BBK12: ಗಿಲ್ಲಿ ಮೇಲೆ ಕೂಗಾಡುತ್ತಿದ್ದ ಮಾಜಿ ಸ್ಪರ್ಧಿಗಳೆಲ್ಲಾ ಏಕಾಏಕಿ ಭಾವುಕರಾಗಿಬಿಟ್ರು

ಬಿಗ್‌ಬಾಸ್ ಸೀಸನ್ 12ರಲ್ಲಿ ಈ ವಾರ ಮಾಜಿ ಸ್ಪರ್ಧಿಗಳ ಆರ್ಭಟ ಜೋರಾಗಿದೆ. ಕಳೆದ ಸೀಸನ್‌ನಲ್ಲಿ ಅಬ್ಬರಿಸಿದ್ದ ಉಗ್ರಂ ಮಂಜು, ರಜತ್, ಚೈತ್ರಾ, ಮೋಕ್ಷಿತಾ ಹಾಗೂ ತ್ರಿವಿಕ್ರಮ್ ಅತಿಥಿಗಳಾಗಿ ಮನೆಯೊಳಗೆ ಬಂದಿದ್ದಾರೆ. ಅವರನ್ನು ಸತ್ಕರಿಸುವ ಹೋಟೆಲ್ ಸಿಬ್ಬಂದಿಯಾಗಿ ಬಿಗ್‌ಬಾಸ್ ಸ್ಪರ್ಧಿಗಳು ಬದಲಾಗಿದ್ದರು.

ಮಾಜಿ ಸ್ಪರ್ಧಿಗಳು ಬಂದ ಆರಂಭದಲ್ಲೇ ಗಿಲ್ಲಿ ಕಾಮಿಡಿ ಮಾಡಿ ಕಿಚಾಯಿಸಿದ್ದರು. ಅಲ್ಲಿಂದ ಗಿಲ್ಲಿ ಮೇಲೆ ಅವರೆಲ್ಲಾ ಮುಗಿಬಿದ್ದಿದ್ದರು. ಕ್ಲಾಟೆ, ಕೂಳೆ ಕೊಟ್ಟು ಗಿಲ್ಲಿಗೆ ಟಕ್ಕರ್ ಕೊಡುವ ಪ್ರಯತ್ನ ಮಾಡಿದ್ದರು. ಸಾಧ್ಯವಾದಷ್ಟು ಗಿಲ್ಲಿ ಕೂಡ ತಿರುಗೇಟು ಕೊಡುತ್ತಿದ್ದ. ದಿಢೀರನೆ ಮಾಜಿ ಸ್ಪರ್ಧಿಗಳೆಲ್ಲಾ ಭಾವುಕರಾಗಿದ್ದಾರೆ. ಬಿಗ್‌ಬಾಸ್ ತಮ್ಮ ಜೀವನದಲ್ಲಿ ತಂದ ಬದಲಾವಣೆ ಬಗ್ಗೆ ಮಾತನಾಡುತ್ತಾ ಕಣ್ಣೀರಾಗಿದ್ದಾರೆ.

Bigg Boss Season 12 Emotional Reunion as Ex-Contestants Share Life-Changing Journeys

ನೆಗೆಟಿವ್ ಇಮೇಜ್ ಇರುವವರು ಬಿಗ್‌ಬಾಸ್ ಮನೆಗೆ ಬಂದು ಪಾಸಿಟಿವ್ ಇಮೇಜ್ ಸಂಪಾದಿಸಿಕೊಂಡಿದ್ದಾರೆ. ಬಿಗ್‌ಬಾಸ್‌ ಮನೆಗೆ ಬಂದು ಸ್ಟಾರ್‌ಗಳಾಗಿ ಜನಪ್ರಿಯತೆ ಗಳಿಸಿದವರು ಇದ್ದಾರೆ. ಇದೇ ವಿಚಾರದ ಬಗ್ಗೆ ಮಂಜು, ರಜತ್, ಚೈತ್ರಾ ಮಾತನಾಡುತ್ತಾ ಅತ್ತಿದ್ದಾರೆ. ಬಿಗ್‌ಬಾಸ್ ಮನೆ ನಮಗೆ ಸಾಕಷ್ಟು ಕೊಟ್ಟಿದೆ. ಅದನ್ನು ಜೀವನದಲ್ಲಿ ಮರೆಯೋಕೆ ಸಾಧ್ಯವಿಲ್ಲ ಎಂದಿದ್ದಾರೆ.

