BBK 11: ಯಾರಾಗುತ್ತಾರೆ ಬಿಗ್ ಬಾಸ್ ಸೀಸನ್ 11 ರ ವಿನ್ನರ್? ಏನಿದೆ ಟಾಕ್?
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11ರ ಫಿನಾಲೆಗೆ ಇನ್ನೇನು ಒಂದು ವಾರ ಬಾಕಿ ಇದೆ. ಬಹಳ ರೋಚಕ ತಿರುವುಗಳನ್ನು ಹೊಂದಿದ್ದ ಈ ಸೀಸನ್ ಇನ್ನೇನು ಕೆಲವೇ ದಿನಗಳಲ್ಲಿ ಮುಕ್ತಾಯಗೊಳ್ಳಲಿದ್ದು, ವಿನ್ನರ್ ಆಗಿ ಯಾರು ಹೊರ ಬರಲಿದ್ದಾರೆ ಎಂಬುವ ವಿಚಾರವಾಗಿ ಪ್ರೇಕ್ಷಕರಲ್ಲಂತೂ ಬಹಳಷ್ಟು ಕುತೂಹಲವಿದೆ.
ಸದ್ಯಕ್ಕೆ ಬಿಗ್ ಬಾಸ್ ಸೀಸನ್ 11ರ ಫೈನಲ್ ಸ್ಪರ್ಧಿಗಳ ಪಟ್ಟಿಯಲ್ಲಿ ನಟಿ ಮೋಕ್ಷಿತಾ ಪೈ, ನಟ ತ್ರಿವಿಕ್ರಮ್, ನಟ ಉಗ್ರಂ ಮಂಜು, ನಟಿ ಭವ್ಯ ಗೌಡ ಹಾಗೂ ಸಿಂಗರ್ ಹನುಮಂತ ಇದ್ದಾರೆ. ಕೊನೆವರೆಗೂ ಮನೆಯಲ್ಲಿದ್ದ ನಟಿ ಗೌತಮಿ ಜಾಧವ್ ಹಾಗೂ ಧನರಾಜ್ ಆಚಾರ್ ಹಾಗು ವೈಲ್ಡ್ ಕಾರ್ಡ್ ಎಂಟ್ರಿ ಯ ರಜತ್ ಬುಜ್ಜಿ ಫೈನಲಿಸ್ಟ್ ಪಟ್ಟಿಯಿಂದ ಹೊರ ಬಿದ್ದಿದ್ದಾರೆ.

ಇರುವ ಐದು ಫೈನಲ್ಲಿಸ್ಟ್‌ಗಳಲ್ಲಿ ಯಾರು ವಿನ್ನರ್ ಆಗುತ್ತಾರೆ ಎಂಬ ವಿಚಾರವಾಗಿ ಬಹಳಷ್ಟು ಚರ್ಚೆಗಳು ನಡೆಯುತ್ತಿವೆ. ಬಹಳಷ್ಟು ಫ್ಯಾನ್ ಪೇಜ್‌ಗಳು ತಮ್ಮ ತಮ್ಮ ಸೆಲೆಬ್ರಿಟಿಗಳನ್ನು ಚೆನ್ನಾಗಿ ಸಪೋರ್ಟ್ ಮಾಡುತ್ತಿದ್ದಾರೆ. ಆದರೆ ಕೊನೆ ನಿರ್ಧಾರ ಪ್ರೇಕ್ಷಕರ ವೋಟ್ ಮೇಲೆಯೇ ನಿಂತಿದೆ.
ಬಿಗ್ ಬಾಸ್ ಸೀಸನ್ 11ರ ಶುರುವಿನಿಂದಲೂ ನಟ ತ್ರಿವಿಕ್ರಮ್ ಅವರಿಗೆ ಬಹಳಷ್ಟು ದೊಡ್ಡ ಮಟ್ಟದಲ್ಲಿ ಫ್ಯಾನ್ ಫಾಲೋಯಿಂಗ್ ಇದ್ದು, ಮೊದಲಿನಿಂದಲೂ ಪ್ರೇಕ್ಷಕರು, ಅಭಿಮಾನಿಗಳು ತ್ರಿವಿಕ್ರಮ್ ಅವರಿಗೆ ಸಪೋರ್ಟ್ ಮಾಡುತ್ತಲೇ ಬಂದಿದ್ದಾರೆ. ಇನ್ನು ಭವ್ಯ ಗೌಡ ಅವರಿಗೂ ಕೂಡ 'ಗೀತಾ' ಧಾರಾವಾಹಿ ಮೂಲಕ ಬಹು ದೊಡ್ಡ ಅಭಿಮಾನಿ ಬಳಗವಿರುವುದರಿಂದ ಆಕೆಯನ್ನು ಮೊದಲಿನಿಂದಲೂ ಪ್ರೋತ್ಸಾಹಿಸುತ್ತಿದ್ದಾರೆ ಪ್ರೇಕ್ಷಕರು.
ನಟಿ ಮೋಕ್ಷಿತಾ ಪೈಗೆ ಸೀಸನ್ ನ ಶುರುವಿಗೆ ಹೆಚ್ಚಿನ ಸಪೋರ್ಟ್ ಕಾಣದಿದ್ದರೂ ಕ್ರಮೇಣ ಪ್ರೇಕ್ಷಕರು ಈ ನಟಿಯನ್ನು ಮೆಚ್ಚಿಕೊಂಡಿದ್ದಾರೆ. ಮನೆಯಲ್ಲಿ ಆದ ಒಂದಷ್ಟು ಬದಲಾವಣೆಗಳಿಗೆ ಮೋಕ್ಷಿತಾ ಪೈ ಅವರು ತೆಗೆದುಕೊಂಡ ನಿರ್ಧಾರಗಳು ಹಾಗೂ ನಿಲುವುಗಳು ಪ್ರೇಕ್ಷಕರಿಗೆ ಬಹಳ ಹಿಡಿಸಿದಂತಿದೆ. ಇನ್ನು ಉಗ್ರ ಮಂಜು ಮೊದಲಿನಿಂದಲೂ ಬಹಳಷ್ಟು ಸ್ಟ್ರ್ಯಾಟಜಿಗಳ ಮೂಲಕವೇ, ಆಟಗಳನ್ನು ಗೆಲ್ಲುತ್ತಾ ಬಂದಿದ್ದಾರೆ. ಹಾಗಾಗಿ ಇವರಿಗೂ ಒಂದಷ್ಟು ಫ್ಯಾನ್ ಫಾಲೋಯಿಂಗ್ ಖಂಡಿತ ಇದೆ. ಸೀಸನ್ ಶುರುವಿನಲ್ಲಿಯೇ ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಂಡ ಸಿಂಗರ್ ಹನುಮಂತು ತಮ್ಮ ಮುಗ್ಧತೆ ಹಾಗೂ ನೇರ ನಡೆ-ನುಡಿಯಿಂದಲೇ ಸೀಸನ್ ಕೊನೆಯವರೆಗೂ ಬಂದಿದ್ದಾರೆ. ಹನುಮಂತು ಅವರಿಗೂ ಬಹಳ ವಿಭಿನ್ನವಾದ ರೀತಿಯಲ್ಲಿ ಪ್ರೇಕ್ಷಕರು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ ಹಾಗೂ ಬಹಳ ದೊಡ್ಡ ಮಟ್ಟದಲ್ಲಿ ಸಪೋರ್ಟ್ ಮಾಡುತ್ತಿದ್ದಾರೆ.

