Gicchi Giligili-3: ಬಿಗ್ ಬಾಸ್ ಮುಗಿದ ಮೇಲೆ ಮಾತಾಡೋದನ್ನ ಕಲಿತರಾ ಪ್ರತಾಪ್..?
ಬಿಗ್ ಬಾಸ್ ಸೀಸನ್ 10ರಲ್ಲಿ ಡ್ರೋನ್ ಪ್ರತಾಪ್ ಸ್ಪರ್ಧಿಯಾಗಿ ಬಂದಿದ್ದರು. ಅಸಮರ್ಥರಾಗಿ ಬಂದಿದ್ದ, ಪ್ರತಾಪ್ ಕೊನೆಗೆ ರನ್ನರ್ ಅಪ್ ಆಗಿ, ಬಹುಮಾನ ಪಡೆದು ತೆರಳಿದರು. ಬಿಗ್ ಬಾಸ್ ಮನೆಯಲ್ಲಿದ್ದಾಗಲೇ ಸ್ವಾಮೀಜಿಯೊಬ್ಬರು ಪ್ರತಾಪ್‌ಗೆ ಮನೆಯವರಿಂದ ದೂರ ಇರು ಎಂದು ಹೇಳುವುದಲ್ಲದೆ ವಿದೇಶ ಪ್ರಯಾಣದ ಸೂಚನೆ ನೀಡಿದ್ದರು.
ಸ್ವಾಮೀಜಿ ಮಾತನ್ನು ಕೇಳಿ ವೀಕ್ಷಕರು, ಬಿಗ್ ಬಾಸ್ ಮುಗಿದ ಮೇಲೆ ಪ್ರತಾಪ್ ಖಂಡಿತ ವಿದೇಶಕ್ಕೆ ಹೋಗ ಬಹುದೆಂದುಕೊಂಡಿದ್ದರು. ಆದರೀಗ ಅದು ಸುಳ್ಳಾಗಿದೆ. ಡ್ರೋನ್ ಪ್ರತಾಪ್ ಮತ್ತೆ ಕಲರ್ಸ್ ಕನ್ನಡದಲ್ಲಿಯೇ ಮುಂದುವರೆದಿದ್ದಾರೆ. 'ಗಿಚ್ಚಿ ಗಿಲಿಗಿಲಿ' ಮೂಲಕ ಮತ್ತೆ ಮನರಂಜನೆ ನೀಡಲು ಬರುತ್ತಿದ್ದಾರೆ.

ಸದಾ ಕಾಲ ಮೌನವಾಗಿಯೇ ಇರುತ್ತಿದ್ದ ಪ್ರತಾಪ್‌ಗೆ ಇನ್ನೊಂದು ಜಾಲಿ ಮುಖ ಕೂಡ ಇದೆ. ಬಿಗ್ ಬಾಸ್ ಶೋನಲ್ಲಿ ಕಿಚ್ಚ ಸುದೀಪ್ ವೀಕೆಂಡ್ ಸಮಯದಲ್ಲಿ ಆ ನಗುಮುಖವನ್ನು ಹೊರ ಹಾಕಿಸುತ್ತಿದ್ದರು. ಇದೀಗ ಅದಕ್ಕಿಂತ ಅದ್ಬುತವಾದ ಪ್ರತಾಪ್ ಜನತೆಗೆ ಕಾಣುತ್ತಿದ್ದಾರೆ.
ಗಿಚ್ವಿ ಗಿಲಿಗಿಲಿಯಲ್ಲಿ ಪ್ರತಾಪ್ ಕಾಮಿಡಿ
ಡ್ರೋನ್ ಪ್ರತಾಪ್ ನೋಡಿದರೆ ಯಾವಾಗಲೂ ಸೀರಿಯಸ್ ಆಗಿ, ಗಂಟು ಮುಖ ಹಾಕಿಕೊಂಡೇ ಇರುತ್ತಾರೆ. ಆದರೆ ಪ್ರತಾಪ್‌ಗೂ ನಗುವುದಕ್ಕೆ ಬರುತ್ತಾ ಎಂಬ ಪ್ರಶ್ನೆಗೆ ಹೌದು ಎಂಬ ಉತ್ತರ ಸಿಗುವುದು 'ಗಿಚ್ಚಿ ಗಿಲಿಗಿಲಿ'-3 ಮೂಲಕ. ಬಿಗ್ ಬಾಸ್ ಜರ್ನಿ ಮುಗಿಸಿದ ಪ್ರತಾಪ್ ನೇರವಾಗಿ ಈ ಶೋಗೆ ಬಂದಿದ್ದಾರೆ.
ಈಗ ಪ್ರತಾಪ್ ಲೈಫ್ ಹೇಗಿದೆ..?
