10 ವರ್ಷದ ಪ್ರೀತಿ ಅಂತ್ಯ? ಮದುವೆಗೂ ಮುನ್ನ ದೂರ ಆದ 'ಬಿಗ್ ಬಾಸ್' ಜೋಡಿ?
ಪ್ರೀತಿ ಎಂಬ ಪದ ಸುಂದರ ಇರಬಹುದು. ಆದರೆ, ಪ್ರೀತಿಯ ಕೆಲವೊಮ್ಮೆ ಕಾಡುತ್ತೆ. ಪ್ರೀತಿಯಲ್ಲಿ ನೋವು ಸಹಜವಾದರೂ ಅದನ್ನು ಸಹಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದೇ ಇಲ್ಲ. ಅದರಿಂದಾಗುವ ನೋವು ಶಾಶ್ವತವಾಗಿಲ್ಲದಿದ್ದರೂ ಆ ಕ್ಷಣಕ್ಕೆ ಮಾತ್ರ ಅದು ನುಂಗಲಾರದ ತುತ್ತು. ಎಲ್ಲಾ ಉತ್ಸಾಹ, ಆಸಕ್ತಿ, ಖುಷಿಯ ಕ್ಷಣಗಳನ್ನು ಕಸಿದುಕೊಳ್ಳೋ ಆ ಬ್ರೇಕ್ ಅಪ್‌ನ ನೋವು ಸಹಿಸಿಕೊಳ್ಳೋದಕ್ಕೆ ಸಾಧ್ಯ ಆಗದೇ ಇರುವುದಕ್ಕೆ ಕಾರಣಗಳೇನು ಎಂಬುದು ಹೃದಯವಂತರ ಪ್ರಶ್ನೆ.
ಈ ಪ್ರಶ್ನೆಗೆ ಲವ್ ಗುರುಗಳು ಇನ್ನು ಉತ್ತರವನ್ನು ನೀಡದೇ ಇದ್ದರೂ ಚಿತ್ರರಂಗದಲ್ಲಿ ಹಲವರು ಈ ಪ್ರೀತಿಯ ಬೆಂಕಿಯಲ್ಲಿ ಬಿದ್ದು ಬೆಂದಿದ್ದಾರೆ. ನೊಂದು ಕಣ್ಣೀರು ಹಾಕಿದ್ದಾರೆ. ಈ ಸಾಲಿನಲ್ಲಿಗ ಆವೇಜ್ ದರ್ಬಾರ್ ಮತ್ತು ನಗ್ಮಾ ಮಿರಾಜ್ಕರ್ ಕೂಡ ಸೇರಿಕೊಂಡಿದ್ಧಾರೆ ಎನ್ನುವ ಅನುಮಾನ ಸದ್ಯ ಹಲವರನ್ನು ಕಾಡುತ್ತಿದೆ.

ಹೌದು, ಆವೇಜ್ ದರ್ಬಾರ್ ಮತ್ತು ನಗ್ಮಾ ಮಿರಾಜ್ಕರ್.. ಕಳೆದ ಬಾರಿಯ ಹಿಂದಿ ''ಬಿಗ್ ಬಾಸ್''ನ ಸ್ಫರ್ಧಿಗಳು. ಆವೇಜ್ ನೃತ್ಯ ನಿರ್ದೇಶಕರಾಗಿ ಹೆಸರು ಮಾಡಿದ್ದರೆ, ನಗ್ಮಾ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿ ಕ್ರಿಯೇಟರ್ ಆಗಿ ಗುರುತಿಸಿಕೊಂಡಿದ್ದಾರೆ. 38 ಲಕ್ಷ ಜನ ಈ ಜೋಡಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಿಂಬಾಲಿಸುತ್ತಿದ್ದಾರೆ.
ಇನ್ನೂ ಈ ಆವೇಜ್ ಬೇರೆ ಯಾರು ಅಲ್ಲ ಬದಲಿಗೆ ಒಂದ್ಕಾಲದಲ್ಲಿ ತನ್ನ ಸಂಗೀತದಿಂದ ಹೊಸ ಅಲೆ ಸೃಷ್ಟಿಸಿದ್ದ, ''ಹಮ್ ದಿಲ್ ದೇ ಚುಕೆ ಸನಮ್''.. ''ದೇವದಾಸ್'' ಅಂತಹ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದ ಪ್ರಖ್ಯಾತ ಸಂಗೀತ ನಿರ್ದೇಶಕ ಇಸ್ಮಾಯಲ್ ದರ್ಬಾರ್ ಅವರ ಮಗ.
2016ರಲ್ಲಿ ಟಿಕ್ ಟಾಕ್ ಮೂಲಕ ಪರಿಚಯವಾದ ಆವೇಜ್ ಮತ್ತು ನಗ್ಮಾ ಕಳೆದ ವರ್ಷ ''ಬಿಗ್ ಬಾಸ್'' ಮನೆಗೆ ಬರುವ ಮುನ್ನ ಜೊತೆಯಾಗಿ ಅದಾಗಲೇ ಹತ್ತು ಹಲವು ಹಾಡುಗಳಿಗೆ ಹೆಜ್ಜೆ ಹಾಕಿದ್ದರು. 2020ರ ಆಸು-ಪಾಸು ಜೊತೆಯಾಗಿ ಪ್ರವಾಸಕ್ಕೆ ತೆರಳಿ ಜೊತೆಯಲ್ಲಿ ವ್ಲಾಗ್ ಮಾಡಿ ಹಂಚಿಕೊಳ್ಳುತ್ತಿದ್ದರು.
2021ರಲ್ಲಿಯೇ ಇಬ್ಬರ ನಿಶ್ಚಿತಾರ್ಥದ ಸುದ್ದಿ ಹಬ್ಬಿತ್ತಾದರೂ ನಗ್ಮಾಗೆ ಆವೇಜ್ ಕಳೆದ ವರ್ಷ ''ಬಿಗ್ ಬಾಸ್'' ಮನೆಯಲ್ಲಿ ಎಲ್ಲರೆದುರು ಪ್ರಪೋಸ್ ಮಾಡಿದರು. ಹಾಗೇ ನೋಡಿದರೆ ನಾವು ಈಗಾಗಲೇ ಮದುವೆಯಾಗಬೇಕಿತ್ತು, ಆದರೆ ''ಬಿಗ್ ಬಾಸ್'' ಕಾರ್ಯಕ್ರಮದ ಅವಕಾಶ ಸಿಕ್ಕ ಹಿನ್ನೆಲೆ ಮದುವೆ ದಿನಾಂಕವನ್ನು ಮುಂದೂಡಿದ್ದೇವೆ ಎಂದು ಇಬ್ಬರು ಹೇಳಿದರು. ಈ ವರ್ಷದ ಆರಂಭದಲ್ಲಿ ಮದುವೆಯಾಗುವುದಾಗಿ ಕೂಡ ಹೇಳಿದ್ದರು. '

ಆದರೆ ಈಗ ಇವರ ಸಂಬಂಧದಲ್ಲಿ ಬಿರುಕು ಮೂಡಿದಂತೆ ಇದೆ. ಇದಕ್ಕೆ ಪುರಾವೆ ಎನ್ನುವಂತೆ ಮೊನ್ನೆ.. ಮೊನ್ನೆ (ಮಾರ್ಚ್ 16) ಆವೇಜ್ ತಮ್ಮ 33ನೇ ಬರ್ತ್‌ಡೇ ಆಚರಿಸಿಕೊಂಡಿದ್ದಾರೆ. ಆದರೆ ನಗ್ಮಾ ಮಾತ್ರ ಶುಭಾಶಯ ಕೋರಿಲ್ಲ. ಬರ್ತ್ ಡೇ ಪಾರ್ಟಿಗೂ ಕೂಡ ಬಂದಿಲ್ಲ. ಬದಲಿಗೆ ಜನ ನನ್ನನ್ನೇ ದೂಷಿಸುತ್ತಾರೆ. ಆದರೆ ನಾನು ವಾಸ್ತವದ ಸತ್ಯವನ್ನು ಮಾತನಾಡುವವಳು ಎಂದು ನಗ್ಮಾ ಬರೆದುಕೊಂಡಿದ್ದರು.
