BBK9: ನೇಹಾ ಗೌಡ ಜೊತೆ ಬಿಗ್ ಬಾಸ್ ಸೀಸನ್ 9ರ ಸಪ್ಪೆ ಹೊಟೇಲ್ ಗ್ಯಾಂಗ್ ಪ್ರತ್ಯಕ್ಷ..!
ಬಿಗ್ ಬಾಸ್ ವರ್ಷಕ್ಕೆ ಒಮ್ಮೆ ಶುರುವಾದರೂ ಅದೊಂದು ಅದ್ಭುತವಾದ ಜರ್ನಿ. ಬಿಗ್ ಬಾಸ್ ಮನೆಯೊಳಗೆ ಹೋಗುವವರು ನೂರು ದಿನದ ಆಟದಲ್ಲಿ ಉಳಿಯಲೇಬೇಕೆಂದುಕೊಳ್ಳುತ್ತಾರೆ. ಆದರೆ ಅದೆಷ್ಟೋ ಜನಕ್ಕೆ ಅದು ವಾರದ ಜರ್ನಿಯೂ ಆಗುತ್ತೆ. ಇನ್ನು ಕೆಲವರಿಗೆ ಫೈನಲ್ ತನಕ ಬಂದು ಕಪ್ ಜಸ್ಟ್ ಮಿಸ್ ಕೂಡ ಆಗಿದೆ.
ಬಿಗ್ ಬಾಸ್ ಮನೆಯೊಳಗೆ ಎಷ್ಟು ದಿನ ಇರುತ್ತಾರೋ..? ಇರುವುದಿಲ್ಲವೋ ಅದಲ್ಲ ಮುಖ್ಯ. ಆದರೆ ಇದ್ದಷ್ಟು ದಿನ ಯಾರ ಜೊತೆಗೆಲ್ಲಾ ನಂಟು ಬೆಳೆಸಿಕೊಳ್ಳುತ್ತೀವಿ ಅನ್ನೋದು ತುಂಬಾ ಮುಖ್ಯ. ಯಾಕಂದ್ರೆ, ಆ ಮನೆಯೊಳಗೆ ಪ್ರೇಮಿಯೂ ಹುಟ್ಟಿಕೊಂಡಿದ್ದಾನೆ. ಶತ್ರುವೂ ಹುಟ್ಟಿಕೊಂಡಿದ್ದಾನೆ. ಹಿತೈಶಿಗಳು ಹುಟ್ಟಿಕೊಂಡಿದ್ದಾರೆ.

ಹೇಳಿದಂತೆ ನಡೆದುಕೊಂಡ ನೇಹಾ ಗೌಡ
ಈ ಬಾರಿಯ ಬಿಗ್ ಬಾಸ್ ಸ್ವಲ್ಪ ವಿಭಿನ್ನವಾಗಿತ್ತು. ನವೀನರು ಮತ್ತು ಪ್ರವೀಣರ ನಡುವೆ ಬಿಗ್ ಬಾಸ್ ಆಟ ಶುರುವಾಗಿತ್ತು. ಅದರಲ್ಲಿ ನೇಹಾ ಗೌಡ ನವೀನರಾಗಿ ಎಂಟ್ರಿಯಾಗಿದ್ದರು. ಬಿಗ್ ಬಾಸ್ ಮನೆಯಲ್ಲಿ ಏನೆಲ್ಲಾ ಆಗ್ತಾ ಇದೆ..? ಹೇಗಿರಬೇಕು..? ಅದ್ಯಾವುದು ಅಷ್ಟು ಬೇಗ ಗೊತ್ತಾಗುತ್ತಾ ಇರಲಿಲ್ಲ. ಅನುಪಮಾ ಇದ್ದದ್ದು ಒಂದಷ್ಟು ಕಂಫರ್ಟಬಲ್ ಆಗಿ ಇರುವುದಕ್ಕೆ ಅನುಕೂಲವಾಯಿತೇನೋ. ಆದರೆ ಬಲು ಬೇಗ ಬಿಗ್ ಬಾಸ್ ಮನೆಯಿಂದ ನೇಹಾ ಗೌಡ ಹೊರಗೆ ಬಂದು ಬಿಟ್ಟರು. ಹೊರಗೆ ಬಂದ ಬಳಿಕ, ಸಂದರ್ಶನಗಳಲ್ಲಿ ಸ್ನೇಹದ ಬಗ್ಗೆ ಒಂದಿಷ್ಟು ಮಾತುಕತೆಯಾಡಿದ್ದರು. ನಾನು ಇಂಥವರ ಜೊತೆಗೆ ಸಂಪರ್ಕ ಮುಂದುವರೆಸುತ್ತೀನಿ ಎಂದಿದ್ದರು. ಅದರಂತೆ ಈಗ ಒಂದು ಸ್ಪೆಷಲ್ ಭೇಟಿಯಾಗಿದೆ.

