»   » ಕಡೆಗೂ ತಲೆಬಾಗಿ ವಿಡಿಯೋ ಮೂಲಕ ದರ್ಶನ್ ಗೆ ಕ್ಷಮೆ ಕೇಳಿದ ಸಂಜನಾ.!

ಕಡೆಗೂ ತಲೆಬಾಗಿ ವಿಡಿಯೋ ಮೂಲಕ ದರ್ಶನ್ ಗೆ ಕ್ಷಮೆ ಕೇಳಿದ ಸಂಜನಾ.!

Posted By:
Subscribe to Filmibeat Kannada

''ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಮಾತನಾಡುವವರು ಥರ್ಡ್ ಕ್ಲಾಸ್ ಜನ. ಅಂಥವರ ಬಳಿ ನಾನು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ನನಗೆ ದರ್ಶನ್ ಸಿಕ್ಕಾಗ ಅವರಿಗೆ ನಡೆದ ವಿಷಯವನ್ನು ಹೇಳುತ್ತೇನೆ'' ಎಂದು ಮಧ್ಯಾಹ್ನವಷ್ಟೇ 'ದಿಗ್ವಿಜಯ ನ್ಯೂಸ್' ಚಾನೆಲ್ ಜೊತೆಗೆ ಕಡ್ಡಿ ತುಂಡು ಮಾಡಿದ ಹಾಗೆ ಖಡಕ್ ಆಗಿ ಮಾತನಾಡಿದ ಸಂಜನಾ ಇದೀಗ ಸಂಜೆ ಕೆಂಪಾಗುತ್ತಿದ್ದಂತೆಯೇ.... ಸೂರ್ಯ ತಂಪಾಗುತ್ತಿದ್ದಂತೆಯೇ... ಯು-ಟರ್ನ್ ಹೊಡೆದುಕೊಂಡು ಬಂದು ಕ್ಷಮೆ ಕೇಳಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ 'ಡಿ' ಬಾಯ್ಸ್ ಗೆ 'ಬಿಗ್ ಬಾಸ್' ಸಂಜನಾ ಕ್ಷಮೆ ಕೋರಿದ್ದಾರೆ.

ವಿಡಿಯೋ ಮೂಲಕ ಕ್ಷಮೆ ಕೇಳಿದ ಸಂಜನಾ

''ಐ ಆಮ್ ಸಾರಿ... ದರ್ಶನ್ ಸರ್ ಅಥವಾ ಅವರ ಫ್ಯಾನ್ಸ್ ಗೆ ಹರ್ಟ್ ಮಾಡುವ ಯಾವ ಉದ್ದೇಶವೂ ಇರಲಿಲ್ಲ'' ಎಂದು ವಿಡಿಯೋ ಮೂಲಕ ಸಂಜನಾ 'ಸಾರಿ' ಕೇಳಿದ್ದಾರೆ.

ದರ್ಶನ್ ಸಿನಿಮಾದಲ್ಲಿ ಬಿಲ್ಡಪ್ ಇರುತ್ತದೆ

''Rapid Fire ರೌಂಡ್ ನಲ್ಲಿ ಅಕುಲ್ ನನ್ನನ್ನ 'ಬಿಲ್ದಪ್' ಎನ್ನುವ ಪದ ಕೇಳಿದರು. ನಾನು ಕರೆಕ್ಟಾಗಿ ಮೆನ್ಷನ್ ಮಾಡಿದ್ದೇನೆ. ದರ್ಶನ್ ರವರ ಚಿತ್ರಗಳಲ್ಲಿ ತುಂಬಾ ಬಿಲ್ಡಪ್ ಇರುತ್ತೆ. ಹೀಗಾಗಿ ಅವರ (ದರ್ಶನ್) ಹೆಸರನ್ನು ಹೇಳಿದೆ. ಅದು ಇಷ್ಟು ಸೀರಿಯಸ್ ಆಗುತ್ತೆ ಅಂತ ಭಾವಿಸಿರಲಿಲ್ಲ. ಇದಕ್ಕೆ ನನ್ನ ಕಡೆಯಿಂದ ಕ್ಷಮೆ ಇರಲಿ'' - ಸಂಜನಾ

ಐ ಆಮ್ ಸಾರಿ

''ಯಾರ ಮನಸ್ಸಿಗೂ ನೋವು ಮಾಡುವ ಉದ್ದೇಶ ನನಗಿರಲಿಲ್ಲ. ನನ್ನಿಂದ ಅವರಿಗೆ (ದರ್ಶನ್) ಬೇಸರ ಆಗಿದ್ದರೆ, ಐ ಆಮ್ ಸಾರಿ''

ವಿಡಿಯೋ ನೋಡಿ....

ದರ್ಶನ್ ಹಾಗೂ ಅವರ ಅಭಿಮಾನಿಗಳಿಗೆ ಸಂಜನಾ 'ಸಾರಿ' ಕೇಳಿರುವ ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ....

English summary
'Bigg Boss' Sanjana apologizes to Darshan and his Fans regarding her statement against Challenging Star in Colors Super Channel's Popular show 'Super Talk Time'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada