BBK12: ಈ ವಾರ ಎಲಿಮಿನೇಷನ್ ಇಲ್ವಾ? ಸೀಕ್ರೆಟ್ ರೂಮ್‌ಗೆ ಹೋಗುವ ಇಬ್ಬರು ಯಾರು?

ಬಿಗ್‌ಬಾಸ್ ಸೀಸನ್ 12 ರೋಚಕ ಹಂತ ತಲುಪಿದೆ. ರಜತ್ ಹಾಗೂ ಚೈತ್ರಾ ಅತಿಥಿಗಳಾಗಿ ಮನೆ ಒಳಗೆ ಹೋದ ಮೇಲೆ ಆಟ ಮತ್ತಷ್ಟು ಚುರುಕುಗೊಂಡಿದೆ. ಈ ವಾರ ಕಿಚ್ಚನ ಪಂಚಾಯ್ತಿ ಆರಂಭವಾಗಿದೆ. ಶನಿವಾರದ ಎಪಿಸೋಡ್‌ನಲ್ಲಿ ಅಶ್ವಿನಿ, ರಜತ್, ಚೈತ್ರಾಗೆ ಸುದೀಪ್ ಸರಿಯಾಗಿ ಕ್ಲಾಸ್ ತಗೊಂಡಿದ್ದಾರೆ.

ವೀಕೆಂಡ್ ಎಪಿಸೋಡ್‌ನಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ನಡೀತು. 'ವಿಲನ್' ಕೊಟ್ಟಿದ್ದ ಸೀಕ್ರೆಟ್ ಟಾಸ್ಕ್‌ಗಳನ್ನು ಗಿಲ್ಲಿ ಹಾಗೂ ಅಶ್ವಿನಿ ಗೌಡ ಚೆನ್ನಾಗಿ ನಿಭಾಯಿಸಿದ್ದಾಗಿ ಸುದೀಪ್ ಮೆಚ್ಚುಗೆ ಸೂಚಿಸಿದರು. ಎಲಿಮಿನೇಷನ್ ವಿಚಾರಕ್ಕೆ ಬಂದರೆ ಶನಿವಾರ ಯಾರೊಬ್ಬರನ್ನು ಸುದೀಪ್ ಸೇವ್ ಮಾಡಲಿಲ್ಲ. ಹಾಗಾಗಿ ಭಾನುವಾರ ನಿರ್ಣಾಯಕ ಎನ್ನುವಂತಾಗಿದೆ.

Bigg Boss Season 12 No Elimination Shock Secret Room Twist and Sudeep Schools Rajat Chaitra

ಈ ವಾರ ವೋಟಿಂಗ್ ಲೈನ್ಸ್ ಓಪನ್ ಆಗಲಿಲ್ಲ. ಹಾಗಾಗಿ ಎಲಿಮಿನೇಷನ್ ಇರಲ್ಲ ಎಂದು ವೀಕ್ಷಕರು ಭಾವಿಸಿದ್ದಾರೆ. ಅತಿಥಿಗಳಾಗಿ ಬಂದಿರುವ ರಜತ್ ಹಾಗೂ ಚೈತ್ರಾ ಮನೆಯಿಂದ ನಿರ್ಗಮಿಸುತ್ತಾರೆ ಎಂದು ಭಾವಿಸುತ್ತಿದ್ದಾರೆ. ಆದರೆ ಬಿಗ್‌ಬಾಸ್ ಮನೆಯಲ್ಲಿ ಎಲ್ಲವೂ ಊಹಿಸಿದಂತೆ ನಡೆಯಲ್ಲ. ಎಲಿಮಿನೇಷನ್ ಇಲ್ಲದೇ ಇರಬಹುದು ಆಟ ಬಿಗ್‌ಬಾಸ್ ಆಟ ಬರೆಯದ್ದೇ ಇದೆ.

ವೀಕ್ಷಕರಿಗೆ ಎಲಿಮಿನೇಷನ್ ಇಲ್ಲ. ಆದರೆ ಮನೆ ಮಂದಿಗೆ ಶಾಕ್ ಕಾದಿದೆ ಎನ್ನಲಾಗ್ತಿದೆ. ಇಬ್ಬರನ್ನು ಎಲಿಮಿನೇಷನ್‌ ಎಂದು ಹೇಳಿ ಸೀಕ್ರೆಟ್ ರೂಮ್‌ಗೆ ಕಳುಹಿಸುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ. ಧ್ರುವಂತ್ ಹಾಗೂ ರಕ್ಷಿತಾ ಆ ರೀತಿ ಸೀಕ್ರೆಟ್ ರೂಮ್‌ಗೆ ಹೋಗುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ರಾತ್ರಿ 'ಸೂಪರ್ ಸಂಡೇ ವಿಥ್ ಸುದೀಪ' ಎಪಿಸೋಡ್ ಪ್ರಸಾರ ಆಗುವವರೆಗೂ ಈ ಬಗ್ಗೆ ಸ್ಪಷ್ಟನೆ ಸಿಗಲ್ಲ.

ಭಾನುವಾರದ ಎಪಿಸೋಡ್ ಪ್ರೋಮೊ ಕೂಡ ವೈರಲ್ ಆಗ್ತಿದೆ. ಯಾರ ಪಾಪದ ಕೊಡ ತುಂಬಿದೆ. ಯಾರು ಮನೆಯಿಂದ ಹೊರ ಹೋಗಬೇಕು ಎಂದು ಮನೆಮಂದಿಗೆ ನಿರ್ಧರಿಸಲು ಟಾಸ್ಕ್‌ ಕೊಟ್ಟಿದ್ದಾರೆ ಸುದೀಪ್. ಈ ವೇಳೆ ಗಿಲ್ಲಿ ಹಾಗೂ ರಜತ್ ನಡುವೆ ವಾಕ್ಸಮರ ನಡೆದಿದೆ. ಗಿಲ್ಲಿನ ಹೊರಗಡೆ ಕಳುಹಿಸಿ ನಾನು ಮನೆಯಿಂದ ಹೊರಗಡೆ ಕಾಲಿಡುತ್ತೀನಿ ಎಂದು ರಜತ್ ಹೇಳಿ ಸವಾಲು ಹಾಕಿದ್ದಾರೆ. ಅದೇ ಮಾತನ್ನು ತಿರುಗಿಸಿ ಗಿಲ್ಲಿ ಹೇಳಿ ಪ್ರತಿ ಸವಾಲು ಹಾಕಿದ್ದಾರೆ.

ಇನ್ನು ಈ ವಾರ ಎಲಿಮಿನೇಷನ್ ಇಲ್ಲದೇ ಇದ್ದರೂ ಮುಂದಿನ ವಾರ ಡಬಲ್ ಎಲಿಮಿನೇಷನ್ ತೂಗುಗತ್ತಿ ತೂಗಲಿದೆ. ಅಥವಾ ಮುಂದಿನ ವಾರ ರಜತ್ ಹಾಗೂ ಚೈತ್ರಾ ಅವರನ್ನು ಹೊರಗೆ ಕರೆಸುತ್ತಾರಾ? ಮುಂದಿನ ವಾರ ಕೂಡ ಎಲಿಮಿನೇಷನ್ ಇರುವುದಿಲ್ವಾ? ಎನ್ನುವ ಪ್ರಶ್ನೆಗಳು ಮೂಡಿದೆ. ಶನಿವಾರ ಕಿಚ್ಚನ ಪಂಚಾಯ್ತಿ ಕಾವೇರಿತ್ತು. ಮುಖ್ಯವಾಗಿ ವೈಲ್ಡ್‌ಕಾರ್ಡ್ ಎಂಟ್ರಿ ರಜತ್ ಹಾಗೂ ಚೈತ್ರಾಗೆ ಸುದೀಪ್ ಖಡಕ್ ಕ್ಲಾಸ್ ತಗೊಂಡಿದ್ದಾರೆ.

ಅತಿಥಿಗಳಾಗಿ ಬಂದಿರುವ ಇಬ್ಬರ ಮೇಲೆ ಮನೆಮಂದಿ ಸಾಕಷ್ಟು ಆರೋಪಗಳನ್ನು ಮಾಡಿದ್ದಾರೆ. ಮುಖ್ಯವಾಗಿ ಅಶ್ವಿನಿ ಹಾಗೂ ಧ್ರುವಂತ್ ಆರೋಪಗಳ ಸರಮಾಲೆಯನ್ನು ತೆರೆದಿಟ್ಟರು. ಅಶ್ವಿನಿ ಮಾತನಾಡಿ ಇವರಂತಹ ಕಳಪೆ ಮತ್ತೊಬ್ಬರು ಇಲ್ಲ. ರಜತ್ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಆವೇಶದಲ್ಲಿ ಇಡಿಯಟ್ ಎನ್ನುವ ಪದ ಬಳಸಿದ್ದರು. ಅದಕ್ಕೆ ಸುದೀಪ್ ಆಕ್ಷೇಪ ವ್ಯಕ್ತಪಡಿಸಿದ್ದರು. ಆ ಪದ ಬಿಟ್ಟು ಮಾತನಾಡಬಹುದಿತ್ತು ಎಂದರು. ಬಳಿಕ ಅಶ್ವಿನಿ ಕ್ಷಮೆ ಕೇಳಿದ್ರು, ಆದರೆ ಆವೇಶದಲ್ಲಿ ಆ ರೀತಿ ಮಾತನಾಡಿದ್ದಾಗಿ ತಿಳಿಸಿದ್ದರು.

ಈ ವಾರ ಟಾಸ್ಕ್‌ ವೇಳೆ ಉಸ್ತುವಾರಿ ಆಗಿದ್ದ ಚೈತ್ರಾ ಬಗ್ಗೆ ಕೂಡ ಮನೆಮಂದಿ ಆರೋಪ ಮಾಡಿದ್ದರು. ಟಾಸ್ಕ್‌ ವೇಳೆ ಚೈತ್ರಾ ತೆಗೆದುಕೊಂಡ ನಿರ್ಧಾರಗಳು ಸರಿಯಾಗಿ ಇರಲಿಲ್ಲ ಎಂದು ಸುದೀಪ್ ಹೇಳಿದ್ದರು. ಉಸ್ತುವಾರಿ ಹೇಳಿದ ಮಾತುಗಳನ್ನು ಕೇಳದವರಿಗೂ ಸುದೀಪ್ ಕ್ಲಾಸ್ ತಗೊಂಡಿದ್ದಾರೆ.

More from Filmibeat

Read more about: bigg boss 12 bigg boss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X