Brahmanda Guruji: ಬಿಗ್ ಬಾಸ್ ಮನೆಗೆ ಸಕ್ಕತ್ ಎಂಟ್ರಿ ಕೊಟ್ರು ಬ್ರಹ್ಮಾಂಡ ಗುರೂಜಿ: ಮುಂಡಾ ಮೋಚ್ತು ಎಂದ ತುಕಾಲಿ ಸಂತು!

By Shruthi Harishgowda

ಬಿಗ್ ಬಾಸ್ ಮನೆಯಲ್ಲಿರುವ ಸದಸ್ಯರಿಗೆ ಒಂದಲ್ಲ ಒಂದು ಸರ್ಪ್ರೈಸ್ ಅನ್ನು ನೀಡುತ್ತಾ ಬಂದಿದ್ದಾರೆ. ಇಂದು ಬಿಗ್ ಬಾಸ್ ಮನೆಗೆ ಬ್ರಹ್ಮಾಂಡ ಗುರೂಜಿ ಖಡಕ್ಕಾಗಿ ಎಂಟ್ರಿಯನ್ನು ಕೊಟ್ಟಿದ್ದಾರೆ. ನರೇಂದ್ರ ಬಾಬು ಶರ್ಮಾ ನೋಡಿದ ಮನೆಯ ಸದಸ್ಯರು ಯಾಕೆ ಬಂದ್ರಪ್ಪ ಎಂದು ತಮ್ಮೊಳಗೆ ಪ್ರಶ್ನೆಯನ್ನ ಮಾಡಿಕೊಳ್ಳುತ್ತಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋದ ತನಿಷಾ ಬಿಗ್ ಬಾಸ್‌ಗೆ ಗುರೂಜಿ ಯಾಕೆ ಬಂದಿದ್ದಾರೆ ಎಂಬ ಪ್ರಶ್ನೆಸಹ ಕೇಳಿದ್ದಾರೆ. ಸದ್ಯಕ್ಕೆ ಬಿಗ್ ಬಾಸ್ ಮನೆಯ ಸದಸ್ಯರು ನಗೆ ಕಡಲಲ್ಲಿ ತೇಲುವಂತೆ ನರೇಂದ್ರ ಬಾಬು ಶರ್ಮಾ ಮಾಡುತ್ತಿದ್ದಾರೆ.

ಅವರ ಮಾತೆಂದರೆ ಹಾಗೆ ಎಲ್ಲರ ಮುಖದಲ್ಲೂ ನಗು ಬರುತ್ತದೆ. ಅವರ ಮುಂಡಾ ಮೋಚ್ತು ಡೈಲಾಗ್ ಕೇಳಿದ ಮನೆಯ ಸದಸ್ಯರೆಲ್ಲರೂ ಖುಷಿಯಾಗಿದ್ದಾರೆ. ಇನ್ನು ನರೇಂದ್ರ ಶರ್ಮಾ ಬಿಗ್ ಬಾಸ್ ಮನೆಗೆ ಬಂದವರೇ ಆಟವನ್ನು ಶುರು ಹಚ್ಚಿಕೊಳ್ಳಿ ಎಂದು ಬಿಗ್ ಬಾಸ್‌ಗೆ ಮನವಿ ಮಾಡಿದ್ದಾರೆ. ಇವರ ಎಂಟ್ರಿ ಸಸ್ಪೆನ್ಸ್ ಆಗಿದ್ದು ವೈಡ್ ಕಾರ್ಡ್ ಎಂಟ್ರಿ ತಗೊಂಡಿದ್ದಾರಾ ಅಥವಾ ಗೆಸ್ಟ್ ಆಗಿ ಬಂದಿದ್ದಾರಾ ಎಂಬ ಕುತೂಹಲಕ್ಕೆ ಸಂಜೆ ತೆರೆ ಬೀಳಲಿದೆ. ನರೇಂದ್ರ ಬಾಬು ಶರ್ಮಾ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಕೂಡಲೇ ಮನೆಯ ಸದಸ್ಯರೆಲ್ಲರೂ ಕೂಡ ಅವರನ್ನ ಪ್ರೀತಿಯಿಂದ ಬರಮಾಡಿಕೊಂಡಿದ್ದಾರೆ. ಬಾಗಿಲು ತೆಗೆದ ತಕ್ಷಣವೇ ಎಲ್ಲರೂ ಓಡಿಹೋಗಿ ವೆಲ್ಕಮ್ ಹೇಳಿದ್ದಾರೆ.

bigg-boss-season-10-update-brahmanda-guruji

ಈಗಾಗಲೇ ಬಿಗ್ ಬಾಸ್ ಮನೆಯೊಳಗೆ ಲಾರ್ಡ್ ಪ್ರಥಮ್ ಆಗಿ ಪ್ರಥಮ್ ಎಂಟ್ರಿಯನ್ನು ಕೊಟ್ಟಿದ್ದರು. ನಂತರ ಬೃಂದಾವನ ಧಾರಾವಾಹಿಯ ತಂಡ ಹಾಗೂ ನಟಿ ತಾರಾ, ಭಾಗ್ಯಲಕ್ಷ್ಮಿ ಧಾರಾವಾಹಿಯ ಭಾಗ್ಯ ಎಂಟ್ರಿ ಕೊಟ್ಟು ಮನೆಯಲ್ಲಿದ್ದ ಸದಸ್ಯರಿಗೆ ಹುರುಪು ತುಂಬುವ ಕೆಲಸವನ್ನು ಮಾಡಿದ್ದರು. ಈಗ ಬ್ರಹ್ಮಾಂಡ ಗುರೂಜಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ‌ಇನ್ನೂ ಮನೆಯಲ್ಲಿ ಮೂರು ಬಣಗಳಾಗಿದ್ದು ಮನೆಯಲ್ಲಿರುವ ಕೆಲವು ಸದಸ್ಯರ ನಡುವಳಿಕೆಗಳನ್ನು ಬ್ರಹ್ಮಾಂಡ ಗುರೂಜಿ ತಿದ್ದಿ ಹೋಗುತ್ತಾರಾ ಎಂಬ ಪ್ರಶ್ನೆ ಕಾಡುತ್ತಿದೆ.

ಸ್ಪೆಷಲ್ ಎಂಟ್ರಿ ಕೊಟ್ಟ ಬ್ರಹ್ಮಾಂಡ ಗುರೂಜಿ

ಬ್ರಹ್ಮಾಂಡ ಗುರೂಜಿ ಇಂದು ಬಿಗ್ ಬಾಸ್ ಮನೆಗೆ ಸ್ಪೆಷಲ್ ಎಂಟ್ರಿ ಅನ್ನು ಕೊಟ್ಟಾಗಿದೆ. ಈ ಬಗ್ಗೆ ಕಲರ್ಸ್ ಕನ್ನಡ ಪ್ರೋಮೋ ಒಂದನ್ನು ರಿಲೀಸ್ ಮಾಡಿದೆ. ಇದರಲ್ಲಿ ನಾನು ಮನೆಗೆ ಬಂದಾಗಿದೆ ಇನ್ನು ಆಟ ಶುರು ಹಚ್ಚಿಕೊಳ್ಳಿ ಎಂದು ನರೇಂದ್ರಬಾಬು ಶರ್ಮಾ ತಿಳಿಸಿದ್ದಾರೆ. ಇನ್ನು ವಿನಯ್ ನೀವು ಬಯ್ಯೋಕೆ ಶುರು ಮಾಡಿದರೆ ಮಜಾವೇ ಬೇರೆ ಎಂದು ಹೇಳಿದ್ದಾರೆ. ಇದಕ್ಕೆ ಬ್ರಹ್ಮಾಂಡ ಗುರೂಜಿ ಅವರು ಹಾಳಾಗಿ ಹೋಗಲಿ ಪುಟ್ಗೊಸಿ ಪಿಂಡ ಎಲ್ಲಿಗೆ ಹೋಗುತ್ತಾನೆ ಎಂದು ಹೇಳುವ ಮೂಲಕ ಎಲ್ಲರ ಮುಖದಲ್ಲಿ ನಗುವನ್ನು ತರಿಸಿದ್ದಾರೆ.

