BBK12: ಕೊನೆಗೂ ಧ್ರುವಂತ್ ಎಲಿಮಿನೇಟ್; ಮಿಡ್ ವೀಕ್ ಎಲಿಮಿನೇಷನ್ ಪ್ರಕ್ರಿಯೆ ಹೇಗಿತ್ತು?
ಬಿಗ್‌ಬಾಸ್ ಸೀಸನ್-12ರ ಮಿಡ್ ವೀಕ್ ಎಲಿಮಿನೇಷನ್ ನಡೆದಿದೆ. ರಕ್ಷಿತಾ ಸೇಫ್ ಆಗಿ 6ನೇ ಫೈನಲಿಸ್ಟ್ ಆಗಿ ಆಯ್ಕೆ ಆಗಿದ್ದರು. ಬಳಿಕ ಒಬ್ಬೊಬ್ಬರನ್ನು ಸೇವ್ ಮಾಡಿದ ಬಿಗ್‌ಬಾಸ್ ಅಂತಿಮವಾಗಿ
ಮಿಡ್ ವೀಕ್ ಎಲಿಮಿನೇಷನ್‌ನಾಗಿ ಧನುಷ್ ಬಿಟ್ಟು 6 ಮಂದಿ ಸ್ಪರ್ಧಿಗಳನ್ನು ಆಕ್ಟಿವಿಟಿ ರೂಮ್‌ಗೆ ಕರೆಯಲಾಯಿತು. ಎಲ್ಲರೂ ಒಳಗೆ ಹೋಗಿ ಕೂತ ಬಳಿಕ ಎಲಿಮಿನೇಷನ್ ಪ್ರಕ್ರಿಯೆ ವಿವರಿಸಲಾಗಿತ್ತು. ಆಕ್ಟಿವಿಟಿ ರೂಮ್‌ನಿಂದ ಒಬ್ಬೊಬ್ಬರನ್ನು ಹೊರೆಗೆ ಕರೆಯಲಾಗುತ್ತದೆ. ಬಳಿಕ ಯಾರು ಸೇಫ್ ಆಗಿದ್ದಾರೆ ಎಂದು ಹೇಳಿ ಅವರನ್ನು ಹೊರಗಡೆ ಉಳಿಸಲಾಗುತ್ತದೆ. ಯಾರು ಒಳಗೆ ಬರದೇಉಳಿದುಕೊಳ್ಳುತ್ತಾರೋ ಅವರು ಎಲಿಮಿನೇಟ್ ಎಂದು ಬಿಗ್‌ಬಾಸ್ ಹೇಳಿದ್ದರು. ಅದರಲ್ಲಿ ಮೊದಲಿಗೆ ರಕ್ಷಿತಾ ಅವರನ್ನು ಹೊರ ಕರೆಯಲಾಯಿತು.

ಹೊರಗೆ ಬಂದ ಬಳಿಕ ರಕ್ಷಿತಾ ಸೇಫ್ ಆಗಿರುವುದನ್ನು ಆಕೆಗೆ ಬಿಗ್‌ಬಾಸ್ ಹೇಳಿದ್ದಾರೆ. ಬಳಿಕ ಗಿಲ್ಲಿ ಅವರನ್ನು ಕೂಡ ಕರೆದು ಫಿನಾಲೆಗೆ ಹೋಗಿರುವ ವಿಚಾರ ತಿಳಿಸಿ ಗಾರ್ಡನ್ ಏರಿಯಾದಲ್ಲಿ ಫೈನಲಿಸ್ಟ್ ಆಗಿ ತಮ್ಮ ಭಾವಚಿತ್ರ ಹಾಕುವಂತೆ ಹೇಳಲಾಯಿತು. ರಕ್ಷಿತಾ ಕಾನ್ಪೆಷನ್ ರೂಮ್‌ನಿಂದ ಹೊರ ಬಂದರೆ ಗಿಲ್ಲಿ ಸ್ಟೋರ್ ರೂಮ್ ಮೂಲಕ ಹೊರ ಬಂದರು. ನಂತರ ಅಶ್ವಿನಿ ಅವರನ್ನು ಬಿಗ್‌ಬಾಸ್ ಆಕ್ಟಿವಿಟಿ ರೂಮ್‌ನಿಂದ ಹೊರ ಬರಲು ತಿಳಿಸಿದ್ದರು. ಫಿನಾಲೆಗೆ ಆಯ್ಕೆಯಾಗಿರುವಾಗಿ ಅಶ್ವಿನಿ ಅವರಿಗೆ ಹೇಳಿ ಬಿಗ್‌ಬಾಸ್ ಅಭಿನಂದನೆ ತಿಳಿಸಿದರು.
ಅಶ್ವಿನಿ ಬಳಿಕ ರಘು ಆಕ್ಟಿವಿಟಿ ರೂಮ್‌ನಿಂದ ಹೊರಬಂದು ಸೇಫ್ ಆಗಿದ್ದರು. ಅಂತಿಮವಾಗಿ ಧ್ರುವಂತ್ ಹಾಗೂ ಕಾವ್ಯಾ ಆಕ್ಟಿವಿಟಿ ರೂಮ್‌ನಲ್ಲಿ ಉಳಿದುಕೊಂಡರು. ಇಬ್ಬರಲ್ಲಿ ಯಾರು ವಾರದ ಮಧ್ಯೆ ಎಲಿಮಿನೇಟ್ ಆಗಿ ಹೊರ ಬರುತ್ತಾರೆ ಎನ್ನುವ ಕುತೂಹಲ ಮೂಡಿತ್ತು. ಇಬ್ಬರಲ್ಲಿ ಯಾರು ಸೇಫ್ ಆಗಬೇಕು ಎನ್ನುವುದನ್ನು ಸೂಕ್ತ ಕಾರಣಗಳ ಜೊತೆ ತಿಳಿಸುವಂತೆ 5 ಮಂದಿ ಸ್ಪರ್ಧಿಗಳನ್ನು ಬಿಗ್‌ಬಾಸ್ ಕೇಳಿದ್ದರು. ಧ್ರುವಂತ್ ಹೆಸರನ್ನು ಅಶ್ವಿನಿ ಹಾಗೂ ರಘು ತೆಗೆದುಕೊಂಡಿದ್ದರು. ಆದರೆ ಧನುಷ್, ರಕ್ಷಿತಾ ಹಾಗೂ ಗಿಲ್ಲಿ ಮಾತ್ರ ಕಾವ್ಯಾ ಹೆಸರನ್ನು ತೆಗೆದುಕೊಂಡಿದ್ದರು.