ಸೀಸನ್‌ನ ಕೊನೆ ಕೊನೆವರೆಗೂ ಇದ್ದ ಚೈತ್ರಾ ಕುಂದಾಪುರ ಇತ್ತೀಚೆಗಷ್ಟೇ ಮನೆಯಿಂದ ಹೊರ ನಡೆದರು. ಗೌತಮಿ ಜಾದವ್, ಧನರಾಜ್ ಆಚಾರ್ ಇಬ್ಬರಿಗೂ ಒಳ್ಳೆಯ ಫ್ಯಾನ್ ಫಾಲೊಯಿಂಗ್ ಇದ್ದರೂ ಸಹ ಫೈನಲ್ ಲಿಸ್ಟ್ ಇಂದ ಹೊರ ಬಿದ್ದಿದ್ದಾರೆ.
ಬಿಗ್ ಬಾಸ್ ಸೀಸನ್ 10ರ ಕಡೆಗೆ ನೋಡುವುದಾದರೆ, ಫಿನಾಲೆಯಲ್ಲಿ ನಟ ಕಾರ್ತಿಕ್ ಮಹೇಶ್, ವಿನಯ್ ಗೌಡ ಸಂಗೀತ ಶೃಂಗೇರಿ ಡ್ರೋನ್ ಪ್ರತಾಪ್, ವರ್ತೂರ್ ಸಂತೋಷ್ ಹಾಗೂ ತುಕಾಲಿ ಸಂತೋಷ್ ಇದ್ದರು. ವಿನಯ್ ಗೌಡ, ಕಾರ್ತಿಕ್ ಮಹೇಶ್ ಹಾಗೂ ಸಂಗೀತ ಶೃಂಗೇರಿ ನಡುವೆ ಬಿಗ್ ಬಾಸ್ ಟ್ರೋಫಿಗಾಗಿ ಬಹಳ ದೊಡ್ಡ ಪೈಪೋಟಿ ಇದ್ದಂತಿತ್ತು. ನಂತರ ನಟ ಕಾರ್ತಿಕ್ ಮಹೇಶ್ ಬಿಗ್ ಬಾಸ್ ಸೀಸನ್ ಹತ್ತರ ವಿನ್ನರ್ ಆಗಿ ಹೊರಬಂದರು. ಡ್ರೋನ್ ಪ್ರತಾಪ್ ರನ್ನರ್ ಅಪ್ ಆದರು.
ಬಿಗ್ ಬಾಸ್ ಸೀಸನ್ 11ರಲ್ಲಿ ಸಿಂಗರ್ ಹನುಮಂತು, ನಟ ತ್ರಿವಿಕ್ರಮ್, ನಟಿ ಮೋಕ್ಷಿತಾ ಪೈ ಹಾಗೂ ನಟಿ ಭವ್ಯಾ ಗೌಡ ಅವರ ನಡುವೆ ಹೆಚ್ಚಿನ ಪೈಪೋಟಿ ಇದ್ದಂತಿದೆ. ಯಾರು ಸೀಸನ್ 11ರ ವಿನ್ನರ್ ಆಗಿ ಹೊರಬರಲಿದ್ದಾರೆ ಎಂಬುದೇ ಸದ್ಯಕ್ಕೆ ಕೌತುಕದ ವಿಚಾರವಾಗಿದೆ.


Click it and Unblock the Notifications