ಬಿಗ್ ಬಾಸ್ ಮನೆಯ ತುಂಬೆಲ್ಲ ಓಡಾಟವನ್ನ ನಡೆಸಿದ ನಂತರ ಅಯ್ಯೋ ಬಿಗ್ ಬಾಸ್ ನನ್ನ ಕೈಲಿ ಇನ್ನೂ ನಡೆಯೋಕೆ ಆಗೋದಿಲ್ಲ ಮನೆಯವರನ್ನೆಲ್ಲಾ ಸ್ಟ್ಯಾಚು ಮಾಡಿಬಿಡಿ ಎಂದು ಕೇಳಿಕೊಂಡಿದ್ದಾರೆ. ಇದಕ್ಕೆ ಬಿಗ್ ಬಾಸ್ ಏನು ರೆಸ್ಪಾನ್ಸ್ ಮಾಡಿದ್ದಕ್ಕೆ ನಾನು ಹೇಳಿದ್ದು ಕೇಳಿಸಲಿಲ್ವಾ ಎಂದು ಹೇಳುವ ಮೂಲಕ ಮನೆಯವರನ್ನೆಲ್ಲಾ ನಗಿಸಿದ್ದಾರೆ. ಸರ್ಪ್ರೈಸಾಗಿ ಬಂದಿರುವ ಬ್ರಹ್ಮಾಂಡ ಗುರೂಜಿ ಬಿಗ್ ಬಾಸ್ ಮನೆಯ ಸದಸ್ಯರ ಯಾವ ಯಾವ ಸೀಕ್ರೆಟ್‌ ಹೊರಗೆ ತರಿಸುತ್ತಾರೆ ಎಂಬುದು ಕುತೂಹಲವಾಗಿದೆ.

bigg-boss-season-10-update-brahmanda-guruji

ಆರ್ಯವರ್ಧನ್‌ಗೆ ಸೆಡ್ಡು ಒಡೆಯೋಕೆ ಬಂದ್ರಾ ಗುರೂಜಿ?

ಬ್ರಹ್ಮಾಂಡ ಗುರೂಜಿ ಬಿಗ್ ಬಾಸ್ ಮನೆಗೆ ಬಂದ ಕೂಡಲೇ ಬ್ರಹ್ಮಾಂಡ ಗುರೂಜಿ ಅವರ ಫೇಮಸ್ ಡೈಲಾಗ್ ಮುಂಡಾಮೋಚ್ತು ಎಂದು ಹೇಳುವ ಮೂಲಕ ಮನೆಯ ಇತರ ಸದಸ್ಯರ ನಗುಗೆ ಕಾರಣರಾಗಿದ್ದಾರೆ. ಮನೆಯ ಎಲ್ಲ ಸದಸ್ಯರನ್ನು ಸ್ಟ್ಯಾಚು ಮಾಡಿಲ್ಲ ಎಂದರೆ ನಾನು ಬಿಗ್ ಬಾಸ್ ಮನೆಯನ್ನು ಬಿಟ್ಟು ಹೊರಗೆ ಹೋಗುತ್ತೇನೆ ಎನ್ನುವ ಡೈಲಾಗ್ ಅನ್ನು ಬ್ರಹ್ಮಾಂಡ ಗುರೂಜಿ ಹೇಳಿದ್ದಾರೆ.

ಆದರೆ ಬಿಗ್ ಬಾಸ್ ನೋಡುವ ವೀಕ್ಷಕರ ಅಭಿಪ್ರಾಯ ಬೇರೆಯದ್ದೆ ಆಗಿದೆ. ಬಿಗ್ ಬಾಸ್ ಬಗ್ಗೆ ಹೊರಗಡೆ ಕೆಟ್ಟದಾಗಿ ಮಾತನಾಡಿದ ಆರ್ಯವರ್ಧನ್‌ ಗುರೂಜಿಗೆ ಸೆಡ್ಡು ಹೊಡೆಯಲು ಬಿಗ್ ಬಾಸ್ ಮನೆಗೆ ಕರೆಸಲಾಗಿದೆ ಎಂದು ವೀಕ್ಷಕರು ತಮ್ಮ ಅಭಿಪ್ರಾಯವನ್ನು ಹೊರ ಹಾಕಿದ್ದಾರೆ. ಬಿಗ್ ಬಾಸ್ ಸೀಸನ್ 10 ಶುರುವಾದಾಗಿನಿಂದಲೂ ಸಹ ಆರ್ಯವರ್ಧನ್ ಗುರೂಜಿ ಒಂದಲ್ಲ ಒಂದು ಕಾರಣಗಳನ್ನು ಇಟ್ಟುಕೊಂಡು ಬಿಗ್ ಬಾಸ್ ಬಗ್ಗೆ ಮಾತನಾಡುತ್ತಾ ಇದ್ದಾರೆ. ಇದಕ್ಕಾಗಿ ಬ್ರಹ್ಮಾಂಡ ಗುರೂಜಿ ನರೇಂದ್ರಬಾಬು ಶರ್ಮ ಅವರನ್ನು ಕರೆಸಿಕೊಳ್ಳಲಾಗಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

More from Filmibeat

English summary
Brahmanda Guruji aka Narendra Babu Sharma enters Bigg boss house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X