For Quick Alerts
  ALLOW NOTIFICATIONS  
  For Daily Alerts

  'ಸಿತಾರ ದೇವಿ'ಯೇ ಆದ್ರಾ ಬಿಗ್ ಬಾಸ್ ಸುಜಾತ!?

  By ಮೇ.ರಾ
  |

  ರಾಧಾ ರಮಣ ಸೀರಿಯಲ್ ನೋಡಿದವರಿಗೆ ಸಿತಾರ ದೇವಿಯ ಕ್ಯಾರೆಕ್ಟರ್ ಗೊತ್ತಿರುತ್ತೆ. ರಾಧಾರಮಣ ಸೀರಿಯಲ್‌ನ ಖ್ಯಾತಿಯಿಂದಲೇ ಸಿತಾರಾ ದೇವಿ ಪಾತ್ರಧಾರಿ ಬಿಗ್‌ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಆದ್ರೆ ಬಿಗ್ ಬಾಸ್ ಮನೆಯ ಪ್ರವೇಶದ ನಂತರ ಪ್ರೇಕ್ಷಕರಿಗೆ ಕಾಡುತ್ತಿರೋ ಪ್ರಶ್ನೆ ಸುಜಾತ ನಿಜಕ್ಕೂ ಸಿತಾರ ದೇವಿಯೇನಾ ಅನ್ನೋ ಪ್ರಶ್ನೆ. ಅಥವಾ ಬಿಗ್ ಬಾಸ್ ಮನೆಯಲ್ಲೂ ಅವರು ಖ್ಯಾತಿ ತಂದುಕೊಟ್ಟ ಸಿತಾರಾದೇವಿಯ ಪಾತ್ರವನ್ನೇ ಮಾಡ್ತಿದ್ದಾರಾ ಅಂತ..

  ಹೀಗೇಳೋಕೂ ಕಾರಣ ಇದೆ. ಆರಂಭದಿಂದಲೂ ಸುಜಾತ ಅವರ ಧೋರಣೆ ಡಿಫರೆಂಟಾಗಿದೆ. ತಾವು ಸೀನಿಯರ್ ಎಲ್ಲರೂ ತಮಗೆ ತಲೆಬಾಗಬೇಕು.. ತಮ್ಮ ಮಾತು ಕೇಳಬೇಕು ಅನ್ನೋ ಹಾಗಾಗಿದೆ (ಸೀರಿಯಲ್‌ನಲ್ಲೂ ನಾನು ಕಂಪನಿ ಕಟ್ಟಿದ್ದು.. ನನ್ನ ಅಂಡರ್‌ನಲ್ಲೇ ಇವರೆಲ್ಲಾ ಇರಬೇಕು). ಬಿಗ್ ಬಾಸ್ ಅಡುಗೆ ಮನೆಯ ಇಂಚಾರ್ಜ್ ವಹಿಸಿಕೊಂಡಾಗ ಅವರದ್ದೇ ಅಡುಗೆ ಮನೆ ಅನ್ನೋವಾಗೆ ವರ್ತಿಸಿದ್ರು. ಇಷ್ಟೇ ತಿನ್ನಬೇಕು ಅಂತ ಕಡಿವಾಣ ಹಾಕ್ತಿದ್ರು. ಅದು ಎಲ್ಲರಿಗೂ ಸಿಗಬೇಕು ಅನ್ನೋದು ಅವರ ವಾದವನ್ನ ಒಪ್ಪೋದೇ ಆದ್ರೂ ಅದನ್ನ ಸುಜಾತ ಸೀನಿಯರ್ ಆಗಿ ಜೂನಿಯರ್ಸ್ ಗಳಿಗೆ ಹೇಳುವ ರೀತಿಯಲ್ಲಿ ಹೇಳಲಿಲ್ಲ.

  ಪ್ರಿಯಾಂಕಾ 'ನೆಗೆಟಿವ್' ಇಮೇಜ್ ಬದಲಿಸಿದ ಒಂದೇ ಒಂದು ಟಾಸ್ಕ್.!ಪ್ರಿಯಾಂಕಾ 'ನೆಗೆಟಿವ್' ಇಮೇಜ್ ಬದಲಿಸಿದ ಒಂದೇ ಒಂದು ಟಾಸ್ಕ್.!

