BBK12: ಧ್ರುವಂತ್ ಅಬ್ಬರಕ್ಕೆ ಗಿಲ್ಲಿ ಗಪ್ ಚುಪ್; ಮೊದಲ ಬಾರಿ ಮಂಡಿವೂರಿದ ಗಿಲ್ಲಿ- ವಿಡಿಯೋ

ಗಿಲ್ಲಿ ಅಂದ್ರೆ ಕಾಮಿಡಿ.. ಕಾಮಿಡಿ ಅಂದ್ರೆ ಗಿಲ್ಲಿ.. ಎಲ್ಲಾ ವಿಚಾರದ ಬಗ್ಗೆ ರಿಯಾಕ್ಟ್ ಮಾಡುತ್ತಾ, ಎಲ್ಲರಿಗೂ ತಮಾಷೆಯಾಗಿ ಕೌಂಟರ್ ಕೊಡುತ್ತಾ ಬಿಗ್‌ಬಾಸ್ ಮನೆಯಲ್ಲಿ ಕೂಡ ಗಿಲ್ಲಿ ಗಮನ ಸೆಳೆಯುತ್ತಿದ್ದಾರೆ. ಕೆಲವೊಮ್ಮೆ ಆತನ ಕಾಮಿಡಿ ಅತಿರೇಕಕ್ಕೆ ಹೋಗಿರುವುದು ಇದೆ. ಬಳಿಕ ಅದಕ್ಕೆ ಕ್ಷಮೆ ಕೇಳಿರುವ ಪ್ರಸಂಗಗಳು ನಡೆದಿದೆ.

ಬಿಗ್‌ಬಾಸ್ ಮನೆಯ ಎಲ್ಲಾ ಸ್ಪರ್ಧಿಗಳ ಬಗ್ಗೆ ಗಿಲ್ಲಿ ಕಾಮಿಡಿ ಮಾಡಿರುವುದು ಇದೆ. ತಮ್ಮದೇ ಶೈಲಿಯಲ್ಲಿ ವ್ಯಂಗ್ಯ ಮಾಡಿದ್ದಾರೆ. ಅಶ್ವಿನಿ ಗೌಡ ಹಾಗೂ ಧ್ರುವಂತ್ ಮಾತ್ರ ಗಿಲ್ಲಿಗೆ ಆಗಾಗ್ಗೆ ಕೌಂಟರ್ ಕೊಡುವ ಪ್ರಯತ್ನ ಮಾಡಿದ್ದಾರೆ. ಆದರೆ ಗಿಲ್ಲಿ ಕೌಂಟರ್ ಕೊಡುವುದು, ರೋಸ್ಟ್ ಮಾಡುವುದರ ಮುಂದೆ ಎಲ್ಲರೂ ಸಪ್ಪಗಾಗಿಬಿಡ್ತಾರೆ. ಆದರೆ ಇದೇ ಮೊದಲ ಬಾರಿಗೆ ಗಿಲ್ಲಿಗೆ ಧ್ರುವಂತ್ ಸೆಡ್ಡು ಹೊಡೆದಿದ್ದಾರೆ.

