡ್ ಮತ್ತು ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.

ಇನ್ನು ಈ ಫೋಟೋಗೆ ಬಹಳಷ್ಟು ಕಾಮೆಂಟ್‌ಗಳು ಹರಿದು ಬರುತ್ತಿದ್ದು, ಸಾನಿಯಾ ಇದುವರೆಗೂ ಯಾವುದೇ ಫೋಟೋಗೂ ಕೂಡ ಪ್ರತಿಕ್ರಿಯೆ ನೀಡಿಲ್ಲ. ಆದರೆ ಅಭಿಮಾನಿಗಳು ಮಾತ್ರ ಬಾಂಬ್, ಸ್ಟನ್ನಿಂಗ್, ಹಾಟ್ , ಪ್ರಿಟಿಯೆಸ್ಟ್, ಸ್ಪೈಡರ್ ವುಮೆನ್, ಹಾಟ್ ಬಾಂಬ್ ಎಂದೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ.

More from Filmibeat

English summary
Bigg Boss Putta Gowri Maduve fame actress Saanya Iyer glamorous photo viral
Read more about: saanya iyer poorva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X