Bigg Boss: ಬೈಕರ್ ಐಶ್ವರ್ಯಾಗೆ ಲವ್ ಪ್ರೊಪೋಸ್ ಮಾಡಿದ ನವಾಜ್
ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ನವಾಜ್ ವರ್ತನೆ ಮೊದಲೆರಡು ದಿನದ ಬಳಿಕ ಇದೀಗ ತುಸು ಬದಲಾಗಿದೆ. ಮೊದಲೆಲ್ಲ ಹೊಡೆದು ಬಿಡ್ತೀನಿ, ಚಚ್ಚಿ ಬಿಡ್ತೀನಿ ಎನ್ನುತ್ತಿದ್ದ ನವಾಜ್ ಈಗ ಬದಲಾಗಿದ್ದಾರೆ ತುಸು ಶಾಂತವಾಗಿದ್ದಾರೆ.
ಅರುಣ್ ಸಾಗರ್ ಜೊತೆಗೆ ಜೋಡಿಯಾಗಿರುವ ನವಾಜ್ ಈಗೀಗ ತುಸು ಮನೆಯ ಸದಸ್ಯರೊಟ್ಟಿಗೆ ಬೆರೆಯಲು ಪ್ರಾರಂಭಿಸಿದ್ದಾರೆ. ಕೆಲವು ದಿನಗಳ ಹಿಂದೆ 'ಸುಂದರಿ' ಎಂಬ ಟ್ಯಾಗ್ ಅನ್ನು ನವಾಜ್, ಬೈಕರ್ ಐಶ್ವರ್ಯಾಗೆ ನೀಡಿದ್ದರು.
ಇದೀಗ ಮನೆಯ ಕೆಲವು ಮಹಿಳಾ ಸದಸ್ಯರು ತಮಾಷೆಗೆಂದು ಐಶ್ವರ್ಯಾಗೆ ಮೇಕಪ್ ಮಾಡಿ ನವಾಜ್ ಮುಂದೆ ಕರೆದುಕೊಂಡು ಬಂದು ನಿಲ್ಲಿಸಿದರು. ಈಗ ಐಶ್ವರ್ಯಾ ಬಗ್ಗೆ ಏನನ್ನಿಸುತ್ತಿದೆ ಹೇಳು ಎಂದರು. ಅದಕ್ಕೆ ನವಾಜ್ ಪೆಕರು-ಪೆಕರಾಗಿ ಉತ್ತರಿಸಿದ್ದು ನಗು ತರಿಸಿತು.

ಐಶ್ವರ್ಯಾ ಪಿಸ್ಸೆಗೆ ಪ್ರೊಪೋಸ್ ಮಾಡಿದ ನವಾಜ್
ನಂತರ ನವಾಜ್, ನಾನು ನನ್ನ ಸ್ಟೈಲ್ ಅಲ್ಲಿ ಐಶ್ವರ್ಯಾಗೆ ಪ್ರೊಪೋಸ್ ಮಾಡುತ್ತೇನೆ ಎಂದು ಹೇಳಿ ''ಐಶ್ವರ್ಯಾ ಅವರೇ ನಿಮ್ಮ ಸ್ಟೈಲ್‌ನಲ್ಲಿ ಇಂಗ್ಲೀಷ್‌ನಲ್ಲಿ ಐ ಲವ್ ಯೂ ಹೇಳಲು ಬರಲ್ಲ ನನಗೆ, ನಮ್ಮ ಮನೆ ಬಹಳ ಚಿಕ್ದು, ಆದ್ರೆ ನನ್ನ ಮನಸ್ಸು ಬಹಳ ದೊಡ್ಡದು. ಚಿಕ್-ಚಿಕ್ ದಾಗಿ ಸೇರ್ಕೊಂಡು ದೊಡ್ ದೊಡ್‌ದಾಗಿ ಪ್ರೀತಿ ಮಾಡೋಣ. ಚಿಕ್ ಚಿಕ್‌ದಾಗಿ ಖುಷಿ ಪಡೋಣ. ಚಿಕ್ ಮಕ್ಕಳಿಗೆ ಜನ್ಮ ಕೊಡೋಣ, ಆ ಮಕ್ಕಳನ್ನು ದೊಡ್ಡದಾಗುವವರೆಗೆ ಸಾಕೋಣ. ಆ ಮೇಲೆ ಒಟ್ಟಿಗೆ ಸಾಯೋಣ, ಆಗ ನಮ್ಮ ಮಕ್ಕಳು ದೊಡ್-ದೊಡ್‌ದಾಗಿ ಸಮಾಧಿ ಕಟ್ತಾರೆ, ಚಿಕ್-ಚಿಕ್‌ದಾಗಿ ತಮ್ಮ ಮನಸ್ಸಲ್ಲಿ ಇಟ್ಕೊತಾರೆ'' ಎಂದೆಲ್ಲ ಹೇಳಿದರು.