ಮಸ್ತ್ ಮಜಾ ಮಾಡಿದ ಟೀಂ
ಬಿಗ್ ಬಾಸ್ ಮುಗಿದ ಮೇಲೆ ಒಂದಷ್ಟು ಮಂದಿ ಆಗಾಗ ಭೇಟಿಯಾಗಿ ತಮ್ಮ ಸಂತೋಷವನ್ನು ಮೆಲುಕು ಹಾಕುತ್ತಿದ್ದಾರೆ. ಮನೆಯೊಳಗೆ ಯಾರ ನಡುವೆಲ್ಲಾ ಬಾಂಧವ್ಯ ಬೆಸೆದಿತ್ತೋ ಅವರೆಲ್ಲಾ ಬಿಗ್ ಬಾಸ್ ಮುಗಿದ ಮೇಲೂ ಅಷ್ಟೇ ಆತ್ಮೀಯರಾಗಿದ್ದಾರೆ. ಅದರಲ್ಲೂ ನೇಹಾಗೌಡ, ಅನುಪಮಾ, ಅಮೂಲ್ಯ, ದಿವ್ಯಾ ಉರುಡುಗ, ರಾಕೇಶ್ ಇಷ್ಟು ಜನ ಈಗ ಭೇಟಿ ಮಾಡಿ, ಒಂದಷ್ಟು ಅಮೂಲ್ಯವಾದ ಕ್ಷಣಗಳನ್ನು ಕಳೆದಿದ್ದಾರೆ. ಆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿವೆ.

ಟೀಂನಲ್ಲಿ ಮಯೂರಿ ಮಿಸ್ಸಿಂಗ್..!
ಒಮ್ಮೆ ಬಿಗ್ ಬಾಸ್‌ನಲ್ಲಿ ಊಟದ ವಿಚಾರಕ್ಕೆ ನೇಹಾ ಗೌಡ ಆಡಿದ ಮಾತುಗಳು ಮಯೂರಿಗೆ ಕಣ್ಣೀರು ತರಿಸಿತ್ತು. ನೇಹಾ ಗೌಡಗೂ ಆ ಮಾತು ಅಷ್ಟು ಹರ್ಟ್ ಆಗುತ್ತೆ ಎಂಬುದು ತಿಳಿದಿರಲಿಲ್ಲ. ಬಳಿಕ ಕ್ಷಮೆಯನ್ನು ಕೇಳಿ ಆಗಿತ್ತು. ದಿನ ಕಳೆದಂತೆ ಇಬ್ಬರು ಫ್ರೆಂಡ್ಸ್ ಕೂಡ ಆಗಿದ್ದರು. ಯಾವುದೋ ಸಂದರ್ಶನವೊಂದರಲ್ಲಿ ನೇಹಾ ಗೌಡ ಮಯೂರಿ ಬಗ್ಗೆಯೂ ಮಾತನಾಡಿದ್ದರು. ಅವರ ಜೊತೆಗೂ ನನ್ನ ಸಂಪರ್ಕ ಮುಂದುವರೆಯುತ್ತೆ ಎಂದಿದ್ದರು. ಆದರೆ ಇಂದು ಕ್ಲೋಸ್ ಟೀಂನಲ್ಲಿ ಅವರು ಮಿಸ್ ಆಗಿದ್ದಾರೆ.

ದಿವ್ಯಾ ಬರ್ತ್ ಡೇಗೆ ಸೇರಿದ್ರಾ..?
ಇತ್ತೀಚೆಗೆ ದಿವ್ಯಾ ಉರುಡುಗ ಅವರ ಹುಟ್ಟುಹಬ್ಬದ ಸಂಭ್ರಮವೂ ಇತ್ತು. ಇದೇ ಖುಷಿಯಲ್ಲಿದ್ದ ಸಪ್ಪೆ ಹೊಟೇಲ್ ಗ್ಯಾಂಗ್ ಒಂದು ಭೇಟಿಯ ಪ್ಲ್ಯಾನ್ ಮಾಡಿದ್ದಾರೆ. ಎಲ್ಲರೂ ಒಂದು ಕಡೆ ಸೇರಿ, ಮಸ್ತ್ ಫನ್ ಮಾಡಿದ್ದಾರೆ. ಈ ಫೋಟೋ ನೋಡೊದ ಅಭಿಮಾನಿಗಳು, "ಅಕ್ಕ ಸಪ್ಪೆ ಹೊಟೇಲ್ ಎನ್ನಬೇಡಿ. ಪ್ರೀತಿ ತುಂಬಿದ ಹೊಟೇಲ್ ಅನ್ನಿ" ಎಂದಿದ್ದಾರೆ. ಈ ಫೋಟೋಗೆ ಹೆಚ್ಚು ಕಮೆಂಟ್ ಬಂದಿರುವುದು ದಿವ್ಯಾ ಉರುಡುಗ ಅವರಿಗೆ ನೀಡಿರುವ ಹಾರ್ಟ್.


Click it and Unblock the Notifications











