ದರ್ಶನ್ ಗೆ 'ಬಿಲ್ಡಪ್' ಅಂತ ಕರೆದು ದೊಡ್ಡ ಎಡವಟ್ಟು ಮಾಡಿಕೊಂಡ ಸಂಜನಾ.!

By Harshitha

ಇರಲಾರದವರು ಹುಡುಕ್ಕೊಂಡ್ ಬಂದು ಇರುವೆ ಬಿಟ್ಟುಕೊಳ್ಳುವುದು ಅಂದ್ರೆ ಇದೇ ಇರಬೇಕು. ಅಲ್ಲ... ಖಾಸಗಿ ವಾಹಿನಿಯ ಟಾಕ್ ಶೋ ಒಂದರಲ್ಲಿ ರಾಕಿಂಗ್ ಸ್ಟಾರ್ ಯಶ್ ಗೆ 'ಮಿಸ್ಟರ್ ಶೋ ಆಫ್' ಅಂತ ನಟಿ ರಶ್ಮಿಕಾ ಮಂದಣ್ಣ ಕಾಮೆಂಟ್ ಮಾಡಿದ್ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಆದ ರಗಳೆ ರಂಪಾಟವನ್ನ ಇನ್ನೂ ಯಾರೂ ಮರೆತಿಲ್ಲ.

ಅಷ್ಟರಲ್ಲೇ 'ಬಿಗ್ ಬಾಸ್' ಸಂಜನಾ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ 'ಬಿಲ್ಡಪ್' ಎಂದು ಕಾಮೆಂಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಮಹಾ ಯುದ್ಧಕ್ಕೆ ನಾಂದಿ ಹಾಡಿದ್ದಾರೆ.

ಅಂದು ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಭುಗಿಲೆದ್ದ ಬಿರುಗಾಳಿಯಿಂದ ಬೇಸರಗೊಂಡ ರಶ್ಮಿಕಾ ಮಂದಣ್ಣ ಬಹಿರಂಗವಾಗಿ ಯಶ್ ಹಾಗೂ ಅವರ ಅಭಿಮಾನಿಗಳನ್ನ ಕ್ಷಮೆ ಕೇಳಿ ವಿವಾದಕ್ಕೆ ಫುಲ್ ಸ್ಟಾಪ್ ಇಟ್ಟಿದ್ದರು.

'ಮಾತು ಮನೆ ಕೆಡಿಸುತ್ತೆ, ತೂತು ಒಲೆ ಕೆಡಿಸುತ್ತೆ' ಎನ್ನುವ ಹಾಗೆ 'ಮಿಸ್ಟರ್ ಶೋ ಆಫ್ ವಿವಾದ' ಬೇಕಾಬಿಟ್ಟಿ ಕಾಮೆಂಟ್ ಮಾಡುವ ಸೆಲೆಬ್ರಿಟಿಗಳಿಗೆ ತಕ್ಕ ಪಾಠ ಕಲಿಸಿತ್ತು. ಇದೆಲ್ಲ ಗೊತ್ತಿದ್ದರೂ 'ಬಿಗ್ ಬಾಸ್' ಸಂಜನಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಕಾಮೆಂಟ್ ಮಾಡಿ ದೊಡ್ಡ ಎಡವಟ್ಟು ಮಾಡಿಕೊಂಡಿದ್ದಾರೆ. ಸಂಪೂರ್ಣ ವರದಿ ಫೋಟೋ ಸ್ಲೈಡ್ ಗಳಲ್ಲಿ....

'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಸಂಜನಾ

'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಸಂಜನಾ

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ 'ಬಿಗ್ ಬಾಸ್' ಖ್ಯಾತಿಯ ಸಂಜನಾ ಭಾಗವಹಿಸಿದ್ದರು. ಅವರೊಂದಿಗೆ 'ಒಳ್ಳೆ ಹುಡುಗ' ಪ್ರಥಮ್ ಹಾಗೂ 'ಕಿರಿಕ್' ಕೀರ್ತಿ ಕೂಡ ಪಾಲ್ಗೊಂಡಿದ್ದರು.

Rapid Fire ರೌಂಡ್ ನಲ್ಲಿ....

Rapid Fire ರೌಂಡ್ ನಲ್ಲಿ....

ಮಾತುಕತೆ, ಕಾಲೆಳೆತ, ಆಟವೆಲ್ಲ ಮುಗಿದ ಬಳಿಕ ನಿರೂಪಕ ಅಕುಲ್ ಬಾಲಾಜಿ Rapid Fire ರೌಂಡ್ ಗೆ ಚಾಲನೆ ನೀಡಿದರು.

ಪ್ರಶ್ನೆಗಳು ಹೀಗಿದ್ದವು...

ಪ್ರಶ್ನೆಗಳು ಹೀಗಿದ್ದವು...

