For Quick Alerts
  ALLOW NOTIFICATIONS  
  For Daily Alerts

  Bigg Boss: ಸಾನ್ಯಾಳನ್ನು ಲವ್ ಮಾಡ್ತಿದ್ದೀನೆಂದ ರಾಕೇಶ್, ಹಳೆ ಪ್ರೇಮಿ ಬಗ್ಗೆಯೂ ಮಾತು

  |

  ಒಟಿಟಿ ಬಿಗ್‌ಬಾಸ್ ಸೀಸನ್‌ನಲ್ಲಿ ತಮ್ಮ ಮಾತು, ವ್ಯಕ್ತಿತ್ವ, ನಡವಳಿಕೆಯಿಂದ ಗಮನ ಸೆಳೆದು ಬಿಗ್‌ಬಾಸ್‌ ಟಿವಿ ಸೀಸನ್ 09 ಕ್ಕೆ ಬಂದ ಸ್ಪರ್ಧಿ ರಾಕೇಶ್ ಅಡಿಗ.

  ಒಟಿಟಿ ಸೀಸನ್‌ನಲ್ಲಿ ರಾಕೇಶ್‌ರ ಪ್ರಾಕ್ಟಿಕಲ್ ಮಾತು, ವ್ಯಕ್ತಿತ್ವದಷ್ಟೆ ಅವರ ಫ್ಲರ್ಟಿಂಗ್ ಪ್ರತಿಭೆಯೂ ಗಮನ ಸೆಳೆದಿತ್ತು. ಸ್ಪೂರ್ತಿ, ಜಯಶ್ರೀ ಹಾಗೂ ಸೋನು ಗೌಡ ಜೊತೆಗೆ ಅವರು ಆಪ್ತ ಬಂಧ ಬೆಳೆಸಿಕೊಂಡಿದ್ದರು. ತಾವು ಫ್ಲರ್ಟ್ ಮಾಡುವುದಾಗಿಯೂ ಸೀರಿಯಸ್ ರಿಲೇಶನ್‌ಶಿಪ್‌ಗೆ ಸಿದ್ಧವಿಲ್ಲವೆಂದು ಸಹ ರಾಕೇಶ್ ಹೇಳಿದ್ದರು.

  ಆದರೆ ಬಿಗ್‌ಬಾಸ್ ಟಿವಿ ಸೀಸನ್‌ನಲ್ಲಿ ಈವರೆಗೆ ರಾಕೇಶ್ ಹೆಚ್ಚು ಓಪನ್ ಆಗಿರಲಿಲ್ಲ. ಅದರಲ್ಲೂ ಹೊಸ ಸೀಸನ್‌ನಲ್ಲಿರುವ ಯುವತಿಯರ ಜೊತೆಗಂತೂ ಹೆಚ್ಚು ಮಾತನಾಡಿಯೇ ಇರಲಿಲ್ಲ. ಆದರೆ ಬಿಗ್‌ಬಾಸ್‌ ಸೀಸನ್ 9 ರ ನಾಲ್ಕನೇ ದಿನ ರಾಕೇಶ್ ಅಡಿಗ ಮತ್ತೆ ತಮ್ಮ ಲಯಕ್ಕೆ ಮರಳಿದಂತಿದೆ. ತನ್ನ ಗೆಳೆಯ ರೂಪೇಶ್ ಶೆಟ್ಟಿಗೆ ಆಪ್ತವಾಗಿರುವ ಸಾನ್ಯಾಳನ್ನು ಪ್ರೀತಿಸುತ್ತೇನೆ ಎಂದು ಹೊಸ ಬಾಂಬ್ ಒಂದನ್ನು ಬೇರೆ ಸಿಡಿಸಿದ್ದಾರೆ.

  ಸಾನ್ಯಾಳನ್ನು ಪ್ರೀತಿಸುತ್ತಿದ್ದೇನೆ ಎಂದ ರಾಕೇಶ್!

  ಸಾನ್ಯಾಳನ್ನು ಪ್ರೀತಿಸುತ್ತಿದ್ದೇನೆ ಎಂದ ರಾಕೇಶ್!

