For Quick Alerts
  ALLOW NOTIFICATIONS  
  For Daily Alerts

  ಗೊಬ್ಬರ ಹೊತ್ತು, ಗದ್ದೆಯಲ್ಲಿ ನಾಟಿ ಮಾಡುತ್ತಿರುವ 'ಬಿಗ್ ಬಾಸ್' ಖ್ಯಾತಿಯ ಭೂಮಿ ಶೆಟ್ಟಿ

  |

  ಕೊರೊನಾ ವೈರಸ್ ಅನೇಕರ ಜೀವನವನ್ನೆ ಬದಲಾಯಿಸಿದೆ. ಉದ್ಯೋಗ ಅರಸಿ ಹಳ್ಳಿ ಬಿಟ್ಟು ನಗರದ ಕಡೆ ಬಂದಿದ್ದ ಅದೆಷ್ಟೋ ಮಂದಿ ಮತ್ತೆ ಊರು ಸೇರುವಂತೆ ಮಾಡಿದೆ. ಲಾಕ್ ಡೌನ್ ಘೋಷಣೆ ಆಗುತ್ತಿದ್ದಂತೆ ಪಟ್ಟಣದಲ್ಲಿ ನೆಲೆಸಿದ್ದ ಸಾಕಷ್ಟು ಮಂದಿ ತಮ್ಮ ತಮ್ಮ ಊರುಗಳಿಗೆ ವಾಪಸ್ ಆಗಿದ್ದಾರೆ. ಹಳ್ಳಿಯಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ.

  ಹಾಗೆ ಬಿಗ್ ಬಾಸ್ ಖ್ಯಾತಿಯ ನಟಿ ಭೂಮಿ ಶೆಟ್ಟಿ ಇದೀಗ ಊರಿನಲ್ಲಿ ನೆಲೆಸಿದ್ದು ಕೃಷಿ ಮಾಡುತ್ತಿದ್ದಾರೆ. ನಟನೆ, ಮಾಡೆಲಿಂಗ್ ಅಂದ ಬೆಂಗಳೂರು ಸೇರಿದ್ದ ಭೂಮಿ ಶೆಟ್ಟಿ ಲಾಕ್ ಡೌನ್ ಬಳಿಕ ತನ್ನ ಹಳ್ಳಿಗೆ ವಾಪಸ್ ಆಗಿದ್ದಾರೆ. ಬಿಗ್ ಬಾಸ್ ಬಳಿಕ ಭೂಮಿ ಎಲ್ಲೋದ್ರು, ಹೇಗಿದ್ದಾರೆ ಅಂತ ಅನೇಕರು ಅಂದುಕೊಂಡಿದ್ದರು ಆದರೀಗ ಗೊಬ್ಬರ ಹೊತ್ತು ನಾಟಿ ಮಾಡುವಲ್ಲಿ ಬ್ಯುಸಿಯಾಗಿದ್ದಾರೆ. ಮುಂದೆ ಓದಿ..

  ಗದ್ದೆಯಲ್ಲಿ ಭತ್ತ ನಾಟಿ ಮಾಡುತ್ತಿರುವ ಸಲ್ಮಾನ್ ಖಾನ್ ವಿಡಿಯೋ ವೈರಲ್ಗದ್ದೆಯಲ್ಲಿ ಭತ್ತ ನಾಟಿ ಮಾಡುತ್ತಿರುವ ಸಲ್ಮಾನ್ ಖಾನ್ ವಿಡಿಯೋ ವೈರಲ್

  ಹಳ್ಳಿ ಸೇರಿರುವ ಭೂಮಿ ಶೆಟ್ಟಿ

  ಹಳ್ಳಿ ಸೇರಿರುವ ಭೂಮಿ ಶೆಟ್ಟಿ

  ಭೂಮಿ ಶೆಟ್ಟಿ ಓದು ಮತ್ತು ನಟನೆ ಅಂತ ಬೆಂಗಳೂರಿನಲ್ಲಿ ನೆಲೆಸಿದ್ದರು. ಕೊರೊನಾ ಲಾಕ್ ಡೌನ್ ಬಳಿಕ ಬೆಂಗಳೂರಿನಿಂದ ತಮ್ಮ ಹುಟ್ಟೂರಾದ ಉಡುಪಿ ಜಿಲ್ಲೆಯ ಬೊಂದೂರಿನ ಬೀಜೂರು ಗ್ರಾಮದ ಗಂಟಿಹೊಳೆಗೆ ವಾಪಸ್ ಆಗಿದ್ದಾರೆ. ಅಜ್ಜಿ ಮನೆಯಲ್ಲಿ ನೆಲೆಸಿರುವ ಭೂಮಿ ಶೆಟ್ಟಿ ಸುಮ್ಮನೆ ಸಮಯ ಕಳೆಯುತ್ತಿಲ್ಲ. ಬದಲಿಗೆ ಕೃಷಿ ಚುಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ.