  ಒಮ್ಮೊಮ್ಮೆ ಜೊತೆಗಾರರ ಪಾಲಿಗೆ ಸುಜಾತ ರಾಧಾರಮಣ ಸೀರಿಯಲ್‌ನ ವಿಲನ್ ನಂತೆಯೇ ಕಾಣುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಅವರು ಬೇರೆ ಹೆಣ್ಣುಮಕ್ಕಳ ಬಗ್ಗೆ ರೂಮರ್ ಹಬ್ಬಿಸುತ್ತಿದ್ದುದು ಅವರನ್ನ ಪಕ್ಕಾ ವಿಲನ್ ಆಗಿ ಮಾಡಿಬಿಟ್ಟಿದೆ ಅಂದ್ರೆ ತಪ್ಪಾಗೋಲ್ಲ. ಆರಂಭದಲ್ಲಿ ಪ್ರಿಯಾಂಕ ಬಳಿ ವಾಸುಕಿ-ಚಂದನ ಮಧ್ಯೆ ಏನೋ ಸಂಬಂಧ ಇದೆ ಅಂತಾನೋ.. ಅವರ ಮಧ್ಯೆ ಏನೋ ನಡೀತಿದೆ ಅನ್ನೋದನ್ನ ತಮ್ಮ ತಲೆಯಲ್ಲಿ ತಾವು ಬಿಟ್ಟುಕೊಂಡಿದ್ದೂ ಅಲ್ಲದೇ ಅದನ್ನ ಪ್ರಿಯಾಂಕ ತಲೆಯಲ್ಲೂ ತುಂಬಿದ್ರು. ಆನಂತ್ರ ಜೈ ಜಗದೀಶ್ ಸರ್ ತಲೆಯಲ್ಲೂ ತುಂಬೋ ಪ್ರಯತ್ನ ಮಾಡಿದ್ರು.

  ಊಟದ ವಿಚಾರದಲ್ಲೂ ಹಾಗೇ ಮಾಡಿದ್ರು..!!

  ಊಟದ ವಿಚಾರದಲ್ಲೂ ಹಾಗೇ ಮಾಡಿದ್ರು..!!

  ಊಟದ ವಿಚಾರದಲ್ಲೂ ಸುಜಾತ ಅವ್ರು ತುಂಬಾ ಸಣ್ಣತನ ಪ್ರದರ್ಶಿಸಿಬಿಟ್ರು.. ತಾವು ಅಡುಗೆ ಮಾಡುವಾಗ ಎಲ್ಲರಿಗೂ ಹೊಟ್ಟೆ ತುಂಬಾ ಹಾಕ್ತಿದ್ವಿ.. ತಾವು ಅಡುಗೆ ಮನೆ ಉಸ್ತುವಾರಿ ಬಿಟ್ಟಮೇಲೆ ಚಂದನ ದೀಪಿಕಾ ಅವ್ರು ತಮ್ಮ ತಮ್ಮ ಸ್ನೇಹಿತರಿಗೆ ಮಾತ್ರ ಹೊಟ್ಟೆ ತುಂಬಾ ಬಡಿಸುತ್ತಾರೆ ಅಂತ ಜೈ ಜಗದೀಶ್ ತಲೆಯಲ್ಲೂ ಹುಳ ಬಿಟ್ಟಿದ್ದಲ್ಲದೇ ರಾಜುತಾಳಿಕೋಟೆಯನ್ನೂ ಕರೆದ್ರು ಅವರ ತಲೆಗೂ ಬಿಟ್ರು. ಇದು ಜೂನಿಯರ್ಸ್ ಮತ್ತು ಸೀನಿಯರ್ಸ್ ನಡುವೆ ಕಂದಕ ನಿರ್ಮಾಣ ಆಗೋಕೆ ಶುರುವಾಗಿತ್ತು. ವಾರಾಂತ್ಯದಲ್ಲಿ ಬಂದ ಸುದೀಪ್ ಈ ವಿಚಾರವನ್ನ ಕೆದಕಿ ಅವರಿಗೇ ಬಗೆಹರಿಸಿಕೊಳ್ಳಲು ಬಿಟ್ರು. ಆಮೇಲಾದ್ರೂ ಸುಜಾತ ಬದಲಾದ್ರಾ..? ಉತ್ತರನ ನಿಮಗೇ ಬಿಡ್ತೀನಿ

  ಅಲ್ಲಿನ ವಿಲನ್ ಫ್ರೆಂಡ್ಸ್, ಇಲ್ಲಿಯ ರಿಯಲ್ ಫ್ರೆಂಡ್ಸ್..!!

  ಅಲ್ಲಿನ ವಿಲನ್ ಫ್ರೆಂಡ್ಸ್, ಇಲ್ಲಿಯ ರಿಯಲ್ ಫ್ರೆಂಡ್ಸ್..!!