Bigg Boss Season 12 Dhruvanth s Slap Stuns Gilli Ashwini Sparks Heated Showdown

ಧ್ರುವಂತ್ ಕೊಟ್ಟ ಚಮಕ್‌ಗೆ ಒಂದು ಕ್ಷಣ ಪ್ರತಿಕ್ರಿಯೆ ಕೊಡಲಾಗದೇ ಗಿಲ್ಲಿ ಶಾಕ್ ಆಗಿದ್ದಾರೆ. ಅಶ್ವಿನಿ ಕೂಡ ಧ್ರುವಂತ್ ಜೊತೆ ಸೇರಿ ಗಿಲ್ಲಿಗೆ ತಿರುಗೇಟು ಕೊಟ್ಟಿದ್ದಾರೆ. ಆರಂಭದಲ್ಲಿ ಅಶ್ವಿನಿ ಹಾಗೂ ಜಾಹ್ನವಿ ಸೇರಿ ಗಿಲ್ಲಿಗೆ ಟಾಂಗ್ ಕೊಡಲು ಯತ್ನಿಸುತ್ತಿದ್ದರು. ಬಳಿಕ ಅಶ್ವಿನಿ ಹಾಗೂ ಧ್ರುವಂತ್ ಒಂದಾಗಿದ್ದಾರೆ. ಆಗಾಗ್ಗೆ ಗಿಲ್ಲಿಗೆ ಧ್ರುವಂತ್ ಕ್ವಾಟ್ಲೆ ಕೊಡುವ ಪ್ರಯತ್ನ ಮಾಡಿದ್ದಾರೆ. ವ್ಯಂಗ್ಯ ಮಾಡಿ ತಿರುಗೇಟು ನೀಡುವ ಪ್ರಯತ್ನ ಮಾಡಿದ್ದಾರೆ. ಆದರೆ ಪ್ರತಿ ಬಾರಿ ಗಿಲ್ಲಿ ಅದಕ್ಕೆ ತಕ್ಕ ಉತ್ತರ ಕೊಡುತ್ತಿದ್ದರು. ಆದರೆ ಈ ಬಾರಿ ಗಿಲ್ಲಿ ಸೈಲೆಂಟ್ ಆಗದೇ ಬೇರೆ ಮಾರ್ಗ ಇರಲಿಲ್ಲ ಎನ್ನುವಂತಾಗಿದೆ.

ಮನೆಮಂದಿಯಲ್ಲಿ ಯಾರು ಹೇಗೆ ನಡೆಯುತ್ತಾರೆ ಎಂದು ಗಿಲ್ಲಿ ಇಮಿಟೇಟ್ ಮಾಡಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಆಗ ಅಶ್ವಿನಿ ಹಾಗೂ ಧ್ರುವಂತ್ ಕೂಡ ಗಿಲ್ಲಿಗೆ ತಿರುಗೇಟು ಕೊಟ್ಟಿದ್ದಾರೆ. "ಅವನಿಗೆ ತೋರಿಸ್ಬೇಕು, ಮೂಳೆನೆ ಇಲ್ಲ" ಎಂದು ಅಶ್ವಿನಿ ಹೇಳಿದ್ದು ಕೂಡಲೇ ಗಿಲ್ಲಿ ರೀತಿ ಧ್ರುವಂತ್ ನಡೆದು ಗೇಲಿ ಮಾಡಿದ್ದಾರೆ. ಅದನ್ನು ನೋಡಿ ಅಶ್ವಿನಿ ಬಿದ್ದು ಬಿದ್ದು ನಕ್ಕಿದ್ದಾರೆ. ಅದಕ್ಕೆ ಏನು ಉತ್ತರಿಸಲು ಸಾಧ್ಯವಾಗದೇ ಗಿಲ್ಲಿ ತಡಬಡಾಯಿಸಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ. 'ಗಿಲ್ಲಿಗೆ ಚಮಕ್ ಕೊಟ್ಟ ಧ್ರುವಂತ್' ಎಂದು ವಿಡಿಯೋ ವೈರಲ್ ಮಾಡ್ತಿದ್ದಾರೆ.