  ರಾಕೇಶ್, ಸಾನ್ಯಾಳ ಕಾಫಿ ಲೋಟದಲ್ಲಿ ರಾಕೇಶ್ ಅಡಿಗ ಕಾಫಿ ಕುಡಿಯುತ್ತಿದ್ದರು. ಅದಕ್ಕೆ ಆರ್ಯವರ್ಧನ್ ಗುರೂಜಿ, ಏನು ಸಾನ್ಯಾಳ ಲೋಟದಲ್ಲಿ ಕಾಫಿ ಕುಡಿಯುತ್ತಿದ್ದೀಯ? ಎಂದು ಕೇಳಿದರು. 'ಸಾನ್ಯಾಳನ್ನು ಲವ್ ಮಾಡ್ತಿದ್ದೀನಿ. ಅದಕ್ಕೆ ಅವಳ ಲೋಟದಲ್ಲಿ ಕಾಫಿ ಕುಡಿತಿದ್ದೀನಿ'' ಎಂದರು ರಾಕೇಶ್. ಆಗ ಆರ್ಯವರ್ಧನ್ ಗುರೂಜಿ, ಅವರ (ಸಾನ್ಯಾ ಐಯ್ಯರ್) ಓಟೇ ಅವರಿಗೆ (ರೂಪೇಶ್ ಶೆಟ್ಟಿ)ಗೆ ಬೀಳುತ್ತಿಲ್ಲ ಎಂದರೆ ನಿನಗೆ ಎಲ್ಲಿಂದ ಸಾಧ್ಯ ಎನ್ನುತ್ತಾರೆ. ಅದಕ್ಕೆ ರಾಕೇಶ್, 'ನಾನು ಬಸ್ ಇದ್ದಂತೆ ಹೋಗಿ ಹಾರ್ನ್ ಹೊಡೀತೀನಿ, ಹತ್ತಿದರೆ ಹತ್ಲಿ ಇಲ್ಲವಾದರೆ ಮುಂದಕ್ಕೆ ಹೋಗ್ತೀನಿ'' ಎನ್ನುತ್ತಾರೆ ರಾಕೇಶ್.

  ಲವ್ ಫೇಲ್ಯೂರ್ ಆಗಿದೆಯಾ ಎಂದ ದೀಪಿಕಾ?

  ಲವ್ ಫೇಲ್ಯೂರ್ ಆಗಿದೆಯಾ ಎಂದ ದೀಪಿಕಾ?

  ರಾಕೇಶ್, ರೂಪೇಶ್ ರಾಜಣ್ಣ ಅವರುಗಳು ದೀಪಿಕಾ ಹಾಗೂ ಅಮೂಲ್ಯ ಜೊತೆ ಮಾತನಾಡುತ್ತಿದ್ದರು. ಆಗ ರಾಕೇಶ್ ಸ್ಮೋಕಿಂಗ್ ಜೋನ್‌ಗೆ ಹೋಗಲು ಮುಂದಾದರು. ಅವರನ್ನು ತಡೆದ ದೀಪಿಕಾ, ಅದು ಹೇಗೆ ನೀವು ಹುಡುಗೀರ ಜೊತೆ ಮಾತನಾಡುತ್ತಾ ಸಡನ್ ಆಗಿ ಎದ್ದು ಹೋಗಿಬಿಡ್ತೀರ? ಎಂದಾಗ ರಾಕೇಶ್ ತಮ್ಮ ಎಂದಿನ ಫ್ಲರ್ಟಿಂಗ್ ಸ್ಟೈಲ್‌ನಲ್ಲಿ ಹುಡುಗಿಯರ ಜೊತೆ ಮಾತನಾಡಿದರೆ ನನ್ನ ಹಾರ್ಟ್ ಬೀಟ್ ಕಡಿಮೆ ಆಗುತ್ತದೆ. ಸ್ಮೋಕ್ ಮಾಡಿಕೊಂಡು ಬಂದರೆ ಬ್ಯಾಲೆನ್ಸ್ ಇರುತ್ತೆ ಎಂದರು. ಹಾಗೆ ಮಾತು ಮುಂದುವರೆಸಿದ ದೀಪಿಕಾ, 'ತುಂಬಾ ಲವ್ ಫೇಲ್ಯೂರ್ ಆಗಿದೆಯಾ ನಿಮಗೆ?' ಎಂದು ಪ್ರಶ್ನಿಸುತ್ತಾರೆ.