  ಇದು ಸುಜಾತ ಮತ್ತು ಪ್ರಿಯಾಂಕ ಅವರಿಗೆ ಅನ್ವಯ. ರಾಧಾರಮಣದ ಸುಮಿತ್ರಾ ದೇವಿ ಮತ್ತು ಅಗ್ನಿ ಸಾಕ್ಷಿಯ ಚಂದ್ರಿಕಾ ರೀಲ್ ನಲ್ಲೂ ಒಬ್ಬರಿಗೊಬ್ಬರು ಸಪೋರ್ಟಿವ್ ವಿಲನ್ ಫ್ರೆಂಡ್ಸ್. ಇದೇ ಕಾರಣಕ್ಕೋ ಏನೋ ಬಿಗ್ಬಿ ಮನೆಯಲ್ಲೂ ಒಂಥರಾ ಇವರಿಬ್ಬರು ಫ್ರೆಂಡ್ಸ್ ಆಗಿದ್ದಾರೆ. ಪ್ರಿಯಾಂಕ ಅಷ್ಟು ಚೆನ್ನಾಗಿ ಆಡದೇ ಹೋಗಿದ್ರೂ ಸುಜಾತ ಬೆಸ್ಟ್ ಪರ್ಫಾಮರ್ ಗೆ ಪ್ರಿಯಾಂಕ ಹೆಸರನ್ನ ತಗೊಳ್ತಾರೆ. ಹಾಗೆ ಪ್ರಿಯಾಂಕ ಅವರು ಸುಜಾತ ಅವರು ಕಾಲುಮುರಿದುಕೊಂಡರೂ ಚೆನ್ನಾಗಿ ಆಟ ಆಡುತ್ತಾರೆ ಅಂತ ಸುಜಾತ ಅವ್ರಿಗೆ ಬೆಸ್ಟ್ ಪಫಾರ್ಮರ್ ಲೈಕ್ ಕೊಡ್ತಾರೆ. ಇದು ಅವರ ನಡುವಿನ ಅಡ್ಜಸ್ಟ್ ಮೆಂಟೋ.. ಟ್ಯಾಲೆಂಟೋ.. ಸೆಟ್ಲುಮೆಂಟೋ.. ಅಥವಾ ಊಟದ ಋಣವೋ ಅನ್ನೋದನ್ನ ಅವರೇ ಹೇಳಬೇಕು.

  ಋಣದ ಪಾಠ ಮಾಡಿದ ಸುದೀಪ್

  ಋಣದ ಪಾಠ ಮಾಡಿದ ಸುದೀಪ್

  ಪ್ರಿಯಾಂಕ ಬಿಗ್ ಬಾಸ್ ಮನೆಯಲ್ಲಿ ಸುಜಾತಗೆ "ನೀವು ಊಟ ಹಾಕಿದ್ದೀರಾ.. ನಿಮ್ಮ ಅನ್ನದ ಋಣ ನನ್ನ ಮೇಲಿದೆ" ಎಂದು ಹೇಳ್ತಿದ್ದಾಗ ನಾನು ಇವರು ಹೊರಗೆ ಪ್ರೆಂಡ್ಸ್ ಇರಬೇಕು.. ಒಂದು ಕಾಲದಲ್ಲಿ ಅನ್ನ ಹಾಕಿರಬೇಕು ಅಂತ ಭಾವಿಸಿದ್ದೆ. ಆದ್ರೆ ಸುದೀಪ್ ಪ್ರಿಯಾಂಕ ಅವ್ರಿಗೆ ನೀವು ತಿಂದಿದ್ದು ಬಿಗ್‌ಬಾಸ್ ಮನೆಯ ಊಟ.. ಅದು ಬಿಗ್‌ಬಾಸ್ ಋಣ ಆಗುತ್ತೆ ಸುಜಾತ ಅವರ ಋಣ ನಿಮ್ಮ ಮೇಲಿಲ್ಲ ಅಂತ ಕ್ಲಾಸ್ ತೆಗೆದುಕೊಂಡಾಗಲೇ ಅರ್ಥ ಆಗಿದ್ದು ಪ್ರಿಯಾಂಕರ ಪೆದ್ದುತನ.

  ಪ್ರಿಯಾಂಕಾ ಪೆದ್ದುನಾ?

  ಪ್ರಿಯಾಂಕಾ ಪೆದ್ದುನಾ?

