ಬಾರ್ಬಿ ಡ್ರೆಸ್ ತೊಟ್ಟು ಬಿಗ್‌ಬಾಸ್ ನಮ್ರತಾ ಫುಲ್ ಮಿಂಚಿಂಗ್; ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್
ಬಿಗ್ ಬಾಸ್ ಮೂಲಕ ಅಭಿಮಾನಿಗಳಿಗೆ ಮನರಂಜನೆ ನೀಡಿದ ನಟಿ ನಮ್ರತಾ ಗೌಡ . ಇದೀಗ ಈ ನಟಿಯ ಹೊಸ ಫೋಟೋಶೂಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋ ನೋಡಿ ಅಭಿಮಾನಿಗಳು ನಟಿಯ ಸ್ಟೈಲ್ ಸೆನ್ಸ್ ಅನ್ನು ಮೆಚ್ಚಿಕೊಂಡಿದ್ದಾರೆ. ನಮ್ರತಾ ಗೌಡ ಬಿಗ್ ಬಾಸ್‌ನಲ್ಲಿ ಉತ್ತಮ ಆಟವನ್ನು ಆಡಿ ಕೊನೆ ಹಂತದಲ್ಲಿ ಸೋಲನ್ನು ಒಪ್ಪಿಕೊಂಡರು. ಬಿಗ್ ಬಾಸ್‌ನಲ್ಲಿ ಸುಮಾರು 100 ದಿನಗಳ ಕಾಲ ಪೂರೈಸಿ ಅಭಿಮಾನಿಗಳ ಮನಗೆದ್ದಿದ್ದಾರೆ.
ಬಿಗ್‌ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ನಮ್ರತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಇತ್ತೀಚೆಗೆ ಸೀರೆಯುಟ್ಟು ಮದುಮಗಳ ಹಾಗೆ ಸಿಂಗಾರಗೊಂಡಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಇದನ್ನು ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದರು. ಇದೀಗ ನಮ್ರತಾ ಗೌಡ ಹೊಸ ಡ್ರೆಸ್‌ನಲ್ಲಿ ಮತ್ತೊಂದಿಷ್ಟು ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ.

'ನಾಗಿಣಿ 2' ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಜನಪ್ರಿಯತೆಯ ಉತ್ತುಂಗಕ್ಕೆ ಏರಿದ್ದರು. ಕನ್ನಡಿಗರ ಮನೆ ಮಾತಾಗಿದ್ದರು ನಮ್ರತಾ ಗೌಡ. ಇತ್ತೀಚೆಗೆ ಬಿಗ್ ಬಾಸ್ ಮನೆಯೊಳಗೆ ನಮ್ರತಾ ಎಂಟ್ರಿ ಕೊಟ್ಟಿದ್ದು ಅವರ ವೃತ್ತಿ ಬದುಕಿಗೆ ಹೊಸ ಇಮೇಜ್ ಕೊಟ್ಟಿತ್ತು. ನಮ್ರತಾ ಗೌಡ ಇದೀಗ ಮತ್ತೊಮ್ಮೆ ಹೊಸ ಉಡುಗೆ ತೊಟ್ಟು ಮಿಂಚಿದ್ದಾರೆ. ಪಿಂಕ್ ಫ್ರಾಕ್ ತೊಟ್ಟು ಬೇಬಿ ಡಾಲ್ ಹಾಗೆ ಕಾಣಿಸಿಕೊಂಡಿದ್ದಾರೆ. ಹಂಪಿ ಉತ್ಸವದಲ್ಲಿ ಸಖತ್ ಆಗಿ ಪರ್ಮೆನ್ಸ್ ಕೊಟ್ಟ ನಮ್ರತಾ ಗೌಡ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಹಂಪಿ ಉತ್ಸವದಲ್ಲಿ ಡಾನ್ಸ್ ಮಾಡಿದ ನಟಿ
2024ರ ಹಂಪಿ ಉತ್ಸವದಲ್ಲಿ ನಟಿ ನಮ್ರತಾ ಗೌಡ ವೇದಿಕೆ ಮೇಲೆ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಇವರ ಪರ್ಫಾಮೆನ್ಸ್ ಎಷ್ಟು ಸದ್ದು ಮಾಡಿದಿಯೋ ಹಾಗೆಯೇ ಅವರು ಧರಿಸಿದ್ದ ಡ್ರೆಸ್ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಿಂಕ್ ಕಲರ್ ಡ್ರೆಸ್ ತೊಟ್ಟ ನಮ್ರತಾ ಗೌಡ ಸೌಂದರ್ಯಕ್ಕೆ ಜನರು ಫಿದಾ ಆಗಿದ್ದಾರೆ. ಅಷ್ಟು ಮುದ್ದು ಮುದ್ದಾಗಿ ಕಾಣಿಸುತ್ತಿದ್ದರೂ ಕೂಡ, ನಮ್ರತಾ ತೊಟ್ಟಿರುವ ಫೋಟೋಗೆ ಸಾಕಷ್ಟು ಅಭಿಮಾನಿಗಳು ಲೈಕ್, ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಕಿರುತೆರೆಯಲ್ಲಿ ಮಿಂಚುತ್ತಿರುವ ನಟಿ
ನಮ್ರತಾ ಗೌಡ 'ಕೃಷ್ಣ ರುಕ್ಮಿಣಿ' ಧಾರಾವಾಹಿಯಲ್ಲಿ ನಟಿಸಿ ಎಲ್ಲರ ಮೆಚ್ಚುಗೆಗೆ ಗಿಟ್ಟಿಸಿಕೊಂಡಿದ್ದರು. ಈ ಮೂಲಕ ನಮ್ರತಾ ಗೌಡ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಇದಾದ ಬಳಿಕ 'ಪುಟ್ಟ ಗೌರಿ' ಮದುವೆ ಧಾರಾವಾಹಿಯಲ್ಲಿ ಹಿಮ ಪಾತ್ರದಲ್ಲಿ ಮಿಂಚಿದ್ದರು. ಇವರ ಆಕ್ಟಿಂಗ್‌ಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದರು. ಹಿಮ, ಗೌರಿಗೆ ಸಾಥ್ ನೀಡುತ್ತಿರುವುದನ್ನು ನೋಡಿ ಕಿರುತೆರೆ ವೀಕ್ಷಕರು ಮನೆಮಗಳಂತೆ ಕಂಡಿದ್ದರು.
ನಾಗಿಣಿ ಪಾತ್ರದಿಂದ ಹೆಚ್ಚಿದ ಜನಪ್ರಿಯತೆ
ಜೀ ಕನ್ನಡದ ಜನಪ್ರಿಯ ಧಾರಾವಾಹಿ 'ನಾಗಿಣಿ 2' ಸೀರಿಯಲ್ ಮೂಲಕ ಹೆಚ್ಚು ಜನಪ್ರಿಯತೆಯನ್ನು ಗಿಟ್ಟಿಸಿಕೊಂಡರು. ಇದು ಮುಗಿಯುತ್ತಿದ್ದಂತೆ ಬಿಗ್ ಬಾಸ್ ಕನ್ನಡ ಸೀಸನ್ 10ಗೆ ಎಂಟ್ರಿ ಕೊಟ್ಟಿದ್ದರು. ಆ ಬಳಿಕವಂತೂ ನಮ್ರತಾ ಪರ್ಫಾಮೆನ್ಸ್‌ಗೆ ಅನೇಕರು ಫಿದಾ ಆಗಿದ್ದಾರೆ. ಹಾಗೆಯೇ ಇನ್ನಷ್ಟು ಅಭಿಮಾನಿಗಳ ಜೊತೆ ಸೋಷಿಯಲ್ ಮೀಡಿಯಾದಲ್ಲಿ ನಮ್ಮು ಬೆರೆಯುತ್ತಿದ್ದಾರೆ.


Click it and Unblock the Notifications











