ತಾರಕಕ್ಕೇರಿದ ಡಾಗ್ ಸತೀಶ್ - ರಜತ್ ವಾಗ್ಯುದ್ಧ ; ಬಿಗ್ ಬಾಸ್ ಬುಜ್ಜಿ ವಿರುದ್ಧ ಎಫ್‌ಐಆರ್

''ಬಿಗ್ ಬಾಸ್'' ಹಲವರ ಕನಸು. ಸಾಮಾನ್ಯರನ್ನು ಸಾಧಕರನ್ನಾಗಿ ಮಾಡುವ, ಸಾಧಕರ ಜನಪ್ರಿಯತೆಯನ್ನು ಇನ್ನೂ ಹೆಚ್ಚಿಸುವ ವೇದಿಕೆ. ಹಲವರ ಬದುಕು ಬದಲಿಸಿದ ಕಾರ್ಯಕ್ರಮ ಇದು. ಆದರೆ ಕೆಲ ಒಮ್ಮೆ ಈ ಸ್ಟಾರ್‌ಗಿರಿಯನ್ನು ಕೆಲವರು ಒಳ್ಳೆಯ ಕೆಲಸಕ್ಕೆ ಉಪಯೋಗ ಮಾಡಿಕೊಳ್ಳುವುದಿಲ್ಲ. ಬದಲಿಗೆ ಸಾಮಾಜಿಕ ಜವಾಬ್ಧಾರಿ ಹೆಗಲೇರಿದರೂ ಕೂಡ.. ನಮ್ಮ ಪ್ರತಿಯೊಂದು ನಡೆ ಮತ್ತು ನುಡಿಯ ಮೇಲೆ ಎಲ್ಲರ ಕಣ್ಣೀರುತ್ತೆ ಎಂದು ಗೊತ್ತಿದ್ದರೂ ಕೂಡ..

ವ್ಯೆಯಕ್ತಿಕ ದ್ವೇಷಕ್ಕೆ ತಮಗೆ ಸಿಕ್ಕ ಈ ಜನಪ್ರಿಯತೆಯನ್ನು ಬಳಸುತ್ತಾರೆ. ''ಬಿಗ್ ಬಾಸ್'' ಅಂತಹ ವೇದಿಕೆಯಿಂದ ಬಂದು ಮುಂಬರುವ ಭವಿಷ್ಯದ ಕಡೆ ಗಮನ ಕೊಡದೇ ಕೇವಲ ವಿವಾದಕ್ಕೀಡಾಗುತ್ತಾರೆ. ಉದಾಹರಣೆಗೆ ರಜತ್ ಮತ್ತು ಡಾಗ್ ಸತೀಶ್ ಅವರನ್ನೇ ತೆಗೆದುಕೊಳ್ಳಿ.

Bigg Boss Rajath Kishan Booked FIR Filed Over Dog Satish Dispute

ಹೌದು, ಎಲ್ಲರಿಗೆ ಗೊತ್ತಿರುವಂತೆ ಕಳೆದ ಕೆಲ ದಿನಗಳಿಂದ ರಜತ್ ಮತ್ತು ಡಾಗ್ ಸತೀಶ್ ನಡುವೆ ಸೋಶಿಯಲ್ ಮೀಡಿಯಾ ಸಮರ ಶುರುವಾಗಿದೆ. ಸುದೀಪ್ ಅವರ ವಿಚಾರದಲ್ಲಿ ಹೊತ್ತಿಕೊಂಡ ಈ ಬೆಂಕಿ ಸದ್ಯಕ್ಕೆ ಆರುವ ಲಕ್ಷಣ ಕಾಣ್ತಿಲ್ಲ. ಇದಕ್ಕೆ ಪುರಾವೆ ಎನ್ನುವಂತೆ ರಜತ್ ವಿರುದ್ಧ ಬೆದರಿಕೆ ಮತ್ತು ನಿಂದನೆ ಆರೋಪದಡಿ ಎಫ್‌ಐಆರ್ ದಾಖಲಾಗಿದೆ.

ಬೆಂಗಳೂರಿನ ಕೆ.ಆರ್. ಪುರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ರಜತ್ ವಿರುದ್ದ ಸಾಮಾಜಿಕ ಕಾರ್ಯಕರ್ತ ಗಿರೀಶ್ ಕುಮಾರ್ ದೂರು ನೀಡಿದ್ದಾರೆ.

