ರೀಲ್ ರಾಮಾಯಣದ ಲಕ್ಷ್ಮಣನ ಮನೆ ಸೊಸೆಯಾದ ಬಿಗ್ ಬಾಸ್ ಸ್ಫರ್ಧಿ, ಹಿಂದೂ ನಿರ್ಮಾಪಕನ ಜೊತೆ ಮದುವೆಯಾದ ಮುಸ್ಲಿಂ ನಟಿ,

ಪ್ರೀತಿ ಅಂದರೆ ಹಾಗೇ. ಅದಕ್ಕೆ ಕಣ್ಣಿಲ್ಲದಿದ್ದರೂ ಕಣ್ಣಿನ ತುಂಬಾ ಆಸೆ ಹುಟ್ಟಿಸುವ ಸಾಮರ್ಥ್ಯ ಇದೆ. ಪ್ರೀತಿ ಎನ್ನುವುದು ಕೇವಲ ಎರಡು ದೇಹಕ್ಕೆ ಸಂಬಂಧಿಸಿದ್ದಲ್ಲ. ಎರಡು ಮನಸ್ಸುಗಳು ಮುಕ್ತವಾಗಿ ಒಂದನ್ನೊಂದು ಅರಿತುಕೊಳ್ಳುವುದು. ಪ್ರೀತಿಗೆ ಎಲ್ಲರನ್ನು ಎಲ್ಲವನ್ನೂ ಜಯಿಸುವಂತಹ ನಿಗೂಢವಾದ ಶಕ್ತಿ ಇದೆ. ಪ್ರತಿಯೊಂದು ಧರ್ಮದಲ್ಲಿಯೂ ಈ ಪ್ರೀತಿಯ ಪರಿಕಲ್ಪನೆಗೆ ಅಪಾರವಾದ ಆದ್ಯತೆ ಇದೆ. ಇನ್ನು ನಿಜವಾದ ಪ್ರೀತಿಯ..

ಆಳಕ್ಕೆ ಇಳಿದು ನೋಡಿದಾಗ ಅದರ ಅರ್ಥ ಹುಡುಕುತ್ತಾ ಹೋದಾಗ ಪ್ರೀತಿ ಎನ್ನುವುದು ಮನಸಿಂದ ಬರಬೇಕೆ ಹೊರತು ಆ ಪ್ರೀತಿ ಒತ್ತಾಯ ಪೂರ್ವಕವಾಗಿರಬಾರದು ಎಂಬ ವಿಚಾರದ ಅರಿವು ಆಗುತ್ತೆ. ಇನ್ನೂ ಎಲ್ಲ ಜಾತಿಯಲ್ಲಿಯೂ ಪ್ರೀತಿ ಇದೆ, ಆದರೆ ಪ್ರೀತಿಗೆ ಜಾತಿ ಧರ್ಮ ಇಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಬೆಳ್ಳಿ ತೆರೆ ಇರಲಿ.. ಕಿರುತೆರೆ ಇರಲಿ.. ಹಲವರು ಧರ್ಮಕ್ಕಿಂತ ಪ್ರೀತಿ ದೊಡ್ಡದು ಎಂಬ ಸಂದೇಶವನ್ನು ಸಾರಿದ್ದಾರೆ. ಅಂತರ್ ಧರ್ಮಿಯ ಮದುವೆಯಾಗಿದ್ದಾರೆ. ಸಾರಾ ಖಾನ್ ಮತ್ತು ಕ್ರಿಶ್ ಪಾಠಕ್ ಇದಕ್ಕೆ ಸದ್ಯದ ತಾಜಾ ಉದಾಹರಣೆ.

Bigg Boss Sara Khan Becomes RAMAYAN s Lakshman Sunil Lahri Daughter-in-Law Weds Krish Pathak in Dual

ಹೌದು, ಸಾರಾ ಖಾನ್.. ಹಿಂದಿ ಕಿರುತೆರೆಯ ಪ್ರಖ್ಯಾತ ಹೆಸರು. ''ಲೈಫ್ ಓಕೆ''.. ''ಜುನೂನ್- ಐಸಿ ನಪ್‌ರಥ್ ತೋ ಕೈಸಾ ಇಷ್ಕ್''.. ''ಸಸುರಾಲ್ ಸಿಮರ್ ಕಾ''.. ಹೀಗೆ ಹಲವು ಧಾರಾವಾಹಿಯಲ್ಲಿ ಕಾಣಿಸಿಕೊಂಡಿರುವ ಸಾರಾಗೆ ''ಸಪ್ನಾ ಬಾಬುಲ್ ಕಾ.. ಬಿದಾಯಿ'' ಧಾರಾವಾಹಿ ಭಾರೀ ಜನಪ್ರಿಯತೆಯನ್ನು ತಂದು ಕೊಟ್ಟಿತ್ತು.