ರಜತ್ ಮಾತನಾಡಿ "ನಾವ್ ಸತ್ತ ಮೇಲೆ ಕೂಡ ವಂಶ ಪಾರ್ಯಂಪರ್ಯ ನೆನಪಿಸಿಕೊಳ್ಳುವಂತ ಮೆಮೋರಿಸ್ ಬಿಗ್‌ಬಾಸ್ ಕೊಟ್ಟಿದೆ ಎಂದು ರಜತ್ ಹೇಳಿದ್ದಾರೆ. ನಾನು ಎಲ್ಲೇ ಹೋದ್ರು ಬಂದ್ರು ಜನ ಪ್ರೀತಿ ತೋರಿಸುತ್ತಾರೆ. ಅದನ್ನೆಲ್ಲಾ ಕೊಟ್ಟಿದ್ದು ಬಿಗ್‌ಬಾಸ್ ಎಂದು ಉಗ್ರಂ ಮಂಜು ತಿಳಿಸಿದ್ದಾರೆ. ಈ ಮನೆ ನಾನು ತಲೆ ಎತ್ತಿ ನಿಲ್ಲುವಂತೆ ಮಾಡಿದೆ ಎಂದು ಮೋಕ್ಷಿತಾ ಹೇಳಿದ್ದಾರೆ.

ಕರ್ಮ ಕಳೆಯುವ ಜಾಗ ಇದು ತ್ರಿವಿಕ್ರಮ್ ಹೇಳಿದ್ದಾರೆ. ಏನು ಇಲ್ಲದೇ ಹಳ್ಳಿಯಿಂದ ಬಂದೆ. ಬಣ್ಣದಲೋಕದಲ್ಲಿ ಗುರ್ತಿಸಿಕೊಂಡೆ. ಬಿಗ್‌ಬಾಸ್ ಮನೆಗೆ ಬರುವಾಗ ಕೂಡ ನನ್ನ ಬಳಿ ಹಣ ಇರಲಿಲ್ಲ. ಮನೆ ಒಳಗೆ ಬಂದು ಹಾಕಿಕೊಳ್ಳಲು ಬಟ್ಟೆ ತೆಗೆದುಕೊಳ್ಳುವುದಕ್ಕು ಹಣ ಇಲ್ಲದ ಪರಿಸ್ಥಿತಿ. ಒಂದೆರಡು ವಾರ ಮನೆಯಲ್ಲಿ ಇರ್ತೀನಿ ಎಂದು ಕೆಲವರು ಹೇಳಿದ್ದರು. ಆದರೆ ಇಲ್ಲೇ ಸಾಧಿಸಿ ತೋರಿಸಿದೆ ಎಂದು ತ್ರಿವಿಕ್ರಮ್ ಹೇಳಿದ್ದಾರೆ.

ಬಿಗ್‌ಬಾಸ್ ಯಾರಿಗೆ ಏನ್ ಕೊಟ್ಟಿದ್ಯೋ ಗೊತ್ತಿಲ್ಲ. ನನಗೆ ಪುನರ್ಜನ್ಮ ಕೊಟ್ಟಿದೆ ಎಂದು ಹೇಳಿ ಚೈತ್ರಾ ಕುಂದಾಪುರ ಭಾವುಕರಾಗಿದ್ದಾರೆ. "ಅತಿಥಿಗಳ ಮನದಾಳದ ಮಾತುಗಳು" ಎಂದು ಕ್ಯಾಪ್ಷನ್ ಕೊಟ್ಟು ಹೊಸ ಪ್ರೋಮೊ ರಿಲೀಸ್ ಮಾಡಿದ್ದಾರೆ. ಅತಿಥಿಗಳ ಮಾತು ಕೇಳುತ್ತಾ ಧ್ರುವಂತ್ ಕೂಡ ಭಾವುಕರಾಗಿರುವುದನ್ನು ನೋಡಬಹುದು.