ಬಿಗ್ ಬಾಸ್ ಮನೆಗೆ ಪ್ರತಾಪ್ ಹೋದಾಗ ದ್ವೇಷ ಮಾಡಿದವರೇ ಹೆಚ್ಚು, ಕಿಡಿಕಾರಿದವರೇ ಜಾಸ್ತಿ. ಮನೆಯ ಹೊರಗೆ ಮಾತ್ರವಲ್ಲ ಮನೆಯ ಒಳಗೂ ಕಿಡಿಕಾರುತ್ತಿದ್ದರು. ಆದರೆ ದಿನ ಕಳೆದಂತೆ ಪ್ರತಾಪ್ ಖ್ಯಾತಿ ದೊಡ್ಡ ಮಟ್ಟದಲ್ಲಿಯೇ ಹೆಸರಾಗುತ್ತಾ ಹೋಗಿದೆ. ಫ್ಯಾನ್ಸ್ ಸಂಖ್ಯೆ ಹೆಚ್ಚಾಗಿದೆ. ಫ್ಯಾನ್ ಪೇಜ್‌ಗಳ ಸಂಖ್ಯೆಯೂ ಹೆಚ್ಚಾಗಿದೆ. ಬಿಗ್ ಬಾಸ್‌ನಿಂದ ಹೊರ ಬಂದ ಪ್ರತಾಪ್‌ನ ಜನ ಡ್ರೋನು, ಪ್ರತು ಅಂತೆಲ್ಲಾ ಕರೆಯುತ್ತಾರಂತೆ. ಪ್ರತಾಪ್ ಫ್ಯಾನ್ಸ್ ಪೇಜ್‌ಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.
ಟೀಕೆಗಳಿಗೆ ಜಗ್ಗದ ಪ್ರತಾಪ್
ಡ್ರೋನ್ ಪ್ರತಾಪ್ ಹೊರಗಿದ್ದಾಗ ಸಿಕ್ಕಾಪಟ್ಟೆ ಟೀಕೆ, ಟಿಪ್ಪಣಿಗಳು ಕೇಳಿ ಬಂದಿದ್ದವು. ಆದರೆ ಅದ್ಯಾವುದಕ್ಕೂ ಉತ್ತರ ಕೊಡುವ ಕೆಲಸವನ್ನು ಪ್ರತಾಪ್ ಮಾಡಿರಲಿಲ್ಲ. ಈಗ ಬಿಗ್ ಬಾಸ್ ಶೋನಿಂದ ತಪ್ಪಿಲ್ಲದೆ ಇದ್ದಾಗ ನಿಂದಿಸಿದವರಿಗೆ ತಕ್ಕ ಉತ್ತರ ಕೊಡುವುದನ್ನು ಕಲಿತುಕೊಂಡಿದ್ದಾರೆ. ಶೋನಲ್ಲಿ ಗೆಲ್ಲದೆ ಹೋದರೂ ನನ್ನನ್ನು ನಾನು ಗೆದ್ದಿದ್ದೀನಿ ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಪ್ರತಾಪ್.
ಗಿಚ್ಚಿಗಿಲಿ ಗಿಲಿ ಶೋಗೆ ಬಂದಿದ್ದು ಯಾಕೆ..?
ನನ್ನ ತಂದೆ ತಾಯಿ ಸ್ಥಾನ ಬಿಟ್ಟರೆ ನೆಕ್ಸ್ಟ್ ನನ್ನ ಮನಸ್ಸಲ್ಲಿ ಬಿಗ್ ಬಾಸ್ ಅವರಿಗೇನೆ ಸ್ಥಾನ. ಸುದೀಪ್ ಸರ್ ಸಾಕಷ್ಟು ಧೈರ್ಯ ತುಂಬಿದ್ದಾರೆ. ಎಲ್ಲರಿಗೂ ಗೌರವ ಕೊಡುವುದನ್ನು ಹೇಳಿಕೊಟ್ಟಿದ್ದಾರೆ. 'ಗಿಚ್ಚಿಗಿಲಿ ಗಿಲಿ' ಅಂತ ಅಲ್ಲ ಕಲರ್ಸ್ ಕನ್ನಡದವರು ಒಂದು ಸಣ್ಣ ಪಾತ್ರ ಮಾಡು ಅಂತ ಕರೆದರು ಬಂದು ಮಾಡುತ್ತೀನಿ. ಶೋಗೆ ಹೋಗುವುದಕ್ಕೂ ಮುನ್ನ ನನ್ನ ಅಭಿಪ್ರಾಯ ಬೇರೆ ಆಗಿತ್ತು. ಆದರೆ ಶೋನಲ್ಲಿ ನಾನು ನಾನಾಗಿ ಇದ್ದೆ. ಅದನ್ನೇ ತೋರಿಸಿದ್ದಾರೆ ಕೂಡ. ತುಂಬಾ ಖುಷಿ ಇದೆ ಎಂದು ಬಿಗ್ ಬಾಸ್ ಅನುಭವ ಬಿಚ್ಚಿಟ್ಟಿದ್ದಾರೆ.


Click it and Unblock the Notifications