ಆ ಪ್ರಕಾರ ರಜತ್ ಫೋನ್ ಮಾಡಿ ಗಿರೀಶ್ ಕುಮಾರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಪ್ರಾಣ ಬೆದರಿಕೆಯನ್ನು ಹಾಕಿದ್ದಾರೆ. ಇನ್ನೂ ಡಾಗ್ ಸತೀಶ್ ಮತ್ತು ಗಿರೀಶ್ ಕುಮಾರ್ ಅವರ ನಡುವಿನ ಆತ್ಮೀಯತೆಯ ಕಥೆ ಗೊತ್ತಿಲ್ಲವಾದರೂ ಸದ್ಯ ಗಿರೀಶ್ ಕುಮಾರ್ ಅವರ ದೂರಿನ ಅನ್ವಯ ಡಾಗ್ ಸತೀಶ್ ಜೊತೆಗಿನ ಸ್ನೇಹ ಕಡಿದುಕೊಳ್ಳುವಂತೆ ರಜತ್ ತಾಕೀತು ಮಾಡಿದ್ದಾರೆ.

ಕೇವಲ ಕರೆ ಮಾಡುವುದಲ್ಲದೇ ಮೆಸೇಜ್ ಮೂಲಕ ಕೂಡ ರಜತ್ ಬೆದರಿಕೆಯನ್ನು ಹಾಕಿದ್ಧಾರೆ ಎಂದು ಗಿರೀಶ್ ಕುಮಾರ್ ತಮ್ಮ ದೂರಿನಲ್ಲಿ ಹೇಳಿದ್ದು ಸರ್ ನಾನು ರಜತ್ ಬುಜಿ, ಕಾಲ್ ಮಾಡ್ತಿದ್ದೀನಿ ಕಾಲ್ ಬ್ಯಾಕ್ ಮಾಡ್ತೀರಾ.. ಇಲ್ಲ ನಾವೇ ಒಳಗೆ ಕಳುಹಿಸಬೇಕಾ? ಎಂದು ಸಂದೇಶವನ್ನು ರಜತ್ ತಮಗೆ ಕಳುಹಿಸಿದ್ದಾರೆ. ಈ ಮೂಲಕ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ಧಾರೆ.

Bigg Boss Rajath Kishan Booked FIR Filed Over Dog Satish Dispute

ಕೇವಲ ರಜತ್ ಮಾತ್ರವಲ್ಲದೇ ಕಿರಣ್ ಎಂಬುವರು ಕೂಡ ತಮಗೆ ರಜತ್ ಜೊತೆ ಸೇರಿ ಧಮ್ಕಿ ಹಾಕಿದ್ಧಾರೆ ಎಂದು ಗಿರೀಶ್ ಕುಮಾರ್ ದೂರು ನೀಡಿದ ಹಿನ್ನೆಲೆ, ಸದ್ಯ ಎ1 ಆರೋಪಿಯಾಗಿ ರಜತ್ ಅವರನ್ನು ಮತ್ತು ಕಿರಣ್ ಅವರನ್ನು ಎ2 ಆರೋಪಿಯನ್ನಾಗಿ ಮಾಡಲಾಗಿದೆ.

ಕೆ.ಆರ್. ಪುರಂ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 351(2) (ಕ್ರಿಮಿನಲ್ ಬೆದರಿಕೆ) ಮತ್ತು 352 (ಅಪಮಾನ ಅಥವಾ ನಿಂದನೆ) ಅಡಿಯಲ್ಲಿ ರಜತ್ ಹಾಗೂ ಕಿರಣ್ ಎಂಬುವವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದು, ಗಿರೀಶ್ ಅವರ ಜೊತೆ ಮಾತನಾಡಿದ್ದು ನಿಜಕ್ಕೂ ರಜತ್ ಅವ್ರೇನಾ..? ಅಥವಾ ರಜತ್ ಅವರ ಹೆಸರಿಗೆ ಮಸಿ ಬಳಿಯುವ ಪ್ರಯತ್ನವನ್ನು ಯಾರಾದರೂ ಮಾಡುತ್ತಿದ್ದಾರಾ ಎಂದು ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ. ರಜತ್ ಮತ್ತು ಕಿರಣ್ ಅವರಿಗೆ ನೋಟಿಸ್ ನೀಡಿ ಮುಂಬರುವ ದಿನಗಳಲ್ಲಿ ವಿಚಾರಣೆಗೆ ಕೆ ಆರ್ ಪುರಂ ಪೊಲೀಸರು ಕರೆಯುವ ಸಾಧ್ಯತೆ ಇದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಜತ್ ಸದ್ಯ ಯಾವುದೇ ಪ್ರತಿಕ್ರಿಯೆಯನ್ನು ಮಾಧ್ಯಮದವರಿಗೆ ನೀಡಿಲ್ಲ. ಡಾಗ್ ಸತೀಶ್ ಕೂಡ ಈ ಪ್ರಕರಣದ ಕುರಿತು ಇನ್ನೂ ಮಾತನಾಡಿಲ್ಲ.

More from Filmibeat

English summary
Bigg Boss fame Rajath Kishan in legal trouble! An FIR has been lodged following a heated confrontation involving Dog Satish and a local activist. Get the full details.
Read more about: bigg boss biggboss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X