ಐಶ್ವರ್ಯಾ ಪಿಸ್ಸೆ, ಪ್ಲೀಜ್ ನನ್ನ ಪ್ರೀತ್ಸೆ: ನವಾಜ್
ನವಾಜ್ ಪ್ರೊಪೋಸ್ ಮಾಡಿದ ರೀತಿಗೆ ಫಿದಾ ಆದ ಐಶ್ವರ್ಯಾ, ಹೀಗೆಲ್ಲ ಪ್ರೊಪೋಸ್ ಮಾಡಿದರೆ ನಿನಗೆ ಖಂಡಿತ ಒಳ್ಳೆ ಹುಡ್ಗಿ ಸಿಕ್ತಾಳೆ, ಹೀಗೆಲ್ಲ ಪ್ರೊಪೋಸ್ ಮಾಡಿದರೆ ಖಂಡಿತ ಯಾವ ಹುಡ್ಗಿ ಬೇಕಾದರೂ ನಿನ್ನನ್ನು ಒಪ್ಪಿಕೊಳ್ಳುತ್ತಾಳೆ ಎಂದರು. ಅದಕ್ಕೆ ನವಾಜ್, ಹಾಗಿದ್ರೆ ನೀವು ಸಿಗಲ್ವ ಎಂದು ನಗೆ ಚಟಾಕಿ ಹಾರಿಸಿದರು. ಬಳಿಕ ಮತ್ತೆ, ''ಐಶ್ವರ್ಯಾ ಪಿಸ್ಸೆ, ಪ್ಲೀಜ್ ನನ್ನ ಪ್ರೀತ್ಸೆ' ಎಂದರು. ನವಾಜ್ ಪ್ರೊಪೋಸ್ ಮಾಡಿದ ಸ್ಟೈಲ್‌ಗೆ ಎಲ್ಲರೂ ನಕ್ಕರು.

ವೈರಲ್ ಬಾಯ್ ನವಾಜ್
ನವಾಜ್, ಸಾಮಾಜಿಕ ಜಾಲತಾಣದ ಮೂಲಕ ವೈರಲ್ ಆದವನು. ನವಾಜ್‌ನ ಎರಡು ಸಾಲಿನ ಸಿನಿಮಾ ವಿಮರ್ಶೆಗಳು ಯೂಟ್ಯೂಬ್, ಫೇಸ್‌ಬುಕ್‌ಗಳಲ್ಲಿ ಬಹಳ ಫೇಮಸ್ಸು. ಬಡತನದ ಹಿನ್ನೆಲೆಯ ನವಾಜ್‌ಗೆ ಬಿಗ್‌ಬಾಸ್‌ಗೆ ಹೋಗುವ ಅದೃಷ್ಟ ದೊರೆತಿದೆ. ಮೊದಲೆರಡು ದಿನ ಮನೆಗೆ, ಅಲ್ಲಿನ ಜನಗಳಿಗೆ ಅಡ್ಜಸ್ಟ್ ಆಗದಿದ್ದ ನವಾಜ್ ಈಗ ನಿಧಾನಕ್ಕೆ ಮನೆಗೆ ಅಡ್ಜಸ್ಟ್ ಆಗುತ್ತಿದ್ದಾರೆ. ಮೊದಲೆರಡು ದಿನ, ನನಗೆ ಸರಿ ಬರ್ತಿಲ್ಲ, ಯಾರನ್ನಾದರೂ ಹೊಡೆದು ಬಿಡ್ತೀನಿ ಎಂದೆಲ್ಲ ಎನ್ನುತ್ತಿದ್ದವರು, ಈಗ ತುಸು ಆರಾಮವಾಗಿದ್ದಾರೆ. ಅರುಣ್ ಸಾಗರ್ ಜೊತೆಗೆ ದಿನವೂ ಧ್ಯಾನ ಸಹ ಮಾಡುತ್ತಿದ್ದಾರೆ.

ಬೈಕರ್ ಐಶ್ವರ್ಯಾ ಪಿಸ್ಸೆ
ಇನ್ನು ಐಶ್ವರ್ಯಾ ಪಿಸ್ಸೆ, ಬೈಕರ್ ಆಗಿದ್ದು, ಹಲವು ರಾಷ್ಟ್ರೀಯ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಬಿಗ್‌ಬಾಸ್ ಮನೆಯೊಳಗಿರುವ ಏಕೈಕ ಕ್ರೀಡಾಪಟು ಐಶ್ವರ್ಯಾ. ಬಿಗ್‌ಬಾಸ್ ಗ್ರ್ಯಾಂಡ್ ಪ್ರೀಮಿಯರ್ ದಿನ ಐಶ್ವರ್ಯಾ ಪಿಸ್ಸೆಯವರ ಸಾಧನೆ ಕೇಳಿ ಸ್ವತಃ ಸುದೀಪ್ ಅವರೇ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಬಿಗ್‌ಬಾಸ್ ಮನೆಯಲ್ಲಿ ಐಶ್ವರ್ಯಾ ಅವರು ದಿವ್ಯಾ ಉರುಡುಗ ಜೊತೆಗೆ ಜೋಡಿಯಾಗಿದ್ದಾರೆ. ಇಬ್ಬರೂ ಚೆನ್ನಾಗಿ ಆಟಗಳಲ್ಲಿ ಆಡುತ್ತಿದ್ದಾರೆ. ಮೊದಲ ವಾರ ಎರಡು ಟಾಸ್ಕ್‌ಗಳಲ್ಲಿ ಭಾಗವಹಿಸಿ ಎರಡನ್ನೂ ಗೆದಿದ್ದಾರೆ.


Click it and Unblock the Notifications











