BBK 9 : ಬಿಗ್‌ಬಾಸ್ ಮನೆಯಿಂದ ಹೊರ ಹೋಗಲು ನಾಮಿನೇಟ್ ಆದವರು ಇವರು
ಬಿಗ್‌ಬಾಸ್ ಸೀಸನ್ 9 ಆರಂಭವಾಗಿ ಒಂದು ದಿನವಾಗಿದೆಯಷ್ಟೆ. ಮನೆಯಲ್ಲಿರುವ 18 ಮಂದಿ ಈಗಿನ್ನೂ ಪರಸ್ಪರ ಪರಿಚಯದ ಹಾದಿಯಲ್ಲಿದ್ದಾರೆ. ಆದರೆ ಅವರ ಮುಂದೆ ನಾಮಿನೇಶನ್ ಭೂತ ಬಂದು ನಿಂತಿದೆ.
ವಾಡಿಕೆಯಂತೆ ಮನೆಯ ಎಲ್ಲ ಸದಸ್ಯರು, ಮೊದಲ ವಾರ ಮನೆಯಿಂದ ಹೊರಗೆ ಹೋಗಬೇಕಾದ ಸದಸ್ಯರೊಬ್ಬರನ್ನು ನಾಮಿನೇಟ್ ಮಾಡಿಬೇಕಾಗಿತ್ತು. ಆದರೆ ಈ ಬಾರಿ ತುಸು ಭಿನ್ನವಾಗಿ ಜೋಡಿಗಳಲ್ಲಿ ಬಂದು ಎರಡು ಜೋಡಿಗಳನ್ನು ಅಂದರೆ ಒಟ್ಟಿಗೆ ನಾಲ್ಕು ಮಂದಿಯನ್ನು ನಾಮಿನೇಟ್ ಮಾಡಬೇಕಿತ್ತು.
ಬಿಗ್‌ಬಾಸ್ ಸೂಚನೆಯಂತೆ ಮನೆಯ ಎಲ್ಲ ಹಿರಿಯ ಅಥವಾ ಅನುಭವಿ ಸದಸ್ಯರು ತಮ್ಮೊಟ್ಟಿಗೆ ಒಬ್ಬ ಕಿರಿಯ ಅಥವಾ ನವೀನ ಸದಸ್ಯರನ್ನು ಜೋಡಿಯಾಗಿ ಆಯ್ಕೆ ಮಾಡಿಕೊಂಡರು. ಮನೆಯಲ್ಲಿ ಹದಿನೆಂಟು ಜನ 9 ಜೋಡಿಗಳಾಗಿ ವಿಂಗಡಣೆ ಆಗಿದ್ದಾರೆ. ಜೋಡಿಯಾಗಿಯೇ ಬಂದು ಇನ್ನೆರಡು ಜೋಡಿಯನ್ನು ನಾಮಿನೇಟ್ ಮಾಡಿದರು.
ಬಿಗ್‌ಬಾಸ್ ಸೂಚನೆಯಂತೆ ಎಲ್ಲ ಜೋಡಿಗಳು ಕನ್ಫೆಷನ್ ರೂಮ್‌ಗೆ ಬಂದು ಖಾಸಗಿಯಾಗಿ , ತಮ್ಮ ಅಭಿಪ್ರಾಯಾನುಸಾರ ಯಾರು ಮನೆಯಿಂದ ಹೊರಗೆ ಹೋಗಬೇಕು ಎಂಬುದನ್ನು ಬಿಗ್‌ಬಾಸ್‌ಗೆ ತಿಳಿಸಿದರು. ನವಾಜ್, ಸಂಬರ್ಗಿ, ದರ್ಶ್, ಆರ್ಯವರ್ಧನ್, ಮಯೂರಿ ಹೆಸರನ್ನು ಹಲವರು ಹೇಳಿದರು.
ಎಲ್ಲ ಜೋಡಿಗಳು ಎಲ್ಲರ ಹೆಸರನ್ನು ಹೇಳಿದರಾದರೂ ರಾಕೇಶ್ ಅಡಿಗ ಹಾಗೂ ಅವರಿಗೆ ಜೋಡಿಯಾಗಿರುವ ರೂಪೇಶ್ ರಾಜಣ್ಣ ಹೆಸರನ್ನು ಯಾವೊಂದು ಜೋಡಿಯೂ ಸಹ ಹೇಳಲಿಲ್ಲ. ಹಾಗಾಗಿ ಅವರಿಬ್ಬರೂ ನಾಮಿನೇಶನ್ ಪ್ರಕ್ರಿಯೆಯಿಂದ ಬಚಾವಾದರು. ಅಲ್ಲಿಗೆ ರಾಕೇಶ್ ಹಾಗೂ ರೂಪೇಶ್ ರಾಜಣ್ಣ ಎರಡು ವಾರ ಮನೆಯಲ್ಲಿರುವುದು ಖಾಯಂ ಆಗಿದೆ.

ಎಲ್ಲ ಜೋಡಿಗಳು ನಾಮಿನೇಟ್ ಮಾಡಿದ ಹೆಸರುಗಳನ್ನು ಸೇರಿಸಿ ಬಿಗ್‌ಬಾಸ್ ಈ ವಾರ ನಾಮಿನೇಟ್ ಆದವರ ಪಟ್ಟಿಯನ್ನು ಘೋಷಿಸಿದರು. ಆರ್ಯ, ದರ್ಶ್, ದಿವ್ಯಾ, ಐಶ್ವರ್ಯಾ, ಪ್ರಶಾಂತ್, ವಿನೋದ್, ಅರುಣ್ ಸಾಗರ್ ನವಾಜ್, ಸಾನ್ಯಾ, ಮಯೂರಿ, ರೂಪೇಶ್ ಶೆಟ್ಟಿ, ಕಾವ್ಯಶ್ರೀ ಅವರುಗಳು ಈ ವಾರ ನಾಮಿನೇಟ್ ಆಗಿದ್ದಾರೆ.


Click it and Unblock the Notifications











