ಇನ್‌ಸ್ಟಾಗ್ರಾಮ್‌ನಲ್ಲಿ ಗಿಲ್ಲಿನ ಅನ್‌ಫಾಲೋ ಮಾಡಿದ ಮ್ಯೂಟಂಟ್ ರಘು; ಅಷ್ಟಕ್ಕೂ ಕಾರಣ ಏನು?

ಬಿಗ್‌ಬಾಸ್ ಸೀಸನ್ -12 ಸ್ಪರ್ಧಿಗಳ ಕ್ರೇಜ್ ಇನ್ನು ಕಮ್ಮಿ ಆಗಿಲ್ಲ. ಈ ಹಿಂದಿನ ಎಲ್ಲಾ ಬಿಗ್‌ಬಾಸ್ ಸೀಸನ್‌ಗಳಿಗಿಂತ 12ನೇ ಸೀಸನ್ ಸೂಪರ್ ಹಿಟ್ ಆಗಿತ್ತು. ಕಲರ್ಸ್ ಕನ್ನಡ ವಾಹಿನಿಗೆ ಭರ್ಜರಿ ಟಿಆರ್‌ಪಿ ಕೂಡ ಬಂದಿತ್ತು. ಸ್ಪರ್ಧಿಗಳನ್ನು ಗೆಲ್ಲಿಸಲು ವೀಕ್ಷಕರಿಂದ ಭರ್ಜರಿ ವೋಟ್ ಕೂಡ ಬಂದಿತ್ತು.

ಗಿಲ್ಲಿ ಹವಾ ಬಗ್ಗೆ ಬಿಡಿಸಿ ಹೇಳುವುದು ಬೇಕಾಗಿಲ್ಲ. ಫಿನಾಲೆ ನಡೆದು ತಿಂಗಳು ಕಳೆದ್ರು ಸೆಲೆಬ್ರೇಷನ್ ಮಾತ್ರ ಕಮ್ಮಿ ಆಗಿಲ್ಲ. ಮಂಡ್ಯ ಹೈದ ಎಲ್ಲೇ ಹೋದರೂ ಅಭಿಮಾನಿಗಳ ಜಾತ್ರೆ. ಗಿಲ್ಲಿ ಮಾತ್ರವಲ್ಲ ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ, ಕಾವ್ಯಾ, ರಘು, ಧನುಷ್, ಸ್ಪಂದನಾ, ಸೂರಜ್ ಹಾಗೂ ಧ್ರುವಂತ್ ಹೀಗೆ ಎಲ್ಲರಿಗೂ ವೀಕ್ಷಕರ ಪ್ರೀತಿ ಸಿಕ್ಕಿತ್ತು. ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಪೇಜ್‌ಗಳು ಸದ್ದು ಮಾಡಿದ್ದವು.

Bigg Boss Season 12 Raghu Unfollows Gilli on Instagram Sparks Fresh Debate Among Fans

ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ಹಾಗೂ ಮ್ಯೂಟಂಟ್ ರಘು ನಡುವೆ ಒಳ್ಳೆ ಸ್ನೇಹ ಇತ್ತು. ಕೆಲವೊಮ್ಮೆ ಕಿತ್ತಾಡಿದ್ದು ಇದೆ. ಗಿಲ್ಲಿ ಮೇಲೆ ರಘು ಆಗಾಗ್ಗೆ ಮುನಿಸಿಕೊಳ್ಳುತ್ತಿದ್ದರು. ದೊಡ್ಮನೆಯಿಂದ ಹೊರಗಡೆ ಬಂದ ಬಳಿಕ ಕೂಡ ಎಲ್ಲರ ನಡುವೆ ಸ್ನೇಹ ಮುಂದುವರೆದಿದೆ. ಗಿಲ್ಲಿ, ರಕ್ಷಿತಾ ಹಾಗೂ ರಘು ನಡುವೆ ಕೂಡ ಆತ್ಮೀಯ ಒಡನಾಟ ಇದೆ. ಇತ್ತೀಚೆಗೆ ಗಿಲ್ಲಿ ಹಾಗೂ ರಘು ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಊಹಾಪೋಹ ಶುರುವಾಗಿದೆ. ಇದೆಲ್ಲದರ ನಡುವೆ ಗಿಲ್ಲಿ ನಟನನ್ನು ರಘು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿರುವುದು ಚರ್ಚೆ ಹುಟ್ಟಾಕ್ಕಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ರಘು ಅಕೌಂಟ್ ಅನ್ನು ಗಿಲ್ಲಿ ಫಾಲೋ ಮಾಡ್ತಿಲ್ಲ. ಆದರೆ ರಘು ಮಾತ್ರ ಗಿಲ್ಲಿ ಅಕೌಂಟ್ ಫಾಲೋ ಮಾಡುತ್ತಿದ್ದರು. ಇದೀಗ ದಿಢೀರನೆ ಅನ್‌ಫಾಲೋ ಮಾಡಿರುವುದು ಗಿಲ್ಲಿ ಅಭಿಮಾನಿಗಳ ಬೇಸರ ಕಾರಣವಾಗಿದೆ. ರಘು ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಿಜಕ್ಕೂ ರಘು ಈ ರೀತಿ ಮಾಡಿದ್ರಾ? ಅದಕ್ಕೆ ಬೇರೆ ಏನಾದರೂ ಕಾರಣ ಇದ್ಯಾ? ಎನ್ನುವ ಚರ್ಚೆ ಜೋರಾಗಿದೆ. ಭಿನ್ನಾಭಿಪ್ರಾಯ ಮೂಡಿದಾಗ ಸೋಶಿಯಲ್ ಮೀಡಿಯಾದಲ್ಲಿ ಹೀಗೆ ಪರೋಕ್ಷವಾಗಿ ಕೆಲವರು ಪ್ರತಿಕ್ರಿಯಿಸುತ್ತಾರೆ. ರಘು ಕೂಡ ಅದೇ ಕೆಲಸ ಮಾಡಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

Bigg Boss Season 12 Raghu Unfollows Gilli on Instagram Sparks Fresh Debate Among Fans

ಅಷ್ಟಕ್ಕೂ ಗಿಲ್ಲಿ ಹಾಗೂ ರಘು ನಡುವೆ ಎಲ್ಲವೂ ಸರಿ ಇಲ್ವಾ? ಎನ್ನುವ ಊಹಾಪೋಹ ಶುರುವಾಗಿದೆ. ಗಿಲ್ಲಿ ಜನಪ್ರಿಯತೆಯನ್ನು ರಘು ಹಾಗೂ ರಕ್ಷಿತಾ ಬಳಸಿಕೊಳ್ಳುತ್ತಿದ್ದಾರೆ, ನಿಜವಾಗಿಯೂ ಅವರಿಬ್ಬರು ಗಿಲ್ಲಿಗೆ ಕ್ಲೋಸ್ ಆಗಿಲ್ಲ ಎನ್ನುವ ವದಂತಿ ಬಹಳ ಹಿಂದೆಯೇ ಸೋಶಿಯಲ್ ಮೀಡಿಯಾದಲ್ಲಿ ಹಬ್ಬಿತ್ತು. ಗಿಲ್ಲಿ ನಟನನ್ನು ಅವರಿಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡ್ತಿಲ್ಲ ಎನ್ನುವ ಮಾತು ಕೇಳಿಬಂದಿತ್ತು. ಬಳಿಕ ಇಲ್ಲ, ಅದೆಲ್ಲಾ ಸುಳ್ಳು, ಇಬ್ಬರೂ ಗಿಲ್ಲಿ ಇನ್‌ಸ್ಟಾ ಅಕೌಂಟ್ ಫಾಲೋ ಮಾಡ್ತಿದ್ದಾರೆ ಎಂದು ಕೆಲವರು ಖಚಿತಪಡಿಸಿದ್ದರು.

'ದೊಡ್ಮನೆ ಹಬ್ಬ' ಕಾರ್ಯಕ್ರಮದಲ್ಲಿ ಗಿಲ್ಲಿ ಹಾಗೂ ರಕ್ಷಿತಾ ಜೊತೆ ರಘು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಅದನ್ನೆಲ್ಲಾ ನೋಡಿ ಎಲ್ಲಾ ಊಹಾಪೋಹಗಳಿಗೆ ತೆರೆ ಬಿದ್ದಿತ್ತು. ಆದರೆ ಈಗ ರಘು ಯಾಕೆ ಇನ್‌ಸ್ಟಾಗ್ರಾಮ್‌ನಲ್ಲಿ ಗಿಲ್ಲಿ ನಟನನ್ನು ಫಾಲೋ ಮಾಡ್ತಿಲ್ಲ ಎನ್ನುವ ಪ್ರಶ್ನೆ ಕೆಲವರನ್ನು ಕಾಡುತ್ತಿದೆ. ನಾನು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡಿದ್ರು, ಗಿಲ್ಲಿ ಮರಳಿ ನನ್ನ ಫಾಲೋ ಮಾಡ್ತಿಲ್ಲ ಎನ್ನುವ ಕಾರಣಕ್ಕೆ ರಘುಗೆ ಬೇಸರವಾಗಿರಬಹುದು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮನ್ನು ಫಾಲೋ ಮಾಡ್ತಿಲ್ಲ ಎನ್ನುವ ಕಾರಣಕ್ಕೆ ಗಿಲ್ಲಿ ನಟನನ್ನು ಅನ್‌ಫಾಲೋ ಮಾಡಿಲ್ಲ. ಇದಕ್ಕೆ ಬೇರೆ ಏನೋ ಕಾರಣ ಇರಬಹುದು ಎನ್ನುವುದು ಕೆಲವರ ವಾದ. ಒಟ್ಟಾರೆ ರಘು, ಗಿಲ್ಲಿ, ರಕ್ಷಿತಾ ಮೂವರ ಸ್ನೇಹ ಮುರಿದು ಬಿತ್ತು ಎಂದು ಕೆಲವರು ‍ರಾ ಬರೆದುಬಿಟ್ಟಿದ್ದಾರೆ. ಈ ಬಗ್ಗೆ ರಘು ಅಥವಾ ಗಿಲ್ಲಿ ಸ್ಪಷ್ಟನೆ ಕೊಡಬೇಕಿದೆ.

More from Filmibeat

Read more about: gilli bigg boss 12 bigg boss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X