ರಜತ್ ಮಾತನಾಡುತ್ತಾ ತಮ್ಮ ಹಿನ್ನೆಲೆ ಬಗ್ಗೆ ಮಾತನಾಡಿದ್ದಾರೆ. ನಮ್ಮ ತಂದೆ ಬಹಳ ಸೌಮ್ಯ ಸ್ವಭಾದವರು. ಚಿಕ್ಕಂದಿನಲ್ಲಿ ನಾನು ಅದೇ ರೀತಿ ಇದ್ದೆ. ಮುಂದೆ ಅದೇ ನನನ್ನು ಮತ್ತಷ್ಟು ಬಲಪಡಿಸಿತು. ನನಗೆ ಕೊಂಚ ಅಹಂಕಾರ ಇದೆ ಎಂದು ಎಲ್ಲರೂ ಹೇಳುತ್ತಾರೆ. ನಾನು ಇರುವುದೇ ಹಾಗೆ. ಯಾರಾದರೂ ನನ್ನನ್ನು ಕೆಣಕಿದರೆ ಸುಮ್ಮನಿರಲ್ಲ. ಅದನ್ನು ದುರಹಂಕಾರ ಎಂದರೆ ಏನೂ ಮಾಡೋಕೆ ಸಾಧ್ಯವಿಲ್ಲ ಎಂದಿದ್ದಾರೆ.

ನನಗೆ ಮಾತ್ರವಲ್ಲ, ಬಿಗ್‌ಬಾಸ್ ಬಳಿಕ ನಮ್ಮ ತಂದೆಯನ್ನು ಕೂಡ ಜನ ಗುರ್ತಿಸುವಂತಾಗಿದೆ ಎಂದು ಮಂಜು ಹೇಳಿದ್ದಾರೆ. ಒಟ್ಟಾರೆ ನಾಲ್ಕೈದು ದಿನಗಳಿಂದ ಕೂಗಾಡುತ್ತಿದ್ದರು ತಮ್ಮ ಬಿಗ್‌ಬಾಸ್ ಜರ್ನಿ ನೆನೆದು ಭಾವುಕರಾಗಿದ್ದಾರೆ. ಅವರ ಮಾತುಗಳನ್ನೆಲ್ಲಾ ಕೇಳ್ತಾ ಕೇಳ್ತಾ ಮನೆ ಮಂದಿ ಮೌನಕ್ಕೆ ಜಾರಿದ್ದಾರೆ. ಇನ್ನು ಮನೆ ಮಂದಿಯ ಒಗ್ಗಟ್ಟು ಪರೀಕ್ಷಿಸಲು ಅವರನ್ನು ಮತ್ತಷ್ಟು ಒಗ್ಗಟ್ಟಾಗಿ ಇರುವಂತೆ ಮಾಡುವ ಟಾಸ್ಕ್ ಮಾಜಿ ಸ್ಪರ್ಧಿಗಳಿಗೆ ಕೊಟ್ಟಿದ್ದಾರೆ. ಅದೇ ಕಾರಣಕ್ಕೆ ಮನೆಯೊಳಗೆ ಅತಿಥಿಗಳಾಗಿ ಬಂದು ಎಲ್ಲರ ತಾಳ್ಮೆ ಪರೀಕ್ಷಿಸುತ್ತಿದ್ದಾರೆ. ಚೈತ್ರಾ ಬಾಯ್ತಪ್ಪಿ ಈ ವಿಚಾರ ಹೇಳಿದ್ದರು.

More from Filmibeat

Read more about: bigg boss 12 bigg boss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X