  ಪ್ರಿಯಾಂಕ ‘ಅಗ್ನಿಸಾಕ್ಷಿ'ಯಲ್ಲಿ ಚಂದ್ರಿಕಾ ಪಾತ್ರ ಮಾಡಿ ಹೆಸರು ಮಾಡಿರೋದು ಸತ್ಯ.. ಆ ಪಾತ್ರವನ್ನ ನಿಜಕ್ಕೂ ಸಕ್ಕತ್ ಆಗೇ ನಿಭಾಯಿಸಿರೋದು ಸುಳ್ಳಲ್ಲ. ಆದ್ರೆ ದಾರವಾಹಿಯಿಂದ ಅರನ್ನ ಹೊರಗಿಟ್ಟು ನೋಡಿದ್ದಾಗೆ ಒಂದು ರೀತಿಯಲ್ಲಿ ‘ಜಾಣ ಪೆದ್ದು'ವಾಗೋ.. ‘ಸೌಂದರ್ಯ ಪೆದ್ದು'ವಾಗಿ ಕಾಣೋದು ಮಾತ್ರ ಸ್ವಷ್ಟ. ಅವರಿಗೆ ಯಾರ ಮನೆಯ ಊಟ ತಿನ್ನುತ್ತಿದ್ದೇನೆ ಅನ್ನೋದರ ಅರಿವಿಲ್ಲ ಅಂದರೆ ಏನು ಹೇಳೋದು. ಬಿಗ್ಬಿ ಮನೆಯಲ್ಲಿ ಮಾತ್ರವಲ್ಲ ಕೆಲ ರಿಯಾಲಿಟಿ ಶೋನಲ್ಲೂ ಪ್ರಿಯಾಂಕರ ಪೆದ್ದುತನದ ಪ್ರದರ್ಶನವಾಗಿದೆ. ಇರಲಿ ಮತ್ತೆ ಸುಜಾತ ವಿಷಯಕ್ಕೆ ಬರೋಣ.

  ರಿಪೋರ್ಟರ್ ಆಗಿ ಸೋತ ಸುಜಾತ..!!

  ರಿಪೋರ್ಟರ್ ಆಗಿ ಸೋತ ಸುಜಾತ..!!

  ಒಬ್ಬ ರಿಪೋರ್ಟರ್ ಗೆ ನಿಜಕ್ಕೂ ಮೈಯೆಲ್ಲಾ ಕಣ್ಣು ಮಾತ್ರವಲ್ಲ.. ಎಲ್ಲಾ ಸಮಯದಲ್ಲೂ ಜಾಗೃತರಾಗಿರಬೇಕು. ಜಾಗೃತ ಆಗಿರ‍ರ್ತಾನೆ ಕೂಡ.. ಫಿಸಿಕಲ್ ಟಾಸ್ಕ್ ಅಂತೂ ಸುಜಾತ ಅವರಿಂದ ಸಾಧ್ಯವಿಲ್ಲ ಒಪ್ಪೋಣ. ಆದ್ರೆ ಕನಿಷ್ಟ ರಿಪೋರ್ಟರ್ ಪಾತ್ರವನ್ನ ಚೆನ್ನಾಗಿ ನಿಭಾಯಿಸಬೋದಿತ್ತೇನೋ.. ಶೈನ್ ಶೆಟ್ಟಿ- ಭೂಮಿಕ ಅಷ್ಟು ಜಗಳ ಆಗುತ್ತಿರುವಾಗ ರಿಪೋರ್ಟರ್ ಆಗಿ ಅಲ್ಲಿ ತಮ್ಮ ಸ್ಪೋಟಿವ್ ‌ನೆಸ್ ತೋರಿಸಬಹುದಾಗಿತ್ತು. ಆ ಅವಕಾಶವನ್ನ ಚೆನ್ನಾಗಿ ಬಳಸಿಕೊಳ್ಳಬೋದಿತ್ತು. ಯಾಕೋ ಅದಕ್ಕೂ ತಮಗೂ ಸಂಬಂಧವೇ ಇಲ್ಲದಂತೆ ಇದ್ದುಬಿಟ್ರು. ಸ್ವಲ್ಪ ಸುಜಾತ ಅವ್ರು ಅಲರ್ಟ್ ಆಗಿದ್ದಿದ್ರೆ ಶೈನ್ ಶೆಟ್ಟಿಯನ್ನಾದ್ರೂ ಹಿಂದಿಕ್ಕಿ ತಾವು ಶೈನ್ ಆಗಬೋದಿತ್ತೇನೋ.. ಇನ್ನು ಮುಮದೆ ಆದ್ರೂ ಸುಜಾತ ಅವರು ಎಲ್ಲರ ಬಗ್ಗೆಯೂ ಬೇಸರ ಪಡೋದನ್ನ ಬಿಟ್ಟು ಮಿಂಗಲ್ ಆಗಿ ಆಟ ಆಡುವಂತಾಗಲಿ.

  English summary
  Bigg Boss Kannada 7: Radha Ramana fame actress Sujatha playing very confusing game in Bigg boss house.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X