''ಈ ಕಳೆಗಿನ ಪದಗಳನ್ನು ಕೇಳಿಸಿಕೊಂಡಾಗ ಯಾವ ನಟರು ನೆನಪಾಗುತ್ತಾರೆ'' ಎಂದು 'ಪಬ್ಲಿಸಿಟಿ ಸ್ಟಂಟ್', 'ಮೊಸಳೆ ಕಣ್ಣೀರು', 'ಶೋ ಆಫ್', 'ಬಿಲ್ಡಪ್' ಎಂಬ ನಾಲ್ಕು ಪದಗಳನ್ನ ಸಂಜನಾಗೆ ಅಕುಲ್ ಬಾಲಾಜಿ ಕೇಳಿದರು.

ಸಂಜನಾ ಉತ್ತರ ಹೀಗಿತ್ತು...

ಸಂಜನಾ ಉತ್ತರ ಹೀಗಿತ್ತು...

'ಪಬ್ಲಿಸಿಟಿ ಸ್ಟಂಟ್' ಅಂತ ಅಕುಲ್ ಕೇಳಿದ ಕೂಡಲೆ ಸಂಜನಾ 'ಪ್ರಥಮ್' ಅಂತ ಉತ್ತರ ಕೊಟ್ಟರು. 'ಮೊಸಳೆ ಕಣ್ಣೀರು' ಎಂದು ಅಕುಲ್ ಕೇಳಿದಾಗ ''ನನಗೆ ಅಷ್ಟು ಪರ್ಸನಲ್ ಆಗಿ ಯಾರೂ ಗೊತ್ತಿಲ್ಲ' ಎನ್ನುತ್ತಲೇ 'ನಿರಂಜನ್' ಹೆಸರನ್ನ ಸಂಜನಾ ತೆಗೆದುಕೊಂಡರು.

ಇಲ್ಲೂ 'ಶೋ ಆಫ್' ಪ್ರಶ್ನೆ

ಇಲ್ಲೂ 'ಶೋ ಆಫ್' ಪ್ರಶ್ನೆ

'ಶೋ ಆಫ್' ಯಾರು ಅಂತ ಅಕುಲ್ ಬಾಲಾಜಿ ಕೇಳಿದಕ್ಕೆ ನಟ, ನಿರ್ಮಾಪಕ, ನಿರ್ದೇಶಕ ಮೋಹನ್ ಹೆಸರನ್ನ ಸಂಜನಾ ತೆಗೆದುಕೊಂಡರು.

'ಬಿಲ್ಡಪ್' ಯಾರು.?

'ಬಿಲ್ಡಪ್' ಯಾರು.?

'ಬಿಲ್ಡಪ್' ಅಂತ ಅಕುಲ್ ಕೇಳುತ್ತಿದ್ದಂತೆಯೇ, ''ಮೇ ಬಿ ಸ್ವಲ್ಪ ದರ್ಶನ್ ಸರ್'' ಅಂತ ಸಂಜನಾ ಹೇಳಿಬಿಟ್ಟರು.

ದರ್ಶನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿ ಆಗಿರುವ ಸಂಜನಾ

ದರ್ಶನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿ ಆಗಿರುವ ಸಂಜನಾ

ದರ್ಶನ್ ಗೆ 'ಬಿಲ್ಡಪ್' ಅಂತ ಟೈಟಲ್ ಕೊಟ್ಟಿರುವ ಸಂಜನಾ ಇದೀಗ ಚಾಲೆಂಜಿಂಗ್ ಸ್ಟಾರ್ ಅಪ್ಪಟ ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಂಜನಾ ವಿರುದ್ಧ ದರ್ಶನ್ ಫ್ಯಾನ್ಸ್ ದಂಗೆ ಎದ್ದಿದ್ದಾರೆ.

ಸಂಜನಾಗೆ ಛೀಮಾರಿ

ಸಂಜನಾಗೆ ಛೀಮಾರಿ

ಕನ್ನಡ ಚಿತ್ರರಂಗದಲ್ಲಿ ಇನ್ನೂ ನೆಲೆ ಕಂಡುಕೊಳ್ಳದೇ ವಿವಾದಗಳಿಂದಲೇ ಸೌಂಡ್ ಮಾಡುತ್ತಿರುವ ಸಂಜನಾಗೆ ಸೋಷಿಯಲ್ ಮೀಡಿಯಾದಲ್ಲಿ ಅನೇಕರು ಛೀಮಾರಿ ಹಾಕುತ್ತಿದ್ದಾರೆ.

ಟ್ರೋಲ್ಸ್ ಶುರು ಆಗಿದೆ

ಟ್ರೋಲ್ಸ್ ಶುರು ಆಗಿದೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ 'ಬಿಲ್ಡಪ್' ಎಂದಿರುವ ಸಂಜನಾ ವಿರುದ್ಧ ಯರ್ರಾಬಿರ್ರಿ ಟ್ರೋಲ್ಸ್ ಶುರು ಆಗಿದೆ.

More from Filmibeat

English summary
Sanjana Chidanand of 'Bigg Boss' Fame calls Challenging Star Darshan as 'Build Up' in Colors Super Channel's Popular show 'Super Talk Time'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X