»   » 'ಹೀಲ್ಸ್ ಚಪ್ಪಲಿ ಹಾಕೊಂಡ್ರೂ, 'ಡಿ' ಬಾಸ್ ಹೈಯ್ಟ್ ಗೆ ಬರಲ್ಲ, ಬಿಲ್ಡಪ್ ಅಂತಿಯಾ?'

'ಹೀಲ್ಸ್ ಚಪ್ಪಲಿ ಹಾಕೊಂಡ್ರೂ, 'ಡಿ' ಬಾಸ್ ಹೈಯ್ಟ್ ಗೆ ಬರಲ್ಲ, ಬಿಲ್ಡಪ್ ಅಂತಿಯಾ?'

Posted By:
Subscribe to Filmibeat Kannada

ಬಿಗ್ ಬಾಸ್' ಮನೆಯಲ್ಲಿ ಇರುವಾಗ ಒಂದು ಆಪಲ್ ಕಟ್ ಮಾಡೋಕೂ ತಿಣುಕಾಡುತ್ತಿದ್ದ ಸಂಜನಾ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ 'ಬಿಲ್ಡಪ್' ಅಂತ ಬಿರುದು ಕೊಟ್ಟಿರೋದ್ರಿಂದ 'ಟ್ರೋಲ್' ಹುಡುಗರ ಪಿತ್ತ ನೆತ್ತಿಗೇರಿದೆ. ಹೀಗಾಗಿ, ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ 'ಟ್ರೋಲ್ಸ್' ಮೂಲಕ ಸಂಜನಾರನ್ನ 'ಡಿ' ಬಾಸ್ ಫ್ಯಾನ್ಸ್ ಚೆನ್ನಾಗಿ ರುಬ್ಬುತ್ತಿದ್ದಾರೆ.

ದರ್ಶನ್ ಗೆ 'ಬಿಲ್ಡಪ್' ಅಂತ ಕರೆದು ದೊಡ್ಡ ಎಡವಟ್ಟು ಮಾಡಿಕೊಂಡ ಸಂಜನಾ.!

ದರ್ಶನ್ ರವರನ್ನ ಬಹಿರಂಗವಾಗಿ ಕ್ಷಮೆ ಕೇಳುವವರೆಗೂ 'ಟ್ರೋಲ್'ಗಳ ಮೂಲಕ ರುಬ್ಬಿಂಗ್ ಸೆಷನ್ ನಡೆಯುತ್ತಲೇ ಇರುತ್ತೆ ಎಂಬ ಎಚ್ಚರಿಕೆಯನ್ನೂ ಸಂಜನಾಗೆ 'ಕಟ್ಟಾ' ಅಭಿಮಾನಿಗಳು ಕೊಟ್ಟಿದ್ದಾರೆ.

'ಬಾತ್ ರೂಂ' ಸಂಜನಾ ವಿರುದ್ಧ ದಂಗೆ ಎದ್ದ ದರ್ಶನ್ ಫ್ಯಾನ್ಸ್.!

ಸಂಜನಾ ವಿರುದ್ಧ ನಿನ್ನೆ ರಾತ್ರಿಯಿಂದ ಶುರು ಆಗಿರುವ ಕೆಲ ಆಯ್ದ ಟ್ರೋಲ್ ಗಳು ಇಲ್ಲಿದೆ ನೋಡಿ...

ನೆಟ್ಟಗೆ ಆಪಲ್ ಕಟ್ ಮಾಡೋಕೆ ಬರಲ್ಲ...

''ನೆಟ್ಟಗೆ ಆಪಲ್ ಕಟ್ ಮಾಡೋಕೆ ಬರಲ್ಲ, ದರ್ಶನ್ ಪಟ್ಟಿರುವ ಕಷ್ಟದಲ್ಲಿ 1% ಕಷ್ಟ ಪಟ್ಟಿಲ್ಲ. ದರ್ಶನ್ ಗಿರುವಷ್ಟು 1% ಫ್ಯಾನ್ಸ್ ಫಾಲೋವಿಂಗ್ ಇಲ್ಲ. ಹೀಗಿರುವಾಗ ಡಿ ಬಾಸ್ ಬಗ್ಗೆ ಮಾತನಾಡಬೇಕಾ.?'' ಎಂಬುದು 'ಟ್ರೋಲ್' ಹುಡುಗರ ಪ್ರಶ್ನೆ.

ಹಾಕೊಂಡು ರುಬ್ಬಿ

ಯಾವುದೇ ಟಾಪಿಕ್ ಇಲ್ಲದೇ, ಟ್ರೋಲ್ ಮಾಡಲು ಪರದಾಡುತ್ತಿದ್ದವರಿಗೆ ಈಗ ಬಿಸಿ ಬಿಸಿ ಕಜ್ಜಾಯ ಸಿಕ್ಕಿದಂತಾಗಿದೆ.

ತಿರುಪೆ ಶೋಕಿ.!