  ಗೊಬ್ಬರ ಹೊತ್ತು, ನಾಟಿ ಮಾಡುತ್ತಿದ್ದಾರೆ ಭೂಮಿ

  ಗೊಬ್ಬರ ಹೊತ್ತು, ನಾಟಿ ಮಾಡುತ್ತಿದ್ದಾರೆ ಭೂಮಿ

  ತಾವೇ ಗೊಬ್ಬರ ಹೊತ್ತು, ಬೆವರು ಸುರಿಸಿ ನಾಟಿ ಮಾಡುತ್ತಿದ್ದಾರೆ. ಕೃಷಿ ಮಾಡುತ್ತಿರುವ ಫೋಟೋ ಮತ್ತು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಬೆಳಗ್ಗೆಯಿಂದ ಸಂಜೆ ವರೆಗೂ ಗದ್ದೆಯಲ್ಲಿ ಕೆಲಸ ಮಾಡುತ್ತ ಅಪ್ಪಟ ಕೃಷಿಕರಾಗಿದ್ದಾರೆ. ಭೂಮಿ ಶೆಟ್ಟಿ ಕೆಲಸಕ್ಕೆ ಎಲ್ಲರ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  ದುಬಾರಿ ಕಾರು ಬಿಟ್ಟು ರೈತ ಮಿತ್ರ ಟ್ರ್ಯಾಕ್ಟರ್ ಓಡಿಸುತ್ತಿರುವ ಡಿ ಬಾಸ್ ದರ್ಶನ್

  ಬಿಗ್ ಬಾಸ್-7 ನ ಫೈನಲಿಸ್ಟ್

  ಬಿಗ್ ಬಾಸ್-7 ನ ಫೈನಲಿಸ್ಟ್

  ಭೂಮಿ ಶೆಟ್ಟಿ ಕಿರುತೆರೆ ಮೂಲಕ ಕನ್ನಡ ಪ್ರೇಕ್ಷಕರಿಗೆ ಚಿತ್ರಪರಿಚಿತರಾದವರು. ಕಿನ್ನರಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಭೂಮಿ ಕಿರುತೆರೆ ವೀಕ್ಷಕರ ನೆಚ್ಚಿನ ನಟಿಯಾಗಿದ್ದರು. ಆ ನಂತರ ಬಿಗ್ ಬಾಸ್-7 ಪ್ರವೇಶ ಮಾಡಿದ ಭೂಮಿ ಮತ್ತಷ್ಟು ಖ್ಯಾತಿಗಳಿಸಿದರು. ಬಿಗ್ ಮನೆಯಲ್ಲಿ ಉತ್ತಮ ಆಟ ಮತ್ತು ಮನರಂಜನೆಯ ಮೂಲಕ ಎಲ್ಲರ ಹೃದಯ ಗೆದ್ದಿದ್ದರು. ಇದೀಗ ಕೃಷಿಯಲ್ಲಿ ತೊಡಗಿಕೊಂಡು ಅಚ್ಚರಿ ಮೂಡಿಸಿದ್ದಾರೆ.

  ಸೆಲೆಬ್ರಿಟಿಗಳ ಕೃಷಿ ಚಟುವಟಿಕೆ

  ಸೆಲೆಬ್ರಿಟಿಗಳ ಕೃಷಿ ಚಟುವಟಿಕೆ

  ಲಾಕ್ ಡೌನ್ ಬಳಿಕ ಸಾಕಷ್ಟು ಮಂದಿ ಸೆಲೆಬ್ರಿಟಿಗಳು ಕೃಷಿ ಮಾಡುತ್ತಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ನಟ ಉಪೇಂದ್ರ ತಮ್ಮ ಜಮೀನಿನಲ್ಲಿ ತರಕಾರಿಗಳನ್ನು ಬೆಳೆದಿದ್ದರು.ಇನ್ನೂ ನಟ ದರ್ಶನ್ ಮತ್ತು ನಿಖಿಲ್ ಕುಮಾರ್ ಸಹ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಬಾಲಿವುಡ್ ನಟ ಸಲ್ಮಾನ್ ಖಾನ್ ತಾವೇ ಭೂಮಿ ಉಳುಮೆ ಮಾಡಿ ಭತ್ತ ನಾಟಿ ಮಾಡಿದ್ದಾರೆ. ಹೀಗೆ ಸಾಕಷ್ಟು ಮಂದಿ ಕೃಷಿಯಲ್ಲಿ ಬ್ಯುಸಿಯಾಗಿದ್ದಾರೆ.

  English summary
  Bigg Boss Kannada season 7 fame Bhoomi Shetty busy in rice plants in her Native.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X