»   » ಕೆಟ್ಟ ಸಂಜನಾ ಗ್ರಹಚಾರ: ಫೇಸ್ ಬುಕ್ ನಿಂದ ಮಂಗಮಾಯ.!

ಕೆಟ್ಟ ಸಂಜನಾ ಗ್ರಹಚಾರ: ಫೇಸ್ ಬುಕ್ ನಿಂದ ಮಂಗಮಾಯ.!

Posted By:
Subscribe to Filmibeat Kannada

ಅದಾಗಲೇ ಒಮ್ಮೆ 'ಟ್ರೋಲ್' ಪೇಜ್ ಗಳ ಕೆಂಗಣ್ಣಿಗೆ ಗುರಿಯಾಗಿ, ಯದ್ವಾತದ್ವಾ ಕಾಲೆಳೆಸಿಕೊಂಡಿದ್ದ ಸಂಜನಾ ಗ್ರಹಚಾರ ನಿನ್ನೆ ರಾತ್ರಿ ಮತ್ತೆ ಕೆಟ್ಟಿತ್ತು.

ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ, ಸಂಜನಾಗೆ ಬೈಗುಳಗಳ ಸುರಿಮಳೆ ಶುರು ಆಯ್ತು.

'ಬಾತ್ ರೂಂ' ಸಂಜನಾ ವಿರುದ್ಧ ದಂಗೆ ಎದ್ದ ದರ್ಶನ್ ಫ್ಯಾನ್ಸ್.!

Rapid Fire ರೌಂಡ್ ನಲ್ಲಿ ದರ್ಶನ್ ರವರನ್ನ 'ಬಿಲ್ಡಪ್' ಅಂತ ಕರೆಯುತ್ತಿದ್ದಂತೆಯೇ, ಸಂಜನಾ ವಿರುದ್ಧ 'ಡಿ' ಬಾಯ್ಸ್ ರೊಚ್ಚಿಗೆದ್ದರು. ಫೇಸ್ ಬುಕ್ ನಲ್ಲಿ ಕಾಮೆಂಟ್ ಗಳ ಪ್ರವಾಹ ಆರಂಭ ಆಯ್ತು.

 'Bigg Boss' Sanjana deactivates her Facebook official Account

'ಹೀಲ್ಸ್ ಚಪ್ಪಲಿ ಹಾಕೊಂಡ್ರೂ, 'ಡಿ' ಬಾಸ್ ಹೈಯ್ಟ್ ಗೆ ಬರಲ್ಲ, ಬಿಲ್ಡಪ್ ಅಂತಿಯಾ?'

''ಸಂಜನಾ ಕ್ಷಮೆ ಕೇಳಬೇಕು'' ಅಂತ ದರ್ಶನ್ ಅಭಿಮಾನಿಗಳು ಆಗ್ರಹಿಸಿದ್ದರೂ, 'ಅದು ನನ್ನ ವೈಯುಕ್ತಿಕ ಅಭಿಪ್ರಾಯ' ಎಂದು ಫೇಸ್ ಬುಕ್ ನಲ್ಲಿ ಸಂಜನಾ ಬರೆದುಕೊಂಡರು.

ದರ್ಶನ್ ಗೆ 'ಬಿಲ್ಡಪ್' ಅಂತ ಕರೆದು ದೊಡ್ಡ ಎಡವಟ್ಟು ಮಾಡಿಕೊಂಡ ಸಂಜನಾ.!

ಅದಾದ್ಮೇಲೆ ನೋಡಿ 'ಟ್ರೋಲ್'ಗಳ ಸುನಾಮಿ ಸ್ಟಾರ್ಟ್ ಆಗಿದ್ದು. 'ಟ್ರೋಲ್'ಗಳ ಕಿರಿಕಿರಿ ತಾಳಲಾರದೆ ಫೇಸ್ ಬುಕ್ ನಿಂದ ಸಂಜನಾ ಹೊರ ಬಂದಿದ್ದಾರೆ. ಸಂಜನಾ ರವರ ಅಫೀಶಿಯಲ್ ಅಕೌಂಟ್ ಡಿ-ಆಕ್ಟಿವೇಟ್ ಆಗಿದೆ.

ಫೇಸ್ ಬುಕ್ ನಲ್ಲಿ ದರ್ಶನ್ ಫ್ಯಾನ್ಸ್ ಸಿಡಿದೆದ್ದು ಟ್ರೋಲ್/ಕಾಮೆಂಟ್ ಮಾಡುತ್ತಿದ್ದರೆ, ಇತ್ತ ಫೇಸ್ ಬುಕ್ ಅಕೌಂಟ್ ಬ್ಲಾಕ್ ಮಾಡಿ ಸಂಜನಾ ಮಾತ್ರ ಹಾಯಾಗಿದ್ದಾರೆ.

English summary
'Bigg Boss' Sanjana deactivates her Facebook official Account after her controversial statement over Challenging Star Darshan in Colors Super Channel's Popular show 'Super Talk Time'.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada