BBK 12 ; ರಜತ್‌ನ ಕೆಣಕಿದ ಧ್ರುವಂತ್, ವಾಗ್ಯುದ್ದ, ಜಗಳ - ಗಿಲ್ಲಿಯನ್ನೇ ನಾಮಿನೇಟ್ ಮಾಡಿದ ಕಾವು, ರಣರಂಗವಾಯ್ತು ಮನೆ
ಕನ್ನಡದಲ್ಲಿ ''ಬಿಗ್ ಬಾಸ್'' ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ತಲುಪುತ್ತಿದೆ. ದಿನದಿಂದ ದಿನಕ್ಕೆ ಮನೆಯಲ್ಲಿ ರಂಪ-ರಾಮಾಯಣ ಹೆಚ್ಚಾಗುತ್ತಿದೆ. ಇನ್ನು ಈ ವಾರ ಹಾರರ್ ಥೀಮ್‌ನೊಂದಿಗೆ ʻವಿಲನ್' ರಂಗ ಪ್ರವೇಶವಾಗಿದೆ. ಸ್ಫರ್ಧಿಗಳಿಗೆ ಹೊಸ ತಲೆ ನೋವು ಶುರುವಾಗಿದೆ. ಸ್ಫಂದನಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಕಳೆದ ಬಾರಿಯ ಸ್ಫರ್ಧಿ ಚೈತ್ರಾ ಕುಂದಾಪುರ ಅವರಿಗೆ ಕ್ಯಾಪ್ಟನ್ ಮಾಡಲಾಗಿದೆ. ಅಶ್ವಿನಿ ಗೌಡ ಅವರಿಂದ...
ನಾಮಿನೇಟ್ ಮಾಡುವ ಅಧಿಕಾರವನ್ನು ಕಿತ್ತುಕೊಳ್ಳಲಾಗಿದೆ. ಸದ್ಯ ಮನೆಯಲ್ಲಿ ನಾಮಿನೇಶನ್ ಬಿಸಿ ಇದ್ದು ರಜತ್ ಮತ್ತು ಧ್ರುವಂತ ನಡುವಿನ ಜಗಳ ತಾರಕಕ್ಕೇರಿದೆ. ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಇಬ್ಬರ ನಡುವೆ ವಾಗ್ಯುದ್ದ ನಡೆದಿದೆ.

ಹೌದು, ಅಸಲಿಗೆ ರಜತ್ ಮತ್ತು ಗಿಲ್ಲಿಯನ್ನು ಕಾವ್ಯ ಗುರಿಯಾಗಿಸಿಕೊಂಡಿದ್ದಾರೆ. ನಾಮಿನೇಟ್ ಮಾಡಿದ್ದಾರೆ. ಇದಕ್ಕೆ ಅವರು ಸೀಮಿತವಾದರು ಎನ್ನುವ ಕಾರಣ ನೀಡಿದ್ದಾರೆ. ಕಾವ್ಯ ಆಡಿದ ಈ ಮಾತು ರಜತ್‌ಗೆ ಕೋಪ ತರಿಸಿದೆ. ಈ ಹಿನ್ನೆಲೆ ತಮಾಷೆನೇ ಮಾಡಬಾರದಾ ? ಎಂಬ ಪ್ರಶ್ನೆಯನ್ನು ರಜತ್ ಮಾಡಿದ್ದಾರೆ. ತಲೆ ಕೆಟ್ಟು ಹೋಗಿದ್ಯಾ ? ಎಂದು ಕೂಗಾಡಿದ್ದಾರೆ.
ರಜತ್ ಅವರ ಈ ಮಾತು ಕಾವ್ಯ ಬದಲು ಧ್ರುವಂತ್ ಅವರನ್ನು ಕೆರಳಿಸಿವೆ. ಹೀಗಾಗಿ ಏನು ಏಕವಚನದಲ್ಲಿ ಮಾತನಾಡುತ್ತೀರಾ ಎಂದಿದ್ದಾರೆ. ಆಗ ರಜತ್ ಮತ್ತು ಧ್ರುವಂತ್ ನಡುವೆ ಮಾತಿನ ಚಕಮಕಿ ನಡೆದಿದೆ. ನಮ್ಮನ್ನು ಗಿಲ್ಲಿ ಅಂದುಕೊಂಡಿದ್ದೀಯಾ? ಬಾರೋ. ಇದೆಲ್ಲ ನಿನ್ನ ಸೀಸನ್ ಅಲ್ಲಿ ಇಟ್ಕೋ ಎಂದು ಧ್ರುವಂತ್ ಗುಡುಗಿದರೆ ರಜತ್ ಕೊಟ್ಟರೆ ಎರಡು ಎಂದು ಕೆಂಡ ಕಾರಿದ್ದಾರೆ. ಇಬ್ಬರು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದಾರೆ.
ಸದ್ಯ ಮನೆಯವರೆಲ್ಲ ಸೇರಿಕೊಂಡು ಧ್ರುವಂತ್ ಮತ್ತು ರಜತ್ ಇಬ್ಬರನ್ನು ತಡೆಯುವ ಪ್ರಯತ್ನ ಮಾಡಿದಂತೆ ಇದೆ. ನಿಜಕ್ಕೂ ಇಬ್ಬರ ನಡುವೆ ಕೇವಲ ಮಾತಿನ ಚಕಮಕಿ ನಡೆದಿದೆಯಾ ? ಅಥವಾ ರಂಪ ರಾಮಾಯಣ ಮತ್ತೊಂದು ಹಂತಕ್ಕೆ ಹೋಗಿದೆಯಾ..? ಎನ್ನುವುದನ್ನು ನೋಡಬೇಕಿದೆ. ಈ ಟಾಸ್ಕ್‌ನಲ್ಲಿ ಮತ್ತೆ ಯಾರೆಲ್ಲ ಯಾವೆಲ್ಲಾ ರಾದ್ದಾಂತಕ್ಕೆ ಕಾರಣವಾಗುತ್ತಾರೆ ಎನ್ನುವುದನ್ನು ಕೂಡ ಕಾದು ನೋಡಬೇಕಿದೆ.
ಇನ್ನುಳಿದಂತೆ ಇಂದು (ಡಿಸೆಂಬರ್ 9) ಬಿಡುಗಡೆಯಾದ ಈ ಪ್ರೋಮೋ ನೋಡಿ ಗಿಲ್ಲಿನ ಯಾರ್ ಬೇಕಾದ್ರೂ ನಾಮಿನೇಟ್ ಮಾಡ್ಲಿ ವೋಟ್ ಮಾತ್ರ ಗಿಲ್ಲಿಗೆ ಅಷ್ಟೇ ಹಾಕ್ತೀವಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ಇಡೀ ಮನೆಗೆ ಗಿಲ್ಲಿನೇ ಟಾರ್ಗೆಟ್ ಅಂದ್ರೆ ಅವನ ಹವಾ ಮನೆಯೊಳಗೆ ಹೇಗಿದೆಯೋ ಅದಕ್ಕಿಂತ ನೂರು ಪಟ್ಟು ಹೊರಗಡೆ ಇದೆ. ಒನ್ ಮ್ಯಾನ್ ಶೋ, Only ವೋಟ್ for ಗಿಲ್ಲಿ ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಮತ್ತೊಬ್ಬರು ಕಾವ್ಯ ಅವರು ರಜತ್ ಗೆ ಹೇಳ್ತಾ ಇದಾರೆ ಒಂದೇ ಕಡೆ ಸೀಮಿತ ಅದ್ರು ಅಂತ ತಮಾಷೆ ಅಂದ್ರೆ ಕಾವ್ಯ ಅವರು 60 ದಿನ ಅದ್ರು ಗಿಲ್ಲಿ ಮತ್ತು ಧನುಷ್ ಜೊತೆ ಬಿಟ್ಟು ಎಲ್ಲೂ ಕಾಣಿಸಿಕೊಂಡಿಲ್ಲ ಎಂದು ಕಾಮೆಂಟ್ ಮಾಡಿದರೆ, ರೌಡಿಸಂ ಮಾಡಕ್ ಅಂತಾನೆ ಬಂದಿದ್ದಾರೆ ಅಂತ ಅನಿಸುತ್ತೆ ಏನ್ ದುರಂಕಾರ ಏನ್ ದೌಲತ್ತು, ಬಿಗ್ ಬಾಸ್, ಏನ್ ಮಾಡ್ತಾ ಇದ್ದೀರಾ ಕಿಚ್ಚ ಸುದೀಪ್ ಅಣ್ಣ ನೀವು ಅಷ್ಟೇ ಎಂದು ತಮ್ಮ ಅಸಮಾಧಾನವನ್ನು ಮತ್ತೊಬ್ಬರು ಹೊರ ಹಾಕಿದ್ದಾರೆ.
ಒಟ್ನಲ್ಲಿ ಇಂದಿನ ''ಬಿಗ್ ಬಾಸ್'' ಸಂಚಿಕೆ ಕುತೂಹಲ ಕೆರಳಿಸಿದ್ದು, ಈ ವಾರ ಮನೆಯಿಂದ ಹೊರಗಡೆ ಯಾರು ಹೋಗುತ್ತಾರೆ..? ಸುದೀಪ್ ಯಾವೆಲ್ಲಾ ವಿಚಾರಗಳ ಕುರಿತು ಈ ವಾರ ಚರ್ಚೆ ಮಾಡಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