  ಅವರೊಟ್ಟಿಗೆ ಲವ್ ಇತ್ತು ಈಗಿಲ್ಲ ಎಂದ ರಾಕೇಶ್

  ಅವರೊಟ್ಟಿಗೆ ಲವ್ ಇತ್ತು ಈಗಿಲ್ಲ ಎಂದ ರಾಕೇಶ್

  ಅದಕ್ಕೆ ಉತ್ತರಿಸಿದ ರಾಕೇಶ್, ''ಎಲ್ಲ ಲವ್‌ಗಳೂ ಸಕ್ಸಸ್ ಆಗಿವೆ, ಎಲ್ಲರ ಜೊತೆಯೂ ಪ್ರೀತಿ ಹಾಗೆಯೇ ಉಳಿದುಕೊಂಡಿದೆ. ಎಲ್ಲರೂ ಖುಷಿಯಾಗಿರಲಿ ಎಂಬ ಲವ್ ಉಳಿದುಕೊಂಡಿದೆ. ರಿಲೇಶನ್ ಶಿಪ್‌ ಉಳಿದುಕೊಂಡಿಲ್ಲ ಅಷ್ಟೆ' ಎನ್ನುತ್ತಾರೆ. ಆಗ ಅಮೂಲ್ಯಾ, 'ಹಾಗಿದ್ದರೆ ನಾನು ನಿಮ್ಮ ಜೊತೆ ಕೇಳಿದ ಹೆಸರುಗಳೆಲ್ಲ ನಿಜವಾ?' ಎನ್ನುತ್ತಾರೆ. ಆಗ ರಾಕೇಶ್ ಎಷ್ಟು ಜನರೊಟ್ಟಿಗೆ ನನ್ನ ಹೆಸರು ಕೇಳಿದ್ದೀರಿ' ಎನ್ನುತ್ತಾರೆ. ಇಲ್ಲ ಒಬ್ಬರೊಟ್ಟಿಗೆ ಮಾತ್ರ ಎನ್ನುತ್ತಾರೆ. ಆಗ ರಾಕೇಶ್ ಅದು ನಿಜ ಅವರೊಟ್ಟಿಗೆ ಲವ್ ಇತ್ತು ಆದರೆ ಈಗಿಲ್ಲ ಅವರು ಮೂವ್ ಆನ್ ಆದರು ಚೆನ್ನಾಗಿದ್ದಾರೆ. ಈಗಲೂ ನಾವು ಟಚ್‌ನಲ್ಲಿದ್ದೇವೆ, ಚೆನ್ನಾಗಿಯೇ ಮಾತನಾಡುತ್ತೇವೆ'' ಎನ್ನುತ್ತಾರೆ.

  ಪ್ರೀತಿ ನಿಜವಾಗಿದ್ದರೆ ಲವ್ ಫೇಲ್ಯೂರ್ ಆಗಲ್ಲ,

  ಪ್ರೀತಿ ನಿಜವಾಗಿದ್ದರೆ ಲವ್ ಫೇಲ್ಯೂರ್ ಆಗಲ್ಲ,

  ''ಲವ್ ಫೇಲ್ಯುರ್ ಎಂಬುದು ನನಗೆ ಆಗಿಲ್ಲ. ಪ್ರೀತಿ ನಿಜವಾಗಿದ್ದರೆ ಲವ್ ಫೇಲ್ಯೂರ್ ಆಗಲ್ಲ'' (ಲವ್ ಕ್ಯಾನ್‌ ನೆವರ್ ಫೇಲ್, ಇಫ್ ಇಟ್ ಈಸ್ ಟ್ರೂ) ಎಂದು ಒಂದೊಳ್ಳೆ ಮಾತು ಹೇಳುತ್ತಾರೆ ರಾಕೇಶ್. ಅವರ ಮಾತಿಗೆ ದೀಪಿಕಾ-ಅಮೂಲ್ಯ ಇಬ್ಬರೂ ಭೇಷ್ ಎನ್ನುತ್ತಾರೆ. ಆದರೆ ಅಮೂಲ್ಯಾ, 'ಬ್ರೇಕಪ್ ಆದವರ ಜೊತೆ ಮತ್ತೆ ಚೆನ್ನಾಗಿರೋಕೆ ಆಗೊಲ್ಲ'' ಎನ್ನುತ್ತಾರೆ. ಆಗ ರಾಕೇಶ್, ಚೆನ್ನಾಗಿರೋದು ಎಂದರೆ ಹಳೆಯ ಸಂಬಂಧವನ್ನು ಮುಂದುವರೆಸೋದು ಎಂದಲ್ಲ. ಅವರು ಚೆನ್ನಾಗಿರಲಿ ಎಂದು ಹಾರೈಸೋದು'' ಎನ್ನುತ್ತಾರೆ. ರಾಕೇಶ್ ಮಾತಿಗೆ ಫಿದಾ ಆದ ಅಮೂಲ್ಯಾ, ನೀವು ತುಂಬಾ ಒಳ್ಳೆಯವರು ಎನ್ನುತ್ತಾರೆ. ಅದಕ್ಕೆ ರಾಕೇಶ್, ಒಳ್ಳೆಯವನೇನಲ್ಲ, ಪ್ರಾಕ್ಟಿಕಲ್ ಅಷ್ಟೆ ಎನ್ನುತ್ತಾರೆ.

  English summary
  Bigg Boss season 09: Rakesh Adiga said he loves Sanya. He also talked about his past relationship story.
  Thursday, September 29, 2022, 10:40
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X