ಇನ್ನು ಕ್ರಿಶ್ ಪಾಠಕ್ ಬೆನ್ನ ಹಿಂದೆ ''ಯೇ ಜುಕಿ ಜುಕಿ ಸಿ ನಜರ್'' ಖ್ಯಾತಿ ಇದೆ. ನಿರ್ಮಾಪಕನಾಗಿ ಮತ್ತು ನಟನಾಗಿ ಕಿರುತೆರೆಯಲ್ಲಿ ಹೆಸರು ಮಾಡಿದವರು ಇವರು. ಎಲ್ಲಕ್ಕಿಂತ ಮುಖ್ಯವಾಗಿ ಈ ಕ್ರಿಶ್ ಪಾಠಕ್ ತಂದೆ ಬೇರೆ ಯಾರು ಅಲ್ಲ ಬದಲಿಗೆ ರಮಾನಂದ್ ಸಾಗರ್ ಅವರ ಜಗದ್ವಿಖ್ಯಾತ ಧಾರಾವಾಹಿ ''ರಾಮಾಯಣ''ದಲ್ಲಿ ಲಕ್ಷ್ಮಣನ ಪಾತ್ರವನ್ನು ಮಾಡಿದ್ದ ಸುನೀಲ್ ಲಹ್ರಿ.

''ರಾಮಾಯಣ''ದ ರಾಮ ಅರುಣ್ ಗೋವಿಲ್ ಮತ್ತು ಸೀತಾ ದೀಪಿಕಾ ಚಿಖಾಲಿಯಾ ಜೊತೆ ಅಯೋಧ್ಯೆಯ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಯಲ್ಲಿ ಸುನಿಲ್ ಲಹ್ರಿ ಕೂಡ ಭಾಗವಹಿಸಿದ್ದರು. 2024ರ ಲೋಕಸಭಾ ಚುನಾವಣೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿರುವ ಕ್ಷೇತ್ರ ಫೈಜಾಬಾದ್‌ನಲ್ಲಿ ಬಿಜೆಪಿ ಸೋತಾಗ ಅಯೋಧ್ಯ ನಿವಾಸಿಗಳ ವಿರುದ್ಧ ತಮ್ಮ ಆಕ್ರೋಶವನ್ನು ಕೂಡ ಸುನಿಲ್ ಲಹ್ರಿ ಹೊರ ಹಾಕಿದ್ದರು.

ಇಂಥಾ ಸುನಿಲ್ ಲಹ್ರಿ ಅವರ ಮಗ ಕ್ರಿಶ್ ಪಾಠಕ್ ಕಳೆದ ಅಕ್ಟೋಬರ್‌ನಲ್ಲಿ ಸಾರಾ ಖಾನ್ ಅವರ ಜೊತೆ ಸದ್ದಿಲ್ಲದೇ ಸರಳವಾಗಿ ರಿಜಿಸ್ಟರ್ ಮದುವೆಯನ್ನು ಮಾಡಿಕೊಂಡಿದ್ದರು. ಈ ಮೂಲಕ ಸಾರಾ ಖಾನ್ ತಮ್ಮ ಅಭಿಮಾನಿಗಳಿಗೆ ಸರ್‌ಪ್ರೈಸ್ ನೀಡಿದ್ದರು.

Bigg Boss Sara Khan Becomes RAMAYAN s Lakshman Sunil Lahri Daughter-in-Law Weds Krish Pathak in Dual

ಈಗ ಇವರು ಇಬ್ಬರು ಅದ್ದೂರಿಯಾಗಿ ಎಲ್ಲರೆದುರು ಮದುವೆಯಾಗಿದ್ದಾರೆ. ಹಿಂದೂ ಮತ್ತು ಮುಸ್ಲಿಂ ಸಂಪ್ರದಾಯದಂತೆ ಮದುವೆಯ ಬಂಧನಕ್ಕೊಳಗಾಗಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮದುವೆಯ ಸುಂದರ ಕ್ಷಣಗಳನ್ನು ಹಂಚಿಕೊಂಡಿರುವ ಸಾರಾ ಖಾನ್ "ಖಬೂಲ್ ಹೈ ಸೆ ಸಾತ್ ಫೆರೇ ತಕ್. ನಮ್ಮ ಪ್ರೀತಿ ತನ್ನದೇ ಆದ ಕಥೆ ಬರೆದಿದೆ. ನಮ್ಮ ಎರಡೂ ಪ್ರಪಂಚಗಳು ಹೌದು ಎಂದು ಹೇಳಿವೆ'' ಎಂದು ಬರೆದುಕೊಂಡಿದ್ದಾರೆ.