ಇನ್ನೊಂದು ಕಡೆ ಆವೇಜ್ ಕೂಡ ಈ ಬಾರಿ ನನ್ನ ಬರ್ತ್‌ಡೇಯನ್ನು ನಾನು ಒಬ್ಬನೇ ಆಚರಿಸಬೇಕಾಗುತ್ತೆ ಎಂದುಕೊಂಡಿದ್ದೆ, ಆದರೆ ನನ್ನ ಸ್ನೇಹಿತರು ಮತ್ತು ಕುಟುಂಬದವರು ಹಾಗಾಗಲು ಬಿಡಲಿಲ್ಲ ಎಂದು ಬರೆದುಕೊಂಡಿದ್ದರು. ಇಷ್ಟೇ ಅಲ್ಲ ''ಟೆಲ್ಲಿ ಮಸಾಲಾ''ಗೆ ನೀಡಿದ ಸಂದರ್ಶನದಲ್ಲಿ ಹುಟ್ಟುಹಬ್ಬಕ್ಕೆ ನಗ್ಮಾ ನೀಡಿದ ಸರ್‌ಪ್ರೈಸ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಆವೇಜ್, ಇದರ ಬಗ್ಗೆ ನಾವು ಆರಾಮಾಗಿ ಕುಳಿತು ಪ್ರೀತಿಯಿಂದ ಮಾತನಾಡೋಣ, ಯಾಕೆಂದರೆ ಹೇಳೋಕೆ ತುಂಬಾ ಇದೆ, ನಾನು ನಿಮಗೆ ಆಮೇಲೆ ಎಲ್ಲವನ್ನೂ ಹೇಳುತ್ತೇನೆ ಎಂದಿದ್ದಾರೆ.
ಇವರು ಹೇಳಿರುವ ಈ ಮಾತಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿರುವುದನ್ನು ಪರೋಕ್ಷವಾಗಿ ಸಾಬೀತು ಆದಂತೆ ಇದೆ ಎಂಬ ಅಭಿಪ್ರಾಯ ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿದೆ. ಇವರ ಲವ್ ಮತ್ತು ಬ್ರೇಕಪ್ ಕುರಿತ ಚರ್ಚೆಗೆ ಸದ್ಯ ಎಡೆ ಮಾಡಿಕೊಟ್ಟಿದೆ.
ಸದ್ಯಕ್ಕೆ ಅವೇಜ್ ಅಥವಾ ನಗ್ಮಾ ಅಧಿಕೃತವಾಗಿ ಬ್ರೇಕಪ್ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಇಬ್ಬರೂ ಇನ್ನೂ ಪರಸ್ಪರ ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡುತ್ತಿದ್ದಾರೆ. ಇನ್ನೂ ಜೊತೆಯಲ್ಲಿರುವ ಫೋಟೊ ಮತ್ತು ವಿಡಿಯೋಗಳನ್ನು ಕೂಡ ಇಬ್ಬರು ಕಿತ್ತೆಸೆದಿಲ್ಲ. ಇದರಿಂದ ಇಬ್ಬರ ನಡುವೆ ಚಿಕ್ಕ ಭಿನ್ನಾಭಿಪ್ರಾಯ ಮೂಡಿರಬಹುದಷ್ಟೇ ಎಂಬ ವಾದವನ್ನು ಇವರ ಅಭಿಮಾನಿಗಳು ಮಾಡುತ್ತಿದ್ದಾರೆ. ಇಬ್ಬರು ಮದುವೆಯಾಗುತ್ತಾರೆ, ಇನ್ನೂ ಜೊತೆಯಲ್ಲಿದ್ದಾರೆ ಎಂಬ ಭರವಸೆ ವ್ಯಕ್ತಪಡಿಸುತ್ತಿದ್ಧಾರೆ.


Click it and Unblock the Notifications











