»   » ಬಿಗ್ ಬಾಸ್ 11ನೇ ಆವೃತ್ತಿಯ ಆರಂಭ ದಿನಾಂಕ ನಿಗದಿ

ಬಿಗ್ ಬಾಸ್ 11ನೇ ಆವೃತ್ತಿಯ ಆರಂಭ ದಿನಾಂಕ ನಿಗದಿ

Posted By:
Subscribe to Filmibeat Kannada

ಬಾಲಿವುಡ್ ನ ಖ್ಯಾತ ರಿಯಾಲಿಟಿ ಶೋ 'ಬಿಗ್ ಬಾಸ್' 11ನೇ ಆವೃತ್ತಿ ಸಾಕಷ್ಟು ಕುತೂಹಲ ಹೆಚ್ಚಿಸಿದ್ದು, ಈಗ ಬಿಗ್ ಬಾಸ್ ಪ್ರಸಾರ ದಿನಾಂಕವೂ ಅಂತಿಮವಾಗಿದೆ.

ಈಗಾಗಲೇ 'ಬಿಗ್ ಬಾಸ್-11'ರಲ್ಲಿ ಯಾವೆಲ್ಲಾ ಸೆಲೆಬ್ರಿಟಿಗಳು ಭಾಗಿಯಾಗುತ್ತಾರೆ ಎಂಬ ಸಂಭಾವನೀಯ ಪಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕಾರ್ಯಕ್ರಮದ ಬಗ್ಗೆ ಮತ್ತಷ್ಟು ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ.

ಸಲ್ಮಾನ್, ಕಮಲ್ ಗಿಂತ ಸುದೀಪ್ 'ಬಿಗ್ ಬಾಸ್' ನಿರೂಪಣೆ ಚೆನ್ನಾಗಿದೆ ಎಂದಿದ್ದು ಯಾರು?

Bigg Boss season 11 starts from October 1

ಬಿಗ್ ಬಾಸ್ ಮೂಲಗಳ ಪ್ರಕಾರ, ಬಿಗ್ ಬಾಸ್-11 ಅಕ್ಟೋಬರ್ 1ರಿಂದ ಶುರುವಾಗಲಿದೆ. ಕಲರ್ಸ್ ಈ ಕಾರ್ಯಕ್ರಮ ವಾಹಿನಿಯಲ್ಲಿ ಪ್ರಸಾರವಾಗಲಿದ್ದು, ಸೋಮವಾರದಿಂದ ಶುಕ್ರವಾರ ರಾತ್ರಿ 10-11 ಗಂಟೆಗೆ ಪ್ರಸಾರವಾಗಲಿದೆ. ಭಾನುವಾರ ರಾತ್ರಿ 9-10 ಗಂಟೆಯವರೆಗೆ ಪ್ರಸಾರವಾಗಲಿದೆ.

ಈ ಬಾರಿಯ 'ಬಿಗ್ ಬಾಸ್'ನಲ್ಲಿ ಇವರೆಲ್ಲಾ ಇರ್ತಾರಂತೆ.!

ಈ ಹಿಂದಿನ ಆವೃತ್ತಿಯಂತೆ ಈ ಆವೃತ್ತಿಯಲ್ಲಿ ಕೂಡ ಸೆಲೆಬ್ರಿಟಿಗಳ ಜೊತೆ ಜನಸಾಮಾನ್ಯರು ಕಾಣಿಸಿಕೊಳ್ಳಲಿದ್ದಾರೆ. ಸಲ್ಮಾನ್ ಖಾನ್ ಹಾಗೂ ಮೋನಿ ರಾಯ್ ಕಾರ್ಯಕ್ರಮದ ಟೀಸರ್ ಶೂಟ್ ಮಾಡಲಾಗಿದೆ.

ಅಂದ್ಹಾಗೆ. ಈ ಬಾರಿಯ ಬಿಗ್ ಬಾಸ್ ನಲ್ಲಿ ಶಿಲ್ಪಾ ಶಿಂಧೆ, ಅಭಿಷೇಕ್ ಮಲ್ಲಿಕ್, ಹರ್ಷ್ ಬೆನಿವಾಲ್, ಪರ್ಲ್ ವಿ ಪುರಿ, ಸನಾ ಸಯೀದ್, ಡಿಂಕ್ ಚಕ್ ಪೂಜಾ ಸೇರಿದಂತೆ ಹಲವರು ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ.

English summary
Finally Big Boss 11 has a telecast date. BB11 is all set to premiere on Colors on October 1. The show will air from 10 pm to 11 pm on Colors on weekdays, and from 9 pm to 10 pm on weekends.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada