ತಮ್ಮ ಬಹುಕಾಲದ ಗೆಳೆಯನ ಜೊತೆ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡ ಬಿಗ್ ಬಾಸ್ ಸ್ಫರ್ಧಿ

ಪ್ರೀತಿ ಎನ್ನುವುದು ಕೇವಲ ಎರಡೇ ಎರಡು ಅಕ್ಷರಗಳ ಪದವಲ್ಲ. ಬದಲಿಗೆ ಪ್ರೀತಿ ಎಂಬ ಪದವು ಅನೇಕ ಅರ್ಥಗಳಿಂದ ಕೂಡಿದೆ. ಇದು ಅತಿ ಹೆಚ್ಚು ಪ್ರಭಾವಶಾಲಿ ಕೂಡ ಹೌದು. ಪ್ರೀತಿಯಿಂದ ಇಡೀ ಜಗತ್ತನ್ನೇ ಜಯಿಸಬಹುದಂತೆ. ಇನ್ನು ಪ್ರೀತಿ ಎಂದರೆ ಸಂತೋಷ ಅದರ ಮಾಯೆಯೇ ಅಂತಹದು ಎನ್ನುವುದು ಅನುಭವಿಸಿದವರ ಅಭಿಪ್ರಾಯ. ಪ್ರೀತಿಸುವ ವ್ಯಕ್ತಿಯನ್ನು ಅಳೆಯಲಾಗದಷ್ಟು, ಅಂತ್ಯ ಇಲ್ಲದಷ್ಟು ...

ಪ್ರೀತಿಸುವ ಅನೇಕರು ಪ್ರೀತಿಯ ಸುಖದ ಕ್ಷಣಗಳನ್ನು ಗುನುಗುತ್ತಿರುತ್ತಾರೆ. ಇದಕ್ಕೆ ರಿತ್ವಿಕಾ ಸದ್ಯದ ಉದಾಹರಣೆ. ಹೌದು.. ರಿತ್ವಿಕಾ.. ಕಾಲಿವುಡ್‌ನ ಕಿನ್ನರಿ. 2013ರಲ್ಲಿ ಬಾಲಾ ನಿರ್ದೇಶನದಲ್ಲಿ ಬಂದ 'ಪರದೇಸಿ' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ರಿತ್ವಿಕಾ ಆ ನಂತರ 2014ರಲ್ಲಿ ಪಾ ರಂಜಿತ್ ನಿರ್ದೇಶನದ 'ಮದ್ರಾಸ್' .. 'ಕಬಾಲಿ' .. ಚಿತ್ರಗಳಲ್ಲಿ ತಮ್ಮ ಅಭಿನಯದಿಂದ ಅನೇಕರ ಹೃದಯ ಗೆದ್ದರು. ತಮಿಳು ಚಿತ್ರರಂಗದ ಗಮನವನ್ನು ಕೂಡ ಸೆಳೆದರು.

Bigg Boss Tamil 2 Champ Riythvika Engaged to BFF Vinoth Lakshmanan

'ಇರು ಮುಖನ್'.. 'ಒರು ನಾಲ್ ಕೂತು'.. 'ಟಾರ್ಚ್‌ಲೈಟ್'.. ಚಿತ್ರಗಳಲ್ಲಿ ಕೂಡ ಕಾಣಿಸಿಕೊಂಡ ರಿತ್ವಿಕಾ ಆ ನಂತರ ಕಮಲ್ ಹಾಸನ್ ಸಾರಥ್ಯದಲ್ಲಿ ಮೂಡಿ ಬಂದ ತಮಿಳಿನ ಬಿಗ್ ಬಾಸ್ ಸೀಸನ್‌ ಎರಡರಲ್ಲಿ ಕೂಡ ಭಾಗವಹಿಸಿದ್ದರು. ಟ್ರೋಫಿ ಎತ್ತಿ ಹಿಡಿದರು. ವಿಜೇತರಾಗಿ ಹೊರ ಹೊಮ್ಮಿದರು.

ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ 'ಇರಂಡಂ ಉಲಗಪೊರಿನ್ ಕಡೈಸಿ ಗುಂಡು'.. 'ವಾಲ್ಟರ್' ಅಂತಹ ಚಿತ್ರಗಳಲ್ಲಿ ಕೂಡ ಕಾಣಿಸಿಕೊಂಡ ರಿತ್ವಿಕಾ ಇತ್ತೀಚೆಗೆ ಬಿಡುಗಡೆಯಾಗಿದ್ದ ಎಲೆವನ್ ಚಿತ್ರದಲ್ಲಿ ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು. ಇಂಥಾ ರಿತ್ವಿಕಾ ಸದ್ಯ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಸರ್‌ಫ್ರೈಸ್ ನೀಡಿದ್ದಾರೆ.

