Bigg Boss: ಅಮೂಲ್ಯಗೆ ಪ್ರಥಮ್‌ ಮೇಲೆ ಸಿಟ್ಟು: ಅಂಥಹದ್ದೇನು ಮಾಡಿದ್ರು ಪ್ರಥಮ್

ಮತ್ತೊಮ್ಮೆ ಬಿಗ್‌ಬಾಸ್ ಪ್ರಾರಂಭವಾಗಿದೆ. ನಿನ್ನೆ (ಸೆಪ್ಟೆಂಬರ್ 24) ರಂದು ಸಂಜೆ ಬಿಗ್‌ಬಾಸ್ ಸೀಸನ್ 09 ವಿದ್ಯುಕ್ತವಾಗಿ ಆರಂಭಗೊಂಡಿದೆ. ಈ ಬಾರಿ ಬರೋಬ್ಬರಿ 18 ಸ್ಪರ್ಧಿಗಳು ಬಿಗ್‌ಬಾಸ್ ಮನೆ ಸೇರಿದ್ದಾರೆ.

ಕಿಚ್ಚ ಸುದೀಪ್ ಅವರು ಒಬ್ಬೊಬ್ಬರನ್ನಾಗಿ ಸ್ಪರ್ಧಿಗಳನ್ನು ವೇದಿಕೆಗೆ ಕರೆದು ಎಲ್ಲರನ್ನೂ ಮಾತನಾಡಿಸಿ, ಅವರ ಅಭಿಪ್ರಾಯ ಕೇಳಿ, ತುಸು ತಮಾಷೆ ಮಾಡಿ, ಸಲಹೆಗಳನ್ನು ನೀಡಿ ಬಿಗ್‌ಬಾಸ್ ಮನೆಯ ಒಳಗೆ ಕಳಿಸಿದ್ದಾರೆ.

ಈ ಬಾರಿಯ ಬಿಗ್‌ಬಾಸ್‌ನಲ್ಲಿ ಹಳೆಯ ಸೀಸನ್‌ನ ಸ್ಪರ್ಧಿಗಳು, ಒಟಿಟಿ ಸ್ಪರ್ಧಿಗಳು ಹಾಗೂ ಹೊಸ ಸ್ಪರ್ಧಿಗಳು ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಈ ಹಳೆಯ ಹಾಗೂ ಒಟಿಟಿ ಸ್ಪರ್ಧಿಗಳ ನಡುವೆ ನುಗ್ಗಿರುವ ಹೊಸ ಸ್ಪರ್ಧಿಗಳಲ್ಲಿ 'ಕಮಲಿ' ಧಾರಾವಾಹಿಯ ನಟಿ ಅಮೂಲ್ಯ ಗೌಡ ಸಹ ಒಬ್ಬರು.

Bigg Boss Season 09 Contestant Amulya Said Pratham Was Very Irritating On The Show

