ಶುರುವಾಯ್ತು 'ಬಿಗ್ ಬಾಸ್' ಬಿರುಗಾಳಿ ; ಈ ಬಾರಿ ಜನಸಾಮಾನ್ಯರಿಗೂ ತೆರೆಯಲಿದೆ ಭಾಗ್ಯದ ಬಾಗಿಲು -ಅರ್ಜಿ ಸಲ್ಲಿಸುವುದ್ಹೇಗೆ ?
''ಐಪಿಎಲ್'' ಮತ್ತು ''ಬಿಗ್ ಬಾಸ್'' ಕಳೆದ ಹತ್ತೊಂಬತ್ತು-ಇಪ್ಪತ್ತು ವರ್ಷಗಳಿಂದ ಭಾರತವನ್ನು ಆವರಿಸಿಕೊಂಡಿವೆ. ವರ್ಷದ ಆರಂಭದಲ್ಲಿ ಐಪಿಎಲ್ ಸಂಭ್ರಮ ಸಡಗರದಲ್ಲಿ ಮಿಂದೇಳುವ ಅಸಂಖ್ಯಾತ ಜನ ವರ್ಷದ ಮಧ್ಯಂತರಕ್ಕೆ ಬಿಗ್ ಬಾಸ್ ಗೆ ಸ್ವಾಗತ ಕೋರಲು ಅಣಿಯಾಗುತ್ತಾರೆ. ತಮ್ಮ ಕಷ್ಟ-ನಷ್ಟಗಳನ್ನೆಲ್ಲ ಮರೆತು ''ಬಿಗ್ ಬಾಸ್'' ಮೈದಾನದ ತುಂಬೆಲ್ಲಾ ಮೈದಣಿಯದೇ ಉರುಳ್ಯಾಡುವ ಸ್ಫರ್ಧಿಗಳ ಸಂಭ್ರಮವನ್ನು ಕಣ್ತುಂಬಿಕೊಳ್ಳುತ್ತಾರೆ.
ವಿಶೇಷ ಅಂದರೆ ಪ್ರತಿ ವರ್ಷ ''ಬಿಗ್ ಬಾಸ್''ನ ತಪ್ಪದೇ ಕಣ್ತುಂಬಿಕೊಳ್ಳುವ ಜನಸಾಮಾನ್ಯರಲ್ಲಿನ ಹಲವರಿಗೆ ಈ ಸಂತೆಯಲ್ಲಿ ಭಾಗಿಯಾಗುವ ಸೌಭಾಗ್ಯವನ್ನು ''ಬಿಗ್ ಬಾಸ್''ನ ಆಯೋಜಕರು ಈ ವರ್ಷ ನೀಡಿದ್ದಾರೆ. ಸೆಲೆಬ್ರಿಟಿಗಳ ಜೊತೆ ನೀವು ಕೂಡ ''ಬಿಗ್ ಬಾಸ್''ನಲ್ಲಿ ಭಾಗವಹಿಸಬಹುದು, ಇನ್ಯಾಕೇ ತಡ ಬನ್ನಿ ನಮ್ಮ ಮನೆಗೆ ಎಂದು ಕರೆಯನ್ನು ನೀಡಿದ್ದಾರೆ.

ಆದರೆ, ಈ ಕರೆ ಕಾರ್ಯಕ್ರಮದ ಆಯೋಜಕರಿಂದ ಇನ್ನು ಕನ್ನಡಿಗರಿಗೆ ಬಂದಿಲ್ಲವಾದರೂ ಪಕ್ಕದ ತಮಿಳುನಾಡಿನಲ್ಲಿ ಸದ್ಯ ''ಬಿಗ್ ಬಾಸ್''ನಲ್ಲಿ ಸಾಮಾನ್ಯ ನಾಗರಿಕರಿಗೂ ಭಾಗವಹಿಸುವ ಅವಕಾಶವನ್ನು ನೀಡಲಾಗಿದೆ.
