For Quick Alerts
  ALLOW NOTIFICATIONS  
  For Daily Alerts

  ಕೊರೊನಾ ನಡುವೆಯೂ ಬಿಗ್ ಬಾಸ್ ನಿರೀಕ್ಷಿಸುತ್ತಿದ್ದವರಿಗೆ ನಿರಾಸೆ!

  |

  ಎಲ್ಲ ಅಂದುಕೊಂಡಂತೆ ಆಗಿದ್ದರೆ ಹಿಂದಿಯಲ್ಲಿ ಮತ್ತು ಕನ್ನಡದಲ್ಲಿ ಬಿಗ್ ಬಾಸ್ ಕಾರ್ಯಕ್ರಮದ ಸಿದ್ಧತೆಗಳು ಆಗಸ್ಟ್ ತಿಂಗಳಲ್ಲಿ ಬಹುತೇಕ ಮುಗಿಸಿ ಸೆಪ್ಟೆಂಬರ್ ತಿಂಗಳಲ್ಲಿ ಶೋ ಪ್ರಸಾರವಾಗಬೇಕಿತ್ತು. ಈ ಸಲ ಕೊರೊನಾ ವೈರಸ್ ಭೀತಿ ಎದುರಾದ ಹಿನ್ನೆಲೆ ಬಿಗ್ ಕಾರ್ಯಕ್ರಮಗಳಲ್ಲಿ ಬದಲಾವಣೆಯ ನಿರೀಕ್ಷೆ ಮಾಡಲಾಗಿತ್ತು.

  Brahma ಚಿತ್ರದ ಅದ್ದೂರಿ ತೆರೆ ಹಿಂದಿನ ದೃಶ್ಯಗಳು | Behind the scenes | Filmibeat Kannada

  ಸದ್ಯ, ಸಿನಿಮಾ, ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳ ಚಿತ್ರೀಕರಣಕ್ಕೆ ಸರ್ಕಾರ ಅನುಮತಿ ನೀಡಿದೆ. ಹಾಗಾಗಿ, ಪ್ರತಿವರ್ಷದಂತೆ ನಿಗದಿತ ಸಮಯಕ್ಕೆ ಹಿಂದಿ ಬಿಗ್ ಬಾಸ್ ಪ್ರಸಾರವಾಗಲಿದೆ ಎಂದು ಹೇಳಲಾಗಿತ್ತು. ಇದೀಗ, ಸಲ್ಲು ಭಾಯ್ ಶೋ ನಿರಾಸೆ ಮಾಡಿದೆ. ಮುಂದೆ ಓದಿ...

  ಸೀಸನ್ 14 ಮುಂದಕ್ಕೆ!

  ಸೀಸನ್ 14 ಮುಂದಕ್ಕೆ!

  ಈ ಹಿಂದೆ ನಿಗದಿಯಾದಂತೆ ಸೆಪ್ಟೆಂಬರ್ ತಿಂಗಳಲ್ಲಿ ಹಿಂದಿ ಬಿಗ್ ಬಾಸ್ 14ನೇ ಆವೃತ್ತಿ ಆರಂಭವಾಗಬೇಕಿತ್ತು. ಆದರೆ ಈ ಕಾರ್ಯಕ್ರಮ ಈಗ ಒಂದು ತಿಂಗಳ ಮುಂದಕ್ಕೆ ಹೋಗಿದೆ ಎಂದು ಮೂಲಗಳು ತಿಳಿಸಿದೆ. ಕಾರ್ಯಕ್ರಮದ ರೂಪುರೇಷೆ ಮತ್ತು ಸಿದ್ಧತೆಗಳು ಇನ್ನೂ ಪೂರ್ಣವಾಗದ ಕಾರಣ ಒಂದು ತಿಂಗಳು ಮುಂದೂಡಲಾಗಿದೆಯಂತೆ.

  ಬಿಗ್‌ಬಾಸ್ ಆಗಿ ಮತ್ತೆ ಬಂದ ಸಲ್ಮಾನ್: ಈ ಬಾರಿ ಡಿಫರೆಂಟ್ ಗುರುಬಿಗ್‌ಬಾಸ್ ಆಗಿ ಮತ್ತೆ ಬಂದ ಸಲ್ಮಾನ್: ಈ ಬಾರಿ ಡಿಫರೆಂಟ್ ಗುರು

  ಕ್ವಾರಂಟೈನ್ ಕಡ್ಡಾಯ

  ಕ್ವಾರಂಟೈನ್ ಕಡ್ಡಾಯ

  ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡುವುದಕ್ಕೂ ಮುಂಚೆ ಮುಂಬೈನ ಹೋಟೆಲ್‌ಗಳಲ್ಲಿ ಕೆಲವು ದಿನಗಳ ಕಾಲ ಕ್ವಾರಂಟೈನ್ ಆಗಬೇಕು. ನಂತರ ಕೊರೊನಾ ಪರೀಕ್ಷೆಗೆ ಒಳಪಡಬೇಕು. ನೆಗಿಟಿವ್ ಬಂದಲ್ಲಿ ಮಾತ್ರ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡಲಾಗುವುದು ಎಂದು ತಿಳಿದು ಬಂದಿದೆ.

  ಸಮಯ ಬದಲಾವಣೆ ಸಾಧ್ಯತೆ

  ಸಮಯ ಬದಲಾವಣೆ ಸಾಧ್ಯತೆ

  ಸದ್ಯದ ಮಾಹಿತಿ ಪ್ರಕಾರ ಬಿಗ್ ಬಾಸ್ 14ನೇ ಆವೃತ್ತಿಯ ಪ್ರಸಾರದ ಸಮಯದಲ್ಲೂ ಬದಲಾವಣೆ ಮಾಡಲಾಗುವುದು ಎನ್ನಲಾಗಿದೆ. ಪ್ರತಿದಿನ ರಾತ್ರಿ 10ಕ್ಕೆ ಬಿಗ್ ಬಾಸ್ ಆರಂಭವಾಗಲಿದೆ ಎಂಬ ಮಾಹಿತಿ ಸಿಕ್ಕಿದೆ. ಈ ಆವೃತ್ತಿಯಲ್ಲಿ ಕೇವಲ ಸೆಲೆಬ್ರಿಟಿಗಳು ಮಾತ್ರ ಭಾಗಿಯಾಗುತ್ತಾರೆ ಹಾಗೂ ಲಾಕ್‌ಡೌನ್ ಕುರಿತಂತೆ ಕಾನ್ಸೆಪ್ಟ್‌ಗಳು ಇರಲಿದೆ ಎನ್ನಲಾಗಿದೆ.

  ಬಿಗ್ ಬಾಸ್ 14 ಸಂಭಾವ್ಯ ಪಟ್ಟಿ!

  ಬಿಗ್ ಬಾಸ್ 14 ಸಂಭಾವ್ಯ ಪಟ್ಟಿ!

  ವರದಿಗಳ ಪ್ರಕಾರ, ಜಾಸ್ಮಿನ್ ಭಾಸಿನ್ ಮತ್ತು ನಿಯಾ ಶರ್ಮಾ, ರಮಾನಂದ್ ಸಾಗರ್ ಅವರ ಮೊಮ್ಮಗಳು ಸಾಕ್ಷಿ ಚೋಪ್ರಾ, ಕುಂಕುಮ್ ಭಾಗ್ಯ ನಟಿ ನೈನಾ ಸಿಂಗ್, ಪವಿತ್ರ ಪುನಿಯಾ ಮತ್ತು ನಟ ಐಜಾಜ್ ಖಾನ್ ಭಾಗವಹಿಸಬಹುದು ಎಂದು ಹೇಳಲಾಗಿದೆ. ಆದರೆ ಅವರಲ್ಲಿ ಯಾರೂ ಭಾಗವಹಿಸುವುದನ್ನು ಖಚಿತವಾಗಿಲ್ಲ.

  English summary
  Controversial TV show Bigg boss is all set to starts with season 14. but, not in september. it is postponed to october.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X