For Quick Alerts
  ALLOW NOTIFICATIONS  
  For Daily Alerts

  BBK9: ಸಾನ್ಯಾ-ರೂಪೇಶ್‌ ಜೋಡಿಗೆ ಒಟಿಟಿಯಲ್ಲಿ ಫ್ರೆಂಡ್‌ಶಿಪ್, ಟಿವಿಯಲ್ಲಿ ಲವ್!

  |

  ಪ್ರತಿ ಬಿಗ್‌ಬಾಸ್ ಸೀಸನ್‌ನಲ್ಲಿಯೂ ಪ್ರೇಮಕತೆಗಳು ಸಾಮಾನ್ಯ. ಮನೆಯೊಳಗೆ ಶುರುವಾಗುವ ಪ್ರೇಮಕತೆಗಳು ಹೊರಗೂ ಮುಂದುವರೆದು ಸಫಲಗೊಂಡ ಕೆಲವು ಉದಾಹರಣೆಗಳೂ ಇವೆ.

  ಚಂದನ್ ಶೆಟ್ಟಿ-ನಿವೇದಿತಾ, ದಿವ್ಯಾ ಉರುಡುಗ-ಅರವಿಂದ್ ಕೆಪಿ ಅವರುಗಳದ್ದು ಬಿಗ್‌ಬಾಸ್‌ ಮನೆಯಲ್ಲಿ ಅರಳಿದ ಪ್ರೇಮ. ಇದೀಗ ಹೊಸದೊಂದು ಜೋಡಿ ಇದೇ ಸಾಲು ಸೇರುವ ಹಾದಿಯಲ್ಲಿದೆ.

  ಸಾನ್ಯಾ ಐಯ್ಯರ್ ಹಾಗೂ ರೂಪೇಶ್ ಶೆಟ್ಟಿ ಬಿಗ್‌ಬಾಸ್ ಮನೆಯಲ್ಲಿನ ಕ್ಯೂಟ್ ಜೋಡಿಯಾಗಿದ್ದು, ಈ ಜೋಡಿ ಒಟಿಟಿಯಿಂದಲೂ ಜೊತೆಯಾಗಿಯೇ ಇದೆ.

  ಒಟಿಟಿ ಸೀಸನ್‌ನಲ್ಲಿ ಸಾನ್ಯಾ ಐಯ್ಯರ್ ಹಾಗೂ ರೂಪೇಶ್ ಶೆಟ್ಟಿ ಒಟ್ಟಿಗೆ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದರು. ಅಲ್ಲಿ ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಐಯ್ಯರ್ ನಡುವೆ ಗೆಳೆತನ ಏರ್ಪಟ್ಟಿತ್ತು. ಈ ಇಬ್ಬರೂ ಪ್ರೀತಿಸುತ್ತಿದ್ದರೆ ಎಂದು ಸೋಮಣ್ಣ ಮಾಚಿಮಾಡ ಸೇರಿದಂತೆ ಮನೆಯ ಇನ್ನೂ ಕೆಲವು ಸದಸ್ಯರು ಅಂದುಕೊಂಡಿದ್ದರು. ಆದರೆ ತಮ್ಮದು ಗೆಳೆತನವಷ್ಟೆ ಬೇರಿನ್ನೇನೂ ಅಲ್ಲ ಎಂದು ಈ ಇಬ್ಬರೂ ಸ್ಪಷ್ಟಪಡಿಸಿದ್ದರು.

  ಆದರೆ ಒಟಿಟಿ ಸೀಸನ್ ಅಂತ್ಯದ ವೇಳೆಗೆ ಇವರಿಬ್ಬರೂ ತುಸು ಹೆಚ್ಚೇ ಆಪ್ತವಾಗಿದ್ದಾರೆಂಬುದು ಖಾತ್ರಿಯಾಗಿತ್ತು. ಆದರೆ ಇದೀಗ ಟಿವಿ ಬಿಗ್‌ಬಾಸ್‌ ನಲ್ಲಿ ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ದಟ್ಟ ಅನುಮಾನ ಮೂಡಿದೆ.