ಅಂದ್ಹಾಗೇ ಸಾರಾ ಖಾನ್‌ಗೆ ಇದು ಎರಡನೇ ಮದುವೆ. 2010ರಲ್ಲಿ ಸಾರಾ ಖಾನ್ ಹಿಂದಿ ''ಬಿಗ್ ಬಾಸ್‌''ನ ಸೀಸನ್ ನಾಲ್ಕರಲ್ಲಿ ಭಾಗವಹಿಸಿದಾಗ ಪ್ರೇಕ್ಷಕರನ್ನು ಸೆಳೆಯಲು ಮನೆಗೆ ಸ್ಫರ್ಧಿಗಳಾಗಿ ಬಂದ ಸಾರಾ ಖಾನ್ ಮತ್ತು ಅಲಿ ಮರ್ಚೆಂಟ್ ಅವರ ಮದುವೆಯನ್ನು ಮಾಡಿಸಲಾಗಿತ್ತು. ಇಷ್ಟೇ ಅಲ್ಲ. ಮದುವೆ ನಂತರ ಇಬ್ಬರ ಮೊದಲ ರಾತ್ರಿಗೆ ಕೂಡ ಇದೇ ''ಬಿಗ್ ಬಾಸ್‌'' ಮನೆ ವೇದಿಕೆಯಾಗಿತ್ತು. ಇಬ್ಬರ ಮಿಲನಕ್ಕೆ ಸೀಕ್ರೆಟ್ ರೂಮ್‌ನ ಸಿಂಗಾರ ಮಾಡಲಾಗಿತ್ತು.

ಆ ಕಾಲದಲ್ಲಿ ಈ ಕಾರ್ಯಕ್ರಮ ಹಲವರ ಕೆಂಗಣ್ಣಿಗೆ ಗುರಿಯಾಗಿತ್ತು. ಮತ್ತೂ ಕೆಲವರಿಗೆ ಮಜಾ ನೀಡಿತ್ತು. ಇದಕ್ಕೆ ಕೈಗನ್ನಡಿ ಎಂಬಂತೆ ಈ ಸಂಪೂರ್ಣ ಸಂಚಿಕೆಗೆ ಅತೀ ಹೆಚ್ಚು ಟಿ.ಆರ್‌.ಪಿ. ಕೂಡ ಆಗ ಬಂದಿತ್ತು. ಆದರೆ.. ದುರಾದೃಷ್ಟ.. ಟಿಆರ್‌ಪಿಗೆ ಸರಕಾದ ಈ ಮದುವೆ ಹೆಚ್ಚಿನ ದಿನ ಉಳಿಯಲಿಲ್ಲ. ''ಬಿಗ್ ಬಾಸ್‌'' ಮುಕ್ತಾಯವಾದ ಕೇವಲ ಎರಡೇ ತಿಂಗಳಿನಲ್ಲಿ ಈ ಮದುವೆ ಮುರಿದು ಬಿತ್ತು. ಸಾರಾ ಖಾನ್ ಮತ್ತು ಅಲಿ ಮರ್ಚೆಂಟ್ ಅವರ ವಿಚ್ಛೇದನ ಕೂಡ ಆಯ್ತು. ಇನ್ನುಳಿದಂತೆ ಕ್ರಿಶ್ ಪಾಠಕ್ ಮತ್ತು ಸಾರಾ ಖಾನ್ ನಡುವೆ ನಾಲ್ಕು ವರ್ಷಗಳ ವಯಸ್ಸಿನ ಅಂತರ ಇದೆ. ಸಾರಾ ಖಾನ್‌ಗೆ ಈಗ 36 ವರ್ಷವಾದರೆ ಕ್ರಿಶ್ ಪಾಠಕ್‌ಗೆ ಈಗ 32ರ ಹರೆಯ.ಸದ್ಯಈ ನವಜೋಡಿಗೆ ಹಲವರು ಶುಭಾಶಯ ಕೋರುತ್ತಿದ್ದಾರೆ.

More from Filmibeat

English summary
Ramayan's Lakshman (Sunil Lahri) is now family! Find out all the details of Sara Khan and Krish Pathak's grand wedding reception and dual-tradition nuptials.
Read more about: marraige ಟಿವಿ bigg boss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X