Bigg Boss Tamil 2 Champ Riythvika Engaged to BFF Vinoth Lakshmanan

ತಮ್ಮ ಬಹುಕಾಲದ ಗೆಳೆಯ ವಿನೋದ್ ಲಕ್ಷ್ಮಣನ್ ಅವರ ಜೊತೆ ಹೊಸ ಬದುಕಿಗೆ ರಿತ್ವಿಕಾ ಕಾಲಿಡಲು ಸಿದ್ಧರಾಗಿದ್ದು, ರಿತ್ವಿಕಾ ಮತ್ತು ವಿನೋದ್ ಅವರ ಕುಟುಂಬ ವರ್ಗ ಮತ್ತು ಅತ್ಯಾಪ್ತರು ಈ ನಿಶ್ಚಿತಾರ್ಥ ಸಮಾರಂಭಕ್ಕೆ ಸಾಕ್ಷಿಯಾಗಿದ್ಧಾರೆ. ಸದ್ಯ ರಿತ್ವಿಕಾ ಅವರಿಗೆ ಅನೇಕರು ಶುಭಾಶಯವನ್ನು ಕೋರುತ್ತಿದ್ದಾರೆ.

ಅಂದ್ಹಾಗೇ 2019ರಲ್ಲಿ ಹಲವರು ರಿತ್ವಿಕಾ ಅವರ ಮದುವೆಯ ಕುರಿತು ತಲೆ ಕೆಡಿಸಿಕೊಂಡಿದ್ದರು. ಶೀಘ್ರದಲ್ಲಿಯೇ ರಿತ್ವಿಕಾ ಗ್ರಹಸ್ಥಾಶ್ರಮಕ್ಕೆ ಕಾಲಿಡಲಿದ್ದು ಚಿತ್ರರಂಗಕ್ಕೆ ರಿತ್ವಿಕಾ ಗುಡ್ ಬೈ ಹೇಳಲಿದ್ದಾರೆ ಎಂದು ಪುಕಾರು ಹಬ್ಬಿಸಿದ್ದರು. ತಮ್ಮ ಕುರಿತು ಹರಿದಾಡುತ್ತಿರುವ ಈ ಸುದ್ದಿಗಳನ್ನು ಕೇಳಿ ರಿತ್ವಿಕಾ ಕೂಡ ವಿಚಲಿತರಾಗಿದ್ದರು.

ಹೀಗಾಗಿಯೇ ಅವತ್ತು ಈ ವಿಚಾರಕ್ಕೆ ಸಂಬಂಧಿಸಿದಂತೆ ಕೂಡಲೇ ಸ್ಪಷ್ಟೀಕರಣ ನೀಡಿದ್ದ ರಿತ್ವಿಕಾ ತಮ್ಮ ಮದುವೆಯ ಕುರಿತು ಹರಡಿರುವ ಸುದ್ದಿ ಸಂಪೂರ್ಣ ಸುಳ್ಳು ಎಂದು ಹೇಳಿದ್ದರು. ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ಮನವಿಯನ್ನು ಮಾಡಿಕೊಂಡಿದ್ದ ರಿತ್ವಿಕಾ ನಾನು ಮದುವೆಯಾಗುತ್ತಿಲ್ಲ.. ಚಿತ್ರರಂಗಕ್ಕೆ ವಿದಾಯವನ್ನು ಕೂಡ ಹೇಳುತ್ತಿಲ್ಲ ಎಂದು ಹೇಳಿದ್ದರು.

ಹೀಗೆ ಅವತ್ತು ತಮ್ಮ ಮದುವೆಯ ಸುದ್ದಿ ಸುಳ್ಳು ಎಂದು ಹೇಳಿದ್ದ ರಿತ್ವಿಕಾ ಇದೀಗ 6 ವರ್ಷಗಳ ನಂತರ ಸದ್ದಿಲ್ಲದೇ ಎಂಗೇಜ್ ಆಗಿದ್ದಾರೆ. ಇನ್ನುಳಿದಂತೆ ಮದುವೆಯ ವಿವರಗಳನ್ನು ಇನ್ನು ಬಹಿರಂಗಗೊಳಿಸಿಲ್ಲ. ಆದರೆ.. ಇವರ ಮದುವೆಯ ದಿನಾಂಕ ಮತ್ತು ಸ್ಥಳದ ಕುರಿತು ತಿಳಿದುಕೊಳ್ಳುವ ಬಯಕೆ ಇವರ ಅಭಿಮಾನಿಗಳದ್ದು. ಹೀಗಾಗಿಯೇ ಅನೇಕರು ಮದುವೆ ಯಾವಾಗ ? ಎಂದು ಕಾಮೆಂಟ್ ಮಾಡುವ ಮೂಲಕ ರಿತ್ವಿಕಾ ಅವರಿಗೆ ಕೇಳುತ್ತಿದ್ದಾರೆ.

More from Filmibeat

English summary
From best friends to forever! Bigg Boss Tamil 2 champion Riythvika announces her engagement to Vinoth Lakshmanan. Discover their heartwarming journey
Read more about: bigg boss ಟಿವಿ engagement
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X