ಸಂಜನಾಗೆ 'ಟ್ರೋಲ್' ಹುಡುಗರು ಹಿಗ್ಗಾಮುಗ್ಗಾ ಜಾಡಿಸುತ್ತಿರುವುದು ಹೀಗೆ...

ಅಂದು ರಶ್ಮಿಕಾ, ಇಂದು ಸಂಜನಾ

ಅಂದು 'ಯಶ್ ಶೋ ಆಫ್' ಅಂತ ರಶ್ಮಿಕಾ ಹೇಳಿದ್ದರು. ಇಂದು 'ದರ್ಶನ್ ಬಿಲ್ಡಪ್' ಅಂತ ಸಂಜನಾ ಕಾಮೆಂಟ್ ಮಾಡಿದ್ದಾರೆ.

ರಶ್ಮಿಕಾ ಮಾತ್ರ ಯಾಕೆ ಮಜಾ ತೆಗೆದುಕೊಳ್ಳಬೇಕು.!

''ರಶ್ಮಿಕಾ ಮಾತ್ರ ಯಾಕೆ ಮಜಾ ತೆಗೆದುಕೊಳ್ಳಬೇಕು. ನಾನು ತೆಗೆದುಕೊಳ್ಳುತ್ತೇನೆ ಎಂದುಕೊಂಡು ಸಂಜನಾ ದರ್ಶನ್ ಬಗ್ಗೆ ಮಾತನಾಡಿದ್ರಾ.?''

ಬೇಕಿತ್ತಾ ಸಂಜನಾ ಇದೆಲ್ಲ.?

ಸಂಜನಾರ ಸಂಭಾವನೆ ಮ್ಯಾಟರ್ ನ ಎಳೆದು ತಂದು ಕ್ಷಮೆ ಕೇಳುವಂತೆ ದರ್ಶನ್ ಅಭಿಮಾನಿಗಳು ಒತ್ತಾಯಿಸಿದ್ದಾರೆ.

ದರ್ಶನ್ ಫ್ಯಾನ್ಸ್ ಗೆ ಎಷ್ಟು ಇರಬೇಡ.?

''ಅಪ್ಪ-ಅಮ್ಮನ ದುಡ್ಡಿನಲ್ಲಿ ಸುಣ್ಣ ಬಣ್ಣ ಬಳ್ಕೊಳ್ಳೋ ನಿನೆಗೆ ಇಷ್ಟು ಇರಬೇಕಾದರೆ, ಜೀವನ ಪೂರ್ತಿ ತನ್ನ ಭಕ್ತರಿಗಾಗಿ ಬಣ್ಣ ಹಚ್ಚುವ 'ಡಿ ಬಾಸ್' ಫ್ಯಾನ್ಸ್ ಗೆ ಎಷ್ಟು ಇರಬೇಡ.?'' ಎಂಬುದು ದರ್ಶನ್ ಅಭಿಮಾನಿಗಳ ಅಭಿಪ್ರಾಯ.

ಡಿ ಬಾಸ್ ಹೈಯ್ಟ್ ಗೆ ಬರಲ್ಲ

'ಟ್ರೋಲ್ ಮಗಾ' ಪೇಜ್ ನವರು ರೊಚ್ಚಿಗೆದ್ದು ಮಾಡಿರುವ ಟ್ರೋಲ್ ಇದು.

ಏಷಿಯನ್ ಪೇಂಟ್ಸ್

ಸಂಜನಾರ ಮೇಕಪ್ ಕುರಿತು 'ಟ್ರೋಲ್'ನವರು ಆಡಿಕೊಳ್ಳುತ್ತಿದ್ದಾರೆ.

ಗೂಬೆಯ ಕಲರ್ ಝೆರಾಕ್ಸ್

ಗೂಬೆಯನ್ನ ಕಲರ್ ಝೆರಾಕ್ಸ್ ಮಾಡಿದ್ರೆ ಏನಾಗುತ್ತೆ.?

ಫೇಸ್ ಬುಕ್ ಬಿಟ್ಟು ಓಡಿ ಹೋಗಬೇಕು.!

ದರ್ಶನ್ ಬಗ್ಗೆ ಮಾತನಾಡಿದ್ರೆ, ಸಂಜನಾ ಫೇಸ್ ಬುಕ್ ಬಿಟ್ಟು ಓಡಿಹೋಗಬೇಕಂತೆ.!

ಮೇಕಪ್ ಮಾಡಿ ಶೋ ಕೊಟ್ಟರೆ ಸಾಕಾ.?

''ಕೆ.ಜಿ ಗಟ್ಟಲೆ ಮೇಕಪ್ ಮಾಡಿ ಶೋ ಕೊಡುವ ಸಂಜನಾ, ನೂರಾರು ಜನಕ್ಕೆ ಸಹಾಯ ಮಾಡುವ ದರ್ಶನ್ ಬಗ್ಗೆ ಮಾತನಾಡುವುದು ಸರಿಯೇ.?''

ಸಂಜನಾಗೆ ಶ್ರದ್ಧಾಂಜಲಿ

ದರ್ಶನ್ ಅಭಿಮಾನಿಗಳು ಆಗಲೇ ಸಂಜನಾಗೆ ಶ್ರದ್ಧಾಂಜಲಿ ಅರ್ಪಿಸಿಬಿಟ್ಟಿದ್ದಾರೆ.

'ಬಿಗ್ ಬಾಸ್' ಸಂಜನಾ ಅಲ್ಲ.!

ಆಕೆ 'ಬಿಗ್ ಬಾಸ್' ಸಂಜನಾ ಅಲ್ಲವಂತೆ. ಬಾತ್ ರೂಂ ಸಂಜನಾ ಅಂತೆ.!

ಡವ್ ರಾಣಿ ಸಂಜನಾ.!

ಇಡೀ ದೇಶದಲ್ಲಿ ಡವ್ ರಾಣಿ ಯಾರು ಅಂದ್ರೆ ಅದು ಸಂಜನಾ ಅಂತೆ.!

ಆಪಲ್ ಕಟ್ ಮಾಡುವುದನ್ನು ಕಲಿಯಮ್ಮ.!

ಸಂಜನಾಗೆ ದರ್ಶನ್ ಫ್ಯಾನ್ಸ್ ಕೊಟ್ಟಿರುವ ಸಲಹೆ ಇದು.

'ಮೈಸೂರು ರತ್ನ' ದರ್ಶನ್

ಒಂದ್ಕಡೆ 'ಮೈಸೂರು ರತ್ನ' ಎಂಬ ಬಿರುದು ದರ್ಶನ್ ಗೆ ಸಿಕ್ಕಿದ್ರೆ, ದರ್ಶನ್ 'ಬಿಲ್ಡಪ್' ಅಂತ ಸಂಜನಾ ಕಾಮೆಂಟ್ ಮಾಡಿದ್ದಾರೆ.

ಕ್ಷಮೆ ಕೇಳಿದರೆ ಸರಿ...

ದರ್ಶನ್ ರವರನ್ನ ಸಂಜನಾ ಕ್ಷಮೆ ಕೇಳಲೇಬೇಕು ಎಂಬುದು 'ಡಿ' ಬಾಸ್ ಅಭಿಮಾನಿಗಳ ಆಗ್ರಹ.

ಮಚ್ಚು ಕೊಡ್ರೋ.!

ಒಂದು ವೇಳೆ ಇದೇ ಮಾತನ್ನ ಸೃಜನ್ ಮುಂದೆ ಸಂಜನಾ ಹೇಳಿದಿದ್ರೆ...?

ಇನ್ನೂ ಇವೆ.!

ಸಂಜನಾ ವಿರುದ್ಧ ಟ್ರೋಲ್ ಗಳು ಇನ್ನೂ ಸಾಕಷ್ಟಿವೆ. ಇವೆಲ್ಲ ಸ್ಯಾಂಪಲ್ ಅಷ್ಟೇ.

ವೈಯುಕ್ತಿಕ ಅಭಿಪ್ರಾಯ ಅಷ್ಟೇ

ಅದು ಸಂಜನಾ ರವರ ವೈಯುಕ್ತಿಕ ಅಭಿಪ್ರಾಯ ಆಗಿದ್ದರೂ, ಅದನ್ನ ಗೌರವಿಸಲು ದರ್ಶನ್ ಫ್ಯಾನ್ಸ್ ರೆಡಿ ಇಲ್ಲ.

ಸೃಷ್ಟಿಕರ್ತ

ದರ್ಶನ್ ಬಗ್ಗೆ ಸಂಜನಾ ಹೇಳಿಕೆ ಕೊಡಲು ಅಕುಲ್ ಬಾಲಾಜಿ ಕಾರಣ ಅಂತ ಅವರನ್ನೂ ಟ್ರೋಲ್ ಮಾಡಲಾಗುತ್ತಿದೆ.

ಪ್ರಾಬ್ಲಂ ಕ್ರಿಯೇಟ್ ಮಾಡೋದ್ಯಾಕೆ.?

ಇಂತಹ ಶೋ ಮಾಡೋದ್ಯಾಕೆ.? ವಿವಾದಾತ್ಮಕ ಪ್ರಶ್ನೆಗಳನ್ನು ಕೇಳೋದ್ಯಾಕೆ.? ಆಮೇಲೆ ಪ್ರಾಬ್ಲಂ ಕ್ರಿಯೇಟ್ ಮಾಡೋದ್ಯಾಕೆ ಎಂಬುದು ಕೆಲವರ ಪ್ರಶ್ನೆ.

English summary
'Bigg Boss' Sanjana is trolled on Social Media for her statement against Challenging Star Darshan in Colors Super Channel's Popular show 'Super Talk Time'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada