For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ 14ರ ಪ್ರಸಾರ ದಿನಾಂಕ ಬಹಿರಂಗ, ಎರಡು ದಿನ ಮುಂಚೆಯೇ ಸಲ್ಲು ಶೂಟಿಂಗ್!

  |

  ಬಿಗ್ ಬಾಸ್ ಹಿಂದಿ 14ನೇ ಆವೃತ್ತಿ ಬಗ್ಗೆ ಕುತೂಹಲ ಹೆಚ್ಚಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಮತ್ತಷ್ಟು ಕಲರ್‌ಪುಲ್ ಆಗಿ, ಚೆನ್ನಾಗಿ ಮಾಡಬೇಕು ಎಂಬ ಉದ್ದೇಶದಿಂದ ಆಯೋಜಕರು ಎಲ್ಲ ರೀತಿಯ ತಯಾರಿ ನಡೆಸಿದ್ದಾರೆ.

  ಜಾಸ್ಮಿನ್ ಭಾಸಿನ್, ನಿಶಾಂತ್ ಸಿಂಗ್ ಮಲ್ಕನ್ ಮತ್ತು ಬಾಲಿವುಡ್ ನಟಿ ನೇಹಾ ಶರ್ಮಾ ಸೇರಿದಂತೆ ಬಾಲಿವುಡ್‌ನ ಕೆಲವು ತಾರೆಯರು ಈ ಸಲ ಬಿಗ್ ಬಾಸ್ ಮನೆಗೆ ಕರೆತರಲು ಸಂಪರ್ಕಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಈಗಾಗಲೇ ನಿಗದಿಯಾಗಿರುವಂತೆ ಅಕ್ಟೋಬರ್‌ ತಿಂಗಳಲ್ಲಿ ಬಿಗ್ ಬಾಸ್ ಆರಂಭವಾಗಲಿದ್ದು, ಎರಡೂ ದಿನಕ್ಕೂ ಮುಂಚಿತವಾಗಿ ಸಲ್ಲು ಶೂಟಿಂಗ್‌ನಲ್ಲಿ ಭಾಗವಹಿಸಲಿದ್ದಾರೆ. ಮುಂದೆ ಓದಿ....

  'ಬಿಗ್ ಬಾಸ್ ಸೀಸನ್ 14': ಸಲ್ಮಾನ್ ಖಾನ್ ಸಂಭಾವನೆ ಇಷ್ಟೊಂದಾ?'ಬಿಗ್ ಬಾಸ್ ಸೀಸನ್ 14': ಸಲ್ಮಾನ್ ಖಾನ್ ಸಂಭಾವನೆ ಇಷ್ಟೊಂದಾ?

  ಅಕ್ಟೋಬರ್ 1ಕ್ಕೆ ಸಲ್ಲು ಶೂಟ್

  ಅಕ್ಟೋಬರ್ 1ಕ್ಕೆ ಸಲ್ಲು ಶೂಟ್

  ಮುಂಬೈ ಮಿರರ್ ವರದಿ ಮಾಡಿರುವ ಪ್ರಕಾರ ''ಬಿಗ್ ಬಾಸ್ ಸೀಸನ್ 14 ಅಕ್ಟೋಬರ್‌ 4ರಿಂದ ಪ್ರಸಾರವಾಗಲಿದೆ. ಆದರೆ, ಮೊದಲ ದಿನ ಶೂಟಿಂಗ್ ಒಂದು ದಿನ ಮುಂಚಿತವಾಗಿಯೇ ನಡೆಯಲಿದೆ. ಸದ್ಯದ ಮಾಹಿತಿಯಂತೆ ಅಕ್ಟೋಬರ್ 1 ರಂದು ಸಲ್ಮಾನ್ ಅವರ ಭಾಗದ ಚಿತ್ರೀಕರಣ ನಡೆಯಲಿದೆ.

  ಪ್ರೇಕ್ಷಕರು ಇರುವುದಿಲ್ಲ

  ಪ್ರೇಕ್ಷಕರು ಇರುವುದಿಲ್ಲ

  ಇಡೀ ದಿನ ಸಲ್ಮಾನ್ ಖಾನ್ ಬಿಗ್ ಬಾಸ್ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಅದಕ್ಕಾಗಿ ಎಲ್ಲ ರೀತಯ ತಯಾರಿ ನಡೆದಿದೆ. ಈ ಸಲದ ವಿಶೇಷ ಅಂದ್ರೆ ಚಿತ್ರೀಕರಣ ವೇಳೆ ಪ್ರೇಕ್ಷಕರು ಇರುವುದಿಲ್ಲ. ಕೊರೊನಾ ವೈರಸ್ ಭೀತಿಯಿರುವುದರಿಂದ ಆಡಿಯೆನ್ಸ್ ಇಲ್ಲದೇ ಬಿಗ್ ಬಾಸ್ ಶೂಟಿಂಗ್ ನಡೆಯಲಿದೆ.

  ಕೊನೆಯ ಹಂತ 'ರಾಧೇ' ಶೂಟಿಂಗ್

  ಕೊನೆಯ ಹಂತ 'ರಾಧೇ' ಶೂಟಿಂಗ್

  ಬಿಗ್ ಬಾಸ್ ಮೊದಲ ವಾರದ ಶೂಟಿಂಗ್ ಮುಗಿಯುತ್ತಿದ್ದಂತೆ ರಾಧೇ ಚಿತ್ರದ ಚಿತ್ರೀಕರಣಕ್ಕೆ ಸಲ್ಮಾನ್ ಖಾನ್ ಹೋಗಬೇಕಿದೆ. ರಾಧೇ ಚಿತ್ರೀಕರಣ ಕೊನೆಯ ಹಂತದಲ್ಲಿದ್ದು, ಮೆಹಬೂಬ್ ಸ್ಟುಡಿಯೋದಲ್ಲಿ ನಡೆಯಲಿದೆ. ದಿಶಾ ಪಟಾನಿ, ರಣ್ದೀಪ್ ಹೂಡ, ಜಾಕಿ ಶ್ರಾಫ್ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

  ಚಿತ್ರೋದ್ಯಮ ಬಂದ್ ? ಇವರಿಗೆಲ್ಲ ತುಂಬಾ loss! | Shivarajkumar | Filmibeat Kannada
  ಸಲ್ಮಾನ್ ಮುಂದಿನ ಚಿತ್ರಗಳು

  ಸಲ್ಮಾನ್ ಮುಂದಿನ ಚಿತ್ರಗಳು

  ದಬಾಂಗ್-3 ಬಳಿಕ ಸಲ್ಮಾನ್ ಖಾನ್ ಮತ್ತೊಮ್ಮೆ ಪ್ರಭುದೇವ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈ ಕುರಿತು ಪ್ರಭುದೇವ ಮತ್ತು ಸಲ್ಮಾನ್ ಖಾನ್ ತಯಾರಿ ನಡೆಸುತ್ತಿದ್ದಾರೆ. ಮನೀಶ್ ಶರ್ಮಾ ಜೊತೆ ಟೈಗರ್ ಚಿತ್ರದ ಸರಣಿಯೂ ಮೂಡಿಬರಲಿದೆ. ಸಾಜಿದ್ ನಾದಿಯಾದ್ವಾಲಾ ಚಿತ್ರಕ್ಕೂ ಕಾಲ್‌ಶೀಟ್ ನೀಡಿದ್ದಾರೆ.

  English summary
  Bigg boss season 14 starts from october 4th, but, Salman khan will be shot in from october 1st.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X