'ಬಿಗ್ ಬಾಸ್'ನಲ್ಲಿ ಇವರೇ ಗೆಲ್ಲಬೇಕು: 'ಆರ್ಡರ್ ಇಸ್ ಪಾಸ್ಡ್' ಎಂದ ಪ್ರಥಮ್
Recommended Video
ಒಳ್ಳೆ ಹುಡುಗ ಎಂಬ ಟ್ಯಾಗ್ ಲೈನ್ ಇಟ್ಟುಕೊಂಡು ಬಂದ ಪ್ರಥಮ್ ನೋಡ ನೋಡುತ್ತಲೇ ಬಿಗ್ ಬಾಸ್ ಕಾರ್ಯಕ್ರಮದ ವಿಜೇತರಾದರು. 'ಬಿಗ್ ಬಾಸ್ ಕನ್ನಡ ಸೀಸನ್ 4' ವಿನ್ನರ್ ಪಟ್ಟ ಪಡೆದಿರುವ ಪ್ರಥಮ್ ಈಗ ಬಿಗ್ ಬಾಸ್ ತಮಿಳು ಕಾರ್ಯಕ್ರಮದ ಬಗ್ಗೆ ಕಾಮೆಂಟ್ ಮಾಡಿದ್ದಾರೆ.
ತಮಿಳಿನಲ್ಲಿ 'ಬಿಗ್ ಬಾಸ್' ಮೂರನೇ ಆವೃತ್ತಿ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಇವರನ್ನೇ ಗೆಲ್ಲಿಸಿ ಎಂದು ಪ್ರಥಮ್ ಮನವಿ ಮಾಡಿದ್ದಾರೆ. ನಟಿ ಶೆರೀನ್ ಕಾರ್ಯಕ್ರಮ ವಿನ್ನರ್ ಆಗಬೇಕು ಎನ್ನುವುದು ಪ್ರಥಮ್ ಆಸೆಯಾಗಿದೆ.
'ಬಿಗ್ ಬಾಸ್' ಮನೆಯಲ್ಲಿ ಕ್ಯಾಪ್ಟನ್ ಆದಾಗ 'ಆರ್ಡರ್ ಇಸ್ ಪಾಸ್ಡ್' ಎಂದು ಅಬ್ಬರಿಸುತ್ತಿದ್ದ ಪ್ರಥಮ್ ಈಗ ಅದೇ ರೀತಿ ಶೆರೀನ್ ಗೆ ಮತ ಹಾಕಲು ಅಭಿಮಾನಿಗಳಿಗೆ ಸ್ನೇಹ ಪೂರ್ವಕ ಆಗ್ನೆ ಮಾಡಿದ್ದಾರೆ. ಅಂದಹಾಗೆ, ಪ್ರಥಮ್ ಯಾಕೆ ಶೆರೀನ್ ಗೆ ಬೆಂಬಲ ನೀಡುತ್ತಿದ್ದಾರೆ ಎನ್ನುವುದು ಕುತೂಹಲ ಇದ್ದರೆ ಹಾಗೆ ಮುಂದೆ ಓದಿ....

ನಟಿ ಶೆರೀನ್ ಕನ್ನಡದವರು
ಶೆರೀನ್ ಮೂಲತಃ ಬೆಂಗಳೂರಿನವರು. ಇಲ್ಲೇ ಹುಟ್ಟಿ ಬೆಳೆದ ಕನ್ನಡ ನಾಡಿನ ಹುಡುಗಿ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರದಲ್ಲಿ ನಟಿಸಿದ್ದಾರೆ. 'ಧ್ರುವ', 'ಭೂಪತಿ' ಜೊತೆಗೆ 'ಸಿಹಿ ಗಾಳಿ' ಮತ್ತು 'ಎಕೆ 57' ಎಂಬ ಮತ್ತೆರಡು ಕನ್ನಡ ಚಿತ್ರದಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಕನ್ನಡ ಹುಡುಗಿಗೆ ಪ್ರಥಮ್ ಬೆಂಬಲ ನೀಡಿದ್ದಾರೆ.

ಸಪೋರ್ಟ್ ಮಾಡಿ ಎಂದ ಪ್ರಥಮ್
ಶೆರೀನ್ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಪ್ರಥಮ್ ''ಈ ಕನ್ನಡದ ಹುಡುಗಿ ತಮಿಳಿನ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಒಂಟಿ ಹೋರಾಟ ಮಾಡುತ್ತಿದ್ದಾರೆ. ಒಂದಷ್ಟು ರಾಜಕೀಯದ ನಡುವೆ ಈಗಾಗಲೇ ಒಂಬತ್ತು ವಾರ ಇದ್ದು ಜಯಿಸಿದ್ದಾರೆ. ಡಿ ಬಾಸ್ ಅಭಿಮಾನಿಗಳು, ಕನ್ನಡಾಭಿಮಾನಿಗಳು ಸಪೋರ್ಟ್ ಮಾಡಿದ್ರೆ ಖಂಡಿತ ಶೆರೀನ್ ಉಳಿದುಕೊಳ್ಳುತ್ತಾರೆ!'' ಎಂದು ಮನವಿ ಮಾಡಿದ್ದಾರೆ.

ನೀವು ಮಿಸ್ ಕಾಲ್ ಕೊಡಬಹುದು
ಕನ್ನಡದ ಹುಡುಗಿ ತಮಿಳು ಬಿಗ್ ಬಾಸ್ ನಲ್ಲಿ ಗೆಲ್ಲುವ ಸಾಧ್ಯತೆ ಇದೆ. ಹೀಗಾಗಿ ನೀವು ಕೂಡ ಶೆರೀನ್ ಗೆ ಬೆಂಬಲ ನೀಡಬಹುದಾಗಿದೆ. 8367796813 ನಂಬರ್ ಗೆ ಹತ್ತು ಬಾರಿ ಮಿಸ್ ಕಾಲ್ ಕೊಡಬಹುದು. ಜೊತೆಗೆ ಹಾಟ್ ಸ್ಟಾರ್ ಅಪ್ ನಲ್ಲಿ 50 ಬಾರಿ ವೋಟ್ ಮಾಡಬಹುದಾಗಿದೆ. ಈ ಶುಕ್ರವಾರ ರಾತ್ರಿ 10.30ರ ತನಕ ವೋಟ್ ಮಾಡಬಹುದಾಗಿದೆ.

ಶೆರೀನ್ ಡೇಂಜರ್ ಜೋನ್ ಭೀತಿ ಎದುರಿಸುತ್ತಿದ್ದಾರೆ
ಪ್ರಾರಂಭದಲ್ಲಿ 15 ಸ್ಪರ್ಧಿಗಳು 'ಬಿಗ್ ಬಾಸ್' ಮನೆಗೆ ಪ್ರವೇಶ ನೀಡಲಾಗಿತ್ತು. ನಂತರ ಇಬ್ಬರು ಸ್ಪರ್ಧಿಗಳು ವೈಲ್ಡ್ ಕಾರ್ಡ್ ಎಂಟ್ರಿ ಪಡೆದರು. 11ನೇ ವಾರ ಐದು ಸ್ಪರ್ಧಿಗಳು ಡೇಂಜರ್ ಜೋನ್ ನಲ್ಲಿ ಇದ್ದಾರೆ. ಇದರಲ್ಲಿ ಶೆರೀನ್ ಕೂಡ ಡೇಂಜರ್ ಜೋನ್ ಭೀತಿ ಎದುರಾಗಿದ್ದು, ಪ್ರಥಮ್ ಅವರ ಪರ ನಿಂತಿದ್ದಾರೆ.


Click it and Unblock the Notifications