ಇನ್ನು ಗಿಲ್ಲಿ ಈ ವಾರ ಕ್ಯಾಪ್ಟನ್ ಆಗಿರೋದು ಗೊತ್ತೇಯಿದೆ. ಮತ್ತೆ ಅಶ್ವಿನಿ ಹಾಗೂ ಧ್ರುವಂತ್ ಇಬ್ಬರನ್ನು ಗಿಲ್ಲಿ ಕೆಣಕ್ಕಿದ್ದು ಪರಿಣಾಮ ವಿಕೋಪಕ್ಕೆ ಹೋಗಿದೆ. ಗಿಲ್ಲಿಗೆ ತೊಡೆ ತಟ್ಟಿ ಅಶ್ವಿನಿ ಚಾಲೆಂಜ್ ಹಾಕಿದ್ದಾರೆ. "ಕ್ಷಣ ಕ್ಷಣಕ್ಕೂ ಕೊಡ್ತೀವಿ, ತಗೋತಾ ಇರ್ಬೇಕು" ಎಂದಿದ್ದಾರೆ. ಅದಕ್ಕೆ ಸಂಬಂಧಿಸಿದ ಪ್ರೋಮೊ ವೈರಲ್ ಆಗ್ತಿದೆ. ಗಾರ್ಡನ್ ಏರಿಯಾದಲ್ಲಿ ಸುಮ್ಮನೆ ಕೂತಿದ್ದ ಅಶ್ವಿನಿ ಹಾಗೂ ಧ್ರುವಂತ್ ಬಳಿ ಬಂದು ಗಿಲ್ಲಿ ತಮಾಷೆ ಮಾಡಿದ್ದಾರೆ. ಆಗ ಇಬ್ಬರೂ ತಿರುಗಿಬಿದ್ದಿದ್ದಾರೆ.

"ನಿನ್ನ ಸೊಂಟದಲ್ಲಿ ನಿಂತ್ಕೊಂಡು ಸ್ನಾನ, ಹಲ್ಲುಜ್ಜುಕೊಂಡು ಬಾ ನೀನು ಎಂದು ಗಿಲ್ಲಿಗೆ ಸವಾಲು ಹಾಕುತ್ತಾರೆ. ನಿನ್ನಿಂದ ಇಷ್ಟೇ ಮಾಡಲು ಸಾಧ್ಯ. ಮಿಸ್ಟರ್ ನಟರಾಜ್ ಅರ್ಧ ಅರ್ಧ ಗಂಟೆಗೆ ಕೊಡುತ್ತಿರುತ್ತೇನೆ ಕೇಳಿಸಿಕೊ" ಎಂದು ಧ್ರುವಂತ್ ಹೇಳಿದ್ದಾರೆ. "ಏಯ್ ಬೆನ್ನುಮೂಳೆ ಇಲ್ಲದವನೇ" ಅಂತ ಅಶ್ವಿನಿ ಗೌಡ ವಾಗ್ದಾಳಿ ಮಾಡಲು ಆರಂಭಿಸಿದ್ದಾರೆ. ನನ್ನನ್ನು ಕೆಣಕಬೇಡ ಅಂತ ಸಾವಿರ ಸಲ ಹೇಳಿದ್ದೇನೆ. ನಿನ್ನ ಟೈಮ್ ಸ್ಟಾರ್ಟ್ ಆಗಿದೆ" ಎಂದು ತೊಡೆ ತಟ್ಟಿ ಅಶ್ವಿನಿ ಗೌಡ ಕೂಡ ಗಿಲ್ಲಿಗೆ ಸವಾಲು ಹಾಕಿದ್ದಾರೆ.

ಬಿಗ್‌ಬಾಸ್ ಸೀಸನ್ 12 ಈಗ 90 ದಿನ ಪೈರಸಿ 100ನೇ ದಿನದತ್ತ ಸಾಗಿದೆ. ಶೀಘ್ರದಲ್ಲೇ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಗಿಲ್ಲಿ ಟ್ರೋಫಿ ಗೆಲ್ಲೋದು ಗ್ಯಾರಂಟಿ ಎಂದು ಸಾಕಷ್ಟು ಜನ ಹೇಳುತ್ತಿದ್ದಾರೆ. ಯಾರಿಗೆ ವಿಜಯಮಾಲೆ ಎನ್ನುವುದು ಶೀಘ್ರದಲ್ಲೇ ಗೊತ್ತಾಗಲಿದೆ.

More from Filmibeat

Read more about: bigg boss 12 bigg boss gilli
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X