ವೇದಿಕೆಯಲ್ಲಿ ಸುದೀಪ್ ಜೊತೆ ಮಾತನಾಡಿದ ನಟಿ ಅಮೂಲ್ಯಾ ಗೌಡ, ನಿಮಗೆ ಇಷ್ಟವಾಗದ ಬಿಗ್‌ಬಾಸ್ ಸ್ಪರ್ಧಿ ಯಾರೆಂದರೆ ಪ್ರಥಮ್ ಎಂದು ಉತ್ತರ ನೀಡಿದರು. ಪ್ರಥಮ್ ಅವರನ್ನು ಬಿಗ್‌ಬಾಸ್‌ನಲ್ಲಿ ನೋಡುವಾಗ ಬಹಳ ಇರಿಟೇಟ್ ಆಗುತ್ತಿದ್ದೆ. ಅವರ ಮಾತು, ವರ್ತನೆ ಇರಿಟೇಟಿಂಗ್ ಎನ್ನಿಸುತ್ತಿತ್ತು. ಬೇರೆಯವರಿಗೆ ಅವರು ಮೆಂಟಲ್ ಟಾರ್ಚರ್ ನೀಡುತ್ತಿದ್ದಾರೆ ಎನ್ನಿಸುತ್ತಿತ್ತು ಎಂದಿದ್ದಾರೆ. ಅಸಲಿಗೆ ಪ್ರಥಮ್ ಬಿಗ್‌ಬಾಸ್ ವಿನ್ನರ್ ಸಹ ಆಗಿದ್ದಾರೆ.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಪ್ರಥಮ್, ದೇವ್ರಾಣೆ ಈ ಹುಡುಗಿ ಯಾರು ಅಂತಾನೇ ಗೊತ್ತಿಲ್ಲ! ಇವ್ರ ಆಸ್ತಿ ಬರೆಸಿಕೊಂಡಿಲ್ಲ. ನೇರವಾಗಿ ಮೀಟಿಂಗ್ ಅಂತೂ ನಮ್ಮ ತಾಯಾಣೆ ಮಾಡಿಲ್ಲ...ಆದ್ರೂ ನನ್ನಮೇಲೆ ಕೋಪ ಅಂತೆ ಇರ್ಲಿ ಅದೆಲ್ಲಾ ಅವ್ರ ಅಭಿಪ್ರಾಯ ಒಳ್ಳೆದಾಗಲಿ ಅಮೂಲ್ಯಾ ಅವರೆ, ಚೆನ್ನಾಗಿ ಆಡಿ ಕನ್ನಡಿಗರ ಮನಸ್ಸು ಗೆದ್ದುಬನ್ನಿ ಮನಸ್ಸಿನಿಂದಲೇ ಹಾರೈಸ್ತೀನಿ ನಿಮ್ಗೆ ಎಲ್ಲರೂ ಅಮೂಲ್ಯ ರವರಿಗೆ ಹಾರೈಸಿ! ಬೆಂಬಲ ಮಾಡಿ'' ಎಂದು ಬರೆದುಕೊಂಡಿದ್ದಾರೆ.

ಬಿಗ್‌ಬಾಸ್ 9 ರ ಎಂಟನೇ ಸ್ಪರ್ಧಿಯಾಗಿ ಕಮಲಿ ಧಾರಾವಾಹಿಯ ನಟಿ ಅಮೂಲ್ಯ ಮನೆ ಪ್ರವೇಶಿಸಿದ್ದಾರೆ. ಕೆಲ ವರ್ಷಗಳಿಂದಲೂ ಬಿಗ್‌ಬಾಸ್ ಮನೆಗೆ ಹೋಗಬೇಕು ಎಂದುಕೊಂಡಿದ್ದರಂತೆ ಅಮೂಲ್ಯಾ ಗೌಡ. ಮಾಡ್ರನ್ ಪಾತ್ರಕ್ಕೆ ಸೂಟ್ ಆಗ್ತಾರೆ ಎಂಬ ಅಭಿಪ್ರಾಯ ನನ್ನ ಬಗ್ಗೆ ಇದೆ. ಆದರೆ ನಾನು 'ಓಲ್ಡ್ ಸ್ಕೂಲ್' ಇಷ್ಟಪಡುವವಳು. ಧಾರಾವಾಹಿಯಲ್ಲಿ ಕಾಣುವ ಅಮೂಲ್ಯಾ ಬೇರೆ ಎಂದು ತೋರಿಸಲು ನಾನು ಇಲ್ಲಿಗೆ ಬಂದಿದ್ದೇನೆ. ಬಿಗ್‌ಬಾಸ್ ಮನೆಯಲ್ಲಿ ನನ್ನ ಕೋಪ ನನಗೆ ಹಿನ್ನೆಡೆ ಉಂಟು ಮಾಡಬಹುದು ಎಂದಿದ್ದಾರೆ ಈ ನಟಿ.

More from Filmibeat

English summary
Bigg Boss season 09 contestant Amulya said Pratham was very irritating while he is in the Bigg Boss house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X