ಹೌದು, ''ಐಪಿಎಲ್'' ಮುಕ್ತಾಯವಾದ ಬೆನ್ನಲ್ಲೇ ''ಬಿಗ್ ಬಾಸ್'' ಕಲರವ ಶುರುವಾಗಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ತಮಿಳಿನಲ್ಲಿ ''ಬಿಗ್ ಬಾಸ್'' ಸೀಸನ್ 10ರ ಕೆಲಸ ಶುರುವಾಗಿದ್ದು, ಈ ವರ್ಷದ ಮೊದಲ ಪ್ರೋಮೋವನ್ನು ಬಿಡುಗಡೆ ಮಾಡಲಾಗಿದೆ. ಬನ್ನಿ ನೀವು ಭಾಗವಹಿಸಿ ಎಂದು ಕಾಮನ್ ಮ್ಯಾನ್‌ಗಳಿಗೆ ಆಮಂತ್ರಣ ಪತ್ರಿಕೆಯನ್ನು ನೀಡಲಾಗಿದೆ.
ಇನ್ನು, ತಮಿಳಿನ ''ಬಿಗ್ ಬಾಸ್'' ಕಾರ್ಯಕ್ರಮವನ್ನು ಮೊದಲು ಕಮಲ್ ಹಾಸನ್ ನಡೆಸಿಕೊಡುತ್ತಿದ್ದರು. ಆದರೆ, ಕಳೆದ ಎರಡು ವರ್ಷಗಳಿಂದ ಈ ಜವಾಬ್ಧಾರಿ ವಿಜಯ್ ಸೇತುಪತಿ ಹೆಗಲೇರಿದೆ. ಈ ವರ್ಷ ಕೂಡ ವಿಜಯ್ ಸೇತುಪತಿ ಕಾರ್ಯಕ್ರಮವನ್ನು ಮುನ್ನಡೆಸಲಿದ್ದು, ಇಷ್ಟು ದಿನ ಮನೆಯಲ್ಲಿ ಕುಂತು ಕಾಮೆಂಟ್ ಮಾಡ್ತಿದ್ದ್ರೀ, ಧೈರ್ಯ ಇದ್ದರೆ ಈಗ ನೀವೇ ಬನ್ನಿ ಆಟ ಆಡಿ ಎಂದು ಹೇಳಿದ್ಧಾರೆ.
ಬಿಡುಗಡೆಯಾದ ಪ್ರೋಮೊದಲ್ಲಿಈ ಕುರಿತು ಮಾತನಾಡಿರುವ ವಿಜಯ್ ಸೇತುಪತಿ, ಪ್ರತಿ ಸೀಸನ್‌ನಲ್ಲಿಯೂ ಸೋಫಾ ಮೇಲೆ ಕೂತು ಯಾರು ಹೇಗೆ ಆಡುತ್ತಿದ್ದಾರೆ ಎಂದು ಕಮೆಂಟ್ ಮಾಡ್ತಿದ್ರಿ ಅಲ್ವಾ? ಈಗ ನಿಮಗೇ ಒಂದು ದೊಡ್ಡ ಅವಕಾಶ ಸಿಕ್ಕಿದೆ. ಸಾಮಾನ್ಯ ಜನರಿಗಾಗಿ ''ಬಿಗ್ ಬಾಸ್'' ಮನೆಯ ಬಾಗಿಲು ತೆರೆಯುತ್ತಿದೆ ಎಂದು ಹೇಳಿದ್ದಾರೆ. ಧೈರ್ಯ ಮತ್ತು ಆಟ ಆಡುವ ತಾಕತ್ತು ನಿಮಗಿದ್ದರೆ, ನೀವೇ ನೇರವಾಗಿ ''ಬಿಗ್ ಬಾಸ್'' ಮನೆಗೆ ಬಂದು ನಿಮ್ಮ ಆಟವನ್ನು ಆಡಿ ಜಗತ್ತಿಗೆ ನೀವೇನು ಎಂದು ತೋರಿಸಿ ಎಂದು ಹೇಳಿದ್ಧಾರೆ.

ಬಿಗ್ ಬಾಸ್‌ನಲ್ಲಿ ಭಾಗವಹಿಸಲು ಇರಬೇಕಾದ ಅರ್ಹತೆ
ಭಾರತದ ಯಾವುದೇ ಪ್ರಜೆ, ಅವರು ವಿದ್ಯಾರ್ಥಿ ಇರಬಹುದು, ಉದ್ಯೋಗಿ ಇರಬಹುದು ಅಥವಾ ಯಾವುದೇ ಸಾಮಾನ್ಯ ಹಿನ್ನೆಲೆ ಅವರಾಗಿರಬಹುದು, ಅವರು ಈ ಬಾರಿಯ ''ಬಿಗ್ ಬಾಸ್''ನಲ್ಲಿ ಭಾಗವಹಿಸಬಹುದು.
ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು.
ಮೊಬೈಲ್ ಇಲ್ಲದೆ 100 ದಿನ ''ಬಿಗ್ ಬಾಸ್'' ಮನೆಯಲ್ಲಿರಲು ಮಾನಸಿಕವಾಗಿ ಮತ್ತು ದೈಹಿಕವಾಗಿ ಸಶಕ್ತರಾಗಿರಬೇಕು, ಒಂದು ವೇಳೆ ನೀವು ಸಶಕ್ತರಾಗಿದ್ದರೆ ನಿಮ್ಮ ವಯಸ್ಸು 18ರ ಮೇಲಿದ್ದರೆ ನೀವು ಅರ್ಜಿ ಹಾಕಬಹುದು.
ರಿಜಿಸ್ಟ್ರೇಷನ್ ಮಾಡಿಕೊಳ್ಳುವುದು ಹೇಗೆ?
''ಸ್ಟಾರ್ ವಿಜಯ್'' ವಾಹಿನಿಯ ಅಧಿಕೃತ ವೆಬ್‌ಸೈಟ್ ಅಥವಾ ಜಿಯೋ ಹಾಟ್‌ಸ್ಟಾರ್ ನ ಆಪ್‌ನಲ್ಲಿ ಈ ಬಾರಿಯ ''ಬಿಗ್ ಬಾಸ್'' ಅರ್ಜಿ ನಿಮಗೆ ಸಿಗಲಿದೆ. ಆ ಅರ್ಜಿಯನ್ನು ತುಂಬಿ ಅದರ ಜೊತೆ ಎರಡು ಮೂರು ನಿಮಿಷದ ಆಕರ್ಷಕ ವಿಡಿಯೋವನ್ನು ನೀವು ಮಾಡಬೇಕು, ಆ ವಿಡಿಯೋದಲ್ಲಿ ನಿಮ್ಮ ಪರಿಚಯ ಮಾಡಿಕೊಳ್ಳುವುದರ ಜೊತೆ ''ಬಿಗ್ ಬಾಸ್'' ಮನೆಗೆ ನೀವ್ಯಾಕೇ ಹೋಗಬೇಕೆಂದುಕೊಂಡಿದ್ದೀರಾ..? ನೀವ್ಯಾಕೆ ''ಬಿಗ್ ಬಾಸ್''ಗೆ ಅರ್ಹರು ಎನ್ನುವುದಕ್ಕೆ ವಿವರಣೆ ನೀಡಬೇಕು.
ಆಯ್ಕೆ ಪ್ರಕ್ರಿಯೆ
ನಿಮ್ಮ ವಿಡಿಯೋಗಳನ್ನು ಪರಿಶೀಲಿಸಿದ ನಂತರ ''ಬಿಗ್ ಬಾಸ್'' ಆಯೋಜಕರು ಕೆಲವು ಆಯ್ದ ಜನರನ್ನು ಮುಂದಿನ ಹಂತದ ಮುಖಾಮುಖಿ ಇಂಟರ್ವ್ಯೂ ಮತ್ತು ಸ್ಕ್ರೀನ್ ಟೆಸ್ಟ್‌ಗೆ ಕರೆಯುತ್ತಾರೆ. ಈ ಎರಡನ್ನು ಪಾರು ಮಾಡುವಲ್ಲಿ ನೀವು ಯಶಸ್ವಿಯಾದರೆ ''ಬಿಗ್ ಬಾಸ್'' ತಮಿಳು 10 ರ ಮನೆಯ ಬಾಗಿಲು ನಿಮಗಾಗಿ ತೆರೆಯಲಿದೆ. ಪ್ರೋಮೋ ಇಲ್ಲಿ ಕೆಳಗಿದ್ದು, ಹೆಚ್ಚಿನ ಮಾಹಿತಿಗಾಗಿ ಆಸಕ್ತರು ವೀಕ್ಷಿಸಬಹುದು.


Click it and Unblock the Notifications