'ಬಿಗ್ ಬಾಸ್ ತಮಿಳು ಸೀಸನ್ 4' ಗೆದ್ದು ಬೀಗಿದ ನಟ ಆರಿ ಅರ್ಜುನ; ಗಳಿಸಿದ್ದೆಷ್ಟು?
ಭಾರಿ ಕುತೂಹಲ ಮೂಡಿಸಿದ್ದ ಬಿಗ್ ಬಾಸ್ ತಮಿಳು ಸೀಸನ್ 4ಗೆ ಅದ್ದೂರಿ ತೆರೆ ಬಿದ್ದಿದೆ. ಕಾಲಿವುಡ್ ನಟ ಆರಿ ಅರ್ಜುನ್ ಈ ಬಾರಿಯ ಬಿಗ್ ಬಾಸ್ ಗೆದ್ದು ಬೀಗಿದ್ದಾರೆ. ಸಕಲಕಲಾವಲ್ಲಭ ಕಮಲ್ ಹಾಸನ್ ನಡೆಸಿಕೊಡುತ್ತಿದ್ದ ಬಿಗ್ ಬಾಸ್ ಸೀಸನ್ 4 ಫಿನಾಲೆ ಭಾನುವಾರ ರಾತ್ರಿ ಪ್ರಸಾರವಾಯಿತು.
ಬಿಗ್ ಬಾಸ್ ತಮಿಳು ಸೀಸನ್ 4 ಟ್ರೋಫಿ ಎತ್ತಿಹಿಡಿದ ನಟ ಆರಿ ಅರ್ಜುನ ಆಕರ್ಷಕ ಟ್ರೋಫಿ ಜೊತೆಗೆ 50 ಲಕ್ಷ ನಗದು ಗೆದ್ದಿದ್ದಾರೆ. ಆರಿ ಅರ್ಜುನ, ಬಾಲಾಜಿ ಮುರುಗದಾಸ್, ರಮ್ಯಾ ಪಾಂಡಿನ್, ರಿಯೋ ರಾಜ್, ಸೋಮಶೇಖರ್ ಫಿನಾಲೆಯಲ್ಲಿದ್ದರು.
ಈ ಐವರಲ್ಲಿ ವಿನ್ನರ್ ಯಾರಾಗಲಿದ್ದಾರೆ ಎನ್ನುವ ಕುತೂಹಲ ಕಿರುತೆರೆ ಪ್ರೇಕ್ಷಕರಲ್ಲಿ ಮನೆ ಮಾಡಿತ್ತು. ಫೈನಲಿ ನಟ ಅರ್ಜುನ ಗೆದ್ದು ಬೀಗಿದ್ದಾರೆ. ಬಾಲಾಜಿ ಮುರುಗದಾಸ್ ಅವರು ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದಾರೆ.

ಅಂದಹಾಗೆ ಬಿಗ್ ಬಾಸ್ ತಮಿಳು-4 ಲಾಕ್ ಡೌನ್ ಬಳಿಕ ಪ್ರಾರಂಭವಾಗಿದೆ. ಅಕ್ಟೋಬರ್ 4ರಂದು ಪ್ರಾರಂಭವಾದ ಈ ಸೀಸನ್ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ. 16 ಸ್ಪರ್ಧಿಗಳು ಈ ಬಾರಿ ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದರು.
ಕೊರೊನಾ ಮುನ್ನೆಚ್ಚರಿಕೆಯೊಂದಿಗೆ ಬಿಗ್ ಬಾಸ್ ಕಾರ್ಯಕ್ರಮವನ್ನು ಅದ್ದೂರಿಯಾಗಿ ಪ್ರಸಾರವಾಗಿದೆ. ಇನ್ನು ಇತ್ತೀಚಿಗಷ್ಟೆ ತೆಲುಗು ಬಿಗ್ ಬಾಸ್ ಮುಕ್ತಾಯವಾಗಿದ್ದು, ನಟ ಅಭಿಜಿತ್ ಗೆದ್ದು ಬೀಗಿದ್ದಾರೆ. ಸದ್ಯ ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ ಹಿಂದಿ ಬಿಗ್ ಬಾಸ್ ನಡೆಯುತ್ತಿದ್ದು, ಸದ್ಯದಲ್ಲೇ ಫಿನಾಲೆ ಆಗಲಿದೆ.
ಇನ್ನೂ ಕನ್ನಡ ಬಿಗ್ ಬಾಸ್ ಪ್ರಾರಂಭವಾಗಬೇಕಿದೆ. ಜನವರಿ ಕೊನೆಯಲ್ಲಿ ಪ್ರಾರಂಭವಾಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿತ್ತು. ಆದರೀಗ ಮಾರ್ಚ್ ಗೆ ಮುಂದೂಡಲಾಗಿದೆ ಎನ್ನಲಾಗುತ್ತಿದೆ. ಕನ್ನಡ ಬಿಗ್ ಬಿಗ್ ಯಾವಾಗ ಪ್ರಾರಂಭವಾಗಲಿದೆ, ಯಾರೆಲ್ಲ ಇರಲಿದ್ದಾರೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಮನೆ ಮಾಡಿದೆ.


Click it and Unblock the Notifications