  ಅದರಲ್ಲಿಯೂ ಸಾನ್ಯಾ ಐಯ್ಯರ್ ಆಗಾಗ್ಗೆ ರೂಪೇಶ್ ಶೆಟ್ಟಿ ಜೊತೆಗೆ ಫ್ಲರ್ಟ್ ಮಾಡುವ ವಿಧಾನ ಗೆಳೆಯರಿಬ್ಬರು ಮಾಡುವ ವಿಧಾನವಾಗಲಿ, ಗೆಳೆಯರಿಬ್ಬರು ಆಡುವ ಮಾತುಗಳಾಗಲಿ ಅಲ್ಲ. ಸಾನ್ಯಾ ಅಂತೂ ಬಹಳ ರೊಮ್ಯಾಂಟಿಕ್ ಆಗಿ ರೂಪೇಶ್ ಅನ್ನು ಮಾತನಾಡಿಸುತ್ತಾರೆ. ಆದರೆ ರೂಪೇಶ್‌ಗೆ ಈ ಮಾತುಗಳೆಲ್ಲ ತುಸು ತಡವಾಗಿ ಅರ್ಥತವಾಗುತ್ತವೆ.

  ಇಂದು ಅಂದರೆ ಹನ್ನೆರಡನೇ ದಿನ ಟಾಸ್ಕ್‌ನಲ್ಲಿ ಸೋತು ಟಾಯ್ಲೆಟ್ ಏರಿಯಾದಲ್ಲಿ ಕೂತಿದ್ದ ರೂಪೇಶ್‌ ಬಳಿ ಬಂದು ಅವನ ಕೆನ್ನೆ ಗಿಂಡಿದ ಸಾನ್ಯಾ, ನೀನು ಬಹಳ ಚೆನ್ನಾಗಿ ಕಾಣುತ್ತಿದ್ದೀಯ, ನಿನ್ನ ಮುದ್ದಾಡುವ ಮನಸ್ಸಾಗುತ್ತಿದೆ ಎಂದರು. ನಂತರ ನಿನ್ನನ್ನು ನೋಡಲು ಸಹ ನನಗೆ ಕಷ್ಟವಾಗುತ್ತಿದೆ, ನಿನ್ನಿಂದ ದೂರವೇ ಇರುತ್ತೇನೆ ಎಂದರು, ಹತ್ತಿರವಿದ್ದರೆ ಪ್ರೀತಿ ಹೆಚ್ಚಾಗುತ್ತದೆ ಎಂಬರ್ಥದಲ್ಲಿ ಸಾನ್ಯಾ ಹೇಳಿದರು.

  ಇನ್ನು ಕಿಚನ್ ಕ್ಲೀನ್ ಮಾಡಬೇಕಾದರೆ ಸಹ ಈ ಇಬ್ಬರ ಪರೋಕ್ಷ ಸಲ್ಲಾಪ ಹೀಗೆ ಚಾಲ್ತಿಯಲ್ಲಿತ್ತು. ನಿನ್ನ ಹೃದಯವನ್ನು ಚೆನ್ನಾಗಿ ಟೆಸ್ಟ್‌ ಮಾಡಿ ನಾನು ಅರ್ಥಮಾಡಿಕೊಂಡಿದ್ದೇನೆ ಎಂದ ಸಾನ್ಯ ಒಂದು ಸಮಯದಲ್ಲಂತೂ ನನ್ನ ಹೃದಯ ನಿನಗೆ ನೀಡಿದ್ದೇನೆ ಎಂದು ಸಹ ಹೇಳಿದರು. ಆ ಬಳಿಕ, 'ನೀನು ಬಿಗ್‌ಬಾಸ್‌ ಮನೆಯಿಂದ ಹೊರಗೆ ಹೋದ ಬಳಿಕ ಯಾರೇ ಹುಡುಗಿ ಸಿಕ್ಕರೂ ಮೊದಲು ನನಗೆ ಹೇಳಬೇಕು' ಎಂದು ಹೇಳಿದರು. ಇದು ರೂಪೇಶ್‌ ಅನ್ನು ತುಸು ಗೊಂದಲಕ್ಕೆ ಈಡು ಮಾಡಿತು.

  ಒಟ್ಟಾರೆ ಈ ಜೋಡಿಯ ಆಪ್ತತೆ ಗೆಳೆತನಕ್ಕಿಂತಲೂ ತುಸು ಹೆಚ್ಚಿನದ್ದು ಎಂದು ಇವರಿಬ್ಬರೇ ಇದ್ದಾಗ ಇವರ ವರ್ತನೆ ನೋಡಿದರೆ ತಿಳಿಯುತ್ತದೆ.

  English summary
  Bigg Boss Season 09: Sanya Roopesh Shetty Love Story In Bigg Boss House. Know more about it.
  Thursday, October 6, 2022, 12:29
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X