ಅಂತಿಮವಾಗಿ ಕಾವ್ಯಾ ಹಾಗೂ ಧ್ರುವಂತ್ ಇಬ್ಬರಲ್ಲಿ ಧ್ರುವಂತ್ ಅವರನ್ನು ಆಕ್ಟಿವಿಟಿ ರೂಮ್‌ನಿಂದ ಬಿಗ್‌ಬಾಸ್ ಹೊರಗೆ ಕರೆದರು. ಬಳಿಕ ಹೊರ ಬಂದ ಕಾವ್ಯಾ ಶಾಕಿಂಗ್ ಎನ್ನುವಂತೆ ಮೇನ್ ಡೋರ್ ಮೂಲಕ ಕಾಮನೆ ಒಳಗೆ ಬಂದುಬಿಟ್ಟರು. ಆಕೆ ಸೇಫ್ ಆಗಿರುವುದನ್ನು ಬಿಗ್‌ಬಾಸ್ ಘೋಷಿಸಿದ್ದರು. ಅಲ್ಲಿಗೆ ಧ್ರುವಂತ್ ಎಲಿಮಿನೇಟ್ ಆಗಿದ್ದು ಖಚಿತವಾಗಿತ್ತು. ಧ್ರುವಂತ್ ಎಲಿಮಿನೇಷನ್ ಬಗ್ಗೆ ಕೆಲ ಗಂಟೆಗಳ ಮುನ್ನ ಊಹಾಪೋಹ ಶುರುವಾಗಿತ್ತು. ಅದೇ ಖಚಿತವಾಯಿತು.
ಬಿಗ್‌ಬಾಸ್ ಇಡೀ ಸೀಸನ್‌ನಲ್ಲಿ ಅದ್ಭುತ ಪ್ರದರ್ಶನದ ಕಾರಣಕ್ಕೆ ಕಿಚ್ಚನ ಚಪ್ಪಾಳೆ ಪಡೆದಿದ್ದ ಧ್ರುವಂತ್ ಎಲಿಮಿನೇಟ್ ಆಗಿ ಅಚ್ಚರಿ ಮೂಡಿಸಿದೆ. ಫಿನಾಲೆಗೂ ಹೋಗದೇ ಇರುವುದು ವಿಪರ್ಯಾಸವೇ ಸರಿ. ಅತಿಯಾದ ಆತ್ಮವಿಶ್ವಾಸವೇ ಧ್ರುವಂತ್‌ಗೆ ಮುಳುವಾಯಿತು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಕಾವ್ಯಾಗಿಂತ ಧ್ರುವಂತ್ ಫಿನಾಲೆಗೆ ಹೋಗಲು ಅರ್ಹರಾಗಿದ್ದರು ಎಂದು ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ.
ಇದೇ ಭಾನುವಾರ ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. 6 ಜನರಲ್ಲಿ ಒಬ್ಬರು ಟ್ರೋಫಿ ಗೆಲ್ಲಲಿದ್ದಾರೆ. ಗಿಲ್ಲಿ ಈ ಬಾರಿ ದಾಖಲೆ ಮಟ್ಟದಲ್ಲಿ ವೋಟ್ ಪಡೆದು ಗೆಲುವಿನ ನಗೆ ಬೀರುತ್ತಾರೆ ಎನ್ನುವ ಚರ್ಚೆ ನಡೀತಿದೆ. ಈಗಾಗಲೇ ವೋಟಿಂಗ್ ಲೈನ್ಸ್ ಓಪನ್ ಆಗಿದೆ.


Click it and Unblock the Notifications











